ಸೂರಾ ಅಲ್-ಹಾಕ್ಕಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಹಾಕ್ಕಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಹಾಕ್ಕಾ ಅನುವಾದ. ಸೂರಾ ಅಲ್-ಹಾಕ್ಕಾ (Meccan) 52 ಆಯತ್.
Related
- ಸೂರಾ ಅಲ್-ಹಾಕ್ಕಾ ಅನುವಾದಕನ್ನಡ
- ಸೂರಾ ಅಲ್-ಹಾಕ್ಕಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಹಾಕ್ಕಾ

ﮯﮰ
69:1
ಸಂಭವಿಸಿಬಿಡುವಂತದ್ದು!
ﮱﯓﯔ
69:2
ಏನದು ಸಂಭವಿಸಿಬಿಡುವಂತದ್ದು ?
ﯕﯖﯗﯘﯙ
69:3
ಆ ಸಂಭವಿಸಿಬಿಡುವಂತದ್ದು ಏನೆಂದು ನಿಮಗೇನು ಗೊತ್ತು ?
ﯚﯛﯜﯝﯞ
69:4
ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.
ﯟﯠﯡﯢﯣ
69:5
ಸಮೂದ್ ಜನಾಂಗವು ಭೀಕರವಾದ ಒಂದು ರ‍್ಭಟದ ಮೂಲಕ ನಾಶಕ್ಕೀಡಾಯಿತು.
ﯤﯥﯦﯧﯨﯩﯪ
69:6
ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.
ﯫﯬﯭﯮﯯﯰﯱﯲﯳﯴﯵﯶﯷﯸﯹﯺﯻ
69:7
ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು ಹಗಲಿನವರೆಗೆ ಹೇರಿಬಿಟ್ಟನು. ಆಗ ಮುಗುಚಿಬಿದ್ದ ರ‍್ಜೂರ ಮರದ ಟೊಳ್ಳಾದ ಕಾಂಡಗಳಂತೆ ಅವರು ಬಿದ್ದಿರುವುದನ್ನು ನೀವು ಕಾಣುತ್ತೀರಿ.
ﯼﯽﯾﯿﰀﰁ
69:8
ಏನು ನೀವು ಅವರ ಪೈಕಿ ಯಾರಾದರೂ ಉಳಿದಿರುವುದನ್ನು ಕಾಣುತ್ತೀರಾ ?
ﭑﭒﭓﭔﭕﭖﭗ
69:9
ಫಿರ್ಔನ್ ಮತ್ತು ಅವನಿಗಿಂತ ಮುಂಚಿನವರು ಹಾಗು ಬುಡ ಮೇಲಾದ (ಸದೂಮ್) ನಾಡುಗಳ ಜನರೂ ಪಾಪಕೃತ್ಯಗಳನ್ನು ಎಸಗಿದ್ದರು.
ﭘﭙﭚﭛﭜﭝﭞ
69:10
ಅವರು ತಮ್ಮ ಪ್ರಭುವಿನ ಸಂದೇಶವಾಹಕರನ್ನು ಧಿಕ್ಕರಿಸಿದರು. (ಕೊನೆಗೆ) ಅಲ್ಲಾಹನು ಅವರನ್ನು ಕಠೋರವಾಗಿ ಹಿಡಿದನು.
ﭟﭠﭡﭢﭣﭤﭥﭦ
69:11
ನೀರು ಉಕ್ಕಿ ಜಲಪ್ರಳಯವಾದಾಗ ನಾವು ನಿಮ್ಮನ್ನು (ನೂಹ್ರವರ) ಹಡಗಿಗೆ ಹತ್ತಿಸಿದೆವು.
ﭧﭨﭩﭪﭫﭬﭭ
69:12
ನಾವು ಅದನ್ನು ನಿಮಗೆ ಪಾಠದಾಯಕ ಸ್ಮರಣೆಯಾಗಿ ಮಾಡಲು ಮತ್ತು ನೆನಪಿಡುವ ಕಿವಿಗಳು ಅದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳಲೆಂದಾಗಿದೆ.
ﭮﭯﭰﭱﭲﭳﭴ
69:13
ಕಹಳೆಯಲ್ಲಿ ಕೇವಲ ಒಂದೇ ಬಾರಿ ಊದಲಾದಾಗ,
ﭵﭶﭷﭸﭹﭺﭻ
69:14
ಭೂಮಿ ಮತ್ತು ರ‍್ವತಗಳನ್ನು ಎತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.
ﭼﭽﭾﭿ
69:15
ಅಂದು ಸಂಭವಿಸುವ ಘಟನೆ ಸಂಭವಿಸಿಬಿಡುವುದು.
ﮀﮁﮂﮃﮄﮅ
69:16
ಅಂದು ಆಕಾಶವು ಬಿರಿದು ಸಂಪರ‍್ಣ ದರ‍್ಬಲವಾಗಿ ಬಿಡುವುದು.
ﮆﮇﮈﮉﮊﮋﮌﮍﮎﮏﮐ
69:17
ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ ಮಲಕ್ಗಳು ತಮ್ಮ ಮೇಲೆ ಹೊತ್ತುಕೊಂಡಿರುವರು.
ﮑﮒﮓﮔﮕﮖﮗ
69:18
ಆ ದಿನ ನೀವೆಲ್ಲರೂ (ಅಲ್ಲಾಹನ) ಮುಂದೆ ಹಾಜರುಗೊಳಿಸಲಾಗುವಿರಿ. ನಿಮ್ಮ ಯಾವ ರಹಸ್ಯವು ಗುಪ್ತವಾಗಿರಲಾರದು.
ﮘﮙﮚﮛﮜﮝﮞﮟﮠﮡ
69:19
ಆಗ ಯಾರ ರ‍್ಮಪತ್ರವು ಅವನ ಬಲಗೈಯಲ್ಲಿ ನೀಡಲಾಗುವುದೋ ಅವನು ಹೇಳುವನು; ಇಗೋ ನನ್ನ ರ‍್ಮಪತ್ರವನ್ನು ಓದಿ ನೋಡಿರಿ.
ﮢﮣﮤﮥﮦﮧ
69:20
ಖಂಡಿತವಾಗಿಯೂ ನನಗೆ ನನ್ನ ಲೆಕ್ಕ ವಿಚಾರಣೆ ಎದುರಿಸಲಿಕ್ಕಿದೆಯೆಂದು ಸಂಪರ‍್ಣ ವಿಶ್ವಾಸವಿತ್ತು.
ﮨﮩﮪﮫﮬ
69:21
ಆಗ ಅವನು ಸಂತೃಪ್ತ ಜೀವನದಲ್ಲಿರುವನು.
ﮭﮮﮯﮰ
69:22
ಅತ್ತುö್ಯನ್ನತ ಸ್ರ‍್ಗದಲ್ಲಿ.
ﮱﯓﯔ
69:23
ಅದರ ಫಲಗಳು ಬಾಗಿಕೊಂಡಿರುವುದು.
ﯕﯖﯗﯘﯙﯚﯛﯜﯝ
69:24
ಗತ ಕಾಲದಲ್ಲಿ ನೀವು ಮಾಡಿದ ರ‍್ಮಗಳ ಫಲವಾಗಿ ನೀವು ಸಂತಸದಿಂದ ತಿನ್ನಿರಿ ಮತ್ತು ಕುಡಿಯಿರಿ (ಎಂದು ಹೇಳಲಾಗುವುದು)
ﯞﯟﯠﯡﯢﯣﯤﯥﯦﯧﯨ
69:25
ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ ನನ್ನ ರ‍್ಮಪತ್ರವನ್ನು ನೀಡಲಾಗದಿರುತ್ತಿ ದ್ದರೆ'...
ﯩﯪﯫﯬﯭ
69:26
ನನ್ನ ಲೆಕ್ಕವಿಚಾರಣೆ ಏನೆಂಬುದನ್ನು ನಾನು ಅರಿಯದೇ ಇರುತ್ತಿದ್ದರೆ.
ﯮﯯﯰﯱ
69:27
ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !
ﯲﯳﯴﯵﯶﯷ
69:28
ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.
ﯸﯹﯺﯻ
69:29
ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.
ﯼﯽﯾ
69:30
(ಆಜ್ಞಾಪಿಸಲಾಗುವುದು) ಅವನನ್ನು ಹಿಡಿಯಿರಿ, ಬಳಿಕ ಅವನಿಗೆ ಕಂಠಕಡಗವನ್ನು ತೊಡಿಸಿರಿ.
ﯿﰀﰁﰂ
69:31
ತರುವಾಯ ಅವನನ್ನು ನರಕಾಗ್ನಿಗೆ ಎಸೆಯಿರಿ.
ﰃﰄﰅﰆﰇﰈﰉﰊ
69:32
ಅನಂತರ, ಎಪ್ಪತ್ತು ಮೊಳ ಉದ್ದವಿರುವ ಒಂದು ಸಂಕೋಲೆಯಲ್ಲಿ ಅವನನ್ನು ಬಿಗಿಯಿರಿ,
ﰋﰌﰍﰎﰏﰐﰑ
69:33
ನಿಸ್ಸಂಶಯವಾಗಿಯೂ ಅವನು ಮಹಾನನಾದ ಅಲ್ಲಾಹನಲ್ಲಿ ವಿಶ್ವಾಸವಿಡುವವನಾಗಿರಲಿಲ್ಲ.
ﰒﰓﰔﰕﰖﰗ
69:34
ಬಡವನಿಗೆ ಆಹಾರ ನೀಡಲು ಅವನು ಪ್ರೇರೇಪಿಸುತ್ತಿರಲಿಲ್ಲ.
ﰘﰙﰚﰛﰜﰝ
69:35
ಅದ್ದರಿಂದ ಇಂದು ಅವನಿಗೆ ಯಾವ ಆಪ್ತಮಿತ್ರನೂ ಇಲ್ಲ.
ﭑﭒﭓﭔﭕﭖ
69:36
ಹುಣ್ಣುಗಳ ಕೀವಿನ ಹೊರತು ಬೇರಾವ ಆಹಾರವಿಲ್ಲ.
ﭗﭘﭙﭚﭛ
69:37
ಪಾಪಿಗಳ ಹೊರತು ಅದನ್ನು ಇನ್ನಾರೂ ಸೇವಿಸುವುದಿಲ್ಲ.
ﭜﭝﭞﭟﭠ
69:38
ಹಾಗಲ್ಲ ನಾನು ನೀವು ಕಾಣುವ ವಸ್ತುಗಳ ಆಣೆ ಹಾಕುತ್ತೇನೆ.
ﭡﭢﭣﭤ
69:39
ನಾನು ನೀವು ಕಾಣದ ವಸ್ತುಗಳ ಆಣೆ ಹಾಕುತ್ತೇನೆ.
ﭥﭦﭧﭨﭩ
69:40
ಖಂಡಿತವಾಗಿಯೂ ಇದು (ಕುರ್ಆನ್) ಗೌರವಾನ್ವಿತ ಸಂದೇಶವಾಹಕರ ಮಾತಾಗಿದೆ.
ﭪﭫﭬﭭﭮﭯﭰﭱﭲ
69:41
ಇದು ಯಾವುದೇ ಒಬ್ಬ ಕವಿಯ ಮಾತಲ್ಲ. (ಆದರೆ) ನೀವು ಅತ್ಯಲ್ಪವೇ ವಿಶ್ವಾಸವಿಡುತ್ತೀರಿ.
ﭳﭴﭵﭶﭷﭸﭹﭺ
69:42
ಇದು ಯಾವುದೋ ಒಬ್ಬ ಜ್ಯೋತಿಷ್ಯನ ಮಾತೂ ಅಲ್ಲ, ನೀವು ಅತ್ಯಲ್ಪವೇ ಉಪದೇಶವನ್ನು ಪಡೆಯುತ್ತೀರಿ.
ﭻﭼﭽﭾﭿ
69:43
ಇದು ರ‍್ವಲೋಕದ ಪ್ರಭುವಿನವತಿಯಿಂದ ಅವತರ‍್ಣಗೊಂಡಿದೆ.
ﮀﮁﮂﮃﮄﮅ
69:44
ಪೈಗಂಬರರು ಯಾವುದೇ ಮಾತನ್ನು ಸ್ವಯಂ ಸೃಷ್ಟಿಸಿ ನಮ್ಮದೆಂದು ಹೇಳಿರುತ್ತಿದ್ದರೆ.
ﮆﮇﮈﮉ
69:45
ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.
ﮊﮋﮌﮍﮎ
69:46
ತರುವಾಯ ಅವರ ಜೀವನಾಡಿಯನ್ನು ಕತ್ತರಿಸಿಬಿಡುತ್ತಿದ್ದೆವು.
ﮏﮐﮑﮒﮓﮔﮕ
69:47
ಆ ಬಳಿಕ ನಿಮ್ಮ ಪೈಕಿ ಯಾರೂ ನನ್ನನ್ನು ಅವರಿಂದ ತಡೆಯುವವರಿರುತ್ತಿರಲಿಲ್ಲ.
ﮖﮗﮘﮙ
69:48
ಖಂಡಿತವಾಗಿಯೂ ಈ ಕುರ್ಆನ್ ಭಯಭಕ್ತಿವುಳ್ಳವರಿಗೆ ಒಂದು ಉಪದೇಶವಾಗಿದೆ.
ﮚﮛﮜﮝﮞﮟ
69:49
ಖಂಡಿತವಾಗಿಯೂ ನಿಮ್ಮ ಪೈಕಿ ಕೆಲವರು ಅದನ್ನು ಸುಳ್ಳಾಗಿಸುವವರಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ.
ﮠﮡﮢﮣﮤ
69:50
ನಿಸ್ಸಂಶಯವಾಗಿಯೂ (ಇದು) ಸತ್ಯನಿಷೇಧಿಗಳ ಖೇದಕ್ಕೆ ಕಾರಣವಾಗಿದೆ.
ﮥﮦﮧﮨ
69:51
ಖಂಡಿತವಾಗಿಯೂ ಇದು ಸದೃಢ ಸತ್ಯವಾಗಿದೆ.
ﮩﮪﮫﮬﮭ
69:52
ಆದ್ದರಿಂದ ನೀವು ನಿಮ್ಮ ಮಹಾನನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







