ಸೂರಾ ಅಲ್-ಗಾಶಿಯಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಗಾಶಿಯಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಗಾಶಿಯಾ ಅನುವಾದ. ಸೂರಾ ಅಲ್-ಗಾಶಿಯಾ (Meccan) 26 ಆಯತ್.
Related
- ಸೂರಾ ಅಲ್-ಗಾಶಿಯಾ ಅನುವಾದಕನ್ನಡ
- ಸೂರಾ ಅಲ್-ಗಾಶಿಯಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಗಾಶಿಯಾ

ﭽﭾﭿﮀﮁ
88:1
ಆವರಿಸಿಕೊಳ್ಳುವಂತಹ ಪ್ರಳಯ ದಿನದ ವೃತ್ತಾಂತವು ನಿಮಗೆ ತಲುಪಿದೆಯೇ?
ﮂﮃﮄﮅ
88:2
ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.
ﮆﮇﮈ
88:3
(ಮತ್ತು) ಪರಿಶ್ರಮ ಪಟ್ಟವು ಬಳಲಿರುವುವು.
ﮉﮊﮋﮌ
88:4
ಅವರು ಧಗಧಗಿಸುವ ಅಗ್ನಿಯನ್ನು ಪ್ರವೇಶಿಸುವರು.
ﮍﮎﮏﮐﮑ
88:5
ಕುದಿಯುತ್ತಿರುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.
ﮒﮓﮔﮕﮖﮗﮘ
88:6
ಅವರಿಗೆ ಮುಳ್ಳು ತುಂಬಿದ ಗಿಡಗಳ ಹೊರತು ಬೇರಾವ ಆಹಾರವಿರದು.
ﮙﮚﮛﮜﮝﮞﮟ
88:7
ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.
ﮠﮡﮢﮣ
88:8
ಹಲವು ಮುಖಗಳು ಅಂದು ರ‍್ಷಭರಿತವಾಗಿರುವುದು.
ﮤﮥﮦ
88:9
ಅವುಗಳು ತಮ್ಮ (ಭೂಲೋಕದ) ಪರಿಶ್ರಮದ ಕುರಿತು ಸಂತೃಪ್ತವಾಗಿರುವುವು.
ﮧﮨﮩﮪ
88:10
ಉನ್ನತವಾದ ಸ್ರ‍್ಗಗಳಲ್ಲಿರುವುವು.
ﮫﮬﮭﮮﮯ
88:11
ಅದರಲ್ಲಿ ಯಾವ ವ್ರ‍್ಥ ಮಾತನ್ನು ಅವರು ಕೇಳಲಾರರು.
ﮰﮱﯓﯔ
88:12
ಹರಿಯುತ್ತಿರುವ ಚಿಲುಮೆಯಿರುವುದು.
ﯕﯖﯗﯘ
88:13
ಉನ್ನತವಾದ ಮಂಚಗಳಿರುವುವು.
ﯙﯚﯛ
88:14
ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.
ﯜﯝﯞ
88:15
ಸಾಲಾಗಿಡಲಾದ ಒರಗು ದಿಂಬುಗಳಿರುವುವು.
ﯟﯠﯡ
88:16
ಮತ್ತು ಹಾಸಲಾದ ರತ್ನಗಂಬಳಿಗಳಿರುವುವು.
ﯢﯣﯤﯥﯦﯧﯨ
88:17
ಏನು ಅವರು ಒಂಟೆಯೆಡೆಗೆ ನೋಡುವುದಿಲ್ಲವೇ, ಅದು ಹೇಗೆ ವಿಚಿತ್ರವಾಗಿ ಸೃಷ್ಟಿಸಲಾಗಿದೆಯೆಂದು ?
ﯩﯪﯫﯬﯭ
88:18
ಮತ್ತು ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲಾಗಿದೆಯೆಂದು ?
ﯮﯯﯰﯱﯲ
88:19
ಮತ್ತು ರ‍್ವತಗಳೆಡೆಗೆ ಅವುಗಳನ್ನು ಹೇಗೆ ನಾಟಲಾಗಿದೆಯೆಂದು ?
ﯳﯴﯵﯶﯷ
88:20
ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?
ﯸﯹﯺﯻﯼ
88:21
ಆದ್ದರಿಂದ ನೀವು ಉಪದೇಶ ನೀಡಿರಿ. ನೀವು ಉಪದೇಶ ನೀಡುವವರು ಮಾತ್ರವಾಗಿರುವಿರಿ
ﯽﯾﯿﰀ
88:22
ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.
ﭑﭒﭓﭔﭕ
88:23
ಆದರೆ ಯಾರು ವಿಮುಖನಾಗುತ್ತಾನೋ ಮತ್ತು ಸತ್ಯನಿಷೇಧ ಕೈಗೊಳ್ಳುತ್ತಾನೋ.
ﭖﭗﭘﭙﭚ
88:24
ಅವನಿಗೆ ಅಲ್ಲಾಹನು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
ﭛﭜﭝﭞ
88:25
ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.
ﭟﭠﭡﭢﭣ
88:26
ಬಳಿಕ ನಿಸ್ಸಂಶಯವಾಗಿಯೂ ಅವರ ವಿಚಾರಣೆಯ ಹೊಣೆ ನಮ್ಮ ಮೇಲೆ ಇದೆ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







