PDF —
25 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಇನ್ಶಿಕಾಕ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಇನ್ಶಿಕಾಕ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಇನ್ಶಿಕಾಕ್ ಅನುವಾದ. ಸೂರಾ ಅಲ್-ಇನ್ಶಿಕಾಕ್ (Meccan) 25 ಆಯತ್.



25 ಆಯತ್ · Meccan · ಕನ್ನಡ
bismillah
ﭣﭤﭥﭦ
84:1 ಆಕಾಶವು ಒಡೆದು ಹೋಗುವಾಗ
ﭧﭨﭩﭪ
84:2 ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.
ﭫﭬﭭﭮ
84:3 ಭೂಮಿಯು ವಿಸ್ತರಿಸಲಾಗುವಾಗ.
ﭯﭰﭱﭲﭳ
84:4 ಮತ್ತು ಅದು ತನ್ನೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ,
ﭴﭵﭶﭷ
84:5 ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.
ﭸﭹﭺﭻﭼﭽﭾﭿﮀ
84:6 ಓ ಮನುಷ್ಯನೇ, ನೀನು ನಿನ್ನ ಪ್ರಭುವಿನೆಡೆಗೆ ಸತತವಾಗಿ ಪ್ರಯತ್ನಿಸುತ್ತಾ ಸಾಗುತ್ತಿರುವೆ ಮತ್ತು ಅವನನ್ನು ಭೇಟಿಯಾಗಲಿರುವೆ.
ﮁﮂﮃﮄﮅﮆ
84:7 ಆಗ (ಪರಲೋಕದಲ್ಲಿ) ಯಾವ ವ್ಯಕ್ತಿಯ ರ‍್ಮಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಗುವುದೋ...
ﮇﮈﮉﮊﮋ
84:8 ಅವನ ವಿಚಾರಣೆ ಸುಲಭವಾಗಿ ಮಾಡಲಾಗುವುದು.
ﮌﮍﮎﮏﮐ
84:9 ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.
ﮑﮒﮓﮔﮕﮖﮗ
84:10 ಆದರೆ ಯಾರ ರ‍್ಮಪತ್ರವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ...
ﮘﮙﮚﮛ
84:11 ಆಗ ಅವನು ಮರಣವನ್ನು ಕರೆಯತೊಡಗುವನು.
ﮜﮝﮞ
84:12 ಮತ್ತು ಧಗಧಗಿಸುವ ನರಕಾಗ್ನಿಯಲ್ಲಿ ಪ್ರವೇಶಿಸುವನು.
ﮟﮠﮡﮢﮣﮤ
84:13 ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.
ﮥﮦﮧﮨﮩﮪ
84:14 ತನಗೆ ಎಂದೂ (ಅಲ್ಲಾಹನೆಡೆಗೆ) ಮರಳಲಿಕ್ಕಿಲ್ಲವೆಂದು ಅವನು ಭಾವಿಸಿದ್ದನು.
ﮫﮬﮭﮮﮯﮰﮱﯓ
84:15 ಏಕಿಲ್ಲ! ವಸ್ತುತಃ ಅವನ ಪ್ರಭು ಅವನನ್ನು ಚೆನ್ನಾಗಿ ವೀಕ್ಷಿಸುತ್ತಿದ್ದನು.
ﯔﯕﯖﯗ
84:16 ನಾನು ಅಸ್ತಮಾನ ಶೋಭೆಯ ಆಣೆ ಹಾಕುತ್ತೇನೆ.
ﯘﯙﯚﯛ
84:17 ಮತ್ತು ರಾತ್ರಿಯ (ಆಣೆ) ಮತ್ತು ಅದು ಒಟ್ಟುಗೂಡಿಸುವವುಗಳಾಣೆ.
ﯜﯝﯞﯟ
84:18 ಚಂದ್ರನ ಮೇಲಾಣೆ, ಅದು ಪರ‍್ಣಗೊಂಡಾಗ.
ﯠﯡﯢﯣﯤ
84:19 ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.
ﯥﯦﯧﯨﯩ
84:20 ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!
ﯪﯫﯬﯭﯮﯯﯰﯱ
84:21 ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.
ﯲﯳﯴﯵﯶ
84:22 ಅಲ್ಲ, ಸತ್ಯ ನಿಷೇಧಿಗಳು ಸುಳ್ಳಾಗಿಸುತ್ತಿದ್ದಾರೆ.
ﯷﯸﯹﯺﯻ
84:23 ಅವರು ಹೃದಯಗಳಲ್ಲಿ ಬಚ್ಚಿಟ್ಟು ಕೊಂಡಿರುವುದನ್ನು ಅವನು ಚೆನ್ನಾಗಿ ಬಲ್ಲನು.
ﯼﯽﯾﯿ
84:24 ಅವರಿಗೆ ನೀವು ವೇದನಾಜನಕ ಶಿಕ್ಷೆಯ ಶುಭವರ‍್ತೆ ನೀಡಿರಿ.
ﭑﭒﭓﭔﭕﭖﭗﭘﭙﭚ
84:25 ಆದರೆ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ರ‍್ಮವೆಸಗುವವರಿಗೆ ಅನಂತ ಪ್ರತಿಫಲವಿದೆ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers