ಸೂರಾ ಅಸ್-ಸಜ್ದಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಸ್-ಸಜ್ದಾ pdf ಕನ್ನಡ — ಡೌನ್‌ಲೋಡ್ ಸೂರಾ ಅಸ್-ಸಜ್ದಾ ಅನುವಾದ. ಸೂರಾ ಅಸ್-ಸಜ್ದಾ (Meccan) 30 ಆಯತ್.
Related
- ಸೂರಾ ಅಸ್-ಸಜ್ದಾ ಅನುವಾದಕನ್ನಡ
- ಸೂರಾ ಅಸ್-ಸಜ್ದಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಸ್-ಸಜ್ದಾ

ﭑﭒ
32:1
ಅಲೀಫ್ ಲಾಮ್ ಮೀಮ್.
ﭓﭔﭕﭖﭗﭘﭙﭚﭛ
32:2
ಈ ಗ್ರಂಥವು ಸರ್ವಲೋಕದ ಪ್ರಭುವಿನ ವತಿಯಿಂದ ಅವತೀರ್ಣಗೊಂಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯ
32:3
ಇದನ್ನು ಪ್ರವಾದಿಯವರು ಸ್ವತಃ ರಚಿಸಿದ್ದಾರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ಇದು ನಿಮ್ಮ ಪ್ರಭುವಿನ ವತಿಯ ಸತ್ಯವಾಗಿದೆ. ಇದು ನಿಮಗಿಂತ ಮುಂಚೆ ಯಾರು ಮುನ್ನೆಚ್ಚರಿಕೆಗಾರರು ಬಂದಿರದAತಹ ಒಂದು ಸಮೂಹಕ್ಕೆ ನೀವು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರು ಸನ್ಮಾರ್ಗ ಪಡೆಯಲೂಬಹುದು.
ﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊ
32:4
ಅಲ್ಲಾಹನೆಂದರೆ ಆಕಾಶಗಳನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ಮಧ್ಯಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದವನಾಗಿದ್ದಾನೆ. ತರುವಾಯ ಸಿಂಹಾಸನದ ಮೇಲೆ ಆರೋಢನಾದನು. ಅವನ ಹೊರತು ನಿಮಗೆ ಯಾವ ರಕ್ಷಕನಾಗಲೀ, ಶಿಫಾರಸ್ಸುಗಾರನಾಗಲೀ ಇಲ್ಲ. ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
ﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜ
32:5
ಅವನು ಆಕಾಶದಿಂದ ಭೂಮಿಯವರೆಗೆ ಸಕಲ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ತರುವಾಯ ಆ ಕಾರ್ಯವು ಅವನೆಡೆಗೆ ಏರಿಹೋಗುವುದು ಇಂತಹಾ ಒಂದು ದಿನದಲ್ಲಿ ಅದರÀ ವಿಸ್ತಾರವು ನೀವು ಗಣಿಸುವ ಸಾವಿರ ವರ್ಷಗಳಾಗಿರುವುದು.
ﮝﮞﮟﮠﮡﮢﮣ
32:6
ಅವನೇ ಗೋಚರ ಅಗೋಚರಗಳನ್ನು ಅರಿಯುವವನೂ, ಪ್ರತಾಪಶಾಲಿಯು, ಕರುಣಾನಿಧಿಯು ಆಗಿರುವÀನು.
ﮤﮥﮦﮧﮨﮩﮪﮫﮬﮭﮮﮯ
32:7
ಅವನು ಸಕಲ ವಸ್ತುಗಳನ್ನೂ ಚೆನ್ನಾಗಿ ಸೃಷ್ಟಿಸಿದನು ಮತ್ತು ಮಾನವನ ಸೃಷ್ಟಿಯನ್ನು ಅವನು ಆವೇ ಮಣ್ಣಿನಿಂದ ಆರಂಭಿಸಿದನು.
ﮰﮱﯓﯔﯕﯖﯗﯘﯙ
32:8
ತರುವಾಯ ಅವನ ಸಂತತಿಯನ್ನು ತುಚ್ಛವಾದ ನೀರಿನ ಸತ್ವದಿಂದ ಮುಂದುವರಿಸಿದನು.
ﯚﯛﯜﯝﯞﯟﯠﯡﯢﯣﯤﯥﯦﯧﯨﯩﯪ
32:9
ತರುವಾಯ ಅವನು ಅವನಿಗೆ ಉತ್ತಮ ಸ್ವರೂಪವನ್ನು ನೀಡಿ ತನ್ನವತಿಯ ಆತ್ಮವನ್ನು ಅವನಲ್ಲಿ ಊದಿದನು. ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನು, ಹೃದಯಗಳನ್ನೂ ಉಂಟುಮಾಡಿದವನು. ನೀವು ಸ್ವಲ್ಪ ಮಾತ್ರವೇ ಕೃತಜ್ಞತೆ ಸಲ್ಲಿಸುತ್ತೀರಿ.
ﯫﯬﯭﯮﯯﯰﯱﯲﯳﯴﯵﯶﯷﯸﯹﯺ
32:10
ಅವರು ಹೇಳಿದರು: ನಾವು ಭೂಮಿಯಲ್ಲಿ ಮಣ್ಣು ಪಾಲಾಗಿಬಿಟ್ಟರೂ ನಾವು ಹೊಸದಾಗಿ ಸೃಷ್ಟಿಸಲಾಗುವೆವೋ? ಹಾಗಲ್ಲ, ಅವರು ತಮ್ಮ ಪ್ರಭುವಿನ ಭೇಟಿಯನ್ನು ನಿಷೇಧಿಸುವವರಾಗಿದ್ದಾರೆ.
ﯻﯼﯽﯾﯿﰀﰁﰂﰃﰄﰅﰆﰇ
32:11
ಹೇಳಿರಿ: ಓ ಪೈಗಂಬರರೇ! ನಿಮ್ಮ ಮೇಲೆ ನಿಯೋಗಿಸಲಾದ ಮರಣದ ದೂತನು ನಿಮ್ಮನ್ನು ಮೃತಪಡಿಸಲಿದ್ದಾನೆ. ತರುವಾಯ ನೀವು ನಿಮ್ಮ ಪ್ರಭುವಿನೆಡೆಗೆ ಮರಳಿಸಲಾಗುವಿರಿ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡ
32:12
ಅಪರಾಧಿಗಳು ತಮ್ಮ ಪ್ರಭುವಿನ ಬಳಿ ತಲೆತಗ್ಗಿಸಿ ನಿಲ್ಲುವ ಸಂದರ್ಭವನ್ನು ನೀವು ಕಂಡಿರುತ್ತಿದ್ದರೇ! ಅವರು ಹೇಳುತ್ತಿರುವರು: ನಮ್ಮ ಪ್ರಭೂ, ನಾವಿಂದು ಕಂಡಿರುವೆವು ಮತ್ತು ಕೇಳಿಸಿಕೊಂಡಿರುವೆವು. ಆದ್ದರಿಂದ ನಮ್ಮನ್ನು ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ಖಂಡಿತವಾಗಿಯು ನಾವು ಈಗ ದೃಢವಿಶ್ವಾಸವುಳ್ಳವರಾಗಿದ್ದೇವೆ.
ﭢﭣﭤﭥﭦﭧﭨﭩﭪﭫﭬﭭﭮﭯﭰﭱﭲ
32:13
ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ನಾವು ಅವನ ಸನ್ಮಾರ್ಗವನ್ನು ಕರುಣಿಸುತ್ತಿದ್ದೆವು. ಆದರೆ ಯಕ್ಷ ಮತ್ತು ಮಾನವರಿಂದ ನಾನು ನರಕವನ್ನು ತುಂಬಿ ಬಿಡುವೆನು ಎಂಬ ನನ್ನ ಕಡೆಯ ಮಾತು ಸ್ಥಿರವಾಗಿಬಿಟ್ಟಿದೆ.
ﭳﭴﭵﭶﭷﭸﭹﭺﭻﭼﭽﭾﭿﮀﮁﮂ
32:14
ಆದ್ದರಿಂದ ನೀವು ನಿಮ್ಮ ಈ ದಿನದ ಭೇಟಿಯನ್ನು ಮರೆತು ಬಿಟ್ಟಿರುವ ಕಾರಣ ಶಿಕ್ಷೆಯನ್ನು ಸವಿಯಿರಿ. ನಾವು ಸಹ ನಿಮ್ಮನ್ನು ಮರೆತು ಬಿಟ್ಟಿದ್ದೇವೆ. ನೀವು ಮಾಡುತ್ತಿದ್ದಂತಹ ಕರ್ಮದ (ಫಲವಾಗಿ) ಶಾಶ್ವತ ಶಿಕ್ಷೆಯನ್ನು ಸವಿಯಿರಿ.
ﮃﮄﮅﮆﮇﮈﮉﮊﮋﮌﮍﮎﮏﮐﮑﮒﮓ
32:15
ನಮ್ಮ ಸೂಕ್ತಗಳ ಮೂಲಕ ಬೋಧಿಸಲಾದಾಗ ಸಾಷ್ಟಾಂಗವೆರಗುವವರು ಮತ್ತು ತಮ್ಮ ಪ್ರಭುವನ್ನು ಸ್ತುತಿಸುವವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಸ್ವಾಸವಿಡುತ್ತಾರೆ ಮತು ್ತಅವರು ಅಹಂಕಾರತೋರುವುದಿಲ್ಲ.
ﮔﮕﮖﮗﮘﮙﮚﮛﮜﮝﮞﮟ
32:16
ಅವರ ಪಾರ್ಶ್ವಗಳು ತಮ್ಮ ಹಾಸಿಗೆಗಳಿಂದ ಬೇರ್ಪಟ್ಟಿರುತ್ತವೆ. ಅವರು ಭಯ ಮತ್ತು ನಿರೀಕ್ಷೆಯೊಂದಿಗೆ ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದರಿಂದ ಅವರು ಖರ್ಚು ಮಾಡುತ್ತಾರೆ.
ﮠﮡﮢﮣﮤﮥﮦﮧﮨﮩﮪﮫﮬﮭ
32:17
ಅವರ ಕರ್ಮಗಳ ಫಲವಾಗಿ ಅವರಿಗಾಗಿ ಕಣ್ಮನತಣಿಸುವ ಯಾವ ವಸ್ತುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಯಾವ ವ್ಯಕ್ತಿಯು ಅರಿಯುವುದಿಲ್ಲ.
ﮮﮯﮰﮱﯓﯔﯕﯖﯗﯘ
32:18
ಏನು; ಸತ್ಯವಿಶ್ವಾಸಿಯು ಧಿಕ್ಕಾರಿಯಂತಾಗುವನೇ? ಅವರು ಸಮಾನರಲ್ಲ.
ﯙﯚﯛﯜﯝﯞﯟﯠﯡﯢﯣﯤﯥ
32:19
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮವನ್ನೂ ಮಾಡಿದರೋ ಅವರಿಗೆ ಅತಿಥ್ಯವಾಗಿ ಶಾಶ್ವತ ವಾಸದ ಸ್ವರ್ಗೋದ್ಯಾನಗಳಿವೆ. ಇದು ಅವರು ಮಾಡುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ.
ﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼ
32:20
ಇನ್ನು ಧಿಕ್ಕಾರವೆಸಗಿದವರ ವಾಸಸ್ಥಳವು ನರಕವಾಗಿದೆ. ಅವರು ಅಲ್ಲಿಂದ ಹೊರಬರಲು ಬಯಸುವಾಗಲೆಲ್ಲ ಅಲ್ಲಿಗೇ ಮರಳಿಸಲಾಗುವರು ಮತ್ತು ನಿಮ್ಮ ನಿಷೇಧದ ಪ್ರತಿಫಲವಾಗಿ ನರಕಾಗ್ನಿಯ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು.
ﭑﭒﭓﭔﭕﭖﭗﭘﭙﭚ
32:21
ಖಂಡಿತವಾಗಿಯು ನಾವು ಅವರಿಗೆ ಮಹಾ ಶಿಕ್ಷೆಯ ಮೊದಲು ಇಹಲೋಕದಲ್ಲೇ ಸಣ್ಣ ಶಿಕ್ಷೆಯ ರುಚಿಯನ್ನು ಸವಿಸುವೆವು. ಇದು ಅವರು ಮರಳಲೆಂದಾಗಿದೆ.
ﭛﭜﭝﭞﭟﭠﭡﭢﭣﭤﭥﭦﭧﭨﭩ
32:22
ತನ್ನ ಪ್ರಭುವಿನ ಸೂಕ್ತಿಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅವುಗಳಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಖಂಡಿತವಾಗಿಯೂ ಅಪರಾಧಿಗಳಿಂದ ನಾವು ಪ್ರತೀಕಾರ ಪಡೆಯುವೆವು.
ﭪﭫﭬﭭﭮﭯﭰﭱﭲﭳﭴﭵﭶﭷﭸﭹ
32:23
ನಿಸ್ಸಂಶಯವಾಗಿಯು ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದ್ದೇವು. ಆದ್ದರಿಂದ ನೀವು ಅವರನ್ನು ಭೇಟಿಯಾಗುವ ವಿಚಾರದಲ್ಲಿ ಸಂದೇಹಕ್ಕೊಳಗಾಗ ಬೇಡಿರಿ. ನಾವು ತೌರಾತನ್ನು ಇಸ್ರಾಯೀಲ್ ಸಂತತಿಗಳಿಗೆ ಸನ್ಮಾರ್ಗದರ್ಶನವನ್ನಾಗಿ ಮಾಡಿದೆವು.
ﭺﭻﭼﭽﭾﭿﮀﮁﮂﮃﮄﮅ
32:24
ಅವರು ಸಹನೆ ಪಾಲಿಸಿದಾಗ ಅವರ ಪೈಕಿ ನಮ್ಮ ಆಜ್ಞೆಯನ್ನು ಅನುಸರಿಸಿ ಮಾರ್ಗದರ್ಶನ ನೀಡುವಂತಹ ನಾಯಕರನ್ನು ನಾವು ಉಂಟುಮಾಡಿದೆವು ಮತ್ತು ಅವರು ನಮ್ಮ ಸೂಕ್ತಿಗಳ ಮೇಲೆ ದೃಢವಿಶ್ವಾಸ ಹೊಂದಿದ್ದರು
ﮆﮇﮈﮉﮊﮋﮌﮍﮎﮏﮐﮑ
32:25
ಅವರು ಪರಸ್ಪರ ಭಿನ್ನತೆತೋರುವ ವಿಷಯಗಳಲ್ಲಿ ಪುನರುತ್ಥಾನ ದಿನದಂದು ಅವರ ಮಧ್ಯೆ ನಿಮ್ಮ ಪ್ರಭು ತೀರ್ಪು ನೀಡುವನು.
ﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦ
32:26
ಇವರಿಗಿಂತ ಮುಂಚೆ ಅದೆಷ್ಟೋ ಪೀಳಿಗೆಗಳನ್ನು ನಾವು ನಾಶಗೊಳಿಸಿದ್ದೇವೆ ಎಂಬ ವಿಚಾರವು ಇವÀರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ನಾಡುಗಳಲ್ಲಿ ಅವರು ಹಾದು ಹೋಗುತ್ತಿದ್ದಾರೆ. ಖಂಡಿತವಾಗಿಯೂ ಇದರಲ್ಲಿ ದೊಡ್ಡ ದೃಷ್ಟಾಂತಗಳಿವೆ. ಹಾಗಿದ್ದೂ ಇವರು ಅದನ್ನು ಆಲಿಸುವುದಿಲ್ಲವೇ?
ﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚ
32:27
ನಾವು ಬರಡು ಭೂಮಿಯೆಡೆಗೆ ನೀರನ್ನು ಹರಿಸಿ ತನ್ಮೂಲಕ ಅವರ ಜಾನುವಾರುಗಳಿಗೂ ಮತ್ತು ಸ್ವತಃ ಅವರಿಗೂ ತಿನ್ನುವಂತಹ ಕೃಷಿಯನ್ನು ನಾವು ಉತ್ಪಾದಿಸುತ್ತೇವೆ ಎಂಬುದನ್ನು ಅವರು ಕಾಣಲಿಲ್ಲವೇ? ಹಾಗಿದ್ದೂ ಅವರು ನೋಡುವುದಿಲ್ಲವೇ?
ﯛﯜﯝﯞﯟﯠﯡﯢ
32:28
ಅವರು ಕೇಳುತ್ತಾರೆ, ಈ ತೀರ್ಪು ಯಾವಾಗ? ನೀವು ಸತ್ಯವಂತರಾಗಿದ್ದರೆ.
ﯣﯤﯥﯦﯧﯨﯩﯪﯫﯬﯭﯮ
32:29
ಪೈಗಂಬರರೇ ಉತ್ತರಿಸಿರಿ: ಅವಿಶ್ವಾಸಿಗಳಾಗಿರುವ ಜನರಿಗೆ ತೀರ್ಪಿನ ದಿನ ವಿಶ್ವಾಸ ತಾಳುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.
ﯯﯰﯱﯲﯳﯴ
32:30
ಆದ್ದರಿಂದ ನೀವು ಅವರನ್ನು ನಿರ್ಲಕ್ಷಿಸಿರಿ ಮತ್ತು ನಿರೀಕ್ಷಿಸುತ್ತಿರಿ. ಅವರು ಸಹ ನಿರೀಕ್ಷಿಸುವವರಾಗಿದ್ದಾರೆ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







