PDF —
78 ಆಯತ್ Medinan PDF
Built right in your browser — download starts automatically

ಸೂರಾ ಅರ್-ರಹ್ಮಾನ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅರ್-ರಹ್ಮಾನ್ pdf ಕನ್ನಡ — ಡೌನ್‌ಲೋಡ್ ಸೂರಾ ಅರ್-ರಹ್ಮಾನ್ ಅನುವಾದ. ಸೂರಾ ಅರ್-ರಹ್ಮಾನ್ (Medinan) 78 ಆಯತ್.

← ಅಲ್-ಕಮರ್ಸೂರಾ ಅರ್-ರಹ್ಮಾನ್ ಅಲ್-ವಾಕಿಯಾ →


78 ಆಯತ್ · Medinan · ಕನ್ನಡ
bismillah
ﭷﭸ
55:1 ಪರಮ ದಯಾಮಯನು.
ﭹﭺﭻ
55:2 ಕುರ್‌ಆನನ್ನು ಕಲಿಸಿದನು.
ﭼﭽﭾ
55:3 ಅವನು ಮನುಷ್ಯನನ್ನು ಸೃಷ್ಟಿಸಿದನು.
ﭿﮀﮁ
55:4 ಅವನಿಗೆ ಮಾತನಾಡಲು ಕಲಿಸಿದನು.
ﮂﮃﮄﮅ
55:5 ಸೂರ್ಯ ಹಾಗು ಚಂದ್ರ ಒಂದು ನಿಶ್ಚಿತ ಗಣನೆಯಂತೆ ಬಂಧಿತವಾಗಿದೆ.
ﮆﮇﮈﮉ
55:6 ಬಳ್ಳಿಗಳೂ ಹಾಗು ವೃಕ್ಷಗಳೂ ಅವನಿಗೆ ಸಾಷ್ಟಾಂಗವೆರಗುತ್ತವೆ.
ﮊﮋﮌﮍﮎ
55:7 ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.
ﮏﮐﮑﮒﮓ
55:8 ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.
ﮔﮕﮖﮗﮘﮙﮚ
55:9 ನ್ಯಾಯ ನೀತಿಯೊಂದಿಗೆ ನೀವು ತೂಕ ಮಾಡಿರಿ, ಹಾಗು ತೂಕದಲ್ಲಿ ಕಡಿತಗೊಳಿಸಬೇಡಿರಿ.
ﮛﮜﮝﮞ
55:10 ಅವನೇ ಭೂಮಿಯನ್ನು ಸೃಷ್ಟಿಗಳಿಗಾಗಿ ಉಂಟುಮಾಡಿದನು.
ﮟﮠﮡﮢﮣﮤ
55:11 ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗು ಕೋಶಗಳುಳ್ಳ ಖರ್ಜೂರ ಮರಗಳಿವೆ.
ﮥﮦﮧﮨﮩ
55:12 ಸಿಪ್ಪೆಯುಳ್ಳ ಧಾನ್ಯ ಹಾಗು ಸುಗಂಧಿತ ಹೂವುಗಳಿವೆ.
ﮪﮫﮬﮭﮮ
55:13 ಹಾಗಿದ್ದೂ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
ﮯﮰﮱﯓﯔﯕ
55:14 ಅವನು ಮಾನವನನ್ನು ಠಣಠಣಿಸುವ ಅವೆ ಮಣ್ಣಿನಿಂದ ಸೃಷ್ಟಿಸಿದನು.
ﯖﯗﯘﯙﯚﯛﯜ
55:15 ಹಾಗು ಅವನು ಜಿನ್ನ್ಗಳನ್ನು ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದನು.
ﯝﯞﯟﯠﯡ
55:16 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
ﯢﯣﯤﯥﯦ
55:17 ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭುವಾಗಿರುವನು.
ﯧﯨﯩﯪﯫ
55:18 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
ﭑﭒﭓﭔ
55:19 ಅವನು ಎರಡು ಸಮುದ್ರಗಳನ್ನು ಅವು ಪರಸ್ಪರ ಸ್ಪಂದಿಸುವAತೆ ಹರಿಸಿರುವನು.
ﭕﭖﭗﭘﭙ
55:20 ಅವೆರಡರ ನಡುವೆ ಒಂದು ತೆರೆಯಿದೆ. ಅದ್ದರಿಂದ ಅವು ಅತಿಕ್ರಮಿಸುವುದಿಲ್ಲ.
ﭚﭛﭜﭝﭞ
55:21 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
ﭟﭠﭡﭢﭣ
55:22 ಅವೆರಡರಿಂದ ಮುತ್ತು ಹಾಗು ಹವಳಗಳು ಹೊರಬರುತ್ತವೆ.
ﭤﭥﭦﭧﭨ
55:23 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
ﭩﭪﭫﭬﭭﭮﭯ
55:24 ಸಮುದ್ರದಲ್ಲಿ ಪರ್ವತಗಳಂತೆ ಎತ್ತರವಾಗಿ (ಸಂಚರಿಸುತ್ತಿರುವ) ಹಡಗುಗಳು ಅಲ್ಲಾಹನ ಒಡೆತನದಲ್ಲಿವೆ.
ﭰﭱﭲﭳﭴ
55:25 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಉಪಕಾರಗಳನ್ನು ಸುಳ್ಳಾಗಿಸುವಿರಿ?
ﭵﭶﭷﭸﭹ
55:26 ಭೂಮಿಯ ಮೇಲೆ ಇರುವುದೆಲ್ಲವೂ ನಾಶವಾಗಲಿದೆ.
ﭺﭻﭼﭽﭾﭿﮀ
55:27 ಅಪಾರ ಮಹಿಮೆ ಹಾಗು ಉದಾರತೆಯುಳ್ಳ ನಿನ್ನ ಪ್ರಭುವಿನ ಅಸ್ತಿತ್ವ ಮಾತ್ರ ಉಳಿಯುವುದು.
ﮁﮂﮃﮄﮅ
55:28 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
ﮆﮇﮈﮉﮊﮋﮌﮍﮎﮏﮐﮑ
55:29 ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲರೂ ಅವನೊಂದಿಗೆ ಬೇಡಿಕೊಳ್ಳುತ್ತಾರೆ, ಪ್ರತಿದಿನವೂ ಅವನು ಒಂದು ಕಾರ್ಯದಲ್ಲಿರುವನು.
ﮒﮓﮔﮕﮖ
55:30 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಕೊಡಗೆಗಳನ್ನು ಅದ್ಭುತಗಳನ್ನು ಸುಳ್ಳಾಗಿಸುವಿರಿ?
ﮗﮘﮙﮚﮛ
55:31 (ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ) ಸದ್ಯದಲ್ಲೇ ನಾವು ನಿಮ್ಮೆಡೆಗೆ ಸಂಪೂರ್ಣವಾಗಿ ಗಮನ ಹರಿಸಲಿದ್ದೇವೆ.
ﮜﮝﮞﮟﮠ
55:32 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಉಪಕಾರಗಳನ್ನು ಸುಳ್ಳಾಗಿಸುವಿರಿ?
ﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓ
55:33 ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ, ನಿಮಗೆ ಆಕಾಶಗಳ ಮತ್ತು ಭೂಮಿಯ ಸೀಮೆಗಳನ್ನು ದಾಟಿ ಹೊರಹೋಗುವ ಸಾಮರ್ಥ್ಯವಿದ್ದರೆ ಹೊರಹೋಗಿರಿ, ನೀವು ಪ್ರಚಂಡ ಶಕ್ತಿಯ ವಿನಾಃ ಹೊರಹೋಗಲಾರಿರಿ.
ﯔﯕﯖﯗﯘ
55:34 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
ﯙﯚﯛﯜﯝﯞﯟﯠﯡ
55:35 ನಿಮ್ಮ ಮೇಲೆ ಅಗ್ನಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಮೇಲೆ ನೀವು ಎದುರಿಸಲಾರಿರಿ.
ﯢﯣﯤﯥﯦ
55:36 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ?
ﯧﯨﯩﯪﯫﯬﯭ
55:37 ಆಕಾಶವು ಬಿರಿದು ಕೆಂಪು ಚರ್ಮದಂತೆ ಕೆಂಪಾದಾಗ.
ﯮﯯﯰﯱﯲ
55:38 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
ﯳﯴﯵﯶﯷﯸﯹﯺﯻ
55:39 ಆ ದಿನ ಯಾವ ಮನುಷ್ಯನಿಂದಾಗಲಿ, ಜಿನ್ನ್ನಿಂದಾಗಲಿ ಅವನ ಪಾಪದ ಕುರಿತು ವಿಚಾರಿಸಲಾಗುವುದಿಲ್ಲ.
ﯼﯽﯾﯿﰀ
55:40 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಉಪಕಾರಗಳನ್ನು ನಿರಾಕರಿಸುತ್ತೀರಿ?
ﰁﰂﰃﰄﰅﰆﰇ
55:41 ಅಪರಾಧಿಗಳು ತಮ್ಮ ಮುಖಲಕ್ಷಣಗಳಿಂದಲೇ ಗುರುತಿಸಲಾಗುವರು. ಅವರ ಮುಂದೆಲೆಯ ಕೂದಲು ಹಾಗು ಕಾಲುಗಳನ್ನು ಹಿಡಿಯಲಾಗುವುದು.
ﭑﭒﭓﭔﭕ
55:42 ಆಗ ನೀವು ನಿಮ್ಮ ಪ್ರಭುವಿನ ಯಾವ ಯಾವ ಶಕ್ತಿ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
ﭖﭗﭘﭙﭚﭛﭜ
55:43 ಅಪರಾಧಿಗಳು ಸುಳ್ಳಾಗಿಸುತ್ತಿದ್ದ ನರಕವು ಇದುವೇ ಆಗಿದೆ.
ﭝﭞﭟﭠﭡﭢ
55:44 ಅವರು ಆ ನರಕ ಹಾಗೂ ಕುದಿಯುತ್ತಿರುವ ನೀರಿನ ನಡುವೆ ಸುತ್ತುತ್ತಿರುವರು.
ﭣﭤﭥﭦﭧ
55:45 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
ﭨﭩﭪﭫﭬﭭ
55:46 ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.
ﭮﭯﭰﭱﭲ
55:47 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಪುರಸ್ಕಾರಗಳನ್ನು ಸುಳ್ಳಾಗಿಸುವಿರಿ?
ﭳﭴﭵ
55:48 ಆ ಎರಡೂ ಸ್ವರ್ಗೋದ್ಯಾನಗಳು ಅನೇಕ ರೆಂಬೆ ಕೊಂಬೆಗಳುಳ್ಳದ್ದಾಗಿರುವುವು.
ﭶﭷﭸﭹﭺ
55:49 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﭻﭼﭽﭾ
55:50 ಅವೆರಡರಲ್ಲಿ ಎರಡು ಚಿಲುಮೆಗಳು ಹರಿಯುತ್ತಿರುವುವು.
ﭿﮀﮁﮂﮃ
55:51 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﮄﮅﮆﮇﮈﮉ
55:52 ಅವೆರಡರಲ್ಲಿ ಪ್ರತಿಯೊಂದು ವಿಧದ ಹಣ್ಣುಹಂಪಲುಗಳ ಎರಡೆರಡು ವರ್ಗಗಳಿರುವವು.
ﮊﮋﮌﮍﮎ
55:53 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﮏﮐﮑﮒﮓﮔﮕﮖﮗﮘﮙ
55:54 ಸ್ವರ್ಗವಾಸಿಗಳು ದಿಂಬಿಗೊರಗಿ ಕುಳಿತಿರುವ ಹಾಸಿಗೆಗಳ ಒಳಪದರಗಳು ದಪ್ಪ ರೇಶ್ಮೆಗಳಿಂದಾಗಿರುವವು, ಮತ್ತು ಆ ಎರಡೂ ಸ್ವರ್ಗೋದ್ಯಾನಗಳ ಹಣ್ಣುಹಂಪಲುಗಳು ಬಾಗಿರುವುವು.
ﮚﮛﮜﮝﮞ
55:55 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﮟﮠﮡﮢﮣﮤﮥﮦﮧﮨ
55:56 ಅದರಲ್ಲಿ ದೃಷ್ಟಿ ತಗ್ಗಿಸುವವರಾದ ಅಪ್ಸರೆಗಳಿರುವರು, ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
ﮩﮪﮫﮬﮭ
55:57 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﮮﮯﮰﮱ
55:58 ಆ ಅಪ್ಸರೆಗಳು ಮಾಣಿಕ್ಯ ಮತ್ತು ಹವಳಗಳಂತಿರುವರು.
ﯓﯔﯕﯖﯗ
55:59 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﯘﯙﯚﯛﯜﯝ
55:60 ಒಳಿತಿನ ಪ್ರತಿಫಲವು ಒಳಿತಿನ ಹೊರತು ಇನ್ನೇನಿದೆ?
ﯞﯟﯠﯡﯢ
55:61 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
ﯣﯤﯥﯦ
55:62 ಅವೆರಡರ ಹೊರತು ಇನ್ನೆರಡು ಸ್ವರ್ಗೋದ್ಯಾನಗಳಿವೆ.
ﯧﯨﯩﯪﯫ
55:63 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﯬﯭ
55:64 ಅವೆರಡೂ ಹಚ್ಚ ಹಸಿರು ವರ್ಣದ್ದಾಗಿವೆ.
ﯮﯯﯰﯱﯲ
55:65 ಹಾಗಾದರೆ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
ﯳﯴﯵﯶ
55:66 ಅವುಗಳಲ್ಲಿ ಚಿಮ್ಮುವ ಎರಡು ಚಿಲುಮೆಗಳಿವೆ.
ﯷﯸﯹﯺﯻ
55:67 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ ?
ﯼﯽﯾﯿﰀ
55:68 ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು.
ﰁﰂﰃﰄﰅ
55:69 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﭑﭒﭓﭔ
55:70 ಇವುಗಳಲ್ಲಿ ಸುಶಿಲೆಯರಾದ ಸುಂದರ ತರುಣಿಯರಿರುವರು.
ﭕﭖﭗﭘﭙ
55:71 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﭚﭛﭜﭝﭞ
55:72 ಆ ಅಪ್ಸರೆಯರು ಸ್ವರ್ಗದ ಗುಡಾರಗಳಲ್ಲಿರುವರು.
ﭟﭠﭡﭢﭣ
55:73 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﭤﭥﭦﭧﭨﭩﭪ
55:74 ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ, ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
ﭫﭬﭭﭮﭯ
55:75 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﭰﭱﭲﭳﭴﭵﭶ
55:76 ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳಲ್ಲಿ ಉನ್ನತವಾದ ಹಾಸಿಗೆಗಳ ಮೇಲೆ ದಿಂಬುಗಳಿಗೆ ಒರಗಿಕೊಂಡಿರುವರು.
ﭷﭸﭹﭺﭻ
55:77 ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
ﭼﭽﭾﭿﮀﮁﮂ
55:78 ಅಪಾರ ಮಹಿಮೆ ಹಾಗು ಉದಾರತೆಯುಳ್ಳವನಾದ ನಿಮ್ಮ ಪ್ರಭುವಿನ ನಾಮವು ಮಹಾ ಮಂಗಳಮಯವಾಗಿರುವುದು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers