PDF —
96 ಆಯತ್ Meccan PDF
Built right in your browser — download starts automatically

ಸೂರಾ ಅಲ್-ವಾಕಿಯಾ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ವಾಕಿಯಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ವಾಕಿಯಾ ಅನುವಾದ. ಸೂರಾ ಅಲ್-ವಾಕಿಯಾ (Meccan) 96 ಆಯತ್.

← ಅರ್-ರಹ್ಮಾನ್ಸೂರಾ ಅಲ್-ವಾಕಿಯಾ ಅಲ್-ಹದೀದ್ →


96 ಆಯತ್ · Meccan · ಕನ್ನಡ
bismillah
ﮃﮄﮅﮆ
56:1 ಸಂಭವಿಸುವ (ಪ್ರಳಯವು) ಸಂಭವಿಸಿದಾಗ
ﮇﮈﮉﮊ
56:2 ಅದರ ಸಂಭವವನ್ನು ಸುಳ್ಳಾಗಿಸುವವನಾರಿಲ್ಲ.
ﮋﮌﮍ
56:3 ಅದು (ಆ ಘಟನೆ) ಅಧಃಪತನಗೊಳಿಸುವಂತದ್ದು ಮತ್ತು ಔನ್ನತ್ಯ ನೀಡುವಂತಹದ್ದು ಆಗಿರುವುದು.
ﮎﮏﮐﮑﮒ
56:4 ಭೂಮಿಯು ಬಲವಾಗಿ ಕಂಪಿಸಲಾಗುವಾಗ.
ﮓﮔﮕﮖ
56:5 ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ,
ﮗﮘﮙﮚ
56:6 ಬಳಿಕ ಅವು ಚದುರಿ ಧೂಳಾಗುವುದು,
ﮛﮜﮝﮞ
56:7 ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.
ﮟﮠﮡﮢﮣﮤ
56:8 ಒಂದು ಬಲಭಾಗದವರದ್ದು: ಅದೆಷ್ಟು ಉತ್ತಮರು ಬಲಭಾಗದವರು!
ﮥﮦﮧﮨﮩﮪ
56:9 ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.
ﮫﮬﮭ
56:10 ಸತ್ಕರ್ಮದಲ್ಲಿ ಮುಂಚೂಣಿಯಲ್ಲಿರುವವರು ಮುಂಚೂಣಿಯಲ್ಲೇ ಇರುವರು.
ﮮﮯﮰ
56:11 ಇವರೇ (ಅಲ್ಲಾಹನ) ಸಾಮಿಪ್ಯ ಪಡೆದವರಾಗಿದ್ದಾರೆ.
ﮱﯓﯔﯕ
56:12 ಸುಖಾನುಗ್ರಹಗಳು ತುಂಬಿದ ಸ್ವರ್ಗೋದ್ಯಾನಗಳಲ್ಲಿರುವರು.
ﯖﯗﯘﯙ
56:13 (ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.
ﯚﯛﯜﯝ
56:14 ಮತ್ತು ಮುಂದಿನವರಲ್ಲಿ ಕೆಲವರಿರುವರು.
ﯞﯟﯠﯡ
56:15 ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.
ﯢﯣﯤﯥ
56:16 ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.
ﭑﭒﭓﭔﭕ
56:17 ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.
ﭖﭗﭘﭙﭚﭛ
56:18 ಹರಿಯುತ್ತಿರುವ ಸುರದ ಚಿಲುಮೆಗಳಿಂದ ತುಂಬಲಾದ ಲೋಟಗಳು ಹೂಜಿಗಳು ಪಾನ ಪಾತ್ರೆಗಳೊಂದಿಗೆ.
ﭜﭝﭞﭟﭠﭡ
56:19 ಅದನ್ನು ಕುಡಿದಾಗ ಅವರಿಗೆ ತಲೆನೋವಾಗಲಿ ಬುದ್ಧಿ ಭ್ರಮಣೆಯಾಗಲಿ ಉಂಟಾಗದು.
ﭢﭣﭤﭥ
56:20 ಅವರು ಇಷ್ಟಪಡುವ ಹಣ್ಣುಹಂಪಲುಗಳಿ ರುವುದು.
ﭦﭧﭨﭩﭪ
56:21 ಅವರಿಗೆ ಪ್ರಿಯವಾದ ಪಕ್ಷಿ ಮಾಂಸವಿರುವುದು.
ﭫﭬﭭ
56:22 ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.
ﭮﭯﭰﭱ
56:23 ಅವರು ಬಚ್ಚಿಡಲಾದ ಮುತ್ತುಗಳಂತಿರುವರು.
ﭲﭳﭴﭵﭶ
56:24 ಇದು ಅವರ ಕರ್ಮಗಳಿಗಿರುವ ಪ್ರತಿಫಲವಾಗಿದೆ.
ﭷﭸﭹﭺﭻﭼﭽ
56:25 ನಿರರ್ಥಕ ಮತ್ತು ಪಾಪದ ಮಾತುಗಳನ್ನು ಅವರು ಅಲ್ಲಿ ಆಲಿಸಲಾರರು.
ﭾﭿﮀﮁﮂ
56:26 ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.
ﮃﮄﮅﮆﮇﮈ
56:27 ಬಲಭಾಗದವರು ! ಬಲಭಾಗದವರು ಅದೆಷ್ಟು ಉತ್ತಮರು !
ﮉﮊﮋﮌ
56:28 ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.
ﮍﮎﮏ
56:29 ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.
ﮐﮑﮒ
56:30 ಬಹುದೂರ ಹಬ್ಬಿರುವ ನೆರಳು ಇರುವುದು.
ﮓﮔﮕ
56:31 ಸದಾ ಹರಿಯುತ್ತಿರುವ ನೀರು ಸಹ ಇರುವುದು.
ﮖﮗﮘ
56:32 ಧಾರಾಳ ಹಣ್ಣು ಹಂಪಲುಗಳು.
ﮙﮚﮛﮜﮝ
56:33 ಎಂದೂ ಮುಗಿಯದ ಮತ್ತು ತಡೆಹಿಡಿಯಲಾಗದ.
ﮞﮟﮠ
56:34 ಮತ್ತು ಉನ್ನತವಾದ ಹಾಸಿಗೆಗಳಿರುವವು.
ﮡﮢﮣﮤ
56:35 ನಾವು ಅವರನ್ನು (ಅಪ್ಸರೆಯರನ್ನು) ಒಂದು ವಿಶೇಷ ರೀತಿಯಲ್ಲಿ ಹೊಸತಾಗಿ ಸೃಷ್ಟಿಸಿದ್ದೇವೆ.
ﮥﮦﮧ
56:36 ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.
ﮨﮩﮪ
56:37 ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.
ﮫﮬﮭ
56:38 ಇವೆಲ್ಲ ಬಲಭಾಗದವರಿಗಾಗಿದೆ.
ﮮﮯﮰﮱ
56:39 ಅವರು ಪೂರ್ವಿಕರ ಪೈಕಿ ಅನೇಕರಿರುವರು.
ﯓﯔﯕﯖ
56:40 ಮತ್ತು ಕೊನೆಯ ಕಾಲದವರ ಪೈಕಿ ಅನೇಕರಿರುವರು.
ﯗﯘﯙﯚﯛﯜ
56:41 ಎಡಭಾಗದವರು ಎಡಭಾಗದವರ ಸ್ಥಿತಿಯನ್ನು ಹೇಳುವುದೇನು?
ﯝﯞﯟﯠ
56:42 ಅವರು ಅತ್ಯುಷ್ಣಗಾಳಿ ಕುದಿಯುತ್ತಿರುವ ನೀರಿನಲ್ಲಿರುವರು.
ﯡﯢﯣﯤ
56:43 ಕಪ್ಪು ಹೊಗೆಯ ನೆರಳಿನಲ್ಲಿ,
ﯥﯦﯧﯨﯩ
56:44 ಅದುತಂಪಾಗಿರದು, ಸುಖಕರವಾಗಿಯೂ ಇರದು,
ﯪﯫﯬﯭﯮﯯ
56:45 ನಿಸ್ಸಂದೇಹವಾಗಿಯೂ ಇದಕ್ಕೆ ಮೊದಲು ಇವರು ಸುಖಲೋಲುಪತೆಯಲ್ಲಿ ಬೆಳೆದವರಾಗಿದ್ದರು.
ﯰﯱﯲﯳﯴﯵ
56:46 ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.
ﯶﯷﯸﯹﯺﯻﯼﯽﯾﯿ
56:47 ಅವರು ಹೇಳುತ್ತಿದ್ದರು ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿದ್ದ ಬಳಿಕವು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವೆವೇ ?
ﰀﰁﰂ
56:48 ಮತ್ತು ನಮ್ಮ ಪೂರ್ವಿಕರಾದಂತಹ ಮುತ್ತಾತಂದಿರು ಸಹ?
ﰃﰄﰅﰆﰇ
56:49 ಹೇಳಿರಿ; ಖಂಡಿತವಾಗಿಯು ಪೂರ್ವಿಕರೂ ನಂತರದವರೂ ಸಹ;
ﰈﰉﰊﰋﰌﰍ
56:50 ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.
ﭑﭒﭓﭔﭕﭖ
56:51 ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.
ﭗﭘﭙﭚﭛﭜ
56:52 ಖಂಡಿತ ನೀವು ಝಕ್ಕೂಮ್ (ವಿಷಕಳ್ಳಿಗಿಡ) ಮರವನ್ನು ತಿನ್ನಲಿರುವಿರಿ.
ﭝﭞﭟﭠ
56:53 ಮತ್ತು ಅದರಿಂದಲೇ ಹೊಟ್ಟೆ ತುಂಬಿಸುವಿರಿ.
ﭡﭢﭣﭤﭥ
56:54 ಬಳಿಕ ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.
ﭦﭧﭨﭩ
56:55 ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.
ﭪﭫﭬﭭﭮ
56:56 ಇದು ಪ್ರತಿಫಲದ ದಿನ ಅವರಿಗಿರುವ ಸತ್ಕಾರವಾಗಿದೆ,
ﭯﭰﭱﭲﭳ
56:57 ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?
ﭴﭵﭶﭷ
56:58 ಸರಿ ನೀವು ಸ್ರವಿಸುವ ವೀರ್ಯದ ಕುರಿತು ಯೋಚಿಸಿದ್ದೀರಾ ?
ﭸﭹﭺﭻﭼﭽ
56:59 ಅದರಿಂದ ಮಾನವನನ್ನು ಸೃಷ್ಟಿಸುವವರು ನೀವೋ ? ಅಥವ ಸೃಷ್ಟಿಸುವವರು ನಾವೋ ?
ﭾﭿﮀﮁﮂﮃﮄﮅ
56:60 ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದ್ದೇವೆ. ಮತ್ತು ನಾವು ಖಂಡಿತಅಶಕ್ತರಲ್ಲ.
ﮆﮇﮈﮉﮊﮋﮌﮍﮎﮏ
56:61 ನಿಮ್ಮ ಬದಲಿಗೆ ನಿಮ್ಮಂತಿರುವ ಇತರರನ್ನು ತರಲು ಹಾಗು ನಿಮಗೆ (ಒಂದಿಷ್ಟೂ) ಅರಿವಿಲ್ಲದ ವಿಧದಲ್ಲಿ ನಿಮ್ಮನ್ನು ಸೃಷ್ಟಿಸಲು ನಾವು ಅಶಕ್ತರಲ್ಲ.
ﮐﮑﮒﮓﮔﮕﮖ
56:62 ಖಂಡಿತವಾಗಿಯು ನಿಮಗೆ ಮೊದಲ ಬಾರಿಯ ಸೃಷ್ಟಿಯ ಅರಿವಿದೆ. ಹಾಗಿದ್ದೂ ನೀವೇಕೆ ಉಪದೇಶ ಸ್ವೀಕರಿಸುವುದಿಲ್ಲ.
ﮗﮘﮙﮚ
56:63 ನೀವು ಬಿತ್ತುತ್ತಿರುವುದರ ಬಗ್ಗೆ ಯೋಚಿಸಿದ್ದೀರಾ ?
ﮛﮜﮝﮞﮟﮠ
56:64 ಅದನ್ನು ಮೊಳೆಯಿಸುತ್ತಿರುವವರು ನೀವೋ ಅಥವ ಮೊಳೆಯಿಸುವವರು ನಾವೋ ?
ﮡﮢﮣﮤﮥﮦﮧ
56:65 ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;
ﮨﮩﮪ
56:66 ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.
ﮫﮬﮭﮮ
56:67 ಅಲ್ಲ, ನಾವು ವಂಚಿತರಾಗಿ ಬಿಟ್ಟೆವು.
ﮯﮰﮱﯓﯔ
56:68 ನೀವು ಕುಡಿಯುತ್ತಿರುವ ನೀರಿನ ಬಗ್ಗೆ ಯೋಚಿಸಿದ್ದೀರಾ ?
ﯕﯖﯗﯘﯙﯚﯛﯜ
56:69 ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?
ﯝﯞﯟﯠﯡﯢﯣ
56:70 ನಾವು ಇಚ್ಛಿಸುತ್ತಿದ್ದರೆ ಅದನ್ನು ಕಡು ಉಪ್ಪನ್ನಾಗಿ ಮಾಡುತ್ತಿದ್ದೆವು, ಹಾಗಿದ್ದೂ ನೀವು ಕೃತಜ್ಞತೆ ಸಲ್ಲಿಸುವುದಿಲ್ಲವೇ?
ﯤﯥﯦﯧﯨ
56:71 ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?
ﯩﯪﯫﯬﯭﯮﯯ
56:72 ಅದರ ಮರವನ್ನು ಸೃಷ್ಟಿಸುವವರು ನೀವೋ ? ಅಥವ ಅದನ್ನು ಸೃಷ್ಟಿಸುವವರು ನಾವೋ ?
ﯰﯱﯲﯳﯴﯵ
56:73 ನಾವು ಆ ಮರವನ್ನು ಉಪದೇಶಕ್ಕಿರುವ ಮಾರ್ಗ ಹಾಗು ಯಾತ್ರಿಕರ ಅನುಕೂಲದ ವಸ್ತುವನ್ನಾಗಿ ಮಾಡಿದ್ದೇವೆ.
ﯶﯷﯸﯹﯺ
56:74 (ಓ ಪೈಗಂಬರರೇ) ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.
ﯻﯼﯽﯾﯿﰀ
56:75 ನಾನು ನಕ್ಷತ್ರಗಳ ಪತನದ ಆಣೆ ಹಾಕುತ್ತೇನೆ.
ﰁﰂﰃﰄﰅﰆ
56:76 ನೀವು ಅರಿಯುವವರಾಗಿದ್ದರೆ ಇದೊಂದು ಮಹಾ ಆಣೆಯಾಗಿದೆ.
ﭑﭒﭓﭔ
56:77 ನಿಸ್ಸಂದೇಹವಾಗಿಯೂ ಇದು ಮಹಾ ಆದರಣಿಯ ಕುರ್‌ಆನ್ ಆಗಿದೆ.
ﭕﭖﭗﭘ
56:78 ಇದು ಸುರಕ್ಷಿತ ಗ್ರಂಥದಲ್ಲಿದೆ.
ﭙﭚﭛﭜﭝ
56:79 ಪರಿಶುದ್ಧರಲ್ಲದೇ ಬೇರಾರು ಇದನ್ನು ಸ್ಪರ್ಶಿಸಲಾರರು.
ﭞﭟﭠﭡﭢ
56:80 ಇದು ಸರ್ವ ಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.
ﭣﭤﭥﭦﭧ
56:81 ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?
ﭨﭩﭪﭫﭬ
56:82 ನೀವು ಸುಳ್ಳಾಗಿಸುವುದನ್ನೇ ನಿಮ್ಮ ಚಾಳಿಯನ್ನಾಗಿ ಮಾಡಿಕೊಳ್ಳುತ್ತಿರುವಿರಾ ?
ﭭﭮﭯﭰﭱ
56:83 ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)
ﭲﭳﭴﭵ
56:84 ನೀವು ಆಗ ನೋಡುತ್ತಲೇ ಇರುವಿರಿ.
ﭶﭷﭸﭹﭺﭻﭼﭽ
56:85 ನಾವು ಆ ವ್ಯಕ್ತಿಯೊಂದಿಗೆ ನಿಮಗಿಂತಲೂ ಹೆಚ್ಚು ಸಮೀಪದಲ್ಲಿರುತ್ತೇವೆ ಆದರೆ ನೀವು ನೋಡಲಾರಿರಿ.
ﭾﭿﮀﮁﮂﮃ
56:86 ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.
ﮄﮅﮆﮇﮈ
56:87 ಮತ್ತು ನೀವು ಈ ಮಾತಿನಲ್ಲಿ ಸತ್ಯವಂತರಾಗಿದ್ದರೆ ಈ ಆತ್ಮವನ್ನು ಮರಳಿ ತರುವುದಿಲ್ಲವೇಕೆ ?
ﮉﮊﮋﮌﮍﮎ
56:88 ಇನ್ನು ಮರಣ ಹೊಂದುವ ವ್ಯಕ್ತಿಯು ಅಲ್ಲಾಹನ ಸಾಮಿಪ್ಯವನ್ನು ಪಡೆದವನಾಗಿದ್ದರೆ.
ﮏﮐﮑﮒﮓ
56:89 ಅವನಿಗೆ ನೆಮ್ಮದಿಯಿರುವುದು ಮತ್ತು ಆಹಾರಗಳಿರುವುವು ಹಾಗು ಅನುಗ್ರಹಪೂರ್ಣ ಸ್ವರ್ಗೋದ್ಯಾನವಿರುವುದು.
ﮔﮕﮖﮗﮘﮙﮚ
56:90 ಅವನು ಬಲಭಾಗದವರಲ್ಲಾಗಿದ್ದರೆ.
ﮛﮜﮝﮞﮟﮠ
56:91 ನೀನು ಬಲಭಾಗದವರಲ್ಲಿ ಸೇರಿದುದರಿಂದ ನಿನ್ನ ಮೇಲೆ ಶಾಂತಿಯಿರಲಿ ಎಂದು ಹೇಳಲಾಗುವುದು.
ﮡﮢﮣﮤﮥﮦﮧ
56:92 ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.
ﮨﮩﮪﮫ
56:93 ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.
ﮬﮭﮮ
56:94 ಮತ್ತು ಅವನಿಗೆ ನರಕಾಗ್ನಿಯಲ್ಲಿ ಪ್ರವೇಶವಿದೆ.
ﮯﮰﮱﯓﯔﯕ
56:95 ಖಂಡಿತ ಇವೆಲ್ಲಾ ಸತ್ಯ ಹಾಗು ಖಚಿತವಾಗಿವೆ.
ﯖﯗﯘﯙﯚ
56:96 ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers