ಸೂರಾ ಅಲ್-ಹಿಜ್ರ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಹಿಜ್ರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಹಿಜ್ರ್ ಅನುವಾದ. ಸೂರಾ ಅಲ್-ಹಿಜ್ರ್ (Meccan) 99 ಆಯತ್.
Related
- ಸೂರಾ ಅಲ್-ಹಿಜ್ರ್ ಅನುವಾದಕನ್ನಡ
- ಸೂರಾ ಅಲ್-ಹಿಜ್ರ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಹಿಜ್ರ್

ﭑﭒﭓﭔﭕﭖﭗﭘ
15:1
ಅಲಿಫ್ ಲಾಮ್ ರಾ, ಇವು ದಿವ್ಯ ಗ್ರಂಥ ಹಾಗೂ ಸುವ್ಯಕ್ತ ಕುರ್‌ಆನಿನ ಸೂಕ್ತಿಗಳಾಗಿವೆ.
ﭙﭚﭛﭜﭝﭞﭟﭠ
15:2
ಒಂದು ಸಮಯದಲ್ಲಿ (ಪ್ರಳಯದ ದಿನ) ಸತ್ಯನಿಷÉÃಧಿಗಳು ನಾವೂ ಸಹ ಮುಸ್ಲಿಮರಾಗಿದ್ದರೆ (ಶರಣಾಗಿದ್ದರೆ) ಎಷÀÄ್ಟ ಚೆನ್ನಾಗಿತ್ತೆಂದು ಬಯಸುವರು.
ﭡﭢﭣﭤﭥﭦﭧﭨﭩ
15:3
ನೀವು ಅವರನ್ನು ಬಿಟ್ಟು ಬಿಡಿರಿ ಅವರು ತಿಂದು ಕುಡಿದು ಸುಖಭೋಗಗಳನ್ನು ಸವಿಯುತ್ತಿರಲಿ ಹಾಗೂ ಸುಳ್ಳು ನಿರೀಕ್ಷೆಗಳಲ್ಲಿ ಮುಳುಗಿರಲಿ. ಸದ್ಯವೇ ಅವರು ಅರಿತುಕೊಳ್ಳಲಿದ್ದಾರೆ.
ﭪﭫﭬﭭﭮﭯﭰﭱﭲ
15:4
ನಾವು ಯಾವುದೇ ನಾಡನ್ನು ಅದಕ್ಕೆ ನಿಶ್ಚಿತ ಅವಧಿ ಲಿಖಿತಗೊಳಿಸದೇ ನಾಶ ಪಡಿಸಿಲ್ಲ.
ﭳﭴﭵﭶﭷﭸﭹﭺ
15:5
ಯಾವೊಂದು ಜನಾಂಗಕ್ಕೂ ಅದರ ನಿಶ್ಚಿತ ಅವಧಿಯಿಂದ ಮುಂದೆ ಸಾಗಲಿಕ್ಕೂ ಹಿಂದುಳಿಯಲಿಕ್ಕೂ ಸಾಧ್ಯವಾಗದು.
ﭻﭼﭽﭾﭿﮀﮁﮂﮃ
15:6
ಅವರು ಸತ್ಯನಿಷÉÃಧಿಸಿದ (ಖುರೈಶರು) ಹೇಳುತ್ತಾರೆ, ಓ ಉಪದೇಶ ಅವತೀರ್ಣಗೊಳಿಸಲಾದವನೇ ಖಂಡಿತವಾಗಿಯೂ ನೀನೊಬ್ಬ ಹುಚ್ಚನಾಗಿರುವೆ.
ﮄﮅﮆﮇﮈﮉﮊﮋﮌ
15:7
ನೀನು ಸತ್ಯವಂತನಾಗಿದ್ದರೆ ನಮ್ಮಲ್ಲಿ ಏಕೆ ಮಲಕ್‌ಗಳÀನ್ನು ತರುವುದಿಲ್ಲ ?
ﮍﮎﮏﮐﮑﮒﮓﮔﮕﮖ
15:8
ನಾವು ತೀರ್ಮಾನಕ್ಕಲ್ಲದೆ ಮಲಕ್‌ಗಳÀನ್ನು ಇಳಿಸುವುದಿಲ್ಲ ಆಗ ಅವರಿಗೆ ಕಾಲಾವಕಾಶವನ್ನು ನೀಡಲಾಗುವುದಿಲ್ಲ.
ﮗﮘﮙﮚﮛﮜﮝﮞ
15:9
ನಿಸ್ಸಂದೇಹವಾಗಿಯೂ ನಾವೇ ಈ ಉಪದೇಶದ (ಕುರ್‌ಆನನ್ನು) ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಇದರ ಸಂರಕ್ಷಕರಾಗಿರುತ್ತೇವೆ.
ﮟﮠﮡﮢﮣﮤﮥﮦ
15:10
ನಿಶ್ಚಯವಾಗಿಯೂ ನಾವು ನಿಮಗಿಂತ ಮೊದಲು ಗತ ಸಮುದಾಯಗಳಲ್ಲೂ ನಮ್ಮ ಸಂದೇಶವಾಹಕರನ್ನು ಕಳುಹಿಸಿರುತ್ತೇವೆ,
ﮧﮨﮩﮪﮫﮬﮭﮮﮯ
15:11
ಮತ್ತು ಯಾವೊಬ್ಬ ಸಂದೇಶವಾಹಕನು ಅವರ ಬಳಿಗೆ ಬಂದರೂ ಅವರು ಅವನ ಪರಿಹಾಸ್ಯ ಮಾಡುತ್ತಿದ್ದರು.
ﮰﮱﯓﯔﯕﯖ
15:12
ಇದೇ ಪ್ರಕಾರ ನಾವು ಅಪರಾಧಿಗಳ ಹೃದಯಗಳಲ್ಲಿ ಈ ಉಪದೇಶವನ್ನು ಚುಚ್ಚುವಂತೆ ತುರುಕುತ್ತೇವೆ.
ﯗﯘﯙﯚﯛﯜﯝﯞ
15:13
ಅವರು ಇದರಲ್ಲಿ (ಕುರ್‌ಆನಿನಲ್ಲಿ) ವಿಶ್ವಾಸವಿರಿಸುವುದಿಲ್ಲ. ವಾಸ್ತವದಲ್ಲಿ ಈ ವರ್ತನೆಯು ಪೂರ್ವಿಕರಿಂದಲೇ ನಡೆದುಬಂದಿದೆ.
ﯟﯠﯡﯢﯣﯤﯥﯦﯧﯨ
15:14
ಮತ್ತು ನಾವು ಅವರಿಗೆ ಆಕಾಶದ ದ್ವಾರವನ್ನು ತೆರೆದು ಕೊಟ್ಟು ಅವರು ಅದರಲ್ಲಿ ಏರಿ ಹೋಗುವವರಾಗಿದ್ದರೂ.
ﯩﯪﯫﯬﯭﯮﯯﯰﯱ
15:15
ಅದಾಗ್ಯೂ ಅವರು ನಮ್ಮ ದೃಷ್ಟಿಗಳಿಗೆ ಮತ್ತೇರಿಸಲಾಗಿದೆ. ಹಾಗಲ್ಲ ನಮ್ಮನ್ನು ಮಾಟಕ್ಕೊಳಪಡಿಸಲಾಗಿದೆ ಎಂದು ಹೇಳುತ್ತಿದ್ದರು.
ﭑﭒﭓﭔﭕﭖﭗﭘ
15:16
ನಿಶ್ಚಯವಾಗಿಯೂ ನಾವು ಆಕಾಶದಲ್ಲಿ ನಕ್ಷತ್ರಮಂಡಲವನ್ನು ಮಾಡಿರುತ್ತೇವೆ ಮತ್ತು ನೋಡುವವರಿಗೆ ಅಲಂಕಾರಗೊಳಿಸಿದ್ದೇವೆ.
ﭙﭚﭛﭜﭝﭞ
15:17
ಮತ್ತು ಅದನ್ನು ಧಿಕ್ಕರಿಸಲ್ಪಟ್ಟ ಪ್ರತಿಯೊಬ್ಬ ಶೈತಾನನಿಂದ ನಾವು ಸುರಕ್ಷಿತವಾಗಿರಿಸಿದ್ದೇವೆ.
ﭟﭠﭡﭢﭣﭤﭥﭦ
15:18
ಆದರೆ ಯಾರು ಕದ್ದಾಲಿಸಕ್ಕಾಗಿ ಕಿವಿಗೊಡಲು ಪ್ರಯತ್ನಿಸುತ್ತಾನೋ ಪ್ರತ್ಯಕ್ಷ ಅಗ್ನಿ ಜ್ವಾಲೆಯೊಂದು ಅವನನ್ನು ಬೆನ್ನಟ್ಟುತ್ತದೆ.
ﭧﭨﭩﭪﭫﭬﭭﭮﭯﭰﭱﭲ
15:19
ನಾವು ಭೂಮಿಯನ್ನು ಹರಡಿ ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ನಾವದರಲ್ಲಿ ಪ್ರತಿಯೊಂದು ಬಗೆಯ ವಸ್ತುಗಳನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಬೆಳೆಸಿದೆವು.
ﭳﭴﭵﭶﭷﭸﭹﭺﭻ
15:20
ಅದರಲ್ಲೇ ನಾವು ನಿಮಗೂ ಹಾಗೂ ನೀವು ಆಹಾರ ನೀಡದ (ಇತರ ಜೀವಿಗಳಿಗೂ) ಜೀವನೋಪಾಯಗಳನ್ನು ಒದಗಿಸಿದೆವು,
ﭼﭽﭾﭿﮀﮁﮂﮃﮄﮅﮆﮇ
15:21
ಯಾವುದೇ ವಸ್ತುವಿನ ಭಂಡಾರಗಳು ನಮ್ಮ ಬಳಿ ಇಲ್ಲದ್ದಿಲ್ಲಾ ಮತ್ತು ನಾವು ಅದನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.
ﮈﮉﮊﮋﮌﮍﮎﮏﮐﮑﮒﮓﮔ
15:22
ನಾವು ಜಲಭರಿತ ಮಾರುತಗಳನ್ನು ಕಳುಹಿಸುತ್ತೇವೆ. ಅನಂತರ ಆಕಾಶದಿಂದ ಮಳೆಯನ್ನು ಸುರಿಸಿ ಅದನ್ನು ನಿಮಗೆ ಕುಡಿಸುತ್ತೇವೆ ಮತ್ತು ನೀವು ಅದನ್ನು ಸಂಗ್ರಹ ಮಾಡುವವರಲ್ಲ.
ﮕﮖﮗﮘﮙﮚﮛ
15:23
ನಿಶ್ಚಯವಾಗಿಯು ನಾವೇ ಜೀವನ ನೀಡುತ್ತೇವೆ ಮತ್ತು ಮರಣಗೊಳಿಸುತ್ತೇವೆ ಮತ್ತು ನಾವೇ ವಾರಿಸುದಾರರಾಗಿರುತ್ತೇವೆ.
ﮜﮝﮞﮟﮠﮡﮢﮣ
15:24
ನಿಶ್ಚಯವಾಗಿಯೂ ನಾವು ನಿಮ್ಮ ಪೈಕಿ ಗತಿಸಿ ಹೋದವರನ್ನು ಬಲ್ಲೆವು ಹಾಗೂ ಮುಂದೆ ಬರುವವರನ್ನು ಸಹ ಅರಿತಿದ್ದೇವೆ.
ﮤﮥﮦﮧﮨﮩﮪﮫﮬ
15:25
ಖಂಡಿತವಾಗಿಯೂ ನಿಮ್ಮ ಪ್ರಭು; ಅವರೆಲ್ಲರನ್ನು ಒಟ್ಟುಗೂಡಿಸುವನು ನಿಶ್ಚಯವಾಗಿಯೂ ಅವನು ಮಹಾಯುಕ್ತಿವಂತನು ಸರ್ವಜ್ಞಾನಿಯು ಆಗಿರುತ್ತಾನೆ.
ﮭﮮﮯﮰﮱﯓﯔﯕﯖ
15:26
ನಿಶ್ಚಯವಾಗಿಯು ನಾವು ಮನುಷ್ಯನನ್ನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುತ್ತೇವೆ.
ﯗﯘﯙﯚﯛﯜﯝﯞ
15:27
ಇದಕ್ಕೂ ಮುನ್ನ ನಾವು ಜ್ವಾಲೆಯುಳ್ಳ ಅಗ್ನಿಯಿಂದ ಜಿನ್ನ್ (ಯಕ್ಷ) ಗಳನ್ನು ಸೃಷ್ಟಿಸಿರುತ್ತೇವೆ.
ﯟﯠﯡﯢﯣﯤﯥﯦﯧﯨﯩﯪﯫ
15:28
ನಿಮ್ಮ ಪ್ರಭು ಮಲಕ್‌ಗಳೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಿಶ್ಚಯವಾಗಿಯೂ ನಾನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ.
ﯬﯭﯮﯯﯰﯱﯲﯳﯴﯵ
15:29
ನಾನು ಅವನನ್ನು ಸಂಪೂರ್ಣಗೊಳಿಸಿ ಅವನಲ್ಲಿ ನನ್ನೆಡೆಯ ಆತ್ಮವನ್ನು ಊದಿದಾಗ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ.
ﯶﯷﯸﯹﯺ
15:30
ಹಾಗೆಯೇ ಮಲಕ್‌ಗಳೆಲ್ಲರೂ ಸಾಷ್ಟಾಂಗವೆರಿಗಿದರು.
ﯻﯼﯽﯾﯿﰀﰁﰂ
15:31
ಆದರೆ ಇಬ್‌ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರ ಜೊತೆ ಸೇರಲು ನಿರಾಕರಿಸಿಬಿಟ್ಟನು.
ﭑﭒﭓﭔﭕﭖﭗﭘﭙ
15:32
ಅಲ್ಲಾಹನು ಕೇಳಿದನು! ಓ ಇಬ್‌ಲೀಸ್ ಸಾಷ್ಟಾಂಗವೆರಗುವವರ ಜೊತೆಗೆ ಸೇರದಿರಲು ನಿನಗೇನಾಗಿದೆ ?
ﭚﭛﭜﭝﭞﭟﭠﭡﭢﭣﭤﭥ
15:33
ಅವನು ಉತ್ತರಿಸಿದನು; ನೀನು ಟಣಟಣಿಸುವ ಕೊಳೆತ ಕರಿ ಮಣ್ಣಿನಿಂದ ಸೃಷ್ಟಿಸಿರುವಂತಹ ಮಾನವನಿಗೆ ನಾನು ಸಾಷ್ಟಾಂಗ ಮಾಡುವವನಲ್ಲ.
ﭦﭧﭨﭩﭪﭫ
15:34
ಅಲ್ಲಾಹನು ಹೇಳಿದನು: ನೀನಿಲ್ಲಿಂದ ತೊಲಗು. ನಿಜವಾಗಿಯೂ ನೀನು ಧಿಕ್ಕರಿಸಲ್ಪಪಟ್ಟವನಾಗಿರುವೆ.
ﭬﭭﭮﭯﭰﭱﭲ
15:35
ನಿಶ್ಚಯವಾಗಿಯೂ ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ.
ﭳﭴﭵﭶﭷﭸﭹ
15:36
ಅವನು ಹೇಳಿದನು; ಓ ನನ್ನ ಪ್ರಭುವೇ ಜನರು ಪುನರೆಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು.
ﭺﭻﭼﭽﭾ
15:37
ಅಲ್ಲಾಹನು ಹೇಳಿದನು; ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಿದವರಲ್ಲಾಗಿರುವೆ.
ﭿﮀﮁﮂﮃ
15:38
ಆ ನಿಶ್ಚಿತಾವಧಿಯ ದಿನದವರೆಗೆ.
ﮄﮅﮆﮇﮈﮉﮊﮋﮌﮍﮎ
15:39
ಅವನು ಹೇಳಿದನು; ಓ ನನ್ನ ಪ್ರಭುವೇ ನೀನು ನನ್ನನ್ನು ದಾರಿಗೆಡಿಸಿರುವೆ ಖಂಡಿತವಾಗಿಯೂ ನಾನು ಅವರಿಗಾಗಿ ಭೂಮಿಯಲ್ಲಿ ಕೆಡುಕುಗಳನ್ನು ಅಲಂಕೃತಗೊಳಿಸಿ ಅವರೆಲ್ಲರನ್ನೂ ದಾರಿಗೆಡಿಸುವೆನು.
ﮏﮐﮑﮒﮓ
15:40
ಅವರ ಪೈಕಿ ನಿನ್ನ ನಿಷ್ಠಾವಂತ ದಾಸರ ಹೊರತು.
ﮔﮕﮖﮗﮘﮙ
15:41
ಅಲ್ಲಾಹನು ಹೇಳಿದನು; ಇದೇ ನನ್ನೆಡೆಗೆ ತಲುಪುವ ಋಜುವಾದ ಮಾರ್ಗವಾಗಿದೆ.
ﮚﮛﮜﮝﮞﮟﮠﮡﮢﮣﮤﮥ
15:42
ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನ್ನ ಯಾವ ಅಧಿಕಾರ ಇರಲಾರದು. ಆದರೆ ನಿನ್ನನ್ನು ಅನುಸರಿಸಿದ ದಾರಿಗೆಟ್ಟವರ ಹೊರತು.
ﮦﮧﮨﮩﮪ
15:43
ಖಂಡಿತವಾಗಿಯೂ ಅವರೆಲ್ಲರ ವಾಗ್ದತ್ತ ನೆಲೆಯು ನರಕವಾಗಿದೆ.
ﮫﮬﮭﮮﮯﮰﮱﯓﯔ
15:44
ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ಅವರ ಒಂದು ಭಾಗವು ನಿಗದಿತವಾಗಿದೆ.
ﯕﯖﯗﯘﯙﯚ
15:45
ನಿಶ್ಚಯವಾಗಿಯೂ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲಿಯೂ ಚಿಲುಮೆಗಳಲ್ಲಿಯೂ ಇರುವರು.
ﯛﯜﯝﯞ
15:46
(ಅವರೊಂದಿಗೆ ಹೇಳಲಾಗುವುದು) ನೀವು ಇದರೊಳಗೆ ನಿರ್ಭಯರಾಗಿ ಶಾಂತಿಯೊAದಿಗೆ ಪ್ರವೇಶಿಸಿರಿ.
ﯟﯠﯡﯢﯣﯤﯥﯦﯧﯨﯩ
15:47
ನಾವು ಅವರ ಹೃದಯಗಳಲ್ಲಿ ಇದ್ದಂತಹ ವೈಮನಸ್ಸನ್ನು ತೆಗೆದುಹಾಕುವೆವು. ಅವರು ಸಹೋದರರಾಗಿ ಮಂಚಗಳಲ್ಲಿ ಎದುರುಬದುರಾಗಿ ಆಸೀನರಾಗಿರುವರು.
ﯪﯫﯬﯭﯮﯯﯰﯱﯲ
15:48
ಅದರಲ್ಲಿ ಅವರಿಗೆ ಯಾವುದೇ ಕಷÀ್ಟ ಬಾಧಿಸದು ಮತ್ತು ಅವರೆಂದೂ ಅಲ್ಲಿಂದ ಹೊರಹಾಕಲ್ಪಡಲಾರರು.
ﯳﯴﯵﯶﯷﯸﯹﯺ
15:49
ನಿಶ್ಚಯವಾಗಿಯೂ ನಾನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದೇನೆಂದು ನೀವು ನನ್ನ ದಾಸರಿಗೆ ತಿಳಿಸಿಬಿಡಿರಿ.
ﯻﯼﯽﯾﯿﰀ
15:50
ಮತ್ತು ನನ್ನ ಯಾತನೆಯು ಸಹ ಅತ್ಯಂತ ವೇದನಾಜನಕವಾಗಿದೆ.
ﰁﰂﰃﰄﰅ
15:51
ಅವರಿಗೆ ಇಬ್ರಾಹಿಮರ ಅತಿಥಿಗಳ ವೃತ್ತಾಂತವನ್ನು ತಿಳಿಸಿಬಿಡಿ.
ﭑﭒﭓﭔﭕﭖﭗﭘﭙﭚ
15:52
ಅತಿಥಿಗಳು ಅವರ ಬಳಿಗೆ ಬಂದು ಸಲಾಮ್ ಹೇಳಿದ ಸಂದರ್ಭ, ಆಗ ಇಬ್ರಾಹೀಮ್ ನಿಜವಾಗಿಯೂ ನಾವು ನಿಮ್ಮ ಬಗ್ಗೆ ಭಯಪಡುತ್ತೇವೆಂದರು.
ﭛﭜﭝﭞﭟﭠﭡﭢ
15:53
ಆಗ ಅವರು ಹೇಳಿದರು; ನೀವು ಭಯಪಡಬೇಡಿ ನಾವು ನಿಮಗೆ ಜ್ಞಾನಿಯಾದ ಒಬ್ಬ ಪುತ್ರನ ಸುವಾರ್ತೆಯನ್ನು ನೀಡುತ್ತಿದ್ದೇವೆ.
ﭣﭤﭥﭦﭧﭨﭩﭪﭫ
15:54
ಅವರು ಹೇಳಿದರು; ನನಗೆ ವೃದ್ಧಾಪ್ಯ ಬಾಧಿಸಿದ ಮೇಲೆ ನೀವು ಸುವಾರ್ತೆ ನೀಡುತ್ತಿರುವಿರಾ ? ಎಂತಹ ಸುವಾರ್ತೆಯನ್ನು ನೀಡುತ್ತಿರುವಿರಿ ?
ﭬﭭﭮﭯﭰﭱﭲﭳ
15:55
ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ ಹೊಂದಿದವರಲ್ಲಿ ಸೇರಬೇಡಿರಿ.
ﭴﭵﭶﭷﭸﭹﭺﭻﭼ
15:56
ಇಬ್ರಾಹೀಮರು; ತನ್ನ ಪ್ರಭುವಿನ ಕಾರುಣ್ಯದಿಂದ ದಾರಿತಪ್ಪಿದವರ ಹೊರತು ಇನ್ನಾರೂ ನಿರಾಶರಾಗುತ್ತಾರೆ? ಎಂದರು.
ﭽﭾﭿﮀﮁﮂ
15:57
ಮತ್ತು ಹೇಳಿದರು; ಓ ಮಲಕ್‌ಗಳೇ ನೀವು ಯಾವ ಕಾರ್ಯಾಚರಣೆಗಾಗಿ ಬಂದಿರುವಿರಿ?
ﮃﮄﮅﮆﮇﮈﮉ
15:58
ಅವರು ಉತ್ತರಿಸಿದರು; ನಾವು ಒಂದು ಅಪರಾಧಿ ಜನಾಂಗದಡೆಗೆ ಕಳುಹಿಸಲ್ಪಟ್ಟಿದ್ದೇವೆ.
ﮊﮋﮌﮍﮎﮏﮐ
15:59
ಆದರೆ ಲೂತರ ಕುಟುಂಬದ ಹೊರತು, ಅವರ ಕುಟುಂಬವನ್ನು ನಾವು ರಕ್ಷಿಸುವೆವು.
ﮑﮒﮓﮔﮕﮖﮗ
15:60
ಲೂತರ ಪತ್ನಿಯ ಹೊರತು ನಾವು ಅವಳನ್ನು ಹಿಂದುಳಿದವರಲ್ಲಿ ನಿಶ್ಚಯಿಸಿಬಿಟ್ಟಿರುವೆವು.
ﮘﮙﮚﮛﮜﮝ
15:61
ಅನಂತರ ಮಲಕ್‌ಗಳು ಲೂತರ ಕುಟುಂಬದ ಬಳಿಗೆ ತಲುಪಿದಾಗ.
ﮞﮟﮠﮡﮢ
15:62
ಲೂತ್ ನೀವು ಅಪರಿಚಿತರಾಗಿ ಕಾಣುತ್ತಿರುವಿರಿ ಎಂದರು.
ﮣﮤﮥﮦﮧﮨﮩﮪ
15:63
ಅವರು ಹೇಳಿದರು, ಅಲ್ಲ, ಯಾವುದರ ಬಗ್ಗೆ ಇವರು ಸಂಶಯ ಪಡುತ್ತಿರುವರೋ ಅದನ್ನು ನಾವು ನಿಮ್ಮ ಬಳಿಗೆ ತಂದಿದ್ದೇವೆ
ﮫﮬﮭﮮﮯ
15:64
ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ ಮತ್ತು ಖಂಡಿತವಾಗಿಯೂ ನಾವು ಸತ್ಯವಂತರಾಗಿದ್ದೇವೆ.
ﮰﮱﯓﯔﯕﯖﯗﯘﯙﯚﯛﯜﯝﯞﯟ
15:65
ಆದ್ದರಿಂದ ನೀವು ರಾತ್ರಿಯ ಸ್ವಲ್ಪಭಾಗ ಉಳಿದಿರುವಾಗ ನಿಮ್ಮ ಪರಿವಾರದೊಂದಿಗೆ ಹೊರಟುಬಿಡಿ, ನೀವು ಅವರ ಬೆನ್ನ ಹಿಂದೆಯೇ ಇರಬೇಕು ಜಾಗೃತೆ! ನಿಮ್ಮ ಪೈಕಿ ಯಾರು ಹಿಂತಿರುಗಿಯೂ ನೋಡದಿರಲಿ ಮತ್ತು ನಿಮಗೆ ಆದೇಶ ನೀಡಲಾಗುತ್ತಿರುವ ಕಡೆಗೆ ಸಾಗಿರಿ.
ﯠﯡﯢﯣﯤﯥﯦﯧﯨﯩ
15:66
ಬೆಳಗಾಗುತ್ತಲೇ ಅವರೆಲ್ಲರನ್ನು ಮೂಲೋತ್ಪಾಟನೆ ಗೊಳಿಸಲಾಗುವುದೆಂಬ ಈ ತೀರ್ಮಾನವನ್ನು ನಾವು ಅವರಿಗೆ ನೀಡಿದೆವು.
ﯪﯫﯬﯭﯮ
15:67
ಅಷÀ್ಟರಲ್ಲಿ ಪಟ್ಟಣದ ವಾಸಿಗಳು ಹರ್ಷಿತರಾಗಿ ಧಾವಿಸಿದರು.
ﯯﯰﯱﯲﯳﯴﯵ
15:68
ಲೂತ್ ಹೇಳಿದರು; ಇವರಂತೂ ನನ್ನ ಅತಿಥಿಗಳು ಆದ್ದರಿಂದ ನೀವು ನನ್ನನ್ನು ಅವಮಾನಿಸದಿರಿ.
ﯶﯷﯸﯹﯺ
15:69
ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅವಮಾನಿಸದಿರಿ.
ﯻﯼﯽﯾﯿﰀ
15:70
ಅವರು ಹೇಳಿದರು; ಲೋಕದವರ ವಿಚಾರದಲ್ಲಿ ನಾವು ನಿಮ್ಮನ್ನು ತಡೆದಿರಲಿಲ್ಲವೇ ?
ﭑﭒﭓﭔﭕﭖﭗ
15:71
ಲೂತ್(ವಿನಮ್ರತೆಯಿಂದ); ಇದೋ ನನ್ನ ಪುತ್ರಿಯರಿದ್ದಾರೆ ನಿಮಗೆ (ವಿವಾಹ) ಮಾಡಲೇ ಬೇಕೆಂದಿದ್ದರೆ,(ಅವರನ್ನು ವಿವಾಹವಾಗಬಹುದಲ್ಲ) ಎಂದು ಹೇಳಿದರು.
ﭘﭙﭚﭛﭜﭝ
15:72
ನಿನ್ನ ಆಯುಷÀ್ಯದಾಣೆ ಅವರಂತೂ ತಮ್ಮ ಮದೋನ್ಮತ್ತತೆಯಲ್ಲಿ ಅಲೆದಾಡುತ್ತಿದ್ದರು.
ﭞﭟﭠﭡ
15:73
ಹಾಗೆಯೇ ಸೂರ್ಯೋದಯದ ಹೊತ್ತಿನಲ್ಲಿ ಘೋರ ಘರ್ಜನೆಯು ಅವರನ್ನು ಹಿಡಿದು ಬಿಟ್ಟಿತ್ತು.
ﭢﭣﭤﭥﭦﭧﭨﭩﭪ
15:74
ಕೊನೆಗೆ ನಾವು ಆ ಪಟ್ಟಣವನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಆವೇ ಮಣ್ಣಿನ ಸುಡುಗಲ್ಲುಗಳನ್ನು ವರ್ಷಿಸಿದೆವು.
ﭫﭬﭭﭮﭯﭰ
15:75
ನಿಸ್ಸಂಶಯವಾಗಿಯೂ ಇದರಲ್ಲಿ ವಿಚಾರವಂತರಿಗೆ ಅನೇಕ ನಿದರ್ಶನಗಳಿವೆ.
ﭱﭲﭳﭴ
15:76
ಮತ್ತು ಆ ನಾಡು ನಿರಂತರ ಜನಸಂಚಾರವಿರುವ ಮಾರ್ಗದಲ್ಲಿದೆ.
ﭵﭶﭷﭸﭹﭺ
15:77
ಸತ್ಯ ವಿಶ್ವಾಸಿಗಳಿಗೆ ಇದರಲ್ಲೊಂದು ನಿದರ್ಶನವಿದೆ.
ﭻﭼﭽﭾﭿﮀ
15:78
ಐಕಾ ನಿವಾಸಿಗಳು ಮಹಾ ಅಕ್ರಮಿಗಳಾಗಿದ್ದರು,
ﮁﮂﮃﮄﮅﮆ
15:79
ಐಕಾ ನಿವಾಸಿಗಳು ಮಹಾ ಅಕ್ರಮಿಗಳಾಗಿದ್ದರು,
ﮇﮈﮉﮊﮋﮌ
15:80
ಖಂಡಿತವಾಗಿಯೂ ಹಿಜ್ರ‍್ನವರೂ ಕೂಡ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು.
ﮍﮎﮏﮐﮑﮒ
15:81
ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ದಯಪಾಲಿಸಿದ್ದೆವು. ಆದರೆ ಅವರು ಅವುಗಳನ್ನು ಕಡೆಗಣಿಸುತ್ತಿದ್ದರು.
ﮓﮔﮕﮖﮗﮘﮙ
15:82
ಅವರು ಪರ್ವತಗಳನ್ನು ಕೊರೆದು ನಿರ್ಭೀತಿಯಿಂದ ನಿವಾಸಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು.
ﮚﮛﮜﮝ
15:83
ಕೊನೆಗೆ ಬೆಳಗಾಗುತ್ತಲೇ ಘೋರ ಘರ್ಜನೆಯು ಅವರನ್ನು ಸಹ ಹಿಡಿದು ಬಿಟ್ಟಿತ್ತು.
ﮞﮟﮠﮡﮢﮣﮤ
15:84
ಆಗ ಅವರ ಸಂಪಾದನೆಯು ಅವರಿಗೆ ಯಾವ ಪ್ರಯೋಜನಕ್ಕೆ ಬರಲಿಲ್ಲ.
ﮥﮦﮧﮨﮩﮪﮫﮬﮭﮮﮯﮰﮱﯓﯔﯕﯖ
15:85
ನಾವು ಆಕಾಶಗಳನ್ನು ಮತ್ತು ಭೂಮಿಯನ್ನು ಅವುಗಳೆರಡರ ಮಧ್ಯೆ ಇರುವ ಸಕಲವನ್ನು ಸತ್ಯದೊಂದಿಗೆ ಸೃಷ್ಟಿಸಿರುತ್ತೇವೆ, ಮತ್ತು ಪ್ರಳಯದ ದಿನವೂ ಖಂಡಿತ ಬರಲಿದೆ. ಆದ್ದರಿಂದ ನೀವು ಸೌಜನ್ಯಪೂರ್ಣ ಕ್ಷಮೆಯನ್ನು ನೀಡಿರಿ.
ﯗﯘﯙﯚﯛﯜ
15:86
ನಿಶ್ಚಯವಾಗಿಯೂ ನಿಮ್ಮ ಪ್ರಭು ಎಲ್ಲರ ಸೃಷ್ಟಿಕರ್ತನು ಸರ್ವಜ್ಞಾನಿಯು ಆಗಿದ್ದಾನೆ.
ﯝﯞﯟﯠﯡﯢﯣﯤ
15:87
ನಿಶ್ಚಯವಾಗಿಯೂ ನಾವು ನಿಮಗೆ ಪದೇಪದೇ ಪುನರಾವರ್ತಿಸಲ್ಪಡುವ ಏಳು ಸೂಕ್ತಿಗಳನ್ನೂ (ಅಧ್ಯಾಯ ಅಲ್ ಫಾತಿಹಾ) ಮತ್ತು ಸರ್ವಶ್ರೇಷÀ್ಠ ಕುರ್‌ಆನನ್ನೂ ದಯಪಾಲಿಸಿದ್ದೇವೆ.
ﯥﯦﯧﯨﯩﯪﯫﯬﯭﯮﯯﯰﯱﯲﯳﯴ
15:88
ಅವರ ಪೈಕಿಯ ವಿವಿಧ ಜನರಿಗೆ ನಾವು ನೀಡಿದ ಸುಖಭೋಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ. ಅವರಿಗಾಗಿ ದುಃಖಿಸಲು ಬೇಡಿರಿ ಮತ್ತು ಸತ್ಯವಿಶ್ವಾಸಿಗಳಿಗಾಗಿ ನೀವು ತಮ್ಮ ಭುಜವನ್ನು ತಗ್ಗಿಸಿರಿ.
ﯵﯶﯷﯸﯹﯺ
15:89
ಮತ್ತು ಹೇಳಿರಿ ನಿಸ್ಸಂಶಯವಾಗಿಯೂ ನಾನು ಸ್ಪಷÀ್ಟ ಮುನ್ನೆಚ್ಚರಿಕೆ ನೀಡುವವನಾಗಿರುವೆನು.
ﯻﯼﯽﯾﯿ
15:90
ಮತಭೇದ ಮಾಡುವವರ ಮೇಲೆ ನಾವು ಶಿಕ್ಷೆಯನ್ನು ಎರಗಿಸಿದೆವು.
ﭑﭒﭓﭔﭕ
15:91
ಅವರು ಕುರ್‌ಆನನ್ನು ವಿಭಿನ್ನ ಭಾಗಗಳಾಗಿ ಮಾಡಿಕೊಂಡರು.
ﭖﭗﭘﭙ
15:92
ನಿಮ್ಮ ಪ್ರಭುವಿನಾಣೆ ನಾವು ಅವರೆಲ್ಲರನ್ನೂ ಖಂಡಿತ ವಿಚಾರಿಸುವೆವು.
ﭚﭛﭜﭝ
15:93
ಅವರು ಮಾಡುತ್ತಿದ್ದಂತಹ ಕಾರ್ಯಗಳ ಕುರಿತು.
ﭞﭟﭠﭡﭢﭣﭤ
15:94
ಆದ್ದರಿಂದ ನಿಮಗೆ ಆದೇಶಿಸುವುದನ್ನು ನೀವು ಘಂಟಾಘೋಷÀವಾಗಿ, ಸಾರಿಬಿಡಿರಿ ಮತ್ತು ಬಹುದೇವಾರಾಧಕರನ್ನು ಕಡೆಗಣಿಸಿರಿ.
ﭥﭦﭧﭨ
15:95
ನಿಶ್ಚಯವಾಗಿಯೂ ಪರಿಹಾಸ್ಯ ಮಾಡುವವರಿಗೆ ನಿಮ್ಮ ಪರವಾಗಿ ನಾವು ಸಾಕು.
ﭩﭪﭫﭬﭭﭮﭯﭰﭱﭲ
15:96
ಅಲ್ಲಾಹನ ಜೊತೆ ಇತರ ಆರಾಧ್ಯರನ್ನು ನಿಶ್ಚಯಿಸಿಕೊಳ್ಳುವವರು ಸಧ್ಯವೇ ಅರಿತುಕೊಳ್ಳುವರು.
ﭳﭴﭵﭶﭷﭸﭹﭺ
15:97
ಅವರು ಆಡುತ್ತಿರುವ ಮಾತುಗಳಿಂದಾಗಿ ನಿಮ್ಮ ಮನಸ್ಸು ನೊಂದುಕೊಳ್ಳುತ್ತಿದೆ ಎಂದು ನಾವು ಅರಿತಿದ್ದೇವೆ.
ﭻﭼﭽﭾﭿﮀﮁ
15:98
ನೀವು ತಮ್ಮ ಪ್ರಭುವಿನ ಪಾವಿತ್ರö್ಯದೊಂದಿಗೆ ಅವನನ್ನು ಸ್ತುತಿಸಿರಿ. ಮತ್ತು ಸಾಷ್ಟಾಂಗವೆರಗುವವರಲ್ಲಿ ಸೇರಿರಿ.
ﮂﮃﮄﮅﮆﮇ
15:99
ಮತ್ತು ನಿಮಗೆ ಮರಣ ಬರುವವರೆಗೂ ನೀವು ನಿಮ್ಮ ಪ್ರಭುವನ್ನು ಆರಾಧಿಸುತ್ತಿರಿ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







