ಅಲ್-ಅಂಕಬೂತ್ · 16/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
وَإِبْرَاهِيمَ إِذْ قَالَ لِقَوْمِهِ اعْبُدُوا اللَّهَ وَاتَّقُوهُ ۖ ذَٰلِكُمْ خَيْرٌ لَّكُمْ إِن كُنتُمْ تَعْلَمُونَ ۝١٦
Wa Ibraheema iz qaala liqawmihi` budul laaha wattaqoohu zaalikum khayrul lakum in kuntum ta`lamoon
📖 ಕನ್ನಡ ಅರ್ಥ
ಇಬ್ರಾಹೀಮರು (ಸಂದೇಶವಾಹಕರಾಗಿ) ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ. ನೀವು ಅರಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಲ್-ಅಂಕಬೂತ್

14وَلَقَدْ أَرْسَلْنَا نُوحًا إِلَىٰ قَوْمِهِ فَلَبِثَ فِيهِمْ أَلْفَ سَنَةٍ إِلَّا خَمْسِينَ عَامًا فَأَخَذَهُمُ الطُّوفَانُ وَهُمْ ظَالِمُونَ
ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸದೆವು. ಅವರು ಅವರ ನಡುವೆ ಒಂಬೈನೂರ ಐವತ್ತು ವರ್ಷಗಳ ಕಾಲ ವಾಸಿಸಿದರು.ಅನಂತರ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲೇ ಜಲಪ್ರಳಯವು ಅವರನ್ನು ಬಂದಾವರಿಸಿತು.
15فَأَنجَيْنَاهُ وَأَصْحَابَ السَّفِينَةِ وَجَعَلْنَاهَا آيَةً لِّلْعَالَمِينَ
ಅನಂತರ ನಾವು ನೂಹರನ್ನು ಮತ್ತು ಹಡಗಿನಲ್ಲಿದ್ದವರನ್ನು ರಕ್ಷಿಸಿದೆವು ಮತ್ತು ಅದನ್ನು ಸರ್ವಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
16وَإِبْرَاهِيمَ إِذْ قَالَ لِقَوْمِهِ اعْبُدُوا اللَّهَ وَاتَّقُوهُ ۖ ذَٰلِكُمْ خَيْرٌ لَّكُمْ إِن كُنتُمْ تَعْلَمُونَ
ಇಬ್ರಾಹೀಮರು (ಸಂದೇಶವಾಹಕರಾಗಿ) ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನನ್ನು ಭಯಪಡಿರಿ. ನೀವು ಅರಿಯುವವರಾಗಿದ್ದರೆ ಇದು ನಿಮ್ಮ ಪಾಲಿಗೆ ಉತ್ತಮವಾಗಿದೆ.
17إِنَّمَا تَعْبُدُونَ مِن دُونِ اللَّهِ أَوْثَانًا وَتَخْلُقُونَ إِفْكًا ۚ إِنَّ الَّذِينَ تَعْبُدُونَ مِن دُونِ اللَّهِ لَا يَمْلِكُونَ لَكُمْ رِزْقًا فَابْتَغُوا عِندَ اللَّهِ الرِّزْقَ وَاعْبُدُوهُ وَاشْكُرُوا لَهُ ۖ إِلَيْهِ تُرْجَعُونَ
ನೀವು ಅಲ್ಲಾಹನ ಹೊರತು ವಿಗ್ರಹಗಳ ಆರಾಧನೆ ಮಾಡುತ್ತಿರುವಿರಿ ಮತ್ತು ಸುಳ್ಳುವಿಚಾರಗಳನ್ನು ಸೃಷ್ಟಿಸುತ್ತಿರುವಿರಿ. ವಾಸ್ತವದಲ್ಲಿ, ನೀವು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತೀರೋ ಅವರು ನಿಮ್ಮ ಜೀವನಾಧಾರದ ಒಡೆಯರಲ್ಲ. ಇನ್ನು ನೀವು ಅಲ್ಲಾಹನಲ್ಲೇ ಜೀವನಾಧಾರವನ್ನು ಅರಸಿರಿ ಮತ್ತು ಅವನನ್ನೇ ಆರಾಧಿಸಿರಿ ಮತ್ತು ಅವನಿಗೇ ಕೃತಜ್ಞತೆಯನ್ನು ಸಲ್ಲಿಸಿರಿ. ಕೊನೆಗೆ ನೀವು ಅವನೆಡೆಗೇ ಮರಳಿಸಲಾಗುವಿರಿ.
18وَإِن تُكَذِّبُوا فَقَدْ كَذَّبَ أُمَمٌ مِّن قَبْلِكُمْ ۖ وَمَا عَلَى الرَّسُولِ إِلَّا الْبَلَاغُ الْمُبِينُ
ಇನ್ನು ನೀವು ಸುಳ್ಳಾಗಿಸುವುದಾದರೆ ನಿಮಗಿಂತ ಮುಂಚೆ ಹಲವು ಜನಾಂಗಗಳು ಸಹ ಸುಳ್ಳಾಗಿಸಿವೆ ಮತ್ತು ಸಂದೇಶವನ್ನು ಸುಸ್ಪಷ್ಟವಾಗಿ ತಲುಪಿಸುವ ಹೊರತು ಸಂದೇಶವಾಹಕರ ಮೇಲೆ ಯಾವ ಹೊಣೆಗಾರಿಕೆಯೂ ಇಲ್ಲ.
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
16ಆಯತ್

ಅನುವಾದ — ಅಲ್-ಅಂಕಬೂತ್ 16

ಸೂರಾ ಅಲ್-ಅಂಕಬೂತ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಇಬ್ರಾಹೀಮರು (ಸಂದೇಶವಾಹಕರಾಗಿ) ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನೀವು ಅಲ್ಲಾಹನನ್ನು ಆರಾಧಿಸಿರಿ…

ಸೂರಾ ಆಯತ್ 16/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers