ಅಲ್-ಅಂಕಬೂತ್ · 60/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
وَكَأَيِّن مِّن دَابَّةٍ لَّا تَحْمِلُ رِزْقَهَا اللَّهُ يَرْزُقُهَا وَإِيَّاكُمْ ۚ وَهُوَ السَّمِيعُ الْعَلِيمُ ۝٦٠
Wa ka ayyim min daaabbatil laa tahmilu riqqahaa; al laahu yarzuquhaa wa iyyaakum; wa Huwas Samee`ul Aleem
📖 ಕನ್ನಡ ಅರ್ಥ
ತಮ್ಮ ಆಹಾರವನ್ನು ಹೊತ್ತು ನಡೆಯದ ಅದೆಷ್ಟೋ ಜೀವಿಗಳಿವೆ. ಅಲ್ಲಾಹನು ಅವುಗಳಿಗೂ ಮತ್ತು ನಿಮಗೂ ಆಹಾರ ನೀಡುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನು, ಚೆನ್ನಾಗಿ ಅರಿಯುವವನು ಆಗಿದ್ದಾನೆ.

🎧 ಆಲಿಸಿ


📜 ಆಯತ್ 58-62 — ಸೂರಾ ಅಲ್-ಅಂಕಬೂತ್

58وَالَّذِينَ آمَنُوا وَعَمِلُوا الصَّالِحَاتِ لَنُبَوِّئَنَّهُم مِّنَ الْجَنَّةِ غُرَفًا تَجْرِي مِن تَحْتِهَا الْأَنْهَارُ خَالِدِينَ فِيهَا ۚ نِعْمَ أَجْرُ الْعَامِلِينَ
ಯಾರು ಸತ್ಯವಿಶ್ವಾಸಿವಿರಿಸಿ ಸತ್ಕರ್ಮಗಳನ್ನು ಕೈಗೊಂಡರೋ ಖಂಡಿತ ನಾವು ಅವರಿಗೆ ಸ್ವರ್ಗೋದ್ಯಾನದ ಉನ್ನತ ಭವನಗಳಲ್ಲಿ ನೆಲೆಸುವೆವು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅಲ್ಲಿ ಶಾಶ್ವತವಾಗಿರುವರು. ಸತ್ಕರ್ಮವೆಸಗುವವರ ಪ್ರತಿಫಲವು ಅದೆಷ್ಟು ಉತ್ತಮವಾದುದು.
59الَّذِينَ صَبَرُوا وَعَلَىٰ رَبِّهِمْ يَتَوَكَّلُونَ
ಅವರು ಸಹನೆ ವಹಿಸಿದವರು, ತಮ್ಮ ಪ್ರಭುವಿನ ಮೇಲೆ ಭರವಸೆಯನ್ನಿಟ್ಟಿರುವವರು ಆಗಿದ್ದಾರೆ.
60وَكَأَيِّن مِّن دَابَّةٍ لَّا تَحْمِلُ رِزْقَهَا اللَّهُ يَرْزُقُهَا وَإِيَّاكُمْ ۚ وَهُوَ السَّمِيعُ الْعَلِيمُ
ತಮ್ಮ ಆಹಾರವನ್ನು ಹೊತ್ತು ನಡೆಯದ ಅದೆಷ್ಟೋ ಜೀವಿಗಳಿವೆ. ಅಲ್ಲಾಹನು ಅವುಗಳಿಗೂ ಮತ್ತು ನಿಮಗೂ ಆಹಾರ ನೀಡುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನು, ಚೆನ್ನಾಗಿ ಅರಿಯುವವನು ಆಗಿದ್ದಾನೆ.
61وَلَئِن سَأَلْتَهُم مَّنْ خَلَقَ السَّمَاوَاتِ وَالْأَرْضَ وَسَخَّرَ الشَّمْسَ وَالْقَمَرَ لَيَقُولُنَّ اللَّهُ ۖ فَأَنَّىٰ يُؤْفَكُونَ
ಭೂಮಿ, ಆಕಾಶಗಳನ್ನು ಸೃಷ್ಟಿಸಿದವನು ಮತ್ತು ಸೂರ್ಯನನ್ನೂ, ಚಂದ್ರನನ್ನೂ ಅಧೀನಗೊಳಿಸಿದವನು ಯಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು ಅಲ್ಲಾಹ್ ಎಂದೇ ಉತ್ತರಿಸುತ್ತಾರೆ. ಹಾಗಿದ್ದೂ ಅವರೆತ್ತ ಅಲೆದಾಡಿಸಲಾಗುತ್ತಿದ್ದಾರೆ?
62اللَّهُ يَبْسُطُ الرِّزْقَ لِمَن يَشَاءُ مِنْ عِبَادِهِ وَيَقْدِرُ لَهُ ۚ إِنَّ اللَّهَ بِكُلِّ شَيْءٍ عَلِيمٌ
ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸೀಮಿತಗೊಳಿಸುತ್ತಾನೆ. ನಿಶ್ಚಯವಾಗಿಯು ಅಲ್ಲಾಹನು ಸಕಲ ವಸ್ತುಗಳ ಅರಿವುಳ್ಳವನಾಗಿದ್ದಾನೆ.
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
60ಆಯತ್

ಅನುವಾದ — ಅಲ್-ಅಂಕಬೂತ್ 60

ಸೂರಾ ಅಲ್-ಅಂಕಬೂತ್ ಆಯತ್ 60 - ಓದಿ, ಆಲಿಸಿ, ಅನುವಾದ, ಕನ್ನಡ : ತಮ್ಮ ಆಹಾರವನ್ನು ಹೊತ್ತು ನಡೆಯದ ಅದೆಷ್ಟೋ ಜೀವಿಗಳಿವೆ. ಅಲ್ಲಾಹನು ಅವುಗಳಿಗೂ ಮತ್ತು ನಿಮಗೂ…

ಸೂರಾ ಆಯತ್ 60/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 58–62. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers