PDF —
18 ಆಯತ್ Medinan PDF
Built right in your browser — download starts automatically

ಸೂರಾ ಅತ್-ತಗಾಬುನ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅತ್-ತಗಾಬುನ್ pdf ಕನ್ನಡ — ಡೌನ್‌ಲೋಡ್ ಸೂರಾ ಅತ್-ತಗಾಬುನ್ ಅನುವಾದ. ಸೂರಾ ಅತ್-ತಗಾಬುನ್ (Medinan) 18 ಆಯತ್.



18 ಆಯತ್ · Medinan · ಕನ್ನಡ
bismillah
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤ
64:1 ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ. ಅಧಿಪತ್ಯವು ಅವನದೇ ಆಗಿದೆ. ಮತ್ತು ಅವನಿಗೇ ರ‍್ವಸ್ತುತಿ ಅವನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯ ಉಳ್ಳವನಾಗಿದ್ದಾನೆ.
ﭥﭦﭧﭨﭩﭪﭫﭬﭭﭮﭯﭰﭱ
64:2 ಅವನೇ ನಿಮ್ಮನ್ನು ಸೃಷ್ಟಿಸಿರುವನು. ಹಾಗಿದ್ದು ನಿಮ್ಮ ಪೈಕಿ ಕೆಲವರು ಸತ್ಯನಿಷೇಧಿಗಳಾಗಿದ್ದಾರೆ ಇನ್ನು ಕೆಲವರು ಸತ್ಯವಿಶ್ವಾಸಿಗಳಾಗಿದ್ದಾರೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾನೆ.
ﭲﭳﭴﭵﭶﭷﭸﭹﭺﭻﭼ
64:3 ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ನ್ಯಾಯೋಚಿತ ಹಾಗೂ ಯುಕ್ತಿಯುತವಾಗಿ ಸೃಷ್ಟಿಸಿರುತ್ತಾನೆ ಮತ್ತು ಅವನು ನಿಮಗೆ ರೂಪಕೊಟ್ಟನು. ಹಾಗೂ ನಿಮ್ಮ ರೂಪವನ್ನು ಸುಂದರಗೊಳಿಸಿದನು ನಿಮಗೆ ಅವನೆಡೆಗೇ ಮರಳಲಿಕ್ಕಿದೆ.
ﭽﭾﭿﮀﮁﮂﮃﮄﮅﮆﮇﮈﮉﮊﮋﮌ
64:4 ಅವನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುತ್ತಾನೆ ನೀವು ರಹಸ್ಯವಾಗಿರಿಸುವುದನ್ನು ಬಹಿರಂಗಗೊಳಿಸುವುದನ್ನು ಅವನು ಅರಿಯುತ್ತಾನೆ ಮತ್ತು ಅಲ್ಲಾಹನು ಹೃದಯಗಳಲ್ಲಿ ಇರುವುದನ್ನು ಚೆನ್ನಾಗಿ ಬಲ್ಲನು.
ﮍﮎﮏﮐﮑﮒﮓﮔﮕﮖﮗﮘﮙﮚ
64:5 ನಿಮ್ಮ ಬಳಿಗೆ ಇದಕ್ಕೆ ಮೊದಲು ಸತ್ಯನಿಷೇಧಿಸಿ ತಮ್ಮ ಕೃತ್ಯಗಳ ದುಷ್ಪರಿಣಾಮವನ್ನು ಸವಿದವರ ವೃತ್ತಾಂತವು ಬಂದಿಲ್ಲವೇ ? ಅವರಿಗೆ ವೇದನಾಜನಕ ಯಾತನೆ ಇರುವುದು.
ﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭ
64:6 ಇದೇಕೆಂದರೆ ಅವರ ಸಂದೇಶವಾಹಕರು ಸ್ಪಷ್ಟ ಪುರಾವೆಗಳನ್ನು ಅವರ ಬಳಿಗೆ ತಂದಾಗ ಅವರು ಹೇಳಿದ್ದರು; ಒಬ್ಬ ಮನುಷ್ಯ ನಮಗೆ ಮರ‍್ಗರ‍್ಶನ ನೀಡುವುದೇ ? ಕೊನೆಗೆ ಅವರು ಸತ್ಯವನ್ನು ನಿಷೇಧಿಸಿದರು ಹಾಗೂ ವಿಮುಖರಾಗಿ ಬಿಟ್ಟರು, ಮತ್ತು ಅಲ್ಲಾಹನು ಸಹ ಅಲಕ್ಷö್ಯತೆಯನ್ನು ತೋರಿದನು ಅಲ್ಲಾಹನು ನಿರಪೇಕ್ಷಕನೂ ಸ್ತುತ್ಯರ‍್ಹನೂ ಆಗಿದ್ದಾನೆ.
ﮮﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣ
64:7 ಮರಣದ ನಂತರ ನಾವು ಪುನಃ ಜೀವಂತಗೊಳಿಸಲಾರೆವು ಎಂದು ಸತ್ಯನಿಷೇಧಿಗಳು ಭಾವಿಸಿಕೊಂಡಿದ್ದಾರೆ. ಪೈಗಂಬರರೇ ಹೇಳಿರಿ; ಏಕಿಲ್ಲ; ನನ್ನ ಪ್ರಭುವಿನಾಣೆ! ಖಂಡಿತವಾಗಿಯೂ ನೀವು ಪುನಃ ಜೀವಂತಗೊಳಿಸಲ್ಪಡುವಿರಿ, ಆಮೇಲೆ ನೀವು ಮಾಡಿರುವುದೆಲ್ಲವನ್ನು ನಿಮಗೆ ತಿಳಿಸಲಾಗುವುದು ಇದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
ﯤﯥﯦﯧﯨﯩﯪﯫﯬﯭﯮﯯ
64:8 ಆದ್ದರಿಂದ ನೀವು ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ನಾವು ಅವತರ‍್ಣಗೊಳಿಸಿರುವ ಪ್ರಕಾಶದಲ್ಲೂ ವಿಶ್ವಾಸವಿಡಿರಿ ಅಲ್ಲಾಹನು ನಿಮ್ಮ ಸಕಲ ರ‍್ಮಗಳನ್ನು ಸೂಕ್ಷö್ಮವಾಗಿ ಬಲ್ಲನು.
ﯰﯱﯲﯳﯴﯵﯶﯷﯸﯹﯺﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎ
64:9 ಸಮ್ಮೇಳನದ ದಿನ ಅವನು ನಿಮ್ಮೆಲ್ಲರನ್ನು ಒಟ್ಟುಗೂಡಿಸುವನು. ಅದು ಸೋಲು-ಗೆಲುವಿನ ದಿನವಾಗಿರುವುದು ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ‍್ಮಗಳನ್ನು ಕೈಗೊಳ್ಳುತ್ತಾನೋ ಅವನಿಂದ ಅಲ್ಲಾಹನು ಪಾಪಗಳನ್ನು ಅಳಿಸಿಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುವಂತಹ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅದರಲ್ಲಿ ಶಾಶ್ವತವಾಗಿರುವರು. ಇದುವೇ ಮಹಾ ಯಶಸ್ಸಾಗಿದೆ.
ﭑﭒﭓﭔﭕﭖﭗﭘﭙﭚﭛﭜﭝ
64:10 ಯಾರು ಸತ್ಯ ನಿಷೇಧಿಸಿ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರು ಅವರೇ ನರಕವಾಸಿಗಳು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು ಅದು ಮರಳಲಿಕ್ಕಿರುವ ಅತಿ ನಿಕೃಷ್ಟ ತಾಣವಾಗಿದೆ.
ﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰ
64:11 ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ವಿಪತ್ತು ಸಂಭವಿಸುವುದಿಲ್ಲ ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೆ ಅವನ ಹೃದಯಕ್ಕೆ ಅಲ್ಲಾಹನು ಸನ್ಮರ‍್ಗವನ್ನು ಕರುಣಿಸುತ್ತಾನೆ ಅಲ್ಲಾಹನ ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.
ﭱﭲﭳﭴﭵﭶﭷﭸﭹﭺﭻﭼﭽ
64:12 ನೀವು ಅಲ್ಲಾಹನನ್ನು ಅನುಸರಿಸಿರಿ ಹಾಗೂ ಸಂದೇಶವಾಹಕರನ್ನು ಅನುಸರಿಸಿರಿ. ನೀವು ವಿಮುಖರಾಗಿ ಬಿಟ್ಟರೆ ನಮ್ಮ ಸಂದೇಶವಾಹಕರ ಮೇಲೆ ಸುಸ್ಪಷ್ಟವಾದ ಸಂದೇಶತಲುಪಿಸುವ ಹೊಣೆ ಮಾತ್ರವಿದೆ.
ﭾﭿﮀﮁﮂﮃﮄﮅﮆﮇﮈ
64:13 ಅಲ್ಲಾಹನು ಅವನ ಹೊರತು ಬೇರಾವ ಆರಾಧ್ಯಾನಿಲ್ಲ ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಬೇಕಾಗಿದೆ.
ﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜ
64:14 ಓ ಸತ್ಯವಿಶ್ವಾಸಿಗಳೇ, ನಿಮ್ಮ ಪತ್ನಿಯರಲ್ಲಿ ನಿಮ್ಮ ಮಕ್ಕಳಲ್ಲಿ ಕೆಲವರು ನಿಮ್ಮ ಶತ್ರುಗಳಿದ್ದಾರೆ. ಆದ್ದರಿಂದ ನೀವು ಅವರಿಂದ ಜಾಗ್ರತೆ ವಹಿಸಿರಿ ಇನ್ನು ನೀವು ಮನ್ನಿಸುವುದಾದರೆ, ಅವರ ಪ್ರಮಾದಗಳನ್ನು ಅಲಕ್ಷಿಸುವುದಾದರೆ ಹಾಗೂ ಕ್ಷಮಿಸುವುದಾದರೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
ﮝﮞﮟﮠﮡﮢﮣﮤﮥﮦ
64:15 ನಿಮ್ಮ ಸಂಪತ್ತು ನಿಮ್ಮ ಸಂತಾನ ಒಂದು ಪರೀಕ್ಷೆಯಾಗಿದೆ ಮಹಾ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲಿದೆ.
ﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙ
64:16 ಆದ್ದರಿಂದ ನೀವು ಅಲ್ಲಾಹನನ್ನು ನಿಮಗೆ ಸಾಧ್ಯವಿರುವಷ್ಟು ಭಯಪಡಿರಿ ಆಲಿಸಿರಿ ಮತ್ತು ಅನುಸರಿಸಿರಿ ಹಾಗೂ ನೀವು ಅಲ್ಲಾಹನ ಮರ‍್ಗದಲ್ಲಿ ದಾನರ‍್ಮ ಮಾಡಿರಿ. ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ. ಯಾರು ತನ್ನಲ್ಲಿನ ಲೋಭ ತನದಿಂದ ಪಾರು ಮಾಡಲಾಗುತ್ತಾನೋ ಅವನೇ ಯಶಸ್ಸು ಪಡೆದವನಾಗಿರುತ್ತಾನೆ.
ﯚﯛﯜﯝﯞﯟﯠﯡﯢﯣﯤﯥﯦﯧ
64:17 ನೀವು ಅಲ್ಲಾಹನಿಗೆ ಅತ್ಯುತ್ತಮ ಸಾಲವನ್ನು ನೀಡುವುದಾದರೆ ಅವನದನ್ನು ನಿಮಗೆ ಅನೇಕಪಟ್ಟು ವೃದ್ಧಿಸಿಕೊಡುವನು ಮತ್ತು ನಿಮ್ಮನ್ನು ಕ್ಷಮಿಸಿಬಿಡುವನು ಅಲ್ಲಾಹನು ಕೃತಜ್ಞನೂ ಸಹನಶೀಲನೂ ಆಗಿರುವನು.
ﯨﯩﯪﯫﯬﯭ
64:18 ಗೋಚರ ಹಾಗೂ ಅಗೋಚರಜ್ಞಾನಿ ಯವನು ಪ್ರತಾಪಶಾಲಿಯೂ ಯುಕ್ತಿಪರ‍್ಣನೂ (ಆಗಿದ್ದಾನೆ).

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers