ಸೂರಾ ಅಲ್-ಕಮರ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಕಮರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (55 ಆಯತ್ — مكية). ಅಲ್-ಕಮರ್ ಆಲಿಸಿ, ಅಲ್-ಕಮರ್ ಅನುವಾದ, ಅಲ್-ಕಮರ್ mp3, ಅಲ್-ಕಮರ್ pdf.

ಸೂರಾ ಅಲ್-ಕಮರ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
اقْتَرَبَتِ السَّاعَةُ وَانشَقَّ الْقَمَرُ ۝١
📖 ಅನುವಾದ ಆಯತ್ 1
ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು.
وَإِن يَرَوْا آيَةً يُعْرِضُوا وَيَقُولُوا سِحْرٌ مُّسْتَمِرٌّ ۝٢
📖 ಅನುವಾದ ಆಯತ್ 2
ಅವರು (ಬಹುದೇವಾರಾಧಕರು) ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗಿ ಇದು ಹಿಂದಿನಿAದಲೇ ನಡೆದು ಬರುತ್ತಿರುವಂತಹ ಒಂದು ಮಾಟವಾಗಿದೆಯೆಂದು ಹೇಳುತ್ತಾರೆ.
وَكَذَّبُوا وَاتَّبَعُوا أَهْوَاءَهُمْ ۚ وَكُلُّ أَمْرٍ مُّسْتَقِرٌّ ۝٣
📖 ಅನುವಾದ ಆಯತ್ 3
ಅವರು (ಸತ್ಯವನ್ನು) ಸುಳ್ಳಾಗಿಸಿದರು ಹಾಗು ತಮ್ಮ ಸ್ವೇಚ್ಛೆಗಳನ್ನು ಅನುಸರಿಸಿದರು ಮತ್ತು ಪ್ರತಿಯೊಂದು ಕಾರ್ಯಕ್ಕೂ ಒಂದು ಸಮಯ ನಿಶ್ಚಿತವಿದೆ.
وَلَقَدْ جَاءَهُم مِّنَ الْأَنبَاءِ مَا فِيهِ مُزْدَجَرٌ ۝٤
📖 ಅನುವಾದ ಆಯತ್ 4
ನಿಜವಾಗಿಯೂ (ಪಾಠದಾಯಕ) ಬೆದÀರಿಕೆಯುಳ್ಳ ವಾರ್ತೆಗಳು ಅವರ ಬಳಿಗೆ ಬಂದಿವೆ.
حِكْمَةٌ بَالِغَةٌ ۖ فَمَا تُغْنِ النُّذُرُ ۝٥
📖 ಅನುವಾದ ಆಯತ್ 5
ಪೂರ್ಣ ವಿವೇಕದ ಮಾತಾಗಿದೆ. ಆದರೆ ಆ ಎಚ್ಚರಿಕೆ ಮಾತುಗಳೂ ಅವರಿಗೆ ಒಂದಿಷ್ಟು ಪ್ರಯೋಜನವನ್ನು ನೀಡಲಿಲ್ಲ.
فَتَوَلَّ عَنْهُمْ ۘ يَوْمَ يَدْعُ الدَّاعِ إِلَىٰ شَيْءٍ نُّكُرٍ ۝٦
📖 ಅನುವಾದ ಆಯತ್ 6
ಆದ್ದರಿಂದ ಓ ಪೈಗಂಬರರೇ ನೀವು ಅವರನ್ನು ಕಡೆಗಣಿಸಿರಿ. ಅಂದು ಕರೆ ನೀಡುವಾತನು (ದೂತ) ಅಸಹನೀಯವಾದ ವಸ್ತುವಿನೆಡೆಗೆ ಕರೆಯುವನು.
خُشَّعًا أَبْصَارُهُمْ يَخْرُجُونَ مِنَ الْأَجْدَاثِ كَأَنَّهُمْ جَرَادٌ مُّنتَشِرٌ ۝٧
📖 ಅನುವಾದ ಆಯತ್ 7
ದೃಷ್ಟಿಗಳನ್ನು ತಗ್ಗಿಸಿರುವ ಸ್ಥಿತಿಯಲ್ಲಿ ಚದುರಿದ ಮಿಡತೆಗಳಂತೆ ಗೋರಿಗಳಿಂದ ಅವರು ಹೊರಬರುವರು,
مُّهْطِعِينَ إِلَى الدَّاعِ ۖ يَقُولُ الْكَافِرُونَ هَٰذَا يَوْمٌ عَسِرٌ ۝٨
📖 ಅನುವಾದ ಆಯತ್ 8
ಅವರು ಕರೆಯುವಾತನೆಡೆಗೆ ಧಾವಿಸುವರು, ಇದು ಅತ್ಯಂತ ಕಠಿಣವಾದ ದಿನವೆಂದು ಸತ್ಯನಿಷೇಧಿಗಳು ಹೇಳುವರು.
۞ كَذَّبَتْ قَبْلَهُمْ قَوْمُ نُوحٍ فَكَذَّبُوا عَبْدَنَا وَقَالُوا مَجْنُونٌ وَازْدُجِرَ ۝٩
📖 ಅನುವಾದ ಆಯತ್ 9
ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು ಮತ್ತು ಇವನು ಹುಚ್ಚನೆಂದು ಹೇಳಿದ್ದರು. ಅವರು ತೀವ್ರವಾಗಿ ಗದರಿಸಲ್ಪಟ್ಟಿದ್ದರು.
فَدَعَا رَبَّهُ أَنِّي مَغْلُوبٌ فَانتَصِرْ ۝١٠
📖 ಅನುವಾದ ಆಯತ್ 10
ಆಗ ಅವರು ತನ್ನ ಪ್ರಭುವನ್ನು ಕರೆದು ಬೇಡಿದರು, ಓ ಪ್ರಭು ನಾನು ಪರಾಭವಗೊಂಡಿರುವೆನು, ಆದ್ದರಿಂದ ನೀನು ಇವರಿಂದ ಪ್ರತಿಕಾರ ಪಡೆ.
فَفَتَحْنَا أَبْوَابَ السَّمَاءِ بِمَاءٍ مُّنْهَمِرٍ ۝١١
📖 ಅನುವಾದ ಆಯತ್ 11
ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ನಾವು ಆಕಾಶದ ದ್ವಾರಗಳನ್ನು ತೆರೆದು ಬಿಟ್ಟೆವು.
وَفَجَّرْنَا الْأَرْضَ عُيُونًا فَالْتَقَى الْمَاءُ عَلَىٰ أَمْرٍ قَدْ قُدِرَ ۝١٢
📖 ಅನುವಾದ ಆಯತ್ 12
ನಾವು ಭೂಮಿಯಲ್ಲಿ ಚಿಲುಮೆಗಳನ್ನು ಹರಿಸಿದೆವು, ನಿಶ್ಚಯಿಸಲಾದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು.
وَحَمَلْنَاهُ عَلَىٰ ذَاتِ أَلْوَاحٍ وَدُسُرٍ ۝١٣
📖 ಅನುವಾದ ಆಯತ್ 13
ನಾವು ಅವರನ್ನು (ನೂಹರನ್ನು) ಹಲಗೆಗಳು ಮತ್ತು ಮೂಳೆಗಳಿಂದ ಮಾಡಲ್ಪಟ್ಟ ಒಂದು ಹಡಗಿನಲ್ಲಿ ಸಾಗಿಸಿದೆವು.
تَجْرِي بِأَعْيُنِنَا جَزَاءً لِّمَن كَانَ كُفِرَ ۝١٤
📖 ಅನುವಾದ ಆಯತ್ 14
ಅದು ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ನಿಷೇಧಿಸಲ್ಪಟ್ಟ ವ್ಯಕ್ತಿಯ(ನೂಹರ) ಪರವಾಗಿ ಪ್ರತಿಕಾರವಾಗಿತ್ತು.
وَلَقَد تَّرَكْنَاهَا آيَةً فَهَلْ مِن مُّدَّكِرٍ ۝١٥
📖 ಅನುವಾದ ಆಯತ್ 15
ನಿಸ್ಸಂದೇಹವಾಗಿಯೂ ಆ ಹಡಗನ್ನು ನಾವು ಒಂದು ನಿದರ್ಶನವನ್ನಾಗಿ ಉಳಿಸಿಬಿಟ್ಟೆವು. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?
فَكَيْفَ كَانَ عَذَابِي وَنُذُرِ ۝١٦
📖 ಅನುವಾದ ಆಯತ್ 16
ಹೇಗಿತ್ತು ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ?
وَلَقَدْ يَسَّرْنَا الْقُرْآنَ لِلذِّكْرِ فَهَلْ مِن مُّدَّكِرٍ ۝١٧
📖 ಅನುವಾದ ಆಯತ್ 17
ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳವಾಗಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
كَذَّبَتْ عَادٌ فَكَيْفَ كَانَ عَذَابِي وَنُذُرِ ۝١٨
📖 ಅನುವಾದ ಆಯತ್ 18
ಆದ್ ಜನಾಂಗವು ಸಹ (ಸತ್ಯವನ್ನು) ಸುಳ್ಳಾಗಿಸಿತು. ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?
إِنَّا أَرْسَلْنَا عَلَيْهِمْ رِيحًا صَرْصَرًا فِي يَوْمِ نَحْسٍ مُّسْتَمِرٍّ ۝١٩
📖 ಅನುವಾದ ಆಯತ್ 19
ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು.
تَنزِعُ النَّاسَ كَأَنَّهُمْ أَعْجَازُ نَخْلٍ مُّنقَعِرٍ ۝٢٠
📖 ಅನುವಾದ ಆಯತ್ 20
ಬುಡಕಿತ್ತ ಖರ್ಜೂರ ಮರದ ದಿಂಡುಗಳAತೆ ಅದು ಜನರನ್ನು ಎತ್ತಿ ಎಸೆಯುತ್ತಿತ್ತು.
فَكَيْفَ كَانَ عَذَابِي وَنُذُرِ ۝٢١
📖 ಅನುವಾದ ಆಯತ್ 21
ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು?
وَلَقَدْ يَسَّرْنَا الْقُرْآنَ لِلذِّكْرِ فَهَلْ مِن مُّدَّكِرٍ ۝٢٢
📖 ಅನುವಾದ ಆಯತ್ 22
ಖಂಡಿತವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿರುವೆವು. ಇನ್ನುಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
كَذَّبَتْ ثَمُودُ بِالنُّذُرِ ۝٢٣
📖 ಅನುವಾದ ಆಯತ್ 23
ಸಮೂದ್ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು.
فَقَالُوا أَبَشَرًا مِّنَّا وَاحِدًا نَّتَّبِعُهُ إِنَّا إِذًا لَّفِي ضَلَالٍ وَسُعُرٍ ۝٢٤
📖 ಅನುವಾದ ಆಯತ್ 24
ಅವರು ಹೇಳಿದರು; ನಮ್ಮಲ್ಲಿನ ಒಬ್ಬಂಟಿಗನಾದ ಒಬ್ಬ ವ್ಯಕ್ತಿಯನ್ನು ನಾವು ಅನುಸರಿಸುವುದೇ ? ಹಾಗಿದ್ದರೆ ಖಂಡಿತವಾಗಿಯೂ ನಾವು ದಾರಿಗೆಟ್ಟವರು ಮತ್ತು ತಿಳಿಗೇಡಿಗಳಾಗಿದ್ದೇವೆ.
أَأُلْقِيَ الذِّكْرُ عَلَيْهِ مِن بَيْنِنَا بَلْ هُوَ كَذَّابٌ أَشِرٌ ۝٢٥
📖 ಅನುವಾದ ಆಯತ್ 25
ನಮ್ಮ ನಡುವೆ ಕೇವಲ ಅವನ ಮೇಲೆ ಮಾತ್ರ ಸಂದೇಶ ಇಳಿಸಲಾಯಿತೇ ?ಅಲ್ಲ, ಅವನು ಸುಳ್ಳನಾದ ದುರಾಭಿಮಾನಿಯಾಗಿದ್ದಾನೆ.
سَيَعْلَمُونَ غَدًا مَّنِ الْكَذَّابُ الْأَشِرُ ۝٢٦
📖 ಅನುವಾದ ಆಯತ್ 26
ಆದರೆ ಸುಳ್ಳುಗಾರನು, ಮತ್ತು ದುರಾಭಿಮಾನಿ ಯಾರೆಂದು ನಾಳೆ ಅವರಿಗೆ ತಿಳಿಯುವುದು.
إِنَّا مُرْسِلُو النَّاقَةِ فِتْنَةً لَّهُمْ فَارْتَقِبْهُمْ وَاصْطَبِرْ ۝٢٧
📖 ಅನುವಾದ ಆಯತ್ 27
ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್) ನೀನು ಅವರನ್ನು ನಿರೀಕ್ಷಿಸುತ್ತಿರು ಹಾಗು ತಾಳ್ಮೆಯಿಂದಿರು.
وَنَبِّئْهُمْ أَنَّ الْمَاءَ قِسْمَةٌ بَيْنَهُمْ ۖ كُلُّ شِرْبٍ مُّحْتَضَرٌ ۝٢٨
📖 ಅನುವಾದ ಆಯತ್ 28
ನೀರನ್ನು ಅವರ (ಮತ್ತು ಒಂಟೆಯ) ನಡುವೆ ಹಂಚಲಾಗಿದೆ ಎಂದು ನೀವು ಅವರಿಗೆ ತಿಳಿಸಿರಿ. ಪ್ರತಿಯೊಬ್ಬನೂ ತನ್ನ ಸರದಿಗೆ ಹಾಜರಾಗಲಿ.
فَنَادَوْا صَاحِبَهُمْ فَتَعَاطَىٰ فَعَقَرَ ۝٢٩
📖 ಅನುವಾದ ಆಯತ್ 29
ಅನಂತರ ಅವರು ತಮ್ಮ ಓರ್ವ ಸಂಗಡಿಗನನ್ನು ಕರೆದರು. ಅವನು ಆಕ್ರಮಣ ಮಾಡಿ ಒಂಟೆಯ ಸ್ನಾಯುಗಳನ್ನು ಕತ್ತರಿಸಿ ಬಿಟ್ಟನು.
فَكَيْفَ كَانَ عَذَابِي وَنُذُرِ ۝٣٠
📖 ಅನುವಾದ ಆಯತ್ 30
ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?
إِنَّا أَرْسَلْنَا عَلَيْهِمْ صَيْحَةً وَاحِدَةً فَكَانُوا كَهَشِيمِ الْمُحْتَظِرِ ۝٣١
📖 ಅನುವಾದ ಆಯತ್ 31
ನಾವು ಅವರ ಮೇಲೆ ಒಂದು ಘೋರ ಆರ್ಭಟವನ್ನು ಕಳುಹಿಸಿದೆವು, ಆಗ ಅವರು ಕೊಟ್ಟಿಗೆಯವರು ತುಳಿದ ಕಸದಂತೆ ಹೊಟ್ಟಾಗಿಬಿಟ್ಟರು.
وَلَقَدْ يَسَّرْنَا الْقُرْآنَ لِلذِّكْرِ فَهَلْ مِن مُّدَّكِرٍ ۝٣٢
📖 ಅನುವಾದ ಆಯತ್ 32
ನಿಸ್ಸಂಶಯವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
كَذَّبَتْ قَوْمُ لُوطٍ بِالنُّذُرِ ۝٣٣
📖 ಅನುವಾದ ಆಯತ್ 33
ಲೂತರ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು.
إِنَّا أَرْسَلْنَا عَلَيْهِمْ حَاصِبًا إِلَّا آلَ لُوطٍ ۖ نَّجَّيْنَاهُم بِسَحَرٍ ۝٣٤
📖 ಅನುವಾದ ಆಯತ್ 34
ನಿಸ್ಸಂಶಯವಾಗಿಯು ನಾವು ಅವರ ಮೇಲೆ ಕಲ್ಲುಗಳನ್ನು ವರ್ಷಿಸುವ ಚಂಡಮಾರುತವನ್ನು ಕಳುಹಿಸಿದೆವು, ಆದರೆ ಲೂತರ ಕುಟುಂಬದ ಹೊರತು, ನಾವು ಅವರನ್ನು ನುಸುಕಿನ ವೇಳೆಯಲ್ಲಿ ರಕ್ಷಿಸಿದೆವು.
نِّعْمَةً مِّنْ عِندِنَا ۚ كَذَٰلِكَ نَجْزِي مَن شَكَرَ ۝٣٥
📖 ಅನುವಾದ ಆಯತ್ 35
ನಮ್ಮ ವತಿಯ ಒಂದು ಅನುಗ್ರಹವಾಗಿ ಪ್ರತಿಯೊಬ್ಬ ಕೃತಜ್ಞತೆ ತೋರುವವನಿಗೆ ನಾವು ಇದೇರೀತಿ ಪ್ರತಿಫಲ ನೀಡುತ್ತೇವೆ.
وَلَقَدْ أَنذَرَهُم بَطْشَتَنَا فَتَمَارَوْا بِالنُّذُرِ ۝٣٦
📖 ಅನುವಾದ ಆಯತ್ 36
ನಿಜವಾಗಿಯೂ ಲೂತರು ತಮ್ಮ ಜನಾಂಗವನ್ನು ನಮ್ಮ ಶಿಕ್ಷೆಯ ಕುರಿತು ಎಚ್ಚರಿಸಿದ್ದರು. ಆದರೆ ಅವರು ಎಲ್ಲಾ ಎಚ್ಚರಿಕೆಗಳ ಕುರಿತು ಸಂದೇಹಪಟ್ಟರು.
وَلَقَدْ رَاوَدُوهُ عَن ضَيْفِهِ فَطَمَسْنَا أَعْيُنَهُمْ فَذُوقُوا عَذَابِي وَنُذُرِ ۝٣٧
📖 ಅನುವಾದ ಆಯತ್ 37
ನಿಶ್ಚಯವಾಗಿಯೂ ಅವರು ಅವನ (ಲೂತರ) ಅತಿಥಿಗಳ ಕುರಿತು ಅವನನ್ನು ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು. (ಹೇಳಿದೆವು) ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ.
وَلَقَدْ صَبَّحَهُم بُكْرَةً عَذَابٌ مُّسْتَقِرٌّ ۝٣٨
📖 ಅನುವಾದ ಆಯತ್ 38
ಶಾಶ್ವತವಾದ ಶಿಕ್ಷೆಯು ಮುಂಜಾನೆ ವೇಳೆಯಲ್ಲಿ ಅವರನ್ನು ಆವರಿಸಿಬಿಟ್ಟಿತು.
فَذُوقُوا عَذَابِي وَنُذُرِ ۝٣٩
📖 ಅನುವಾದ ಆಯತ್ 39
ಇನ್ನು ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ (ಎನ್ನಲಾಯಿತು)
وَلَقَدْ يَسَّرْنَا الْقُرْآنَ لِلذِّكْرِ فَهَلْ مِن مُّدَّكِرٍ ۝٤٠
📖 ಅನುವಾದ ಆಯತ್ 40
ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
وَلَقَدْ جَاءَ آلَ فِرْعَوْنَ النُّذُرُ ۝٤١
📖 ಅನುವಾದ ಆಯತ್ 41
ಫಿರ್‌ಔನ್ ಕುಟುಂಬದ ಬಳಿಗೂ ಎಚ್ಚರಿಕೆ ನೀಡುವವರು ಬಂದಿದ್ದರು.
كَذَّبُوا بِآيَاتِنَا كُلِّهَا فَأَخَذْنَاهُمْ أَخْذَ عَزِيزٍ مُّقْتَدِرٍ ۝٤٢
📖 ಅನುವಾದ ಆಯತ್ 42
ಆದರೆ ಅವರು ನಮ್ಮ ಸಕಲ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಬ್ಬ ಬಲಿಷ್ಠನೂ, ಸರ್ವಸಮರ್ಥನೂ ಹಿಡಿಯುವಂತೆ ಹಿಡಿದುಬಿಟ್ಟೆವು.
أَكُفَّارُكُمْ خَيْرٌ مِّنْ أُولَٰئِكُمْ أَمْ لَكُم بَرَاءَةٌ فِي الزُّبُرِ ۝٤٣
📖 ಅನುವಾದ ಆಯತ್ 43
(ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ ಉತ್ತಮರೇ ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮೆ ಲಿಖಿತಗೊಂಡಿದೆಯೇ?
أَمْ يَقُولُونَ نَحْنُ جَمِيعٌ مُّنتَصِرٌ ۝٤٤
📖 ಅನುವಾದ ಆಯತ್ 44
ಅಥವಾ ನಾವು ಜಯ ಸಾಧಿಸುವ ಪಂಗಡವಾಗಿದ್ದೇವೆAದು ಅವರು ಹೇಳುತ್ತಿದ್ದಾರೆಯೇ ?
سَيُهْزَمُ الْجَمْعُ وَيُوَلُّونَ الدُّبُرَ ۝٤٥
📖 ಅನುವಾದ ಆಯತ್ 45
ಸದ್ಯದಲ್ಲೇ ಈ (ಸತ್ಯನಿಷೇಧಿ) ಪಂಗಡವು ಸೋತು ಹೋಗುವುದು. ಹಾಗು ಅವರು ಬೆನ್ನು ತಿರುಗಿಸಿ ಓಡುವರು.
بَلِ السَّاعَةُ مَوْعِدُهُمْ وَالسَّاعَةُ أَدْهَىٰ وَأَمَرُّ ۝٤٦
📖 ಅನುವಾದ ಆಯತ್ 46
ಮಾತ್ರವಲ್ಲ ಅಂತ್ಯಗಳಿಗೆಯು ಅವರ ವಾಗ್ದತ್ತ ಸಮಯವಾಗಿದೆ ಹಾಗೂ ಆ ಅಂತ್ಯಗಳಿಗೆಯೂ ಅತ್ಯಂತ ಭೀಕರವೂ, ಅತಿ ಕಹಿಯೂ ಆಗಿದೆ,
إِنَّ الْمُجْرِمِينَ فِي ضَلَالٍ وَسُعُرٍ ۝٤٧
📖 ಅನುವಾದ ಆಯತ್ 47
ನಿಸ್ಸಂದೇಹವಾಗಿಯೂ ಅಪರಾಧಿಗಳು ಮಾರ್ಗಭ್ರಷ್ಟತೆಯಲ್ಲಿ ಮತ್ತು ಹುಚ್ಚುತನದಲ್ಲಿ ಇದ್ದಾರೆ
يَوْمَ يُسْحَبُونَ فِي النَّارِ عَلَىٰ وُجُوهِهِمْ ذُوقُوا مَسَّ سَقَرَ ۝٤٨
📖 ಅನುವಾದ ಆಯತ್ 48
ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ ನರಕದ ಜ್ವಾಲೆಯ ಸ್ಪರ್ಶವನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು.
إِنَّا كُلَّ شَيْءٍ خَلَقْنَاهُ بِقَدَرٍ ۝٤٩
📖 ಅನುವಾದ ಆಯತ್ 49
ನಿಸ್ಸಂಶಯವಾಗಿಯೂ ನಾವು ಪ್ರತಿಯೊಂದು ವಸ್ತುವನ್ನು ಒಂದು ಪ್ರಮಾಣದಲ್ಲಿ ಸೃಷ್ಟಿಸಿದ್ದೇವೆ.
وَمَا أَمْرُنَا إِلَّا وَاحِدَةٌ كَلَمْحٍ بِالْبَصَرِ ۝٥٠
📖 ಅನುವಾದ ಆಯತ್ 50
ನಮ್ಮ ಆಜ್ಞೆಯು ಕಣ್ಣು ರೆಪ್ಪೆ ಬಡಿದ ಹಾಗೆ, ಕೇವಲ ಒಂದೇ ಬಾರಿಯಾಗಿರುತ್ತದೆ.
وَلَقَدْ أَهْلَكْنَا أَشْيَاعَكُمْ فَهَلْ مِن مُّدَّكِرٍ ۝٥١
📖 ಅನುವಾದ ಆಯತ್ 51
ನಾವು ನಿಮ್ಮಂತಹ ಅನೇಕ ಸಮುದಾಯಗಳನ್ನು ನಾಶಪಡಿಸಿರುತ್ತೇವೆ, ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?
وَكُلُّ شَيْءٍ فَعَلُوهُ فِي الزُّبُرِ ۝٥٢
📖 ಅನುವಾದ ಆಯತ್ 52
ಅವರು ಮಾಡಿದ್ದೆಲ್ಲವೂ ಕರ್ಮಗ್ರಂಥದಲ್ಲಿ ಲಿಖಿತವಾಗಿದೆ.
وَكُلُّ صَغِيرٍ وَكَبِيرٍ مُّسْتَطَرٌ ۝٥٣
📖 ಅನುವಾದ ಆಯತ್ 53
ಚಿಕ್ಕದಿರಲಿ ದೊಡ್ಡದಿರಲಿ ಪ್ರತಿಯೊಂದು ವಿಷಯವನ್ನು ಬರೆದಿಡಲಾಗಿದೆ.
إِنَّ الْمُتَّقِينَ فِي جَنَّاتٍ وَنَهَرٍ ۝٥٤
📖 ಅನುವಾದ ಆಯತ್ 54
ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು.
فِي مَقْعَدِ صِدْقٍ عِندَ مَلِيكٍ مُّقْتَدِرٍ ۝٥٥
📖 ಅನುವಾದ ಆಯತ್ 55
ಸರ್ವಸಮರ್ಥನಾದ ರಾಜಾಧಿಪತಿಯ ಸನ್ನಿಧಿಯಲ್ಲಿ ಸತ್ಯದ ಆಸನದಲ್ಲಿರುವರು.
← 53 ಅಲ್-ಕಮರ್ (54/114) 55 →
ಓದಿ ಸೂರಾ ಅಲ್-ಕಮರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

54القمر Al-Qamar 📚 55 ಆಯತ್ مكية

ಆಯತ್‌ವಾರು – ಸೂರಾ ಅಲ್-ಕಮರ್ — 55 ಆಯತ್




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers