ಸೂರಾ ಅನ್-ನಜ್ಮ್ ಅರೇಬಿಕ್ ಮತ್ತು ಕನ್ನಡ
ಸೂರಾ ಅನ್-ನಜ್ಮ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (62 ಆಯತ್ — مكية). ಅನ್-ನಜ್ಮ್ ಆಲಿಸಿ, ಅನ್-ನಜ್ಮ್ ಅನುವಾದ, ಅನ್-ನಜ್ಮ್ mp3, ಅನ್-ನಜ್ಮ್ pdf.ಸೂರಾ ಅನ್-ನಜ್ಮ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
مَا ضَلَّ صَاحِبُكُمْ وَمَا غَوَىٰ ٢
📖 ಅನುವಾದ
ಆಯತ್ 2
ನಿಮ್ಮ ಸಂಗಡಿಗ (ಮುಹಮ್ಮದ್) ದಾರಿತಪ್ಪಿಲ್ಲ, ಮತ್ತು ಮಾರ್ಗ ಭ್ರಷ್ಟನೂ ಅಲ್ಲ.
عَلَّمَهُ شَدِيدُ الْقُوَىٰ ٥
📖 ಅನುವಾದ
ಆಯತ್ 5
ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.
فَأَوْحَىٰ إِلَىٰ عَبْدِهِ مَا أَوْحَىٰ ١٠
📖 ಅನುವಾದ
ಆಯತ್ 10
ಆಗ ಅವನು ಅಲ್ಲಾಹನ ದಾಸನೆಡೆಗೆ ತಲುಪಿಸಬೇಕಾದುದನ್ನು ದಿವ್ಯವಾಣಿಯನ್ನು ತಲುಪಿಸಿದನು.
مَا كَذَبَ الْفُؤَادُ مَا رَأَىٰ ١١
📖 ಅನುವಾದ
ಆಯತ್ 11
ಪೈಗಂಬರರು ನೋಡಿದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ.
أَفَتُمَارُونَهُ عَلَىٰ مَا يَرَىٰ ١٢
📖 ಅನುವಾದ
ಆಯತ್ 12
ಇನ್ನು ಅವರು ಕಣ್ಣಾರೆ ಕಂಡಿರುವುದರ ಬಗ್ಗೆ ನೀವು ತರ್ಕ ಮಾಡುತ್ತಿರುವಿರಾ ?
وَلَقَدْ رَآهُ نَزْلَةً أُخْرَىٰ ١٣
📖 ಅನುವಾದ
ಆಯತ್ 13
ಪೈಗಂಬರರು ಅವರನ್ನು (ಜಿಬ್ರೀಲರನ್ನು) ಮತ್ತೊಂದು ಸಲ ಕಂಡಿದ್ದರು.
إِذْ يَغْشَى السِّدْرَةَ مَا يَغْشَىٰ ١٦
📖 ಅನುವಾದ
ಆಯತ್ 16
ಆಗ 'ಸಿದ್ರ್ ವೃಕ್ಷ'(ಬಾರೆ ವೃಕ್ಷ)ವನ್ನು ಆಚ್ಛಾದಿಸ ಬೇಕಾದದ್ದು ಆಚ್ಛಾದಿಸುತ್ತಿತ್ತು.
مَا زَاغَ الْبَصَرُ وَمَا طَغَىٰ ١٧
📖 ಅನುವಾದ
ಆಯತ್ 17
ಪೈಗಂಬರರ ದೃಷ್ಟಿಯು ತಪ್ಪಲಿಲ್ಲ ಮತ್ತು ಮೇರೆಮೀರಲೂ ಇಲ್ಲ.
لَقَدْ رَأَىٰ مِنْ آيَاتِ رَبِّهِ الْكُبْرَىٰ ١٨
📖 ಅನುವಾದ
ಆಯತ್ 18
ನಿಜವಾಗಿಯೂ ಅವರು ತಮ್ಮ ಪ್ರಭುವಿನ ಮಹಾ ನಿದರ್ಶನಗಳಲ್ಲಿ ಕೆಲವನ್ನು ಕಂಡರು.
أَلَكُمُ الذَّكَرُ وَلَهُ الْأُنثَىٰ ٢١
📖 ಅನುವಾದ
ಆಯತ್ 21
ಏನು ನಿಮಗೆ ಪುತ್ರರು ಮತ್ತು ಅಲ್ಲಾಹನಿಗೆ ಪುತ್ರಿಯರೇ ?
إِنْ هِيَ إِلَّا أَسْمَاءٌ سَمَّيْتُمُوهَا أَنتُمْ وَآبَاؤُكُم مَّا أَنزَلَ اللَّهُ بِهَا مِن سُلْطَانٍ ۚ إِن يَتَّبِعُونَ إِلَّا الظَّنَّ وَمَا تَهْوَى الْأَنفُسُ ۖ وَلَقَدْ جَاءَهُم مِّن رَّبِّهِمُ الْهُدَىٰ ٢٣
📖 ಅನುವಾದ
ಆಯತ್ 23
ವಾಸ್ತವದಲ್ಲಿ ಇವು (ವಿಗ್ರಹಗಳು) ನೀವೂ, ನಿಮ್ಮ ಪೂರ್ವಿಕರು ಇಟ್ಟಿರುವ ಕೆಲವು ನಾಮಗಳ ಹೊರತು ಬೇರೇನೂ ಅಲ್ಲ. ಇವುಗಳ ಬಗ್ಗೆ ಅಲ್ಲಾಹನು ಯಾವ ಆಧಾರವನ್ನು ಇಳಿಸಿಲ್ಲ. ಅವರು ಕೇವಲ ಊಹೆಯನ್ನು ಹಾಗು ತಮ್ಮ ಸ್ವೇಚ್ಛೆಯನ್ನು ಅನುಸರಿಸುತ್ತಿದ್ದಾರೆ ಮತ್ತು ನಿಜವಾಗಿಯೂ ಅವರ ಬಳಿ ಅವರ ಪ್ರಭುವಿನ ಕಡೆಯಿಂದ ಸನ್ಮಾರ್ಗವೂ ಬಂದಿರುತ್ತದೆ.
۞ وَكَم مِّن مَّلَكٍ فِي السَّمَاوَاتِ لَا تُغْنِي شَفَاعَتُهُمْ شَيْئًا إِلَّا مِن بَعْدِ أَن يَأْذَنَ اللَّهُ لِمَن يَشَاءُ وَيَرْضَىٰ ٢٦
📖 ಅನುವಾದ
ಆಯತ್ 26
ಆಕಾಶಗಳಲ್ಲಿ ಅದೆಷ್ಟೋ ದೇವಚರರಿದ್ದಾರೆ. ಅವರ ಶಿಫಾರಸ್ಸು (ಯಾರಿಗೂ) ಯಾವ ಪ್ರಯೋಜನಕ್ಕೂ ಬಾರದು. ಆದರೆ ಅಲ್ಲಾಹನು ತನ್ನ ಸಂತೃಪ್ತಿಯಿAದ ತಾನು ಇಚ್ಛಿಸುವವರಿಗೆ ಅನುಮತಿ ನೀಡಿದರೆ ಬೇರೆ ವಿಚಾರ.
إِنَّ الَّذِينَ لَا يُؤْمِنُونَ بِالْآخِرَةِ لَيُسَمُّونَ الْمَلَائِكَةَ تَسْمِيَةَ الْأُنثَىٰ ٢٧
📖 ಅನುವಾದ
ಆಯತ್ 27
ನಿಸ್ಸಂಶವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ದೇವದೂತರಿಗೆ ಸ್ತಿçÃಯರ ನಾಮವನ್ನಿಡುತ್ತಾರೆ.
وَمَا لَهُم بِهِ مِنْ عِلْمٍ ۖ إِن يَتَّبِعُونَ إِلَّا الظَّنَّ ۖ وَإِنَّ الظَّنَّ لَا يُغْنِي مِنَ الْحَقِّ شَيْئًا ٢٨
📖 ಅನುವಾದ
ಆಯತ್ 28
ವಸ್ತುತಃ ಅವರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ, ಅವರು ಕೇವಲ ಊಹೆಯನ್ನು ಮಾತ್ರ ಅನುಸರಿಸುತ್ತಾರೆ. ಮತ್ತು ನಿಸ್ಸಂಶಯವಾಗಿಯೂ ಊಹೆಯು ಸತ್ಯದ ಎದುರಿಗೆ ಯಾವ ಪ್ರಯೋಜನಕ್ಕೂ ಬಾರದು.
فَأَعْرِضْ عَن مَّن تَوَلَّىٰ عَن ذِكْرِنَا وَلَمْ يُرِدْ إِلَّا الْحَيَاةَ الدُّنْيَا ٢٩
📖 ಅನುವಾದ
ಆಯತ್ 29
ಆದ್ದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವವನ, ಇಹಲೋಕ ಜೀವನದ ಹೊರತು ಬೇರೆನನ್ನೂ ಉದ್ದೇಶಿಸದವನನ್ನು ನೀವು ಕಡೆಗಣಿಸಿರಿ.
ذَٰلِكَ مَبْلَغُهُم مِّنَ الْعِلْمِ ۚ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ وَهُوَ أَعْلَمُ بِمَنِ اهْتَدَىٰ ٣٠
📖 ಅನುವಾದ
ಆಯತ್ 30
ಅವರ ಜ್ಞಾನದ ಬಂಡವಾಳವಿಷ್ಟೇ, ನಿಮ್ಮ ಪ್ರಭು ಅವನ ಮಾರ್ಗದಿಂದ ತಪ್ಪಿದವರನ್ನು ಅರಿಯುತ್ತಾನೆ, ಹಾಗೂ ಸನ್ಮಾರ್ಗ ಪಡೆದವನನ್ನೂ ಚೆನ್ನಾಗಿ ಬಲ್ಲನು.
وَلِلَّهِ مَا فِي السَّمَاوَاتِ وَمَا فِي الْأَرْضِ لِيَجْزِيَ الَّذِينَ أَسَاءُوا بِمَا عَمِلُوا وَيَجْزِيَ الَّذِينَ أَحْسَنُوا بِالْحُسْنَى ٣١
📖 ಅನುವಾದ
ಆಯತ್ 31
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಇದು ಅವನು ದುಷ್ಕರ್ಮವೆಸಗುವವರಿಗೆ ಅವರ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲೆಂದು ಮತ್ತು ಒಳಿತನ್ನು ಮಾಡುವವರಿಗೆ ಅತ್ಯುತ್ತಮ ಪ್ರತಿಫಲ ನೀಡಲೆಂದಾಗಿದೆ.
الَّذِينَ يَجْتَنِبُونَ كَبَائِرَ الْإِثْمِ وَالْفَوَاحِشَ إِلَّا اللَّمَمَ ۚ إِنَّ رَبَّكَ وَاسِعُ الْمَغْفِرَةِ ۚ هُوَ أَعْلَمُ بِكُمْ إِذْ أَنشَأَكُم مِّنَ الْأَرْضِ وَإِذْ أَنتُمْ أَجِنَّةٌ فِي بُطُونِ أُمَّهَاتِكُمْ ۖ فَلَا تُزَكُّوا أَنفُسَكُمْ ۖ هُوَ أَعْلَمُ بِمَنِ اتَّقَىٰ ٣٢
📖 ಅನುವಾದ
ಆಯತ್ 32
ಅಂದರೆ ಮಹಾಪಾಪಗಳಿಂದ, ಅಶ್ಲೀಲ ಕೃತ್ಯಗಳಿಂದ ದೂರವಿರುವವರು, ಆದರೆ ಸಣ್ಣ ಪಾಪಗಳ ಹೊರತು, ನಿಸ್ಸಂಶಯವಾಗಿಯೂ ನಿಮ್ಮ ಪ್ರಭುವು ವಿಶಾಲವಾದ ಕ್ಷಮೆವುಳ್ಳವನಾಗಿದ್ದಾನೆ, ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಗರ್ಭಗಳಲ್ಲಿ ಭ್ರೂಣದಲ್ಲಿದ್ದಾಗಲೂ ನಿಮ್ಮನ್ನುಚೆನ್ನಾಗಿ ಬಲ್ಲನು. ಆದ್ದರಿಂದ ನೀವು ಆತ್ಮಪ್ರಶಂಸೆಯನ್ನು ಮಾಡದಿರಿ. ಖಂಡಿತವಾಗಿಯೂ ಅವನು ಭಯ ಭಕ್ತಿಯಿರಿಸಿದವರನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
أَعِندَهُ عِلْمُ الْغَيْبِ فَهُوَ يَرَىٰ ٣٥
📖 ಅನುವಾದ
ಆಯತ್ 35
ಅವನ ಬಳಿ ಅಗೋಚರ ಜ್ಞಾನವಿದೆಯೇ ? ಹೀಗೆ ಅವನು (ಎಲ್ಲವನ್ನು) ಕಾಣುತ್ತಿದ್ದಾನೆಯೇ?
أَمْ لَمْ يُنَبَّأْ بِمَا فِي صُحُفِ مُوسَىٰ ٣٦
📖 ಅನುವಾದ
ಆಯತ್ 36
ಮೂಸಾರ ಗ್ರಂಥದಲ್ಲಿರುವುದನ್ನು ಅವನಿಗೆ ತಿಳಿಸಲಾಗಿಲ್ಲವೇ ?
وَإِبْرَاهِيمَ الَّذِي وَفَّىٰ ٣٧
📖 ಅನುವಾದ
ಆಯತ್ 37
ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)
أَلَّا تَزِرُ وَازِرَةٌ وِزْرَ أُخْرَىٰ ٣٨
📖 ಅನುವಾದ
ಆಯತ್ 38
ಆ ವಿಷಯ ಪಾಪ ಭಾರಹೊರುವ ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಭಾರವನ್ನು ಹೊರಲಾರನು.
وَأَن لَّيْسَ لِلْإِنسَانِ إِلَّا مَا سَعَىٰ ٣٩
📖 ಅನುವಾದ
ಆಯತ್ 39
ಮನುಷ್ಯನಿಗೆ ತಾನು ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲವೆಂದು.
ثُمَّ يُجْزَاهُ الْجَزَاءَ الْأَوْفَىٰ ٤١
📖 ಅನುವಾದ
ಆಯತ್ 41
ತರುವಾಯ ಅವನಿಗೆ ಸಂಪೂರ್ಣ ಪ್ರತಿಫಲವನ್ನು ನೀಡಲಾಗುವುದು.
وَأَنَّ إِلَىٰ رَبِّكَ الْمُنتَهَىٰ ٤٢
📖 ಅನುವಾದ
ಆಯತ್ 42
ನಿಸ್ಸಂಶಯವಾಗಿಯೂ (ಕೊನೆಗೆ) ಸಕಲರಿಗೂ ತಮ್ಮ ಪ್ರಭುವಿನೆಡೆಗೇ ತಲುಪಲಿಕ್ಕಿರುವುದು.
وَأَنَّهُ هُوَ أَضْحَكَ وَأَبْكَىٰ ٤٣
📖 ಅನುವಾದ
ಆಯತ್ 43
ನಿಶ್ಚಯವಾಗಿ ಅವನೇ (ಅಲ್ಲಾಹನು) ನಗಿಸುತ್ತಾನೆ ಹಾಗು ಅವನೇ ಅಳುವಂತೆ ಮಾಡುತ್ತಾನೆ.
وَأَنَّهُ هُوَ أَمَاتَ وَأَحْيَا ٤٤
📖 ಅನುವಾದ
ಆಯತ್ 44
ನಿಶ್ಚಯವಾಗಿ ಅವನೇ ಮರಣ ಕೊಡುತ್ತಾನೆ ಮತ್ತು ಜೀವ ನೀಡುತ್ತಾನೆ.
وَأَنَّهُ خَلَقَ الزَّوْجَيْنِ الذَّكَرَ وَالْأُنثَىٰ ٤٥
📖 ಅನುವಾದ
ಆಯತ್ 45
ಮತ್ತು ನಿಶ್ಚಯವಾಗಿ ಅವನೇ ಗಂಡು ಹೆಣ್ಣು ಜೋಡಿಗಳನ್ನು ಸೃಷ್ಟಿಸಿರುವನು.
مِن نُّطْفَةٍ إِذَا تُمْنَىٰ ٤٦
📖 ಅನುವಾದ
ಆಯತ್ 46
ಒಂದು ವೀರ್ಯಾಣುವಿನಿಂದ, ಅದು (ಗರ್ಭಾಶಯದಲ್ಲಿ) ಸ್ರವಿಸಲ್ಪಟ್ಟಾಗ.
وَأَنَّ عَلَيْهِ النَّشْأَةَ الْأُخْرَىٰ ٤٧
📖 ಅನುವಾದ
ಆಯತ್ 47
ನಿಶ್ಚಯವಾಗಿಯು ಪುನಃ ಜೀವಂತಗೊಳಿಸುವುದು ಅವನ ಹೊಣೆಯಾಗಿದೆ.
وَأَنَّهُ هُوَ أَغْنَىٰ وَأَقْنَىٰ ٤٨
📖 ಅನುವಾದ
ಆಯತ್ 48
ಅವನೇ ಶ್ರೀಮಂತಗೊಳಿಸುತ್ತಾನೆ ಹಾಗು ಬಂಡವಾಳ ನೀಡುತ್ತಾನೆ.
وَأَنَّهُ أَهْلَكَ عَادًا الْأُولَىٰ ٥٠
📖 ಅನುವಾದ
ಆಯತ್ 50
ಮತ್ತು ಅವನೇ ಪ್ರಥಮ ಆದ್ ಜನಾಂಗವನ್ನೂ ನಾಶಪಡಿಸಿರುವನು.
وَقَوْمَ نُوحٍ مِّن قَبْلُ ۖ إِنَّهُمْ كَانُوا هُمْ أَظْلَمَ وَأَطْغَىٰ ٥٢
📖 ಅನುವಾದ
ಆಯತ್ 52
ಅದಕ್ಕಿಂತ ಮೊದಲು ನೂಹರ ಜನಾಂಗವನ್ನು ಸಹ. ನಿಜವಾಗಿಯು ಅವರು ಅತ್ಯಂತ ಅಕ್ರಮಿಗಳೂ, ಮಿತಿ ಮೀರಿದವರಾಗಿದ್ದರು.
فَبِأَيِّ آلَاءِ رَبِّكَ تَتَمَارَىٰ ٥٥
📖 ಅನುವಾದ
ಆಯತ್ 55
ಆದ್ದರಿಂದ, ನೀವು ನಿಮ್ಮ ಪ್ರಭುವಿನ ಯಾವಯಾವ ಅನುಗ್ರಹಗಳ ಬಗ್ಗೆ ಸಂಶಯ ಪಡುತ್ತಿರುವಿರಿ ?
هَٰذَا نَذِيرٌ مِّنَ النُّذُرِ الْأُولَىٰ ٥٦
📖 ಅನುವಾದ
ಆಯತ್ 56
ಇವರು (ಪೈಗಂಬರರು) ಗತಕಾಲದ ಮುನ್ನೆಚ್ಚರಿಕೆಗಾರರಲ್ಲಿ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ.
لَيْسَ لَهَا مِن دُونِ اللَّهِ كَاشِفَةٌ ٥٨
📖 ಅನುವಾದ
ಆಯತ್ 58
ಅದನ್ನು ಅಲ್ಲಾಹನ ಹೊರತು ಇನ್ನಾರೂ ಅನಾವರಣ ಗೊಳಿಸುವವರಿಲ್ಲ.
أَفَمِنْ هَٰذَا الْحَدِيثِ تَعْجَبُونَ ٥٩
📖 ಅನುವಾದ
ಆಯತ್ 59
ನೀವು ಈ ಕುರ್‌ಆನಿನ ಕುರಿತು ಆಶ್ಚರ್ಯ ಪಡುತ್ತಿರುವಿರಾ?
فَاسْجُدُوا لِلَّهِ وَاعْبُدُوا ۩ ٦٢
📖 ಅನುವಾದ
ಆಯತ್ 62
ಆದ್ದರಿಂದ ನೀವು ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ ಹಾಗೂ (ಅವನನ್ನೇ) ಆರಾಧಿಸಿರಿ.
ಓದಿ ಸೂರಾ ಅನ್-ನಜ್ಮ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

