PDF —
55 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಕಮರ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಕಮರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಕಮರ್ ಅನುವಾದ. ಸೂರಾ ಅಲ್-ಕಮರ್ (Meccan) 55 ಆಯತ್.



55 ಆಯತ್ · Meccan · ಕನ್ನಡ
bismillah
ﮬﮭﮮﮯﮰ
54:1 ಅಂತ್ಯ ಗಳಿಗೆಯು (ಪ್ರಳಯ) ಸಮೀಪಿಸಿತು ಹಾಗು ಚಂದ್ರನು ಹೋಳಾದನು.
ﮱﯓﯔﯕﯖﯗﯘﯙ
54:2 ಅವರು (ಬಹುದೇವಾರಾಧಕರು) ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗಿ ಇದು ಹಿಂದಿನಿAದಲೇ ನಡೆದು ಬರುತ್ತಿರುವಂತಹ ಒಂದು ಮಾಟವಾಗಿದೆಯೆಂದು ಹೇಳುತ್ತಾರೆ.
ﯚﯛﯜﯝﯞﯟﯠﯡ
54:3 ಅವರು (ಸತ್ಯವನ್ನು) ಸುಳ್ಳಾಗಿಸಿದರು ಹಾಗು ತಮ್ಮ ಸ್ವೇಚ್ಛೆಗಳನ್ನು ಅನುಸರಿಸಿದರು ಮತ್ತು ಪ್ರತಿಯೊಂದು ಕಾರ್ಯಕ್ಕೂ ಒಂದು ಸಮಯ ನಿಶ್ಚಿತವಿದೆ.
ﯢﯣﯤﯥﯦﯧﯨﯩ
54:4 ನಿಜವಾಗಿಯೂ (ಪಾಠದಾಯಕ) ಬೆದÀರಿಕೆಯುಳ್ಳ ವಾರ್ತೆಗಳು ಅವರ ಬಳಿಗೆ ಬಂದಿವೆ.
ﯪﯫﯬﯭﯮﯯﯰ
54:5 ಪೂರ್ಣ ವಿವೇಕದ ಮಾತಾಗಿದೆ. ಆದರೆ ಆ ಎಚ್ಚರಿಕೆ ಮಾತುಗಳೂ ಅವರಿಗೆ ಒಂದಿಷ್ಟು ಪ್ರಯೋಜನವನ್ನು ನೀಡಲಿಲ್ಲ.
ﯱﯲﯳﯴﯵﯶﯷﯸﯹﯺ
54:6 ಆದ್ದರಿಂದ ಓ ಪೈಗಂಬರರೇ ನೀವು ಅವರನ್ನು ಕಡೆಗಣಿಸಿರಿ. ಅಂದು ಕರೆ ನೀಡುವಾತನು (ದೂತ) ಅಸಹನೀಯವಾದ ವಸ್ತುವಿನೆಡೆಗೆ ಕರೆಯುವನು.
ﭑﭒﭓﭔﭕﭖﭗﭘﭙ
54:7 ದೃಷ್ಟಿಗಳನ್ನು ತಗ್ಗಿಸಿರುವ ಸ್ಥಿತಿಯಲ್ಲಿ ಚದುರಿದ ಮಿಡತೆಗಳಂತೆ ಗೋರಿಗಳಿಂದ ಅವರು ಹೊರಬರುವರು,
ﭚﭛﭜﭝﭞﭟﭠﭡﭢﭣ
54:8 ಅವರು ಕರೆಯುವಾತನೆಡೆಗೆ ಧಾವಿಸುವರು, ಇದು ಅತ್ಯಂತ ಕಠಿಣವಾದ ದಿನವೆಂದು ಸತ್ಯನಿಷೇಧಿಗಳು ಹೇಳುವರು.
ﭤﭥﭦﭧﭨﭩﭪﭫﭬﭭﭮ
54:9 ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು ಮತ್ತು ಇವನು ಹುಚ್ಚನೆಂದು ಹೇಳಿದ್ದರು. ಅವರು ತೀವ್ರವಾಗಿ ಗದರಿಸಲ್ಪಟ್ಟಿದ್ದರು.
ﭯﭰﭱﭲﭳﭴ
54:10 ಆಗ ಅವರು ತನ್ನ ಪ್ರಭುವನ್ನು ಕರೆದು ಬೇಡಿದರು, ಓ ಪ್ರಭು ನಾನು ಪರಾಭವಗೊಂಡಿರುವೆನು, ಆದ್ದರಿಂದ ನೀನು ಇವರಿಂದ ಪ್ರತಿಕಾರ ಪಡೆ.
ﭵﭶﭷﭸﭹﭺ
54:11 ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ನಾವು ಆಕಾಶದ ದ್ವಾರಗಳನ್ನು ತೆರೆದು ಬಿಟ್ಟೆವು.
ﭻﭼﭽﭾﭿﮀﮁﮂﮃﮄ
54:12 ನಾವು ಭೂಮಿಯಲ್ಲಿ ಚಿಲುಮೆಗಳನ್ನು ಹರಿಸಿದೆವು, ನಿಶ್ಚಯಿಸಲಾದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು.
ﮅﮆﮇﮈﮉﮊ
54:13 ನಾವು ಅವರನ್ನು (ನೂಹರನ್ನು) ಹಲಗೆಗಳು ಮತ್ತು ಮೂಳೆಗಳಿಂದ ಮಾಡಲ್ಪಟ್ಟ ಒಂದು ಹಡಗಿನಲ್ಲಿ ಸಾಗಿಸಿದೆವು.
ﮋﮌﮍﮎﮏﮐﮑ
54:14 ಅದು ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ನಿಷೇಧಿಸಲ್ಪಟ್ಟ ವ್ಯಕ್ತಿಯ(ನೂಹರ) ಪರವಾಗಿ ಪ್ರತಿಕಾರವಾಗಿತ್ತು.
ﮒﮓﮔﮕﮖﮗﮘ
54:15 ನಿಸ್ಸಂದೇಹವಾಗಿಯೂ ಆ ಹಡಗನ್ನು ನಾವು ಒಂದು ನಿದರ್ಶನವನ್ನಾಗಿ ಉಳಿಸಿಬಿಟ್ಟೆವು. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?
ﮙﮚﮛﮜﮝ
54:16 ಹೇಗಿತ್ತು ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ?
ﮞﮟﮠﮡﮢﮣﮤﮥ
54:17 ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳವಾಗಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
ﮦﮧﮨﮩﮪﮫﮬ
54:18 ಆದ್ ಜನಾಂಗವು ಸಹ (ಸತ್ಯವನ್ನು) ಸುಳ್ಳಾಗಿಸಿತು. ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?
ﮭﮮﮯﮰﮱﯓﯔﯕﯖﯗ
54:19 ನಾವು ಅವರ ಮೇಲೆ ಅಶುಭ ದಿನವೊಂದರಲ್ಲಿ ನಿರಂತರವಾದ ಉಗ್ರಚಂಡ ಮಾರುತವನ್ನು ಕಳುಹಿಸಿದೆವು.
ﯘﯙﯚﯛﯜﯝﯞ
54:20 ಬುಡಕಿತ್ತ ಖರ್ಜೂರ ಮರದ ದಿಂಡುಗಳAತೆ ಅದು ಜನರನ್ನು ಎತ್ತಿ ಎಸೆಯುತ್ತಿತ್ತು.
ﯟﯠﯡﯢﯣ
54:21 ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು ಹೇಗಿದ್ದವು?
ﯤﯥﯦﯧﯨﯩﯪﯫ
54:22 ಖಂಡಿತವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿರುವೆವು. ಇನ್ನುಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
ﯬﯭﯮﯯ
54:23 ಸಮೂದ್ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು.
ﯰﯱﯲﯳﯴﯵﯶﯷﯸﯹﯺ
54:24 ಅವರು ಹೇಳಿದರು; ನಮ್ಮಲ್ಲಿನ ಒಬ್ಬಂಟಿಗನಾದ ಒಬ್ಬ ವ್ಯಕ್ತಿಯನ್ನು ನಾವು ಅನುಸರಿಸುವುದೇ ? ಹಾಗಿದ್ದರೆ ಖಂಡಿತವಾಗಿಯೂ ನಾವು ದಾರಿಗೆಟ್ಟವರು ಮತ್ತು ತಿಳಿಗೇಡಿಗಳಾಗಿದ್ದೇವೆ.
ﯻﯼﯽﯾﯿﰀﰁﰂﰃﰄ
54:25 ನಮ್ಮ ನಡುವೆ ಕೇವಲ ಅವನ ಮೇಲೆ ಮಾತ್ರ ಸಂದೇಶ ಇಳಿಸಲಾಯಿತೇ ?ಅಲ್ಲ, ಅವನು ಸುಳ್ಳನಾದ ದುರಾಭಿಮಾನಿಯಾಗಿದ್ದಾನೆ.
ﰅﰆﰇﰈﰉﰊ
54:26 ಆದರೆ ಸುಳ್ಳುಗಾರನು, ಮತ್ತು ದುರಾಭಿಮಾನಿ ಯಾರೆಂದು ನಾಳೆ ಅವರಿಗೆ ತಿಳಿಯುವುದು.
ﰋﰌﰍﰎﰏﰐﰑﰒ
54:27 ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್) ನೀನು ಅವರನ್ನು ನಿರೀಕ್ಷಿಸುತ್ತಿರು ಹಾಗು ತಾಳ್ಮೆಯಿಂದಿರು.
ﭑﭒﭓﭔﭕﭖﭗﭘﭙﭚ
54:28 ನೀರನ್ನು ಅವರ (ಮತ್ತು ಒಂಟೆಯ) ನಡುವೆ ಹಂಚಲಾಗಿದೆ ಎಂದು ನೀವು ಅವರಿಗೆ ತಿಳಿಸಿರಿ. ಪ್ರತಿಯೊಬ್ಬನೂ ತನ್ನ ಸರದಿಗೆ ಹಾಜರಾಗಲಿ.
ﭛﭜﭝﭞﭟ
54:29 ಅನಂತರ ಅವರು ತಮ್ಮ ಓರ್ವ ಸಂಗಡಿಗನನ್ನು ಕರೆದರು. ಅವನು ಆಕ್ರಮಣ ಮಾಡಿ ಒಂಟೆಯ ಸ್ನಾಯುಗಳನ್ನು ಕತ್ತರಿಸಿ ಬಿಟ್ಟನು.
ﭠﭡﭢﭣﭤ
54:30 ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ?
ﭥﭦﭧﭨﭩﭪﭫﭬﭭ
54:31 ನಾವು ಅವರ ಮೇಲೆ ಒಂದು ಘೋರ ಆರ್ಭಟವನ್ನು ಕಳುಹಿಸಿದೆವು, ಆಗ ಅವರು ಕೊಟ್ಟಿಗೆಯವರು ತುಳಿದ ಕಸದಂತೆ ಹೊಟ್ಟಾಗಿಬಿಟ್ಟರು.
ﭮﭯﭰﭱﭲﭳﭴﭵ
54:32 ನಿಸ್ಸಂಶಯವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
ﭶﭷﭸﭹﭺ
54:33 ಲೂತರ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು.
ﭻﭼﭽﭾﭿﮀﮁﮂﮃﮄﮅ
54:34 ನಿಸ್ಸಂಶಯವಾಗಿಯು ನಾವು ಅವರ ಮೇಲೆ ಕಲ್ಲುಗಳನ್ನು ವರ್ಷಿಸುವ ಚಂಡಮಾರುತವನ್ನು ಕಳುಹಿಸಿದೆವು, ಆದರೆ ಲೂತರ ಕುಟುಂಬದ ಹೊರತು, ನಾವು ಅವರನ್ನು ನುಸುಕಿನ ವೇಳೆಯಲ್ಲಿ ರಕ್ಷಿಸಿದೆವು.
ﮆﮇﮈﮉﮊﮋﮌﮍﮎ
54:35 ನಮ್ಮ ವತಿಯ ಒಂದು ಅನುಗ್ರಹವಾಗಿ ಪ್ರತಿಯೊಬ್ಬ ಕೃತಜ್ಞತೆ ತೋರುವವನಿಗೆ ನಾವು ಇದೇರೀತಿ ಪ್ರತಿಫಲ ನೀಡುತ್ತೇವೆ.
ﮏﮐﮑﮒﮓﮔ
54:36 ನಿಜವಾಗಿಯೂ ಲೂತರು ತಮ್ಮ ಜನಾಂಗವನ್ನು ನಮ್ಮ ಶಿಕ್ಷೆಯ ಕುರಿತು ಎಚ್ಚರಿಸಿದ್ದರು. ಆದರೆ ಅವರು ಎಲ್ಲಾ ಎಚ್ಚರಿಕೆಗಳ ಕುರಿತು ಸಂದೇಹಪಟ್ಟರು.
ﮕﮖﮗﮘﮙﮚﮛﮜﮝﮞ
54:37 ನಿಶ್ಚಯವಾಗಿಯೂ ಅವರು ಅವನ (ಲೂತರ) ಅತಿಥಿಗಳ ಕುರಿತು ಅವನನ್ನು ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು. (ಹೇಳಿದೆವು) ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ.
ﮟﮠﮡﮢﮣﮤ
54:38 ಶಾಶ್ವತವಾದ ಶಿಕ್ಷೆಯು ಮುಂಜಾನೆ ವೇಳೆಯಲ್ಲಿ ಅವರನ್ನು ಆವರಿಸಿಬಿಟ್ಟಿತು.
ﮥﮦﮧﮨ
54:39 ಇನ್ನು ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ (ಎನ್ನಲಾಯಿತು)
ﮩﮪﮫﮬﮭﮮﮯﮰ
54:40 ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ?
ﮱﯓﯔﯕﯖﯗ
54:41 ಫಿರ್‌ಔನ್ ಕುಟುಂಬದ ಬಳಿಗೂ ಎಚ್ಚರಿಕೆ ನೀಡುವವರು ಬಂದಿದ್ದರು.
ﯘﯙﯚﯛﯜﯝﯞﯟ
54:42 ಆದರೆ ಅವರು ನಮ್ಮ ಸಕಲ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಬ್ಬ ಬಲಿಷ್ಠನೂ, ಸರ್ವಸಮರ್ಥನೂ ಹಿಡಿಯುವಂತೆ ಹಿಡಿದುಬಿಟ್ಟೆವು.
ﯠﯡﯢﯣﯤﯦﯧﯨﯩﯪ
54:43 (ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ ಉತ್ತಮರೇ ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮೆ ಲಿಖಿತಗೊಂಡಿದೆಯೇ?
ﯫﯬﯭﯮﯯﯰ
54:44 ಅಥವಾ ನಾವು ಜಯ ಸಾಧಿಸುವ ಪಂಗಡವಾಗಿದ್ದೇವೆAದು ಅವರು ಹೇಳುತ್ತಿದ್ದಾರೆಯೇ ?
ﯱﯲﯳﯴﯵ
54:45 ಸದ್ಯದಲ್ಲೇ ಈ (ಸತ್ಯನಿಷೇಧಿ) ಪಂಗಡವು ಸೋತು ಹೋಗುವುದು. ಹಾಗು ಅವರು ಬೆನ್ನು ತಿರುಗಿಸಿ ಓಡುವರು.
ﯶﯷﯸﯹﯺﯻﯼ
54:46 ಮಾತ್ರವಲ್ಲ ಅಂತ್ಯಗಳಿಗೆಯು ಅವರ ವಾಗ್ದತ್ತ ಸಮಯವಾಗಿದೆ ಹಾಗೂ ಆ ಅಂತ್ಯಗಳಿಗೆಯೂ ಅತ್ಯಂತ ಭೀಕರವೂ, ಅತಿ ಕಹಿಯೂ ಆಗಿದೆ,
ﯽﯾﯿﰀﰁﰂ
54:47 ನಿಸ್ಸಂದೇಹವಾಗಿಯೂ ಅಪರಾಧಿಗಳು ಮಾರ್ಗಭ್ರಷ್ಟತೆಯಲ್ಲಿ ಮತ್ತು ಹುಚ್ಚುತನದಲ್ಲಿ ಇದ್ದಾರೆ
ﰃﰄﰅﰆﰇﰈﰉﰊﰋﰌ
54:48 ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ ನರಕದ ಜ್ವಾಲೆಯ ಸ್ಪರ್ಶವನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು.
ﰍﰎﰏﰐﰑﰒ
54:49 ನಿಸ್ಸಂಶಯವಾಗಿಯೂ ನಾವು ಪ್ರತಿಯೊಂದು ವಸ್ತುವನ್ನು ಒಂದು ಪ್ರಮಾಣದಲ್ಲಿ ಸೃಷ್ಟಿಸಿದ್ದೇವೆ.
ﭑﭒﭓﭔﭕﭖﭗ
54:50 ನಮ್ಮ ಆಜ್ಞೆಯು ಕಣ್ಣು ರೆಪ್ಪೆ ಬಡಿದ ಹಾಗೆ, ಕೇವಲ ಒಂದೇ ಬಾರಿಯಾಗಿರುತ್ತದೆ.
ﭘﭙﭚﭛﭜﭝﭞ
54:51 ನಾವು ನಿಮ್ಮಂತಹ ಅನೇಕ ಸಮುದಾಯಗಳನ್ನು ನಾಶಪಡಿಸಿರುತ್ತೇವೆ, ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?
ﭟﭠﭡﭢﭣﭤ
54:52 ಅವರು ಮಾಡಿದ್ದೆಲ್ಲವೂ ಕರ್ಮಗ್ರಂಥದಲ್ಲಿ ಲಿಖಿತವಾಗಿದೆ.
ﭥﭦﭧﭨﭩ
54:53 ಚಿಕ್ಕದಿರಲಿ ದೊಡ್ಡದಿರಲಿ ಪ್ರತಿಯೊಂದು ವಿಷಯವನ್ನು ಬರೆದಿಡಲಾಗಿದೆ.
ﭪﭫﭬﭭﭮﭯ
54:54 ಖಂಡಿತವಾಗಿಯೂ ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನ ಗಳಲ್ಲೂ, ಕಾಲುವೆಗಳಲ್ಲೂ ಇರುವರು.
ﭰﭱﭲﭳﭴﭵﭶ
54:55 ಸರ್ವಸಮರ್ಥನಾದ ರಾಜಾಧಿಪತಿಯ ಸನ್ನಿಧಿಯಲ್ಲಿ ಸತ್ಯದ ಆಸನದಲ್ಲಿರುವರು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers