PDF —
29 ಆಯತ್ Medinan PDF
Built right in your browser — download starts automatically

ಸೂರಾ ಅಲ್-ಹದೀದ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಹದೀದ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಹದೀದ್ ಅನುವಾದ. ಸೂರಾ ಅಲ್-ಹದೀದ್ (Medinan) 29 ಆಯತ್.



29 ಆಯತ್ · Medinan · ಕನ್ನಡ
bismillah
ﯛﯜﯝﯞﯟﯠﯡﯢﯣﯤﯥ
57:1 ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.
ﯦﯧﯨﯩﯪﯫﯬﯭﯮﯯﯰﯱﯲﯳ
57:2 ಆಕಾಶಗಳ ಹಾಗು ಭೂಮಿಯ ಅಧಿಪತ್ಯವು ಅವನದೇ ಆಗಿದೆ. ಜೀವನನೀಡುವವನು ಹಾಗು ಮರಣ ಕೊಡುವವನು ಅವನೇ, ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ﯴﯵﯶﯷﯸﯹﯺﯻﯼﯽﯾ
57:3 ಆದಿಯು, ಅಂತ್ಯನು, ಪ್ರತ್ಯಕ್ಷನು, ಪರೋಕ್ಷನು ಅವನೇ, ಮತ್ತು ಅವನು ಸಕಲ ವಸ್ತುಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲﭳﭴﭵﭶﭷﭸ
57:4 ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ತರುವಾಯ ಅವನು ಸಿಂಹಾಸನಾರೂಢನಾದನು, ಭೂಮಿಯೊಳಗೆ ಪ್ರವೇಶಿಸುವ ಅದರಿಂದ ಹೊರಬರುವ, ಆಕಾಶದಿಂದ ಕೆಳಗಿಳಿಯುವ, ಮತ್ತು ಅದರಲ್ಲಿ ಏರಿ ಹೋಗುವ ಸಕಲವನ್ನೂ ಅವನು ಚೆನ್ನಾಗಿ ಬಲ್ಲನು ನೀವೆಲ್ಲೇ ಇದ್ದರೂ ಅವನು ನಿಮ್ಮ ಜೊತೆಗಿರುವನು ಮತ್ತು ನೀವು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ನೋಡುವವನಾಗಿದ್ದಾನೆ.
ﭹﭺﭻﭼﭽﭾﭿﮀﮁﮂ
57:5 ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅವನಿಗೇ ಆಗಿದೆ ಮತ್ತು ಸಕಲ ಕಾರ್ಯಗಳು ಅವನೆಡೆಗೇ ಮರಳಿಸಲಾಗುತ್ತವೆ.
ﮃﮄﮅﮆﮇﮈﮉﮊﮋﮌﮍﮎﮏﮐ
57:6 ಅವನೇ ರಾತ್ರಿಯನ್ನು ಹಗಲಿನೊಳಗೆ, ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಅವನು ಹೃದಯಗಳಲ್ಲಿರುವ ರಹಸ್ಯಗಳನ್ನು ಚೆನ್ನಾಗಿ ಅರಿಯುತ್ತಾನೆ.
ﮑﮒﮓﮔﮕﮖﮗﮘﮙﮚﮛﮜﮝﮞﮟﮠﮡ
57:7 ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ ಮತ್ತು ಅವನು ನಿಮ್ಮನ್ನು ಯಾವ ಸಂಪತ್ತಿನ ವಾರೀಸುದಾರರನ್ನಾಗಿ ಮಾಡಿರುವನೋ ಅದರಿಂದ ಖರ್ಚು ಮಾಡಿರಿ. ನಿಮ್ಮ ಪೈಕಿ ವಿಶ್ವಾಸವಿರಿಸಿ, ದಾನಧರ್ಮಗಳನ್ನು ನೀಡಿದವರಿಗೆ ಮಹಾ ಪ್ರತಿಫಲವಿದೆ.
ﮢﮣﮤﮥﮦﮧﮨﮩﮪﮫﮬﮭﮮﮯﮰﮱ
57:8 ನೀವು ಅಲ್ಲಾಹನಲ್ಲಿ ವಿಶ್ವಾಸವಿಡದಿರಲು ನಿಮಗೇನಾಗಿದೆ? ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿರಿಸಲೆಂದು ಈ ಸಂದೇಶವಾಹಕರು ನಿಮ್ಮನ್ನು ಕರೆಯುತ್ತಿದ್ದಾರೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ಅವನು (ಅಲ್ಲಾಹನು) ನಿಮ್ಮಿಂದ ಕರಾರನ್ನು ಪಡೆದುಕೊಂಡಿರುವನು.
ﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥ
57:9 ಅಲ್ಲಾಹನೇ ನಿಮ್ಮನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರಲೆಂದು ತನ್ನ ದಾಸನ ಮೇಲೆ ಸುಸ್ಪಷ್ಟವಾದ ಸೂಕ್ತಿಗಳನ್ನು ಅವತೀರ್ಣಗೊಳಿಸಿದ್ದಾನೆ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಮೇಲೆ ಕೃಪಾಳುವೂ, ಕರುಣಾನಿಧಿಯೂ ಆಗಿದ್ದಾನೆ
ﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎﰏ
57:10 ನಿಮಗೇನಾಗಿಬಿಟ್ಟಿದೆ? ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವಲ್ಲ! ವಾಸ್ತವದಲ್ಲಿ ಆಕಾಶಗಳ ಹಾಗು ಭೂಮಿಯ ಒಡೆತನವು ಅಲ್ಲಾಹನದ್ದಾಗಿದೆ. ನಿಮ್ಮ ಪೈಕಿ ಮಕ್ಕಾಃ ವಿಜಯದ ಮೊದಲು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರುವವರು, ಯುದ್ಧ ಮಾಡಿರುವವರು, ವಿಜಯದ ನಂತರ ಖರ್ಚು ಮಾಡಿರುವ ಹಾಗು ಯುದ್ಧ ಮಾಡಿರುವವರಿಗಿಂತ ಶ್ರೇಷ್ಠ ಪದವಿಯುಳ್ಳವರಾಗಿದ್ದಾರೆ. ಆದರೆ ಅಲ್ಲಾಹನ ಒಳಿತಿನ ವಾಗ್ದಾನವಂತು ಎಲ್ಲರೊಂದಿಗೂ ಇದೆ ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ.
ﰐﰑﰒﰓﰔﰕﰖﰗﰘﰙﰚﰛﰜ
57:11 ಅಲ್ಲಾಹನಿಗೆ ಉತ್ತಮ ಸಾಲ ಕೊಡುವವನಾರಿದ್ದಾನೆ ? ಬಳಿಕ ಅಲ್ಲಾಹನು ಅದನ್ನು ಇಮ್ಮಡಿಗೊಳಿಸಿ ಅವನಿಗೆ ಕೊಡುವನು, ಹಾಗು ಅವನಿಗೆ ಗೌರವಾನ್ವಿತ ಪ್ರತಿಫಲವಿದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩ
57:12 ಅಂದು ನೀವು ಸತ್ಯವಿಶ್ವಾಸಿಗಳನ್ನೂ, ಸತ್ಯವಿಶ್ವಾಸಿನಿಯರನ್ನೂ ಅವರ ಪ್ರಕಾಶವು ಮುಂದಿನಿAದಲೂ, ಬಲಗಡೆಯಿಂದಲೂ, ಸಾಗುತ್ತಿರುವುದನ್ನು ಕಾಣುವಿರಿ, ಇಂದು ನಿಮಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳ ಶುಭವಾರ್ತೆಯಿದೆ. ಅವುಗಳಲ್ಲಿ ಅವರು ಶಾಶ್ವತರಾಗಿರುವರು, ಇದುವೇ ಮಹಾ ಯಶಸ್ಸು.
ﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆ
57:13 ಅಂದು ಕಪಟವಿಶ್ವಾಸಿ ಪುರುಷರು ಮತ್ತು ಸ್ತಿçÃಯರು ಸತ್ಯವಿಶ್ವಾಸಿಗಳೊಂದಿಗೆ ಹೇಳುವರು; ನೀವು ನಮ್ಮನ್ನು ತುಸು ಕಾಯಿರಿ, ನಾವು ಸಹ ನಿಮ್ಮ ಪ್ರಕಾಶದಿಂದ ಸ್ವಲ್ಪ ಪ್ರಕಾಶವನ್ನು ಪಡೆದುಕೊಳ್ಳುತ್ತೇವೆ. ಹೇಳಲಾಗುವುದು, ನೀವು ನಿಮ್ಮ ಹಿಂದಕ್ಕೆ ಮರಳಿ ಪ್ರಕಾಶವನ್ನು ಅರಸಿರಿ. ಬಳಿಕ ಅವರ ನಡುವೆ ಒಂದು ಬಾಗಿಲು ಇರುವಂತಹ ಅಡ್ಡ ಗೋಡೆಯನ್ನು ನಿರ್ಮಿಸಲಾಗುವುದು, ಅದರ ಒಳಭಾಗದಲ್ಲಿ ಕಾರುಣ್ಯ ಮತ್ತು ಅದರ ಹೊರಭಾಗದಲ್ಲಿ ಶಿಕ್ಷೆಯಿರುವುದು.
ﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜ
57:14 ಕಪಟ ವಿಶ್ವಾಸಿಗಳು ಗೋಗರೆಯುತ್ತಾ ಹೇಳುವರು; ನಾವು ನಿಮ್ಮ ಜೊತೆಯಲ್ಲಿ ಇದ್ದಿರಲಿಲ್ಲವೇ? ಹೌದು ! ಆದರೆ ನೀವು ಸ್ವತಃ ನಿಮ್ಮನ್ನೇ ಆಪತ್ತಿನಲ್ಲಿ ಸಿಲುಕಿಸಿದ್ದಿರಿ ಮತ್ತು (ಮುಸ್ಲಿಮರಿಗೆ ಕೇಡನ್ನು) ನಿರೀಕ್ಷಿಸುತ್ತಿದ್ದಿರಿ ಹಾಗು ಅನುಮಾನ, ಸಂದೇಹಗಳನ್ನು ತೋರಿಸುತ್ತಿದ್ದಿರಿ ಮಿಥ್ಯ ಆಸೆ ಆಕಾಂಕ್ಷೆಗಳು ನಿಮ್ಮನ್ನು ಮೋಸಗೊಳಿಸಿದವು, ಕೊನೆಗೆ ಅಲ್ಲಾಹನ ಆಜ್ಞೆಯು (ಮರಣವು) ಬಂದು ಬಿಟ್ಟಿತು, ಹಾಗು ಅಲ್ಲಾಹನ ವಿಚಾರದಲ್ಲಿ ನಿಮ್ಮನ್ನು ಆ ಮಹಾ ವಂಚಕ ಪಿಶಾಚಿಯು ವಂಚನೆಯಲ್ಲೇ ಇರಿಸಿಬಿಟ್ಟನು.
ﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯ
57:15 ಆದ್ದರಿಂದ ಇಂದು ನಿಮ್ಮಿಂದಾಗಲಿ (ಕಪಟಿಗಳಿಂದ) ಸತ್ಯ ನಿಷೇಧಿಸಿದವರಿಂದಾಗಲಿ ಯಾವ ಪ್ರಾಯಶ್ಚಿತವನ್ನೂ ಸ್ವೀಕರಿಸಲಾಗದು. ನಿಮ್ಮ ನೆಲೆಯು ನರಕಾಗ್ನಿಯಾಗಿದೆ. ಅದುವೇ ನಿಮ್ಮ ಆಶ್ರಯತಾಣ, ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿದೆ.
ﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯ
57:16 ಏನು; ಸತ್ಯವಿಶ್ವಾಸವಿರಿಸಿದವರಿಗೆ ಅವರ ಹೃದಯಗಳು ಅಲ್ಲಾಹನ ಸ್ಮರಣೆಯಿಂದ ಮತ್ತು ಅವರ ಮೇಲೆ ಅವತೀರ್ಣಗೊಂಡಿರುವ ಸತ್ಯದಿಂದ ಕರಗುವ ಕಾಲ ಇನ್ನೂ ಬಂದಿಲ್ಲವೇ? ಅವರು ಇದಕ್ಕಿಂತ ಮೊದಲು ಗ್ರಂಥ ನೀಡಲ್ಪಟ್ಟವರಂತೆ ಆಗದಿರಲಿ, ಕೊನೆಗೆ ಅವರ ಮೇಲೆ ದೀರ್ಘ ಕಾಲ ಕಳೆದಾಗ ಅವರ ಹೃದಯಗಳು ಕಠೋರವಾದವು ಮತ್ತು ಅವರಲ್ಲಿ ಅನೇಕ ಮಂದಿ ಧಿಕ್ಕಾರಿಗಳಾದರು.
ﯰﯱﯲﯳﯴﯵﯶﯷﯸﯹﯺﯻﯼﯽﯾ
57:17 ತಿಳಿದುಕೊಳ್ಳಿರಿ, ಭೂಮಿಯನ್ನು ಅದರ ನಿರ್ಜೀವದ ಬಳಿಕ ಜೀವಂತಗೊಳಿಸುವವನು ಅಲ್ಲಾಹನೇ ನೀವು ಅರಿತುಕೊಳ್ಳಲೆಂದು ನಾವು ನಿದರ್ಶನಗಳನ್ನು ನಿಮಗೆ ವಿವರಿಸಿಕೊಟ್ಟಿದ್ದೇವೆ.
ﯿﰀﰁﰂﰃﰄﰅﰆﰇﰈﰉﰊﰋ
57:18 ನಿಸ್ಸಂದೇಹವಾಗಿಯು ದಾನಧರ್ಮ ನೀಡುವ ಪುರುಷರು ಮತ್ತು ಸ್ತಿçÃಯರು ಹಾಗು ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡಿದವರಿಗೆ ಅದನ್ನು ಇಮ್ಮಡಿಗೊಳಿಸಲಾಗುವುದು ಮತ್ತು ಅವರಿಗೆ ಗೌರವಾನ್ವಿತ ಪ್ರತಿಫಲವಿದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧ
57:19 ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದವರೇ ತಮ್ಮ ಪ್ರಭುವಿನ ಸನ್ನಿಧಿಯಲ್ಲಿ ಸತ್ಯವಂತರೂ ಮತ್ತು ಸಾಕ್ಷಿಗಳೂ ಆಗಿದ್ದಾರೆ, ಅವರಿಗೆ ಅವರ ಪ್ರತಿಫಲವೂ, ಅವರ ಪ್ರಕಾಶವೂ ಇದೆ. ಸತ್ಯನಿಷೇಧಿಸಿ ನಮ್ಮ ಸೂಕ್ತಿಗಳನ್ನು ಸುಳ್ಳಾಗಿಸಿದವರೇ ನರಕದವರಾಗಿದ್ದಾರೆ.
ﭨﭩﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒ
57:20 ತಿಳಿಯಿರಿ; ಇಹಲೋಕದ ಜೀವನವು ಆಟ, ವಿನೋದ, ಶೃಂಗಾರ ಮತ್ತು ಪರಸ್ಪರರ ನಡುವೆ ಜಂಭ ಕೊಚ್ಚಿಕೊಳ್ಳುವುದು, ಸಂಪತ್ತು ಸಂತಾನಗಳಲ್ಲಿ ಪೈಪೋಟಿ ನಡೆಸುವುದು ಮಾತ್ರವಾಗಿದೆ. ಅದರ ಉಪಮೆಯು ಒಂದು ಮಳೆಯಂತಿದೆ. ಅದ್ದರಿಂದ ಬೆಳೆದಿರುವ ಕೃಷಿಯು ಕೃಷಿಕರನ್ನು ಆಕರ್ಷಿಸುತ್ತದೆ, ಅನಂತರ ಅದು ಬಲಿತು ಹಳದಿ ವರ್ಣಕ್ಕೆ ತಿರುಗಿರುವುದಾಗಿ ನೀವು ಕಾಣುವಿರಿ, ಬಳಿಕ ಅದು ಒಣಗಿ ಹೊಟ್ಟಾಗಿಬಿಡುತ್ತದೆ. ಪರಲೋಕದಲ್ಲಿ (ದುರ್ಜನರಿಗೆ) ಅತ್ಯುಗ್ರ ಶಿಕ್ಷೆಯಿದೆ. ಹಾಗು (ಸಜ್ಜನರಿಗೆ) ಅಲ್ಲಾಹನ ಕಡೆಯ ಕ್ಷಮೆ ಹಾಗು ಸಂಪ್ರೀತಿ ಇದೆ. ಮತ್ತು ಈ ಇಹಲೋಕದ ಜೀವನವು ವಂಚನಾತ್ಮಕ ಸರಕಲ್ಲದೇ ಬೇರೇನು ಅಲ್ಲ.
ﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮ
57:21 (ಓ ನನ್ನ ದಾಸರೇ) ನೀವು ತಮ್ಮ ಪ್ರಭುವಿನ ಕ್ಷಮೆ ಮತ್ತು ಆಕಾಶ, ಭೂಮಿಗಳಷ್ಟೂ ವಿಶಾಲವುಳ್ಳ ಸ್ವರ್ಗೋದ್ಯಾನದ ಕಡೆಗೆ ಧಾವಿಸಿರಿ, ಇದು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿದವರಿಗೆ ಸಿದ್ಧಗೊಳಿಸಲಾಗಿದೆ, ಇದು ಅಲ್ಲಾಹನ ಅನುಗ್ರಹವಾಗಿದೆ, ಅವನು ಇದನ್ನು ತಾನಿಚ್ಛಿದವರಿಗೆ ದಯಪಾಲಿಸುವನು ಮತ್ತು ಅಲ್ಲಾಹನು ಮಹಾ ಅನುಗ್ರಹವಂತನಾಗಿದ್ದಾನೆ.
ﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦ
57:22 ಭೂಮಿಯಲ್ಲಾಗಲಿ ಸ್ವತಃ ನಿಮ್ಮಲ್ಲಾಗಲಿ ಸಂಭವಿಸುವ ಯಾವುದೇ ವಿಪತ್ತು ನಾವು ಅವನನ್ನು ಸೃಷ್ಟಿಸುವ ಮುಂಚೆ ಅದನ್ನು ಒಂದು ಗ್ರಂಥದಲ್ಲಿ ದಾಖಲಿಸದೇ ಸಂಭವಿಸುವುದಿಲ್ಲ. ಇದು ಅಲ್ಲಾಹನಿಗೆ ಅತೀ ಸುಲಭವಾಗಿದೆ.
ﯧﯨﯩﯪﯫﯬﯭﯮﯯﯰﯱﯲﯳﯴﯵﯶﯷ
57:23 ಇದೇಕೆಂದರೆ ನಿಮಗುಂಟಾದ ನಷ್ಟದ ಬಗ್ಗೆ ನೀವು ವ್ಯಥೆ ಪಡಬಾರದೆಂದು ಅಥವ ನಿಮಗೆ ದಯಪಾಲಿಸಲಾದ ವಸ್ತುವಿನ ಮೇಲೆ ನೀವು ಹಿಗ್ಗಬಾರದೆಂದಾಗಿದೆ. ಗರ್ವತೋರುವ ದುರಭಿಮಾನಿಗಳನ್ನು ಅಲ್ಲಾಹನು ಮೆಚ್ಚುವುದಿಲ್ಲ.
ﯸﯹﯺﯻﯼﯽﯾﯿﰀﰁﰂﰃﰄﰅ
57:24 ಅವರು ಸ್ವತಃ ಜಿಪುಣತೆ ತೋರುತ್ತಾರೆ ಹಾಗು ಇತರರಿಗೂ ಜಿಪುಣತೆಯ ಆದೇಶ ನೀಡುತ್ತಾರೆ. ಕೇಳಿರಿ ! ಯಾರು (ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದರಿಂದ) ವಿಮುಖನಾಗುತ್ತಾನೋ, ಅಲ್ಲಾಹನು ನಿರಪೇಕ್ಷಕನೂ ಸ್ತುತ್ಯರ್ಹನೂ ಆಗಿದ್ದಾನೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯ
57:25 ನಿಶ್ಚಯವಾಗಿಯು ನಾವು ನಮ್ಮ ಸಂದೇಶವಾಹಕರನ್ನು ಸುಸ್ಪಷ್ಟ ಪುರಾವೆಗಳೊಂದಿಗೆ ಕಳುಹಿಸಿದ್ದೇವೆ ಜನರು ನ್ಯಾಯದೊಂದಿಗೆ ಸ್ಥಿರವಾರಗಿಲೆಂದು ನಾವು ಅವರೊಂದಿಗೆ ಗ್ರಂಥವನ್ನೂ, ತಕ್ಕಡಿಯನ್ನೂ, ಅವತೀರ್ಣಗೊಳಿಸಿದೆವು. ಹಾಗು ನಾವು ಕಬ್ಬಿಣವನ್ನು ಇಳಿಸಿದೆವು, ಅದರಲ್ಲಿ ಪ್ರಬಲವಾದ ಶಕ್ತಿಯಿದೆ ಮತ್ತು ಜನರಿಗೆ ಇನ್ನೂ ಅನೇಕ ಪ್ರಯೋಜನಗಳಿವೆ, ಇದು ಯಾರು ಅಲ್ಲಾಹನನ್ನು ಕಾಣದೇ ಅವನಿಗೆ ಮತ್ತು ಅವನ ಸಂದೇಶವಾಹಕರಿಗೆ ಸಹಾಯ ಮಾಡುತ್ತಾನೆಂದು ತಿಳಿಯಲೆಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವಶಕ್ತನೂ ಪ್ರತಾಪಶಾಲಿಯೂ ಆಗಿದ್ದಾನೆ.
ﭰﭱﭲﭳﭴﭵﭶﭷﭸﭹﭺﭻﭼﭽﭾﭿﮀ
57:26 ನಿಸ್ಸಂಶಯವಾಗಿಯೂ ನಾವು ನೂಹರನ್ನು ಮತ್ತು ಇಬ್ರಾಹೀಮರನ್ನು ಸಂದೇಶವಾಹಕರಾಗಿ ಕಳುಹಿಸಿದೆವು, ಮತ್ತು ಅವರಿಬ್ಬರ ಸಂತತಿಗಳಲ್ಲಿ ದೌತ್ಯವನ್ನು, ಗ್ರಂಥವನ್ನು ನಿಶ್ಚಯಿಸಿದೆವು. ಅವರ ಪೈಕಿ ಕೆಲವರು ಸನ್ಮಾರ್ಗಿಗಳಾದರೆ ಅವರಲ್ಲಿ ಅಧಿಕ ಮಂದಿ ದುರಾಚಾರಿಗಳಾದರು.
ﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬ
57:27 ಅವರ ಬಳಿಕ ನಾವು ಒಬ್ಬರ ನಂತರ ಒಬ್ಬರಂತೆ ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವು ಹಾಗು ಮರ್ಯಮಳ ಪುತ್ರ ಈಸಾರವರನ್ನೂ ಕಳುಹಿಸಿದೆವು ನಾವು ಅವರಿಗೆ ಇಂಜೀಲ(ಗ್ರAಥ)ನ್ನು ದಯಪಾಲಿಸಿದೆವು ಮತ್ತು ಅವರನ್ನು ಅನುಸರಿಸುವವರ ಹೃದಯಗಳಲ್ಲಿ ಅನುಕಂಪವನ್ನೂ ಕಾರುಣ್ಯವನ್ನುಂಟು ಮಾಡಿದೆವು. ಆದರೆ ಅವರು ಅಲ್ಲಾಹನ ಸಂತೃಪ್ತಿಯನ್ನು ಹಂಬಲಿಸುತ್ತಾ ಸನ್ಯಾಸತ್ವವನ್ನು ಹೊಸದಾಗಿ ಉಂಟು ಮಾಡಿಕೊಂಡರು. ವಸ್ತುತಃ ನಾವು ಅದನ್ನು ಅವರ ಮೇಲೆ ವಿಧಿಸಿರಲಿಲ್ಲ. ಆದರೆ ಅವರದನ್ನು ಪಾಲಿಸಬೇಕಾದ ರೀತಿಯಲ್ಲಿ ಪಾಲಿಸಲಿಲ್ಲ, ಆ ಬಳಿಕವೂ ನಾವು ಅವರ ಪೈಕಿ ವಿಶ್ವಾಸವಿರಿಸಿದವರಿಗೆ ಅವರ ಪ್ರತಿಫಲವನ್ನು ಕರುಣಿಸಿದೆವು ಮತ್ತು ಅವರಲ್ಲಿ ಅಧಿಕ ಮಂದಿ ದುರಾಚಾರಿಗಳಾಗಿರುವರು.
ﮭﮮﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤ
57:28 ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ಅವನು ತನ್ನ ಕಾರುಣ್ಯದಿಂದ ಇಮ್ಮಡಿ ಪಾಲನ್ನು ನಿಮಗೆ ದಯಪಾಲಿಸುವನು. ಮತ್ತು ಪ್ರಕಾಶವನ್ನು ನೀಡುವನು, ಅದರ ಬೆಳಕಿನಲ್ಲಿ ನೀವು ಮುಂದೆ ಸಾಗುವಿರಿ, ಮತ್ತು ನಿಮ್ಮ ಪಾಪವನ್ನೂ ಕ್ಷಮಿಸುವನು, ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು.
ﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼ
57:29 ಇದು ಗ್ರಂಥದವರು ತಾವು ಅಲ್ಲಾಹನ ಅನುಗ್ರಹದ ಯಾವುದೇ ಪಾಲನ್ನೂ ಸಹ ತಮ್ಮ ಅಧೀನದಲ್ಲಿರಿಸಿಕೊಳ್ಳಲು ತಮಗೆ ಸಾಧ್ಯವಾಗದು ಎಂಬುದನ್ನು ಅರಿತುಕೊಳ್ಳಲೆಂದಾಗಿದೆ, ಮತ್ತು ಸಕಲ ಅನುಗ್ರಹವು ಅಲ್ಲಾಹನ ಕೈಯಲ್ಲಿದೆ ಅವನು ಇಚ್ಚಿಸುವವರಿಗೆ ಅದನ್ನು ನೀಡುವನು ಅಲ್ಲಾಹನು ಮಹಾ ಅನುಗ್ರಹದಾತನಾಗಿರುವನು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers