ಸೂರಾ ಅತ್-ತೂರ್ ಅರೇಬಿಕ್ ಮತ್ತು ಕನ್ನಡ
ಸೂರಾ ಅತ್-ತೂರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (49 ಆಯತ್ — مكية). ಅತ್-ತೂರ್ ಆಲಿಸಿ, ಅತ್-ತೂರ್ ಅನುವಾದ, ಅತ್-ತೂರ್ mp3, ಅತ್-ತೂರ್ pdf.ಸೂರಾ ಅತ್-ತೂರ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
إِنَّ عَذَابَ رَبِّكَ لَوَاقِعٌ ٧
📖 ಅನುವಾದ
ಆಯತ್ 7
ನಿಸ್ಸಂದೇಹವಾಗಿಯು ನಿಮ್ಮ ಪ್ರಭುವಿನ ಯಾತನೆಯು ಸಂಭವಿಸಲಿದೆ.
الَّذِينَ هُمْ فِي خَوْضٍ يَلْعَبُونَ ١٢
📖 ಅನುವಾದ
ಆಯತ್ 12
ಅವರು ವ್ಯರ್ಥ ಮಾತುಗಳಲ್ಲಿ ಮಗ್ನರಾಗಿ ಆಟವಾಡುತ್ತಾರೆ.
يَوْمَ يُدَعُّونَ إِلَىٰ نَارِ جَهَنَّمَ دَعًّا ١٣
📖 ಅನುವಾದ
ಆಯತ್ 13
ಅಂದು ಅವರನ್ನು ತಳ್ಳುತ್ತಾ ನರಕಾಗ್ನಿಯೆಡೆಗೆ ತರಲಾಗುವುದು.
هَٰذِهِ النَّارُ الَّتِي كُنتُم بِهَا تُكَذِّبُونَ ١٤
📖 ಅನುವಾದ
ಆಯತ್ 14
ನೀವು ಸುಳ್ಳಾಗಿಸುತ್ತಿದ್ದ ಆ ನರಕ ಇದುವೇ ಆಗಿದೆ.
أَفَسِحْرٌ هَٰذَا أَمْ أَنتُمْ لَا تُبْصِرُونَ ١٥
📖 ಅನುವಾದ
ಆಯತ್ 15
ಏನು ಇದು ಮಾಟ ಆಗಿದೆಯೇ? ಅಥವ ನಿಮಗೆ ಕಾಣುವುದಿಲ್ಲವೇ?
اصْلَوْهَا فَاصْبِرُوا أَوْ لَا تَصْبِرُوا سَوَاءٌ عَلَيْكُمْ ۖ إِنَّمَا تُجْزَوْنَ مَا كُنتُمْ تَعْمَلُونَ ١٦
📖 ಅನುವಾದ
ಆಯತ್ 16
ಈ ನರಕದೊಳಗೆ ನೀವು ಪ್ರವೇಶಿಸಿರಿ. ಇನ್ನು ನೀವು ಸಹನೆ ವಹಿಸಿದರೂ, ಸಹನೆ ವಹಿಸದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿದೆ, ನಿಜವಾಗಿಯು ನಿಮಗೆ ನಿಮ್ಮ ಕೃತ್ಯಗಳ ಪ್ರತಿಫಲವನ್ನೇ ನೀಡಲಾಗುವುದು.
إِنَّ الْمُتَّقِينَ فِي جَنَّاتٍ وَنَعِيمٍ ١٧
📖 ಅನುವಾದ
ಆಯತ್ 17
ಖಂಡಿತವಾಗಿಯು ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲೂ ಮತ್ತು ಸುಖಾನುಗ್ರಹಗಳಲ್ಲೂ ಇರುವರು.
فَاكِهِينَ بِمَا آتَاهُمْ رَبُّهُمْ وَوَقَاهُمْ رَبُّهُمْ عَذَابَ الْجَحِيمِ ١٨
📖 ಅನುವಾದ
ಆಯತ್ 18
ಅವರ ಪ್ರಭುವು ಅವರಿಗೆ ದಯಪಾಲಿಸಿರುವು ದರಲ್ಲಿ ಸುಖಾನುಭವಿಸುವರು. ಅವರ ಪ್ರಭುವು ಅವರನ್ನು ನರಕದ ಯಾತನೆಯಿಂದ ರಕ್ಷಿಸುವನು.
كُلُوا وَاشْرَبُوا هَنِيئًا بِمَا كُنتُمْ تَعْمَلُونَ ١٩
📖 ಅನುವಾದ
ಆಯತ್ 19
(ಹೇಳಲಾಗುವುದು) ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ತಿನ್ನಿರಿ ಮತ್ತು ಕುಡಿಯಿರಿ.
مُتَّكِئِينَ عَلَىٰ سُرُرٍ مَّصْفُوفَةٍ ۖ وَزَوَّجْنَاهُم بِحُورٍ عِينٍ ٢٠
📖 ಅನುವಾದ
ಆಯತ್ 20
ಅವರು ಸಾಲು ಸಾಲಾಗಿ ಇರಿಸಲಾದ ಅಲಂಕೃತ ಮಂಚಗಳ ಮೇಲೆ ದಿಂಬುಗಳಿಗೆ ಒರಗಿರುವರು ಮತ್ತು ನಾವು ಅವರನ್ನು ವಿಶಾಲ ನಯನವುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
وَالَّذِينَ آمَنُوا وَاتَّبَعَتْهُمْ ذُرِّيَّتُهُم بِإِيمَانٍ أَلْحَقْنَا بِهِمْ ذُرِّيَّتَهُمْ وَمَا أَلَتْنَاهُم مِّنْ عَمَلِهِم مِّن شَيْءٍ ۚ كُلُّ امْرِئٍ بِمَا كَسَبَ رَهِينٌ ٢١
📖 ಅನುವಾದ
ಆಯತ್ 21
ಸತ್ಯವಿಶ್ವಾಸಿಗಳನ್ನು ಹಾಗು ಸತ್ಯವಿಶ್ವಾಸದಲ್ಲಿ ಅವರನ್ನು ಅನುಸರಿಸಿದ ಅವರ ಸಂತತಿಗಳನ್ನು ನಾವು ಅವರೊಂದಿಗೆ (ಸ್ವರ್ಗದಲ್ಲಿ) ಸೇರಿಸುವೆವು ಮತ್ತು ಅವರ ಕರ್ಮಗಳಿಂದ ಏನನ್ನು ಕಡಿತಗೊಳಿಸಲಾರೆವು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ಮಗಳಿಗೆ ಗಿರವಿಯಾಗಿದ್ದಾನೆ.
وَأَمْدَدْنَاهُم بِفَاكِهَةٍ وَلَحْمٍ مِّمَّا يَشْتَهُونَ ٢٢
📖 ಅನುವಾದ
ಆಯತ್ 22
ನಾವು ಅವರಿಗೆ ಹಣ್ಣು ಹಂಪಲುಗಳನ್ನು ಮತ್ತು ಅವರಿಚ್ಛಿಸುವ ಮಾಂಸವನ್ನೂ ಸಮೃದ್ಧವಾಗಿ ನೀಡುವೆವು.
يَتَنَازَعُونَ فِيهَا كَأْسًا لَّا لَغْوٌ فِيهَا وَلَا تَأْثِيمٌ ٢٣
📖 ಅನುವಾದ
ಆಯತ್ 23
ನಾವು ಅವರಿಗೆ ಹಣ್ಣು ಹಂಪಲುಗಳನ್ನು ಮತ್ತು ಅವರಿಚ್ಛಿಸುವ ಮಾಂಸವನ್ನೂ ಸಮೃದ್ಧವಾಗಿ ನೀಡುವೆವು.
۞ وَيَطُوفُ عَلَيْهِمْ غِلْمَانٌ لَّهُمْ كَأَنَّهُمْ لُؤْلُؤٌ مَّكْنُونٌ ٢٤
📖 ಅನುವಾದ
ಆಯತ್ 24
ಅವರ ಸೇವೆಗಾಗಿ ಹರೆಯದ ಬಾಲಕರು ಅವರ ಸುತ್ತ ಸುತ್ತುತ್ತಲಿರುವರು. ಅವರು ಬಚ್ಚಿಡಲಾದ ಮುತ್ತುಗಳಂತೆ ಸುಂದರವಾಗಿರುವರು.
وَأَقْبَلَ بَعْضُهُمْ عَلَىٰ بَعْضٍ يَتَسَاءَلُونَ ٢٥
📖 ಅನುವಾದ
ಆಯತ್ 25
ಅವರು ಅಭಿಮುಖವಾಗಿ ಪರಸ್ಪರರೊಡನೆ ಪ್ರಶ್ನಿಸುವರು.
قَالُوا إِنَّا كُنَّا قَبْلُ فِي أَهْلِنَا مُشْفِقِينَ ٢٦
📖 ಅನುವಾದ
ಆಯತ್ 26
ಅವರು ಹೇಳುವರು; ನಾವು ಈ ಮೊದಲು (ಭೂಲೋಕದಲ್ಲಿ) ನಮ್ಮ ಕುಟುಂಬದವರ ನಡುವೆ ಭಯಪಡುತ್ತಿದ್ದೆವು.
فَمَنَّ اللَّهُ عَلَيْنَا وَوَقَانَا عَذَابَ السَّمُومِ ٢٧
📖 ಅನುವಾದ
ಆಯತ್ 27
ಆದರೆ ಅಲ್ಲಾಹನು ನಮ್ಮ ಮೇಲೆ ಮಹಾ ಉಪಕಾರವನ್ನು ಮಾಡಿದನು ಹಾಗು ಅತ್ಯುಷ್ಣ ಗಾಳಿಯ ಯಾತನೆಯಿಂದ ನಮ್ಮನ್ನು ರಕ್ಷಿಸಿದನು.
إِنَّا كُنَّا مِن قَبْلُ نَدْعُوهُ ۖ إِنَّهُ هُوَ الْبَرُّ الرَّحِيمُ ٢٨
📖 ಅನುವಾದ
ಆಯತ್ 28
ಖಂಡಿತವಾಗಿಯೂ ನಾವು ಇದಕ್ಕೆ ಮೊದಲು ಭೂಲೋಕದಲ್ಲಿ ಅವನ ಆರಾಧನೆಯನ್ನೇ ಮಾಡುತ್ತಿದ್ದೆವು. ನಿಸ್ಸಂಶಯವಾಗಿಯು ಅವನು ಮಹಾ ಉಪಕಾರಿಯು ಕರುಣಾನಿಧಿಯು ಆಗಿರುವನು.
فَذَكِّرْ فَمَا أَنتَ بِنِعْمَتِ رَبِّكَ بِكَاهِنٍ وَلَا مَجْنُونٍ ٢٩
📖 ಅನುವಾದ
ಆಯತ್ 29
ಆದ್ದರಿಂದ ನೀವು ಉಪದೇಶಿಸುತ್ತಿರಿ. ನೀವು ತಮ್ಮ ಪ್ರಭುವಿನ ಅನುಗ್ರಹದಿಂದ ಜ್ಯೋತಿಷ್ಯರೂ, ಹುಚ್ಚರೂ ಅಲ್ಲ.
أَمْ يَقُولُونَ شَاعِرٌ نَّتَرَبَّصُ بِهِ رَيْبَ الْمَنُونِ ٣٠
📖 ಅನುವಾದ
ಆಯತ್ 30
ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
قُلْ تَرَبَّصُوا فَإِنِّي مَعَكُم مِّنَ الْمُتَرَبِّصِينَ ٣١
📖 ಅನುವಾದ
ಆಯತ್ 31
ಹೇಳಿರಿ ನೀವು ಕಾಯುತ್ತಿರಿ, ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಕಾಯುತ್ತಿರುವೆನು.
أَمْ تَأْمُرُهُمْ أَحْلَامُهُم بِهَٰذَا ۚ أَمْ هُمْ قَوْمٌ طَاغُونَ ٣٢
📖 ಅನುವಾದ
ಆಯತ್ 32
ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.
أَمْ يَقُولُونَ تَقَوَّلَهُ ۚ بَل لَّا يُؤْمِنُونَ ٣٣
📖 ಅನುವಾದ
ಆಯತ್ 33
ಆ ಪೈಗಂಬರರು ಇದನ್ನು (ಕುರ್‌ಆನನ್ನು) ಸ್ವತಃ ರಚಿಸಿರುತ್ತಾನೆಂದು ಅವರು ಹೇಳುತ್ತಿದ್ದಾರೆಯೇ ? ವಾಸ್ತವವೇನೆಂದರೆ ಅವರು ವಿಶ್ವಾಸವಿರಿಸುತ್ತಿಲ್ಲ.
فَلْيَأْتُوا بِحَدِيثٍ مِّثْلِهِ إِن كَانُوا صَادِقِينَ ٣٤
📖 ಅನುವಾದ
ಆಯತ್ 34
ಸರಿ ಅವರು ಸತ್ಯವಂತರಾಗಿದ್ದರೆ ಇಂತಹದೇ ಒಂದು ವಚನವನ್ನು ತರಲಿ.
أَمْ خُلِقُوا مِنْ غَيْرِ شَيْءٍ أَمْ هُمُ الْخَالِقُونَ ٣٥
📖 ಅನುವಾದ
ಆಯತ್ 35
ಅವರು ಒಬ್ಬ ಸೃಷ್ಟಿಕರ್ತನಿಲ್ಲದೇ ಸೃಷ್ಟಿಸಲಾಗಿರುವರೇ ? ಅಥವಾ ಅವರೇ ಸ್ವಯಂ ಸೃಷ್ಟಿಕರ್ತರೇ?
أَمْ خَلَقُوا السَّمَاوَاتِ وَالْأَرْضَ ۚ بَل لَّا يُوقِنُونَ ٣٦
📖 ಅನುವಾದ
ಆಯತ್ 36
ಅಥವಾ ಅವರೇ ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದಾರೆಯೇ ? ಅಲ್ಲ ಅವರು ನಂಬಿಕೆಯಿಡದ ಜನರಾಗಿದ್ದಾರೆ.
أَمْ عِندَهُمْ خَزَائِنُ رَبِّكَ أَمْ هُمُ الْمُصَيْطِرُونَ ٣٧
📖 ಅನುವಾದ
ಆಯತ್ 37
ಅಥವ ನಿಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ ? ಅಥವಾ ಅವರು (ಆ ಭಂಡಾರಗಳ) ಸಂರಕ್ಷಕರೇ ?
أَمْ لَهُمْ سُلَّمٌ يَسْتَمِعُونَ فِيهِ ۖ فَلْيَأْتِ مُسْتَمِعُهُم بِسُلْطَانٍ مُّبِينٍ ٣٨
📖 ಅನುವಾದ
ಆಯತ್ 38
ಅಥವಾ ಏರಿ ಹೋಗಿ ಆಕಾಶದ ರಹಸ್ಯ ಮಾತುಗಳನ್ನು ಆಲಿಸಲು ಅವರ ಬಳಿ ಯಾವುದಾದರೂ ಏಣಿ ಇದೆಯೇ ? ಹಾಗಿದ್ದರೆ ಆಲಿಸಿದವನು ಸ್ಪಷ್ಟವಾದ ಪುರಾವೆಯನ್ನು ತರಲಿ.
أَمْ لَهُ الْبَنَاتُ وَلَكُمُ الْبَنُونَ ٣٩
📖 ಅನುವಾದ
ಆಯತ್ 39
ಏನು ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇ ?
أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ ٤٠
📖 ಅನುವಾದ
ಆಯತ್ 40
ಅಥವಾ ಅವರು ಸಾಲದ ಭಾರವನ್ನು ಹೊರುವಂತಾಗಲು ನೀವು ಅವರಿಂದ ಪ್ರತಿಫಲವನ್ನೇನಾದರೂ ಕೇಳುತ್ತಿರುವಿರಾ ?
أَمْ عِندَهُمُ الْغَيْبُ فَهُمْ يَكْتُبُونَ ٤١
📖 ಅನುವಾದ
ಆಯತ್ 41
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?
أَمْ يُرِيدُونَ كَيْدًا ۖ فَالَّذِينَ كَفَرُوا هُمُ الْمَكِيدُونَ ٤٢
📖 ಅನುವಾದ
ಆಯತ್ 42
ಅಥವಾ ಅವರು ಏನಾದರೂ ಕುತಂತ್ರ ಹೂಡಲು ಉದ್ದೇಶಿಸುತ್ತಾರೆಯೇ ? ಹಾಗಾದರೆ ಸತ್ಯನಿಷೇಧಿಗಳೇ ಕುತಂತ್ರಕ್ಕೆ ಬಲಿಯಾಗುವರು.
أَمْ لَهُمْ إِلَٰهٌ غَيْرُ اللَّهِ ۚ سُبْحَانَ اللَّهِ عَمَّا يُشْرِكُونَ ٤٣
📖 ಅನುವಾದ
ಆಯತ್ 43
ಅಥವಾ ಅವರಿಗೆ ಅಲ್ಲಾಹನ ಹೊರತು ಅನ್ಯಆರಾಧ್ಯನಿದ್ದಾನೆಯೇ ? ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅಲ್ಲಾಹನು ಪರಮಪಾವನನು.
وَإِن يَرَوْا كِسْفًا مِّنَ السَّمَاءِ سَاقِطًا يَقُولُوا سَحَابٌ مَّرْكُومٌ ٤٤
📖 ಅನುವಾದ
ಆಯತ್ 44
ಅವರು ಆಕಾಶದಿಂದ ಒಂದು ತುಂಡು ಬೀಳುತ್ತಿರುವುದಾಗಿ ಕಂಡರೂ ಅದು ದಟ್ಟವಾಗಿರುವ ಮೋಡವೆಂದು ಅವರು ಹೇಳುವರು.
فَذَرْهُمْ حَتَّىٰ يُلَاقُوا يَوْمَهُمُ الَّذِي فِيهِ يُصْعَقُونَ ٤٥
📖 ಅನುವಾದ
ಆಯತ್ 45
ಆದ್ದರಿಂದ ಮೂರ್ಛೆಗೊಳಗಾಗುವಂತಹ ಅವರ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
يَوْمَ لَا يُغْنِي عَنْهُمْ كَيْدُهُمْ شَيْئًا وَلَا هُمْ يُنصَرُونَ ٤٦
📖 ಅನುವಾದ
ಆಯತ್ 46
ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.
وَإِنَّ لِلَّذِينَ ظَلَمُوا عَذَابًا دُونَ ذَٰلِكَ وَلَٰكِنَّ أَكْثَرَهُمْ لَا يَعْلَمُونَ ٤٧
📖 ಅನುವಾದ
ಆಯತ್ 47
ಖಂಡಿತವಾಗಿಯೂ ಅಕ್ರಮವೆಸಗಿದವರಿಗೆ ಇದರ ಹೊರತು ಇಹಲೋಕದಲ್ಲೂ ಯಾತನೆ ಇದೆ, ಆದರೆ ಅವರಲ್ಲಿ ಅಧಿಕ ಮಂದಿ ತಿಳಿಯುವುದಿಲ್ಲ.
وَاصْبِرْ لِحُكْمِ رَبِّكَ فَإِنَّكَ بِأَعْيُنِنَا ۖ وَسَبِّحْ بِحَمْدِ رَبِّكَ حِينَ تَقُومُ ٤٨
📖 ಅನುವಾದ
ಆಯತ್ 48
ನೀವು ನಿಮ್ಮ ಪ್ರಭುವಿನ ತೀರ್ಪು ಬರುವವರೆಗೆ ಸಹನೆವಹಿಸಿರಿ, ನಿಸ್ಸಂಶಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂದಿರುವಿರಿ, ನೀವು ಎದ್ದೇಳುವಾಗ ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
وَمِنَ اللَّيْلِ فَسَبِّحْهُ وَإِدْبَارَ النُّجُومِ ٤٩
📖 ಅನುವಾದ
ಆಯತ್ 49
ರಾತ್ರಿಯು ಸ್ವಲ್ಪ ಭಾಗ ಮತ್ತು ನಕ್ಷತ್ರಗಳು ಅಸ್ತಮಿಸುವ ವೇಳೆಯಲ್ಲೂ ಅವನ ಪಾವಿತ್ರö್ಯವನ್ನು ಸ್ತುತಿಸಿರಿ.
ಓದಿ ಸೂರಾ ಅತ್-ತೂರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers

