PDF —
135 ಆಯತ್ Meccan PDF
Built right in your browser — download starts automatically

ಸೂರಾ ತಾಹಾ pdf — ಡೌನ್‌ಲೋಡ್ (ಕನ್ನಡ)

ಸೂರಾ ತಾಹಾ pdf ಕನ್ನಡ — ಡೌನ್‌ಲೋಡ್ ಸೂರಾ ತಾಹಾ ಅನುವಾದ. ಸೂರಾ ತಾಹಾ (Meccan) 135 ಆಯತ್.



135 ಆಯತ್ · Meccan · ಕನ್ನಡ
bismillah
ﭵﭶ
20:1 ತ್ವಾಹಾ
ﭷﭸﭹﭺﭻﭼ
20:2 ನಾವು ಈ ಕುರ್‌ಆನನ್ನು ನಿಮ್ಮನು ಸಂಕಷ್ಟಕ್ಕೀಡು ಮಾಡಲಿಕ್ಕಾಗಿ ನಿಮ್ಮ ಮೇಲೆ ಅವತೀರ್ಣಗೊಳಿಸಿರುವುದಿಲ್ಲ.
ﭽﭾﭿﮀﮁ
20:3 ಆದರೆ ಇದು (ಅಲ್ಲಾಹನನ್ನು) ಭಯಪಡುವವನಿಗೆ ಉಪದೇಶವಾಗಿದೆ.
ﮂﮃﮄﮅﮆﮇﮈ
20:4 ಇದು ಭೂಮಿಯನ್ನು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಕಡೆಯಿಂದ ಅವತೀರ್ಣಗೊಂಡಿದೆ.
ﮉﮊﮋﮌﮍ
20:5 ಪರಮ ದಯಾಮಯನು ಸಿಂಹಾಸನದ ಮೇಲೆ ಆರೋಢನಾದನು.
ﮎﮏﮐﮑﮒﮓﮔﮕﮖﮗﮘﮙﮚ
20:6 ಆಕಾಶಗಳಲ್ಲೂ, ಭೂಮಿಯಲ್ಲೂ, ಅವೆರಡರ ನಡುವೆಯೂ ಮತ್ತು (ಮಣ್ಣಿನ) ಅಡಿಯಲ್ಲೂ ಇರುವ ಸಕಲವೂ ಅವನದೇ ಆಗಿದೆ.
ﮛﮜﮝﮞﮟﮠﮡﮢ
20:7 ನೀವು ನಿಮ್ಮ ಮಾತನ್ನು ಉಚ್ಛಸ್ವರದಲ್ಲಿ ಹೇಳಿದರೆ, ಅವನಂತು ರಹಸ್ಯವನ್ನು ಮತ್ತು ಅದಕ್ಕಿಂತ ಅಡಗಿರುವುದನ್ನೂ ಚೆನ್ನಾಗಿ ಬಲ್ಲನು
ﮣﮤﮥﮦﮧﮨﮩﮪﮫﮬ
20:8 ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಅವನಿಗೆ ಅತ್ಯುತ್ತಮ ನಾಮಗಳಿವೆ.
ﮭﮮﮯﮰﮱ
20:9 (ಮುಹಮ್ಮದ್) ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ?
ﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥ
20:10 ಅವರು ಬೆಂಕಿಯನ್ನು ಕಂಡಾಗ ತಮ್ಮ ಮನೆಯವರಿಗೆ ಹೇಳಿದರು: ನೀವು ಸ್ವಲ್ಪ ನಿಲ್ಲಿರಿ. ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ನಾನು ಅದರಿಂದ ನಿಮಗಾಗಿ ಕೆಂಡವೊAದನ್ನು ತರಬಹುದು ಅಥವಾ ಅ ಬೆಂಕಿಯ ಹತ್ತಿರ ದಾರಿಯ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ.
ﯦﯧﯨﯩﯪ
20:11 ಅವರು ಅಲ್ಲಿಗೆ ತಲುಪಿದಾಗ ಹೀಗೆ ಕರೆಯಲಾಯಿತು: ಓ ಮೂಸಾ,
ﯫﯬﯭﯮﯯﯰﯱﯲﯳﯴ
20:12 ಖಂಡಿತವಾಗಿಯು ನಾನು ನಿಮ್ಮ ಪ್ರಭುವಾಗಿದ್ದೇನೆ. ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ಏಕೆಂದರೆ ನೀವು ಪವಿತ್ರವಾದ ತುವಾ ಕಣಿವೆಯಲ್ಲಿದ್ದೀರಿ.
ﭑﭒﭓﭔﭕﭖ
20:13 ಮತ್ತು ನಾನು ನಿಮ್ಮನ್ನು (ದೌತ್ಯ ಕಾರ್ಯಕ್ಕೆ) ಆಯ್ಕೆ ಮಾಡಿದ್ದೇನೆ. ಆದ್ದರಿಂದ ನಿಮಗೆ ನೀಡಲಾಗುತ್ತಿರುವ ದಿವ್ಯವಾಣಿಯನ್ನು ಗಮನ ಕೊಟ್ಟು ಆಲಿಸಿರಿ.
ﭗﭘﭙﭚﭛﭜﭝﭞﭟﭠﭡﭢ
20:14 ನಿಸ್ಸಂದೇಹವಾಗಿಯು ನಾನು ಅಲ್ಲಾಹನಾಗಿದ್ದೇನೆ. ನನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ. ಮತ್ತು ನನ್ನ ಸ್ಮರಣೆಗಾಗಿ ನಮಾಝ್ ಸಂಸ್ಥಾಪಿಸಿರಿ.
ﭣﭤﭥﭦﭧﭨﭩﭪﭫﭬﭭ
20:15 ಖಂಡಿತವಾಗಿಯೂ ಪ್ರಳಯ ದಿನವು ಬರಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳ ಪ್ರತಿಫಲ ಪಡೆಯಲೆಂದು ನಾನು ಅದನ್ನು ರಹಸ್ಯವಾಗಿಡಲು ಇಚ್ಛಿಸುತ್ತೇನೆ.
ﭮﭯﭰﭱﭲﭳﭴﭵﭶﭷﭸ
20:16 ಆದುದರಿಂದ ಅದರಲ್ಲಿ ವಿಶ್ವಾಸವಿಡದವನು ಮತ್ತು ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುವನು ಅದರ ವಿಶ್ವಾಸದಿಂದ ನಿಮ್ಮನ್ನು ತಡೆಯದಿರಲಿ. ಹಾಗೇನಾದರೂ ಆದರೆ ನೀವು ನಾಶವಾಗುವಿರಿ.
ﭹﭺﭻﭼﭽ
20:17 ಓ ಮೂಸಾ, ನಿಮ್ಮ ಬಲಗೈಯಲ್ಲಿರುವುದು ಏನು?
ﭾﭿﮀﮁﮂﮃﮄﮅﮆﮇﮈﮉﮊﮋ
20:18 ಅವರು ಉತ್ತರಿಸಿದರು: ಇದು ನನ್ನ ಕೋಲು, ಇದನ್ನು ನಾನು ಊರಿ ನಡೆಯುತ್ತೇನೆ ಮತ್ತು ಇದರಿಂದ ನನ್ನ ಆಡುಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಮತ್ತು ನನಗೆ ಇನ್ನೂ ಹಲವು ಪ್ರಯೋಜನಗಳು ಇದರಲ್ಲಿವೆ.
ﮌﮍﮎﮏ
20:19 ಆಗ ಅಲ್ಲಾಹನು 'ಓ ಮೂಸಾ; ಅದನ್ನು ಕೆಳಗೆ ಹಾಕಿರಿ' ಎಂದನು.
ﮐﮑﮒﮓﮔﮕ
20:20 ಅವರು ಅದನ್ನು ಹಾಕಿದರು, ಕೂಡಲೇ ಅದೊಂದು ತೆವಳುವ ಸರ್ಪವಾಯಿತು.
ﮖﮗﮘﮙﮚﮛﮜﮝﮞ
20:21 ಅಲ್ಲಾಹನು ಹೇಳಿದನು: ಭಯಪಡದೆ ನೀವು ಅದನ್ನು ಹಿಡಿದುಕೊಳ್ಳಿರಿ. ನಾವದನ್ನು ಪೂರ್ವ ಸ್ಥಿತಿಗೆ ಮರಳಿಸಲಿದ್ದೇವೆ.
ﮟﮠﮡﮢﮣﮤﮥﮦﮧﮨﮩﮪ
20:22 ಮತ್ತು ನಿಮ್ಮ ಅಂಗೈಯನ್ನು ನಿಮ್ಮ ಕಂಕುಳಕ್ಕೆ ಸೇರಿಸಿರಿ.ಆಗ ಅದು ಯಾವುದೇ ದೋಷವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರ ಬರುವುದು. ಇದು ಎರಡನೆಯ ಪವಾಡವಾಗಿದೆ.
ﮫﮬﮭﮮﮯ
20:23 ಇದೇಕೆಂದರೆ ನಾವು ನಿಮಗೆ ನಮ್ಮ ಕೆಲವು ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದಾಗಿದೆ.
ﮰﮱﯓﯔﯕﯖ
20:24 ಇನ್ನು ನೀವು ಫಿರ್‌ಔನನ ಕಡೆಗೆ ಹೋಗಿರಿ. ನಿಶ್ಚಯವಾಗಿಯು ಅವನು ಮಿತಿಮೀರಿ ಹೋಗಿದ್ದಾನೆ.
ﯗﯘﯙﯚﯛﯜ
20:25 ಮೂಸ ಪ್ರಾರ್ಥಿಸಿದರು: ಓ ನನ್ನ ಪ್ರಭು, ನೀನು ನನಗಾಗಿ ನನ್ನ ಹೃದಯವನ್ನು ವಿಶಾಲಗೊಳಿಸು.
ﯝﯞﯟﯠ
20:26 ಮತ್ತು ನನ್ನ (ದೌತ್ಯ) ಕಾರ್ಯವನ್ನು ನನಗಾಗಿ ಸುಲಭಗೊಳಿಸು
ﯡﯢﯣﯤﯥ
20:27 ಮತ್ತು ನನ್ನ ನಾಲಗೆಯ ತೊಡಕನ್ನು ಬಿಡಿಸು.
ﯦﯧﯨ
20:28 ಇದು ಜನರು ನನ್ನ ಮಾತನ್ನು ಗ್ರಹಿಸಿಕೊಳ್ಳಲೆಂದಾಗಿದೆ.
ﯩﯪﯫﯬﯭﯮ
20:29 ನನಗಾಗಿ ನನ್ನ ಕುಟುಂಬದಿAದ ಒಬ್ಬ ಸಹಾಯಕನನ್ನು ನೇಮಿಸು.
ﯯﯰﯱ
20:30 ನನ್ನ ಸಹೋದರ ಹಾರೂನರನ್ನು.
ﯲﯳﯴﯵ
20:31 ಅವರ ಮೂಲಕ ನನ್ನನ್ನು ಬಲಪಡಿಸು.
ﯶﯷﯸﯹ
20:32 ಮತ್ತು ಅವರನ್ನು ನೀನು ನನ್ನ ಕೆಲಸದಲ್ಲಿ ಸಹಭಾಗಿಯನ್ನಾಗಿಸು.
ﯺﯻﯼﯽ
20:33 ಇದು ನಾವು ಅತಿ ಹೆಚ್ಚಾಗಿ ನಿನ್ನ ಪಾವಿತ್ರö್ಯವನ್ನು ಸ್ತುತಿಸಲೆಂದು.
ﯾﯿﰀ
20:34 ಮತ್ತು ನಿನ್ನನ್ನು ತುಂಬಾ ಸ್ಮರಿಸಲೆಂದಾಗಿದೆ.
ﰁﰂﰃﰄﰅ
20:35 ನಿಸ್ಸಂಶಯವಾಗಿಯು ನೀನು ನಮ್ಮನ್ನು ಚೆನ್ನಾಗಿ ನೋಡುವವನಾಗಿರುವೆ.
ﰆﰇﰈﰉﰊﰋ
20:36 ಆಗ ಅಲ್ಲಾಹನು ಉತ್ತರಿಸಿದನು: ಓ ಮೂಸಾ, ನಿನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ.
ﰌﰍﰎﰏﰐﰑ
20:37 ನಾವು ನಿಮ್ಮ ಮೇಲೆ ಇನ್ನೊಂದು ಸಲವೂ ಉಪಕಾರವನ್ನು ಮಾಡಿದ್ದೇವು.
ﭑﭒﭓﭔﭕﭖﭗ
20:38 ನಾವು ನಿಮ್ಮ ತಾಯಿಯೆಡಗೆ ಕೊಡಬೇಕಾಗಿದ್ದ ಜ್ಞಾನವನ್ನು ದಿವ್ಯವಾಣಿಯ ಮೂಲಕ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.
ﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯ
20:39 ನೀನು ಪೆಟ್ಟಿಗೆಯಲ್ಲಿ ಇರಿಸಿ ಅದನ್ನು ನದಿಯಲ್ಲಿ ತೇಲಿಬಿಡು, ಅನಂತರ ನದಿಯು ಅದನ್ನು ದಡಕ್ಕೆ ಸೇರಿಸಿಬಿಡುವುದು ಮತ್ತು ಅದನ್ನು ನನ್ನ ಮತ್ತು ಆ ಮಗುವಿನ ಶತ್ರುವು ಎತ್ತಿಕೊಳ್ಳುವನು ಮತ್ತು ನಾನು ನಿನ್ನ ಮೇಲೆ ನನ್ನ ಕಡೆಯ ಪ್ರೀತಿಯನ್ನು ಹಾಕಿರುವೆನು ಇದೇಕೆಂದರೆ ನಿನ್ನ ಪಾಲನೆ ಪೋಷಣೆಯು ನನ್ನ ಮೇಲ್ನೋಟದಲ್ಲೇ ಆಗಲೆಂದಾಗಿದೆ.
ﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕ
20:40 ನಿನ್ನ ಸಹೋದರಿಯು (ಅಪರಿಚಿತಳಾಗಿ) ನಡೆದು ಹೋಗಿ: (ಫಿರ್‌ಔನನ ಮನೆಯವರಿಗೆ) ಈ ಶಿಶುವನ್ನು ಅತ್ಯುತ್ತಮವಾಗಿ ಆರೈಕೆ ಮಾಡುವವರ ಕುರಿತು ನಾನು ನಿಮಗೆ ತಿಳಿಸಿಕೊಡಲೇ? ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಈ ಉಪಾಯದ ಮೂಲಕ ನಾವು ನಿಮ್ಮನ್ನು (ಅರೈಕೆಗಾಗಿ) ಪುನಃ ನಿಮ್ಮ ತಾಯಿಯೆಡೆಗೆ ಅವಳ ಕಣ್ಣು ತಣಿಸಲೆಂದೂ, ಅವಳು ವ್ಯಥೆಪಡದಿರಲೆಂದೂ ಮರಳಿಸಿದೆವು.ಮತ್ತು ನೀವು (ಫಿರ್‌ಔನಿನ ಜನಾಂಗದ) ವ್ಯಕ್ತಿಯೊಬ್ಬನನ್ನು ಕೊಂದಿದ್ದಾಗಲೂ ನಿಮ್ಮನ್ನು ಅ ಮನೋವ್ಯಥೆಯಿಂದ ಪಾರು ಮಾಡಿದೆವು. ಒಟ್ಟಿನಲ್ಲಿ ನಾವು ನಿಮ್ಮನ್ನು ಪರೀಕ್ಷೆಗೊಳಪಡಿಸಿದೆವು. ಹಾಗೆಯೇ ನೀವು ಹಲವು ವರ್ಷಗಳ ಕಾಲ ಮದ್‌ಯನ್ ಜನರ ನಡುವೆ ತಂಗಿದ್ದೀರಿ. ತರುವಾಯ ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ.
ﮖﮗﮘ
20:41 ಮತ್ತು ನಾನು ನಿಮ್ಮನ್ನು ನನ್ನ ಕಾರ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ.
ﮙﮚﮛﮜﮝﮞﮟﮠﮡ
20:42 ಈಗ ನೀವು ಮತ್ತು ನಿಮ್ಮ ಸಹೋದರ ನನ್ನ ದೃಷ್ಟಾಂತಗಳೊAದಿಗೆ ಹೋಗಿರಿ, ಮತ್ತು ನೀವು ನನ್ನ ಸ್ಮರಣೆಯಲ್ಲಿ ಆಲಸ್ಯ ತೋರಬೇಡಿರಿ.
ﮢﮣﮤﮥﮦﮧ
20:43 ನೀವಿಬ್ಬರೂ ಫಿರ್‌ಔನನ ಕಡೆಗೆ ಹೋಗಿರಿ. ಅವನು ಮಿತಿ ಮೀರಿದ್ದಾನೆ.
ﮨﮩﮪﮫﮬﮭﮮﮯﮰ
20:44 ಅವನೊಂದಿಗೆ ನಯವಾಗಿ ಮಾತನಾಡಿರಿ. ಅವನು ಉಪದೇಶವನ್ನು ಸ್ವೀಕರಿಸಬಹುದು ಅಥವಾ ಭಯ ಪಡಬಹುದು.
ﮱﯓﯔﯕﯖﯗﯘﯙﯚﯛﯜ
20:45 ಅವರಿಬ್ಬರೂ ಹೇಳದಿರು: ಓ ನಮ್ಮ ಪ್ರಭು, ಅವನು ನಮ್ಮೊಂದಿಗೆ ಅತಿಕ್ರಮ ತೋರುವ ಅಥವಾ ಅವನು ನಮ್ಮ ಮೇಲೆ ಮುಗಿ ಬೀಳುವ ಭಯ ನಮಗಿದೆ.
ﯝﯞﯟﯠﯡﯢﯣﯤﯥ
20:46 ಅಲ್ಲಾಹನು ಉತ್ತರಿಸಿದನು: ನೀವು ಭಯಪಡದಿರಿ. ನಾನು ನಿಮ್ಮ ಜೊತೆಗಿದ್ದೇನೆ ಮತ್ತು ನಾನು ಎಲ್ಲವನ್ನು ಆಲಿಸುತ್ತಿದ್ದೇನೆ, ವೀಕ್ಷಿಸುತ್ತಿದ್ದೇನೆ.
ﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼﯽ
20:47 ನೀವು ಅವನೆಡೆಗೆ ಹೋಗಿ ಹೇಳಿರಿ: ನಾವು ನಿನ್ನ ಪ್ರಭುವಿನ ಸಂದೇಶವಾಹಕರಾಗಿದ್ದೇವೆ. ನೀನು ಇಸ್ರಾಯೀಲ್ ಸಂತತಿಗಳನ್ನು ನಮ್ಮ ಸಂಗಡ ಕಳುಹಿಸಿಕೊಡು ಮತ್ತು ಅವರಿಗೆ ಹಿಂಸೆ ಕೊಡಬೇಡ. ನಾವು ನಿನ್ನಲ್ಲಿಗೆ ನಿನ್ನ ಪ್ರಭುವಿನ ಕಡೆಯ ನಿದರ್ಶನದೊಂದಿಗೆ ಬಂದಿರುತ್ತೇವೆ ಮತ್ತು ಸನ್ಮಾರ್ಗವನ್ನು ಹಿಂಬಾಲಿಸಿದವನ ಮೇಲೆ ಶಾಂತಿಯಿರುವುದು.
ﯾﯿﰀﰁﰂﰃﰄﰅﰆﰇﰈ
20:48 ಸುಳ್ಳಾಗಿಸಿದವನಿಗೂ ಹಾಗೂ ವಿಮುಖನಾದವನಿಗೂ ಶಿಕ್ಷೆಯಿರುವುದೆಂದು ನಮ್ಮೆಡೆಗೆ ದಿವ್ಯವಾಣಿ ಮಾಡಲಾಗಿದೆ.
ﰉﰊﰋﰌﰍ
20:49 ಫಿರ್‌ಔನ್ ಹೇಳಿದನು: ಓ ಮೂಸಾ, ಸರಿ, ಹಾಗಾದರೆ ನಿಮ್ಮಿಬ್ಬರ ಪ್ರಭು ಯಾರು?
ﰎﰏﰐﰑﰒﰓﰔﰕﰖﰗ
20:50 ಆಗ ಅವರು ಉತ್ತರಿಸಿದರು: ಪ್ರತಿಯೊಂದು ವಸ್ತುವಿಗೂ ಅದರ ಪ್ರತ್ಯೇಕ ಸ್ವರೂಪವನ್ನೂ ದಯಪಾಲಿಸಿದವನು ಹಾಗೂ ಮಾರ್ಗ ತೋರಿದವನು ನಮ್ಮ ಪ್ರಭು.
ﰘﰙﰚﰛﰜﰝ
20:51 ಅವನು ಕೇಳಿದನು: ಸರಿ, ಗತ (ಬಹುದೇವಾರಾಧಕ) ಪೀಳಿಗೆಗಳ ಸ್ಥಿತಿಯೇನಾಗುವುದು?
ﭑﭒﭓﭔﭕﭖﭗﭘﭙﭚﭛﭜﭝ
20:52 ಅವರು ಉತ್ತರಿಸಿದರು: ಅದರ ಜ್ಞಾನವು ನನ್ನ ಪ್ರಭುವಿನ ಬಳಿ ಒಂದು ಗ್ರಂಥದಲ್ಲಿದೆ ನನ್ನ ಪ್ರಭುವು ತಪ್ಪು ಮಾಡುವುದಿಲ್ಲ ಮತ್ತು ಮರೆಯುವುದೂ ಇಲ್ಲ.
ﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱ
20:53 ಅವನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿದನು ಮತ್ತು ಅದರಲ್ಲಿ ನಿಮ್ಮ ಸಂಚಾರಕ್ಕಾಗಿ ಮಾರ್ಗಗಳನ್ನು ರೂಪಿಸಿಕೊಟ್ಟನು ಮತ್ತು ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಅದರ ಮೂಲಕ ವಿವಿಧ ತರಹದ ಫಲ ಬೆಳೆಗಳನ್ನೂ ನಾವೇ ಉತ್ಪಾದಿಸುತ್ತೇವೆ.
ﭲﭳﭴﭵﭶﭷﭸﭹﭺﭻﭼ
20:54 ನೀವೂ ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ನಿಸ್ಸಂದೇಹವಾಗಿಯೂ, ಇದರಲ್ಲಿ ಬುದ್ಧಿವಂತರಿಗೆ ಅನೇಕ ನಿದರ್ಶನಗಳಿವೆ.
ﭽﭾﭿﮀﮁﮂﮃﮄﮅﮆ
20:55 ನಾವು ಈ ಭೂಮಿಯಿಂದಲೇ ನಿಮ್ಮನ್ನು ಸೃಷ್ಟಿಸಿರುತ್ತೇವೆ ಮತ್ತು ಅದರೊಳಗೇ ನಿಮ್ಮನ್ನು ಮರಳಿಸುವೆವು ಮತ್ತು ಅದರಿಂದಲೇ ಪುನಃ ನಿಮ್ಮನ್ನು ನಾವು ಹೊರತರುವೆವು.
ﮇﮈﮉﮊﮋﮌﮍ
20:56 ನಾವು ಫಿರ್‌ಔನನಿಗೆ ನಮ್ಮ ಸಕಲ ದೃಷ್ಟಾಂತಗಳನ್ನು ತೋರಿಸಿಕೊಟ್ಟೆವು. ಆದರೆ ಅವನು ಸುಳ್ಳಾಗಿಸಿದನು ಮತ್ತು ನಿರಾಕರಿಸಿಬಿಟ್ಟನು.
ﮎﮏﮐﮑﮒﮓﮔﮕ
20:57 ಅವನು ಹೇಳಿದನು: ಓ ಮೂಸಾ, ನೀನು ನಿನ್ನ ಜಾದೂ ಶಕ್ತಿಯಿಂದ ನಮ್ಮನ್ನು ನಮ್ಮ ನಾಡಿನಿಂದ ಹೊರ ಹಾಕಲೆಂದು ಬಂದಿರುವೆಯಾ?
ﮖﮗﮘﮙﮚﮛﮜﮝﮞﮟﮠﮡﮢﮣﮤ
20:58 ಸರಿ, ನಾವು ಸಹ ನಿನ್ನ ವಿರುದ್ಧ ಅಂತಹದೇ ಜಾದೂವನ್ನು ಖಂಡಿತ ತರುವೆವು. ಮತ್ತು ನಮ್ಮ ಹಾಗೂ ನಿನ್ನ ನಡುವೆ ಒಂದು ವಾಗ್ದಾನ ದಿನವನ್ನು ನಿಶ್ಚಯಿಸು.ಅದನ್ನು ನಾವಗಲೀ, ನೀನಾಗಲೀ ಉಲ್ಲಂಘಿಸುವAತಿಲ್ಲ. ಸಮತಟ್ಟಾದ ಮೈದಾನದಲ್ಲಿ ಸ್ಪರ್ಧೆಯಾಗಲಿ.
ﮥﮦﮧﮨﮩﮪﮫﮬﮭ
20:59 ಮೂಸಾ ಉತ್ತರಿಸಿದರು: ಹಬ್ಬದ ದಿನವೇ ನಿಮ್ಮ ನಿಗದಿತ ವಾಗ್ದಾನ ಮತ್ತು ಜನರನ್ನು ಪೂರ್ವಾಹ್ನವಾಗುತ್ತಲೇ ಒಟ್ಟು ಗೂಡಿಸಲಾಗಲಿ.
ﮮﮯﮰﮱﯓﯔﯕ
20:60 ಆಗ ಫಿರ್‌ಔನನು ಮರಳಿ ಹೋದನು ಮತ್ತು ತನ್ನ ಎಲ್ಲಾ ಕುತಂತ್ರಗಳನ್ನು ಒಟ್ಟುಗೂಡಿಸಿ ಸ್ಪರ್ಧೆಗೆ ಬಂದನು.
ﯖﯗﯘﯙﯚﯛﯜﯝﯞﯟﯠﯡﯢﯣﯤﯥﯦ
20:61 ಮೂಸಾ ಅವರಿಗೆ ಹೇಳಿದರು: ನಿಮಗೆ ನಾಶವಿರಲಿ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸದಿರಿ. ಅನ್ಯಥಾ ಅವನು ನಿಮ್ಮನ್ನು ಯಾತನೆಯ ಮೂಲಕ ನಾಶ ಮಾಡಬಹುದು ಸುಳ್ಳರೋಪ ಹೊರಿಸುವವನು ಎಂದಿಗೂ ಸಫಲನಾಗಲಾರ.
ﯧﯨﯩﯪﯫﯬ
20:62 ಆಗ ಅವರು (ಮಾಟಗಾರರು) ತಮ್ಮ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದರು ಮತ್ತು ಗುಪ್ತವಾಗಿ ಸಮಾಲೋಚನೆ ನಡೆಸತೊಡಗಿದರು.
ﯭﯮﯯﯰﯱﯲﯳﯴﯵﯶﯷﯸﯹﯺ
20:63 ಅವರು ಹೇಳಿದರು: ಇವರಿಬ್ಬರೂ ಜಾದೂಗಾರರಾಗಿದ್ದಾರೆ, ಇವರು ತಮ್ಮ ಜಾದೂವಿನ ಬಲದಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದೂ, ನಿಮ್ಮ ಅತ್ಯುತ್ತಮ ಧರ್ಮವನ್ನು ನಾಶ ಮಾಡಲೆಂದೂ ಬಯಸುತ್ತಾರೆ.
ﯻﯼﯽﯾﯿﰀﰁﰂﰃﰄﰅﰆ
20:64 ಆದುದರಿಂದ ನೀವು ನಿಮ್ಮ ಎಲ್ಲಾ ತಂತ್ರಗಳನ್ನು ಒಟ್ಟುಗೂಡಿಸಿರಿ. ಅನಂತರ ನೀವು ಒಂದೇ ಅಣಿಯಾಗಿ ರಂಗಕ್ಕಿಳಿಯಿರಿ.ಇAದು ಯಾರು ಮೇಲುಗೈ ಸಾಧಿಸುತ್ತಾನೋ ಅವನೇ ಯಶಸ್ಸು ಪಡೆಯುವನು.
ﭑﭒﭓﭔﭕﭖﭗﭘﭙﭚﭛﭜ
20:65 ಜಾದುಗಾರರು ಹೇಳಿದರು: ಓ ಮೂಸಾ, ಒಂದೋ ನೀವು ಮೊದಲು ಮೊಡಿ ಹಾಕಿರಿ? ಇಲ್ಲವೆ ನಾವು ಮೊದಲು ಹಾಕುವೆವು?
ﭝﭞﭟﭠﭡﭢﭣﭤﭥﭦﭧﭨﭩﭪ
20:66 ಅವರು ಉತ್ತರಿಸಿದರು: ಇಲ್ಲ, ನೀವೇ ಮೊದಲು ಹಾಕಿಬಿಡಿರಿ. ಕೂಡಲೇ ಮೂಸಾರವರಿಗೆ ಅವರ ಹಗ್ಗಗಳು ಹಾಗೂ ಲಾಠಿಗಳು ಅವರ ಜಾದೂವಿನ ಬಲದಿಂದ ಓಡಾಡುತ್ತಿರುವಂತೆ ಭಾಸವಾಯಿತು.
ﭫﭬﭭﭮﭯﭰ
20:67 ಆಗ ಮೂಸಾ ತಮ್ಮ ಮನದೊಳಗೆ ಹೆದರಿದರು.
ﭱﭲﭳﭴﭵﭶﭷ
20:68 ಆಗ ನಾವು (ಅಲ್ಲಾಹ್) ಹೇಳಿದೆವು: ನೀವು ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.
ﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊ
20:69 ನೀವು ನಿಮ್ಮ ಬಲಗೈಯಲ್ಲಿರುವುದನ್ನು ಕೆಳಗೆ ಹಾಕಿಬಿಡಿ. ಅದು ಅವರು ಮಾಡಿರುವುದೆಲ್ಲವನ್ನು ನುಂಗಿಬಿಡುವುದು. ಅವರು ಉಂಟುಮಾಡಿರುವುದೇನಿದ್ದರೂ ಕೇವಲ ಜಾದೂಗಾರರ ಕೈಚಳಕ ಮಾತ್ರ ಮತ್ತು ಜಾದೂಗಾರನು ಎಲ್ಲಿಂದ ಬಂದಿದ್ದರೂ ಯಶಸ್ವಿಯಾಗಲಾರ.
ﮋﮌﮍﮎﮏﮐﮑﮒﮓ
20:70 ಕೊನೆಗಂತೂ ಸಕಲ ಜಾದೂಗಾರರು ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿದರು ಮತ್ತು ಸಾರಿಬಿಟ್ಟರು: ನಾವು ಹಾರೂನ್ ಮತ್ತು ಮೂಸಾರವರ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
ﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯﮰ
20:71 ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿರಿಸಿದ್ದೀರಾ? ನಿಜವಾಗಿಯೂ ಅವನೇ ನಿಮ್ಮೆಲ್ಲರಿಗೆ ಜಾದೂವನ್ನು ಕಲಿಸಿದ ನಿಮ್ಮ ಹಿರಿಯವನಾಗಿರಬೇಕು. (ಕೇಳಿರಿ) ನಾನು ನಿಮ್ಮ ಕೈ, ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ಖರ್ಜೂರ ಮರದ ಕಾಂಡಗಳ ಮೇಲೆ ಶಿಲುಬೆಗೇರಿಸಿ ಬಿಡುವೆನು.ಆಗ ನಿಮಗೆ ನಮ್ಮ ಪೈಕಿ ಯಾರ ಶಿಕ್ಷೆ ಕಠಿಣವೆಂದೂ, ಹಾಗೂ ಶಾಶ್ವತವೆಂದೂ ಚೆನ್ನಾಗಿ ತಿಳಿಯುವುದು.
ﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧ
20:72 ಜಾದೂಗಾರರು ಹೀಗೆ ಉತ್ತರಿಸಿದರು: ನಮ್ಮ ಮುಂದೆ ಬಂದಿರುವAತಹ ಆಧಾರ ಪ್ರಮಾಣಗಳಿಗಿಂತ ಹಾಗೂ ನಮ್ಮನ್ನು ಸೃಷ್ಟಿಸಿರುವ ಅಲ್ಲಾಹನಿಗಿಂತ ನಿನಗೆ ನಾವು ಪ್ರಾಮುಖ್ಯತೆಯನ್ನು ಖಂಡಿತ ನೀಡಲಾರೆವು. ಇನ್ನು ನೀನೇನು ವಿಧಿಸಲಿರುವೆಯೋ ಅದನ್ನು ವಿಧಿಸು.ನೀನು ಈ ಐಹಿಕ ಜೀವನದಲ್ಲಿ ಮಾತ್ರವೇ ತೀರ್ಮಾನ ಮಾಡಬಲ್ಲೆ.
ﯨﯩﯪﯫﯬﯭﯮﯯﯰﯱﯲﯳﯴﯵﯶﯷ
20:73 ನಮ್ಮ ಪಾಪಗಳನ್ನು ಮತ್ತು ನೀನು ನಮ್ಮಿಂದ ಬಲವಂತವಾಗಿ ಮಾಡಿಸಿದ ಜಾದೂವಿನ(ಪಾಪವನ್ನು) ಕ್ಷಮಿಸಿಬಿಡಲೆಂದು, ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಮತ್ತು ಅಲ್ಲಾಹನು ಅತ್ಯುತ್ತಮನು, ಅತ್ಯಂತ ಶಾಶ್ವತನು ಆಗಿರುತ್ತಾನೆ.
ﯸﯹﯺﯻﯼﯽﯾﯿﰀﰁﰂﰃﰄﰅ
20:74 ವಾಸ್ತವದಲ್ಲಿ ಯಾರು ತನ್ನ ಪ್ರಭುವಿನ ಬಳಿ ಅಪರಾಧಿಯಾಗಿ ಬರುತ್ತಾನೋ ಅವನಿಗೆ ನರಕವಿರುವುದು. ಅಲ್ಲಿ ಅವನು ಸಾಯವುದೂ ಇಲ್ಲ, ಬದುಕುವುದೂ ಇಲ್ಲ.
ﰆﰇﰈﰉﰊﰋﰌﰍﰎﰏﰐ
20:75 ಇನ್ನು ಯಾರು ಸತ್ಕರ್ಮಗಳನ್ನು ಮಾಡಿ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಅವನ ಬಳಿಗೆ ಹಾಜರಾಗುತ್ತಾನೋ ಅವನಿಗೆ ಉನ್ನತ ಸ್ಥಾನಗಳಿರುವುವು.
ﰑﰒﰓﰔﰕﰖﰗﰘﰙﰚﰛﰜﰝﰞ
20:76 ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಪರಿಶುದ್ಧನಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಫಲವು ಇದೇ ಆಗಿರುತ್ತದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣ
20:77 ನಾವು ಮೂಸಾರೆಡೆಗೆ ದಿವ್ಯವಾಣಿ ಮಾಡಿದೆವು: ನೀವು ರಾತ್ರೋ ರಾತ್ರಿ ನನ್ನ ದಾಸರನ್ನು ಕರೆದುಕೊಂಡು ಹೊರಡಿರಿ ಮತ್ತು ಅವರಿಗೆ ಸಮುದ್ರದಲ್ಲಿ (ತಮ್ಮ ಕೋಲಿನಿಂದ) ಒಣಗಿದ ದಾರಿಯನ್ನು ನಿರ್ಮಿಸಿಕೊಡಿ ಆಮೇಲೆ ನಿಮ್ಮನ್ನು ಯಾರಾದರೂ ಬೆನ್ನಟ್ಟಿ ಬರುವರೆಂದು ಭಯ ಪಡಬೇಡಿರಿ ಅಥವಾ ಇನ್ನಾವ ಭಯವಾಗಲಿ ಬೇಡ.
ﭤﭥﭦﭧﭨﭩﭪﭫﭬ
20:78 ಫಿರ್‌ಔನನು ತನ್ನ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿದನು. ಅನಂತರ ಸಮುದ್ರವು ಅವರೆಲ್ಲರನ್ನು ಆವರಿಸುವ ರೀತಿಯಲ್ಲಿ ಆವರಿಸಿಬಿಟ್ಟಿತು.
ﭭﭮﭯﭰﭱﭲ
20:79 ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿ ಬಿಟ್ಟನು ಮತ್ತು ಸನ್ಮಾರ್ಗವನ್ನು ತೋರಿಸಲಿಲ್ಲ.
ﭳﭴﭵﭶﭷﭸﭹﭺﭻﭼﭽﭾﭿﮀﮁ
20:80 ಓ ಇಸ್ರಾಯೀಲ್ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಮತ್ತು ನಿಮಗೆ ತೂರ್ ಪರ್ವತದ ಬಲಭಾಗದ ವಾಗ್ದಾನವನ್ನು ಮಾಡಿದೆವು ಮತ್ತು ನಿಮ್ಮ ಮೇಲೆ ಮನ್ನಾ (ಒಂದುರೀತಿಯ ಸಿಹಿ ಪದಾರ್ಥ) ಮತ್ತು ಲಾವಕ್ಕಿಯÀನ್ನು ಇಳಿಸಿದೆವು.
ﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔ
20:81 ನಾವು ನಿಮಗೆ ದಯಪಾಲಿಸಿದಂತಹ ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಇದರಲ್ಲಿ ನೀವು ಮಿತಿ ಮೀರಬೇಡಿರಿ. ಹಾಗೇನಾದರೂ ಆದರೆ ನಿಮ್ಮ ಮೇಲೆ ನನ್ನ ಕೋಪ ಎರಗುವುದು ಮತ್ತು ಯಾರ ಮೇಲೆ ನನ್ನ ಕೋಪ ಎರಗುವುದೋ ಅವನು ಖಂಡಿತ ಪತನವಾಗಿಬಿಟ್ಟನು.
ﮕﮖﮗﮘﮙﮚﮛﮜﮝﮞ
20:82 ಆದರೆ, ನಿಸ್ಸಂಶಯವಾಗಿಯೂ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಆ ಬಳಿಕ ಸನ್ಮಾರ್ಗದಲ್ಲಿ ನೆಲೆನಿಂತವರಿಗೆ ನಾನು ಅಧಿಕವಾಗಿ ಕ್ಷಮೆ ನೀಡುವವನಾಗಿರುವೆನು.
ﮟﮠﮡﮢﮣﮤﮥ
20:83 ಓ ಮೂಸಾ, ನಿನ್ನ ಜನಾಂಗವನ್ನು ಬಿಟ್ಟು ಅದ್ಯಾವ ವಸ್ತುವು ನಿನ್ನನ್ನು ಇಷ್ಟು ಶೀಘ್ರವಾಗಿ ಕರೆತಂದಿತು?
ﮦﮧﮨﮩﮪﮫﮬﮭﮮﮯ
20:84 ಅವರು ಉತ್ತರಿಸಿದರು: ಅವರು ನನ್ನ ಬೆನ್ನ ಹಿಂದೆಯೇ ಇದ್ದಾರೆ ಓ ನನ್ನ ಪ್ರಭು ನೀನು ಸಂತುಷ್ಟನಾಗಲೆAದು ನಾನು ನಿನ್ನೆಡೆಗೆ ಆತುರಪಟ್ಟು ಬಂದಿರುವೆನು.
ﮰﮱﯓﯔﯕﯖﯗﯘﯙﯚ
20:85 ಅಲ್ಲಾಹನು ಹೇಳಿದನು: ನಾವು ನಿನ್ನ ಜನಾಂಗವನ್ನು ನಿನ್ನ ನಂತರ ಪರೀಕ್ಷೆಗೊಳಪಡಿಸಿರುವೆವು ಮತ್ತು ಅವರನ್ನು ಸಾಮಿರಿಯು ದಾರಿ ತಪ್ಪಿಸಿರುವನು.
ﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷ
20:86 ಆಗ ಮೂಸಾ ತನ್ನ ಜನಾಂಗದೆಡೆಗೆ ಕುಪಿತರಾಗಿ ಮತ್ತು ವ್ಯಾಕುಲ ಚಿತ್ತರಾಗಿ ಹಿಂದಿರುಗಿದರು ಮತ್ತು ಹೇಳಿದರು: ಓ ನನ್ನ ಜನಾಂಗವೇ! ನಿಮ್ಮ ಪ್ರಭು ಉತ್ತಮವಾದ ವಾಗ್ದಾನವೊಂದನ್ನು ನಿಮಗೆ ಮಾಡಿರಿಲಿಲ್ಲವೇ? ನಿಮಗೆ ಅವನ ಕಾಲಾವಧಿಯು ಸುದೀರ್ಘವೆನಿಸಿತೇ? ಅಥವಾ ನಿಮ್ಮ ಪ್ರಭುವಿನ ಕೋಪವು ನಿಮ್ಮ ಮೇಲೆ ಎರಗಿ ಬಿಡಲೆಂದು ನೀವು ಬಯಸಿಬಿಟ್ಟಿರಾ? ಹೀಗೆ ನೀವು ನನ್ನ ಕರಾರನ್ನು ಉಲ್ಲಂಘಿಸಿಬಿಟ್ಟಿರಿ.
ﯸﯹﯺﯻﯼﯽﯾﯿﰀﰁﰂﰃﰄﰅﰆﰇ
20:87 ಅವರು ಹೇಳಿದರು: ನಾವು ನಮ್ಮ ಸ್ವಇಚ್ಛೆಯಿಂದ ನಿಮ್ಮೊಂದಿಗಿನ ಕರಾರನ್ನು ಉಲ್ಲಂಘಿಸಿಲ್ಲ. ನಾವು ಜನರ ಆಭರಣಗಳ ಹೊರೆಯನ್ನು ಹೇರಲ್ಪಟ್ಟಿದ್ದೆವು. ಆದ್ದರಿಂದ ನಾವು ಅವುಗಳನ್ನು ಬೆಂಕಿಯಲ್ಲಿ ಹಾಕಿ ಬಿಟ್ಟೆವು ಮತ್ತು ಅದೇ ಪ್ರಕಾರ ಸಾಮಿರಿಯು ಸಹ ತನ್ನ ಬಳಿಯಿರುವುದನ್ನು ಹಾಕಿಬಿಟ್ಟನು.
ﭑﭒﭓﭔﭕﭖﭗﭘﭙﭚﭛﭜﭝ
20:88 ಅನಂತರ ಅವನು ಅವರಿಗೋಸ್ಕರ ಒಂದು ಕರುವಿನ ಪ್ರತಿಮೆಯನ್ನು ಹೊರ ತಂದನು. ಅದರಿಂದ ದನದಂತಹ ಶಬ್ದವೂ ಹೊರಡುತ್ತಿತ್ತು. ಅನಂತರ ಸಾಮಿರಿಯ ಅನುಯಾಯಿಗಳು ಇದುವೇ ನಿಮ್ಮ ದೇವರು, ಮೂಸಾನ ದೇವರು. ಆದರೆ ಮೂಸಾ ಮರೆತುಬಿಟ್ಟಿದ್ದಾರೆ ಎಂದನು.
ﭞﭟﭠﭡﭢﭣﭤﭥﭦﭧﭨﭩﭪ
20:89 ಅದು ಅವರ ಮಾತಿಗೆ ಯಾವ ಉತ್ತರವನ್ನು ನೀಡಲಾರದೆಂದೂ, ಅದು ಅವರಿಗೆ ಯಾವುದೇ ಹಾನಿಯನ್ನಾಗಲೀ, ಲಾಭವನ್ನಾಗಲೀ ಕೊಡುವ ಅಧಿಕಾರ ಹೊಂದಿಲ್ಲವೆAದು ಈ ಪಥಭ್ರಷ್ಟರು ಕಾಣುವುದಿಲ್ಲವೇ?
ﭫﭬﭭﭮﭯﭰﭱﭲﭳﭴﭵﭶﭷﭸﭹﭺﭻﭼ
20:90 ಹಾರೂನ್‌ರವರು (ಮೂಸ ಬರುವುದಕ್ಕಿಂತ) ಮೊದಲೇ ಅವರಿಗೆ ಹೇಳಿದ್ದರು: ಓ ನನ್ನ ಜನಾಂಗವೇ, ನೀವು ಈ ಕರುವಿನ ಮೂಲಕ ಪರೀಕ್ಷೆಗೊಳಗಾಗಿರುವಿರಿ. ನಿಶ್ಚಯವಾಗಿಯು ನಿಮ್ಮ ನೈಜ ಪ್ರಭು ಪರಮ ದಯಾಮಯನಾದ ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವೆಲ್ಲರೂ ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ.
ﭽﭾﭿﮀﮁﮂﮃﮄﮅﮆ
20:91 ಅವರು ಉತ್ತರ ನೀಡಿದರು: ಮೂಸಾ ನಮ್ಮೆಡೆಗೆ ಮರಳಿ ಬರುವವರೆಗೆ ನಾವು ಇದರ ಆರಾಧನೆಯನ್ನೇ ಮಾಡುತ್ತಿರುವೆವು.
ﮇﮈﮉﮊﮋﮌﮍﮎ
20:92 92&93
ﮏﮐﮑﮒﮓﮔ
20:93 ಮೂಸಾ ಕೇಳಿದರು: ಓ ಹಾರೂನ್, ಇವರು ಮಾರ್ಗಭ್ರಷ್ಟರಾಗುತ್ತಿರುವುದನ್ನು ಕಂಡಾಗ ನನ್ನ ಅನುಸರಣೆ ಮಾಡದಂತೆ ನಿನ್ನನ್ನು ತಡೆದಿದ್ದಾದರೂ ಏನು? ನೀನು ಸಹ ನನ್ನ ಆದೇಶವನ್ನು ಧಿಕ್ಕರಿಸಿ ಬಿಟ್ಟೆಯಾ?
ﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨ
20:94 ಹಾರೂನ್ ಹೇಳಿದರು: ಓ ನನ್ನ ತಾಯಿಯ ಪುತ್ರನೇ, ನೀನು ನನ್ನ ಗಡ್ಡವನ್ನು, ತಲೆಗೂದಲನ್ನು ಹಿಡಿದು ಎಳೆಯಬೇಡ, ನೀನು ಇಸ್ರಾಯೀಲ್ ಸಂತತಿಗಳ ನಡುವೆ ಒಡಕುಂಟು ಮಾಡಿದೆ ಮತ್ತು ನನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂದು ನೀನು ಹೇಳಬಹುದೆಂದು ನಾನು ಭಯಪಟ್ಟೆ.
ﮩﮪﮫﮬﮭ
20:95 ಮೂಸಾ ಕೇಳಿದರು: ಓ ಸಾಮಿರಿ, ನಿನ್ನ ಸಮಾಚಾರವೇನು?
ﮮﮯﮰﮱﯓﯔﯕﯖﯗﯘﯙﯚﯛﯜﯝﯞﯟ
20:96 ಅವನು ಉತ್ತರಿಸಿದನು: ಅವರಿಗೆ ಕಾಣದಂತಹ ವಸ್ತುವೊಂದು ನನಗೆ ಕಂಡಿತು. ಆಗ ನಾನು ದೇವದೂತರ ಹೆಜ್ಜೆ ಗುರಿತಿನಿಂದ ಒಂದು ಹಿಡಿ ಮಣ್ಣನ್ನು ಮುಷ್ಠಿಯಲ್ಲಿ ತೆಗೆದುಕೊಂಡು ಅದರಲ್ಲಿ ಹಾಕಿ ಬಿಟ್ಟೆನು.ಹೀಗೆ ನನ್ನ ಮನಸ್ಸು ನನಗೆ ಇದನ್ನು ಸುಂದರವಾಗಿ ತೋರಿಸಿತು.
ﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻﯼﯽﯾﯿ
20:97 ಅವರು ಹೇಳಿದರು: ಹಾಗಾದರೆ ಇಲ್ಲಿಂದ ಹೊರಟು ಹೋಗು. ಐಹಿಕ ಜೀವನದ ನಿನ್ನ ಶಿಕ್ಷೆಯು ಜೀವನವಿಡೀ ನನ್ನನ್ನು ಮುಟ್ಟಬೇಡಿ ಎಂದು ಹೇಳುತ್ತಿರುವುದಾಗಿದೆ ಮತ್ತು ನಿನಗೆ ಇನ್ನೊಂದು ವಾಗ್ದತ್ತ ಸಮಯವೂ ಇದೆ.ಅದು ನಿನ್ನಿಂದ ಎಂದೂ ತಪ್ಪಿಹೋಗದು. ಮತ್ತು ನೀನು ಪೂಜೆಯಲ್ಲಿ ನಿರತನಾಗುತ್ತಿದ್ದ ಆ ನಿನ್ನ ಆರಾಧ್ಯ ದೇವತೆಯನ್ನೂ ನೋಡು. ನಾವದನ್ನು ಸುಟ್ಟು ಬಿಡುವೆವು ಆ ಬಳಿಕ ಅದರ ಬೂದಿಯನ್ನು ಸಮುದ್ರದಲ್ಲಿ ಹಾರಿಸಿ ಬಿಡುವೆವು.
ﰀﰁﰂﰃﰄﰅﰆﰇﰈﰉﰊﰋﰌﰍ
20:98 ವಾಸ್ತವದಲ್ಲಿ ನಿಮ್ಮ ನೈಜ ಆರಾಧ್ಯ ಕೇವಲ ಅಲ್ಲಾಹನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನು ವ್ಯಾಪಿಸಿಕೊಂಡಿದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟ
20:99 (ಓ ಪೈಗಂಬರರೇ) ಇದೇ ಪ್ರಕಾರ ನಾವು ನಿಮಗೆ ಕೆಲವು ಗತ ವೃತ್ತಾಂತಗಳನ್ನು ತಿಳಿಸಿಕೊಡುತ್ತೇವೆ ಮತ್ತು ನಿಶ್ಚಯವಾಗಿಯೂ ನಾವು ನಿಮಗೆ ನಮ್ಮ ವತಿಯ ಉದ್ಬೋಧೆ (ಕುರ್‌ಆನ್)ಯನ್ನು ದಯಪಾಲಿಸಿರುತ್ತೇವೆ.
ﭠﭡﭢﭣﭤﭥﭦﭧﭨ
20:100 ಯಾರು ಅದರಿಂದ ವಿಮುಖನಾಗುತ್ತಾನೋ ಅವನು ನಿಶ್ಚಯವಾಗಿಯೂ ಪುನರುತ್ಥಾನದ ದಿನದಂದು ಪಾಪದ ಭಾರವನ್ನು ಹೊರುವನು.
ﭩﭪﭫﭬﭭﭮﭯﭰﭱ
20:101 ಅವರು ಅದರಲ್ಲಿ ಶಾಶ್ವತವಾಗಿರುವರು ಮತ್ತು ಅವರಿಗೆ ಪುನರುತ್ಥಾನದ ದಿನದಂದು ನಿಕೃಷ್ಟ ಭಾರವಿರುವುದು.
ﭲﭳﭴﭵﭶﭷﭸﭹﭺﭻ
20:102 ಕಹಳೆ ಮೊಳಗುವ ದಿನ ನಾವು ಅಪರಾಧಿಗಳನ್ನು (ಭಯಭೀತಿಯ ನಿಮಿತ್ತ) ನೀಲಿ ನೇತ್ರಗಳೊಂದಿಗೆ ಒಟ್ಟುಗೂಡಿಸುವೆವು.
ﭼﭽﭾﭿﮀﮁﮂ
20:103 ಅವರು ಪರಸ್ಪರ ಪಿಸುಮಾತಿನಲ್ಲಿ: ನೀವು (ಭೂಲೋಕದಲ್ಲಿ) ಕೇವಲ ಹತ್ತು ದಿನಗಳಷ್ಟೇ ತಂಗಿರುವಿರಿ, ಎಂದು ಹೇಳುವರು.
ﮃﮄﮅﮆﮇﮈﮉﮊﮋﮌﮍﮎﮏ
20:104 ಅವರು ಹೇಳುತ್ತಿರುವುದರ ವಾಸ್ತವಿಕತೆಯನ್ನು ನಾವು ಚೆನ್ನಾಗಿ ಬಲ್ಲೆವು. ಅವರ ಪೈಕಿ ಅತ್ಯುತ್ತಮ ಸಲಹೆಗಾರ: “ನೀವು ಕೇವಲ ಒಂದು ದಿನ ಮಾತ್ರ ತಂಗಿದ್ದೀರಿ”, ಎನ್ನುವರು.
ﮐﮑﮒﮓﮔﮕﮖﮗ
20:105 . ಅವರು ನಿಮ್ಮಿಂದ ಭವ್ಯ ಪರ್ವತಗಳ ಬಗ್ಗೆ ವಿಚಾರಿಸುತ್ತಾರೆ. ಹೇಳಿರಿ: ನನ್ನ ಪ್ರಭುವು ಅವುಗಳನ್ನು ಧೂಳನ್ನಾಗಿ ಮಾಡಿ ಹಾರಿಸಿ ಬಿಡುವನು.
ﮘﮙﮚﮛ
20:106 ಆಮೇಲೆ ಭೂಮಿಯನ್ನು ಸಮತಟ್ಟಾದ ಮೈದಾನವನ್ನಾಗಿ ಮಾಡಿ ಬಿಡುವನು.
ﮜﮝﮞﮟﮠﮡﮢ
20:107 ನೀವು ಅದರಲ್ಲಿ ಯಾವುದೇ ಏರು ಇಳಿತವನ್ನು ಕಾಣಲಾರಿರಿ.
ﮣﮤﮥﮦﮧﮨﮩﮪﮫﮬﮭﮮﮯﮰﮱ
20:108 ಆ ದಿನ ಜನರು ಕರೆ ನೀಡುವಾತನನ್ನು ಯಾವುದೇ ವಕ್ರತೆಯಿಲ್ಲದೆ ಹಿಂಬಾಲಿಸುವರು ಮತ್ತು ಶಬ್ದಗಳು ಪರಮ ದಯಾಮಯನಾದ ಅಲ್ಲಾಹನ ಮುಂದೆ ಅಡಗಿ ಬಿಡುವುವು.ನೀವು ಕೇವಲ ಮೆಲು ಸಪ್ಪಳದ ಹೊರತು ಇನ್ನೇನನ್ನೂ ಕೇಳಲಾರಿರಿ.
ﯓﯔﯕﯖﯗﯘﯙﯚﯛﯜﯝﯞﯟ
20:109 ಆ ದಿನ ಪರಮ ದಯಾಮಯನಾದ ಅಲ್ಲಾಹನು ಯಾರಿಗೆ ಅನುಮತಿ ನೀಡುವನೋ, ಮತ್ತು ಯಾರ ಮಾತು ಅವನಿಗೆ ತೃಪ್ತಿಕರವಾಗಿರುವುದೋ ಅವರ ಹೊರತು ಶಿಫಾರಸ್ಸು ಪ್ರಯೋಜನಕ್ಕೆ ಬಾರದು.
ﯠﯡﯢﯣﯤﯥﯦﯧﯨﯩﯪ
20:110 ಜನರ ಮುಂದಿರುವ ಮತ್ತು ಹಿಂದಿರುವ ಎಲ್ಲವನ್ನೂ ಅವನು ಅರಿಯುತ್ತಾನೆ. ಆದರೆ ಇತರರಿಗೆ ಅದರ ಸಂಪೂರ್ಣ ಜ್ಞಾನವಿಲ್ಲ.
ﯫﯬﯭﯮﯯﯰﯱﯲﯳﯴﯵﯶ
20:111 ಮುಖಗಳೆಲ್ಲವೂ ಚಿರಂತನನ್ನೂ, ಸರ್ವ ನಿಂತ್ರಕನೂ ಆದ ಅಲ್ಲಾಹನ ಮುಂದೆ ಶರಣಾಗಿರುವುವು.ಯಾರು ಅಕ್ರಮವನ್ನು ಹೊತ್ತು ಕೊಂಡಿರುತ್ತಾನೋ ಅವನು ನಿಜವಾಗಿಯೂ ಪತನ ಹೊಂದಿದನು.
ﯷﯸﯹﯺﯻﯼﯽﯾﯿﰀﰁﰂ
20:112 ಮತ್ತು ಯಾರು ಸತ್ಯವಿಶ್ವಾಸಿಯಾಗಿ ಸತ್ಕರ್ಮಗಳನ್ನು ಮಾಡುತ್ತಾನೋ ಅವನಿಗೆ ಯಾವುದೇ ಅನ್ಯಾಯ, ಮತ್ತು ಹಕ್ಕುಚ್ಯುತಿಯ ಭಯವಿಲ್ಲ.
ﰃﰄﰅﰆﰇﰈﰉﰊﰋﰌﰍﰎﰏﰐﰑ
20:113 ಇದೇ ರೀತಿ ನಾವು ಇದನ್ನು (ಅಂತಿಮ ದಿವ್ಯವಾಣಿಯನ್ನು) ನಿಮ್ಮ ಮೇಲೆ ಅರಬಿ ಭಾಷೆಯಲ್ಲಿ ಕುರ್‌ಆನನ್ನಾಗಿ ಅವತೀರ್ಣಗೊಳಿಸಿರುತ್ತೇವೆ. ಹಾಗೂ ಇದರಲ್ಲಿ ವಿಭಿನ್ನ ಶೈಲಿಯ ಮುನ್ನೆಚ್ಚರಿಕೆಯನ್ನು ವಿವರಿಸಿ ಕೊಟ್ಟಿರುತ್ತೇವೆ. ಇದೇಕೆಂದರೆ ಜನರು ಭಯಭಕ್ತಿಯುಳ್ಳವರಾಗಲೆಂದು, ಅಥವಾ ಅವರ ಮನದಲ್ಲಿ ಉಪದೇಶ ಮಾಡಲೆಂದಾಗಿದೆ.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤ
20:114 ಹಾಗೆಯೇ ಮಹೋನ್ನತನಾದ ಅಲ್ಲಾಹನು ನೈಜ ಅಧಿಪತಿ ಯಾಗಿರುವನು. (ಓ ಪೈಗಂಬರರೇ) ಕುರ್‌ಆನಿನ ದಿವ್ಯವಾಣಿಯು ಪೂರ್ತಿಯಾಗುವುದಕ್ಕೂ ಮುನ್ನ ನೀವು ಅದನ್ನು ಪಠಿಸುವುದರಲ್ಲಿ ಆತುರ ಪಡಬೇಡಿ.ಮತ್ತು ಓ ನನ್ನ ಪ್ರಭುವೇ, ನೀನು ನನ್ನ ಜ್ಞಾನವನ್ನು ಹೆಚ್ಚಿಸಿಕೊಡು ಎಂದು ಪ್ರಾರ್ಥಿಸಿರಿ.
ﭥﭦﭧﭨﭩﭪﭫﭬﭭﭮﭯﭰ
20:115 ನಾವು ಇದಕ್ಕೆ ಮೊದಲು ಆದಮ್‌ರವರಿಗೆ ಕರಾರು ಮಾಡಿದ್ದೆವು ಆದರೆ ಅವರು ಮರೆತುಬಿಟ್ಟರು ಮತ್ತು ನಾವು ಅವರಲ್ಲಿ ಯಾವುದೇ ಸ್ಥಿರ ಚಿತ್ತವನ್ನು ಕಾಣಲಿಲ್ಲ.
ﭱﭲﭳﭴﭵﭶﭷﭸﭹﭺ
20:116 ನಾವು ಮಲಕ್‌ಗಳಿಗೆ ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂದರ್ಭ: ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ನಿರಾಕರಿಸಿಬಿಟ್ಟನು.
ﭻﭼﭽﭾﭿﮀﮁﮂﮃﮄﮅﮆﮇ
20:117 ಆಗ ನಾವೆಂದೆವು: ಓ ಆದಮ್, ಇವನು ನಿನ್ನ ಮತ್ತು ನಿನ್ನ ಪತ್ನಿಯ ಶತ್ರವಾಗಿದ್ದಾನೆ, ನಿಮ್ಮಬ್ಬರನ್ನು ಸ್ವರ್ಗದಿಂದ ಹೊರಹಾಕಿಸದಿರಲಿ. ಅನ್ಯಥಾ ನೀವು ಆಪತ್ತಿನಲ್ಲಿ ಸಿಲುಕುವಿರಿ.
ﮈﮉﮊﮋﮌﮍﮎﮏ
20:118 ನೀವು ಇಲ್ಲಿ ಹಸಿಯುವುದಿಲ್ಲ, ಮತ್ತು ನಗ್ನರಾಗುವುದೂ ಇಲ್ಲ.
ﮐﮑﮒﮓﮔﮕﮖ
20:119 ಮತ್ತು ನಿಮಗೆ ಇಲ್ಲಿ ದಾಹವಾಗುವುದೂ ಇಲ್ಲ, ಬಿಸಿಲ ತಾಪವೂ ತಟ್ಟುವುದಿಲ್ಲ.
ﮗﮘﮙﮚﮛﮜﮝﮞﮟﮠﮡﮢﮣﮤ
20:120 ಆದರೆ ಶೈತಾನನು ಅವರನ್ನು ಪ್ರೇರೇಪಿಸಿಬಿಟ್ಟನು. ಅವನು ಹೇಳಿದನು: ಓ ಆದಮ್ ನಾನು ನಿಮಗೆ ಒಂದು ಅಮರ ವೃಕ್ಷ ಹಾಗೂ ಅನಶ್ವರ ಸಾಮ್ರಾಜ್ಯದ ಕುರಿತು ತಿಳಿಸ ಕೊಡಲೇ
ﮥﮦﮧﮨﮩﮪﮫﮬﮭﮮﮯﮰﮱﯓﯔﯕﯖ
20:121 ಕೊನೆಗೆ ಅವರಿಬ್ಬರೂ ಆ ಮರದಿಂದ ತಿಂದರು. ಆಗ ಅವರ ಗುಪ್ತಾಂಗಗಳು ಪರಸ್ಪರ ಗೋಚರವಾದವು ಮತ್ತು ಅವರು ಸ್ವರ್ಗದ ಎಲೆಯಿಂದ ತಮ್ಮ ಮೈಯನ್ನು ಮುಚ್ಚತೊಡಗಿದರು. ಆದಮ್‌ರವರು ತನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿ ದಾರಿತಪ್ಪಿದರು.
ﯗﯘﯙﯚﯛﯜﯝ
20:122 ತರುವಾಯ ಅವರ ಪ್ರಭುವು ಅವರನ್ನು ಆಯ್ದುಕೊಂಡನು. ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು ಹಾಗೂ ಸನ್ಮಾರ್ಗ ತೋರಿದನು.
ﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲ
20:123 ಅಲ್ಲಾಹನು ಹೇಳಿದನು: ನೀವಿಬ್ಬರು ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಇನ್ನು ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿ ತಪ್ಪಲಾರನು ಹಾಗೂ ವಿಪತ್ತಿನಲ್ಲಿ ಸಿಲುಕಲಾರನು.
ﯳﯴﯵﯶﯷﯸﯹﯺﯻﯼﯽﯾﯿ
20:124 ಅಲ್ಲಾಹನು ಹೇಳಿದನು: ನೀವಿಬ್ಬರು ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಇನ್ನು ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿ ತಪ್ಪಲಾರನು ಹಾಗೂ ವಿಪತ್ತಿನಲ್ಲಿ ಸಿಲುಕಲಾರನು.
ﰀﰁﰂﰃﰄﰅﰆﰇﰈ
20:125 ಅವನು ಕೇಳುವನು: ಓ ನನ್ನ ಪ್ರಭುವೇ, ನೀನು ನನ್ನನ್ನು ಕುರುಡನನ್ನಾಗಿ ಎಬ್ಬಿಸಿರುವುದೇಕೆ? ವಸ್ತುತಃ ನಾನು ದೃಷ್ಟಿಯುಳ್ಳವನಾಗಿದ್ದೆನು.
ﭑﭒﭓﭔﭕﭖﭗﭘﭙﭚ
20:126 ಆಗ ಅಲ್ಲಾಹನು ಹೇಳುವನು: ಇದೇ ಪ್ರಕಾರ ನಮ್ಮ ನಿದರ್ಶನಗಳು ನಿನ್ನ ಬಳಿ ಬಂದಾಗ ಅವುಗಳನ್ನು ನೀನು ಮರೆತು ಬಿಟ್ಟೆ
ﭛﭜﭝﭞﭟﭠﭡﭢﭣﭤﭥﭦﭧﭨ
20:127 ಇದೇ ಪ್ರಕಾರ ತನ್ನ ಪ್ರಭುವಿನ ದೃಷ್ಟಾಂತಗಳಲ್ಲಿ ವಿಶ್ವಾಸವಿರಿಸದವನಿಗೆ ನಾವು ಪ್ರತಿಫಲ ನೀಡುವೆವು ಮತ್ತು ನಿಸ್ಸಂಶಯವಾಗಿಯು ಪರಲೋಕದ ಯಾತನೆಯು ಅತ್ಯುಗ್ರವು, ಅತ್ಯಂತ ಶಾಶ್ವತವು ಆಗಿರುತ್ತದೆ.
ﭩﭪﭫﭬﭭﭮﭯﭰﭱﭲﭳﭴﭵﭶﭷﭸﭹﭺﭻ
20:128 ನಾವು ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿದ್ದೇವೆ. ಮತ್ತು ಇವರು ಅವರ ನಾಡುಗಳಲ್ಲಿ ಸಂಚರಿಸುತ್ತಾರೆ. ಇದು ಅವರಿಗೆ ಸನ್ಮಾರ್ಗ ತೋರಲಿಲ್ಲವೇ?ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿಶಾಲಿಗಳಿಗೆ ಅನೇಕ ನಿದರ್ಶನಗಳಿವೆ.
ﭼﭽﭾﭿﮀﮁﮂﮃﮄﮅ
20:129 (ಓ ಪೈಗಂಬರರೇ) ನಿಮ್ಮ ಪ್ರಭುವಿನಿಂದ ಮೊದಲೇ ನಿರ್ಧರಿತ ವಚನ ಮತ್ತು ನಿಶ್ಚಯಿಸಲಾದ ಕಾಲಾವಧಿ ಇಲ್ಲದಿರುತ್ತಿದ್ದರೆ ಆಗಲೇ (ಸತ್ಯನಿಷೇಧಿ ಖುರೈಶರ ಮೇಲೆ) ಯಾತನೆಯು ಎರಗಿಬಿಡುತ್ತಿತ್ತು.
ﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛ
20:130 ಅವರಾಡುವ ಮಾತುಗಳ ಬಗ್ಗೆ ಸಹನೆ ವಹಿಸಿರಿ ಮತ್ತು ಸೂರ್ಯೋದಯ ಹಾಗೂ ಸೂರ್ಯಾಸ್ತಮಯಕ್ಕೆ ಮೊದಲು ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಕೊಂಡಾಡಿರಿ.ರಾತ್ರಿಯ ವೇಳೆಗಳಲ್ಲಿಯು, ಹಗಲಿನ ಅಂಚುಗಳಲ್ಲಿಯು ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನೀವು ಸಂತೃಪ್ತಿ ಪಡೆಯಬಹುದು.
ﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯ
20:131 ನಾವು ಸತ್ಯ ನಿಷೇಧಿಗಳ ಪೈಕಿ ವಿವಿಧ ಜನಾಂಗಗಳಿಗೆ ನೀಡಿದ ಸುಖಭೋಗ ಮತ್ತು ಐಹಿಕ ಜೀವನದ ವೈಭವದೆಡೆಗೆ ನೀವು ಕಣ್ಣೆತ್ತೂ ನೋಡಬೇಡಿ. ಅವುಗಳನ್ನು ನಾವು ಪರೀಕ್ಷಿಸಲಿಕ್ಕಾಗಿ ಅವರಿಗೆ ಕೊಟ್ಟಿದ್ದೇವೆ. ನಿಮಗೆ ನಿಮ್ಮ ಪ್ರಭುವಿನಿಂದ ನೀಡಲಾದುದೇ ಉತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ.
ﮰﮱﯓﯔﯕﯖﯗﯘﯙﯚﯛﯜﯝﯞﯟﯠ
20:132 ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ನೀವು ಸಹ ಅದರಲ್ಲಿ ಸ್ಥಿರಚಿತ್ತರಾಗಿರಿ. ನಾವು ನಿಮ್ಮಿಂದ ಜೀವನಾಧಾರವನ್ನು ಕೇಳುತ್ತಿಲ್ಲ. ಬದಲಾಗಿ ಸ್ವತಃ ನಾವೇ ನಿಮಗೆ ಜೀವನಾಧಾರ ನೀಡುತ್ತೇವೆ ಮತ್ತು ಭಯಭಕ್ತಿಯುಳ್ಳವರಿಗೇ ಉತ್ತಮ ಪ್ರತಿಫಲವಿರುವುದು.
ﯡﯢﯣﯤﯥﯦﯧﯨﯩﯪﯫﯬﯭﯮﯯ
20:133 ಈ ಪೈಗಂಬರ್ ತನ್ನ ಪ್ರಭುವಿನಿಂದ ನಮ್ಮಲ್ಲಿಗೆ ಯಾವುದೇ ದೃಷ್ಟಾಂತವನ್ನು ಏಕೆ ತರುವುದಿಲ್ಲ? ಎಂದು ಅವರು ಕೇಳುತ್ತಾರೆ. (ಅಲ್ಲಾಹನು ಹೇಳುತ್ತಾನೆ) ಅವರ ಬಳಿ ಹಿಂದಿನ ಗ್ರಂಥದಲ್ಲಿದ್ದAತಹ ಸುಸ್ಪಷ್ಟ ಪುರಾವೆಯು ತಲುಪಲಿಲ್ಲವೇ?
ﯰﯱﯲﯳﯴﯵﯶﯷﯸﯹﯺﯻﯼﯽﯾﯿﰀﰁﰂﰃ
20:134 ಮತ್ತು ನಾವೇನಾದರೂ ಈ (ಕುರ್‌ಆನನ್ನು ಅವತೀರ್ಣಗೊಳಿಸುವುದಕ್ಕಿಂತ) ಮುಂಚೆಯೇ ಅವರನ್ನು ಯಾತನೆಯ ಮೂಲಕ ನಾಶ ಮಾಡಿರುತ್ತಿದ್ದರೆ ಖಂಡಿತವಾಗಿಯೂ ಅವರು ಹೇಳುತ್ತಿದ್ದರು: ನಮ್ಮ ಪ್ರಭು ನೀನೇಕೆ ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಕಳುಹಿಸಿ ಕೊಡಲಿಲ್ಲ? ನಾವು ಅಪಮಾನಿತರೂ ನಿಂದ್ಯರೂ ಆಗುವ ಮೊದಲು ನಿನ್ನ ಸೂಕ್ತಿಗಳನ್ನು ಅನುಸರಿಸುತ್ತಿದ್ದೆವು.
ﰄﰅﰆﰇﰈﰉﰊﰋﰌﰍﰎﰏﰐ
20:135 ಹೇಳಿರಿ: ಪ್ರತಿಯೊಬ್ಬನೂ ಪರಿಣಾಮದ ನಿರೀಕ್ಷೆಯಲ್ಲಿರುವನು. ಇನ್ನು ನೀವೂ ನಿರೀಕ್ಷಿಸುತ್ತಿರಿ. ಯಾರು ಋಜು ಮಾರ್ಗದವರು ಮತ್ತು ಯಾರು ಸನ್ಮಾರ್ಗ ಪಡೆದವರೆಂದು ಸಧ್ಯವೇ ನೀವು ಅರಿತುಕೊಳ್ಳಲಿದ್ದೀರಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers