ಸೂರಾ ಅಲ್-ಜುಮುಆ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಜುಮುಆ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಜುಮುಆ ಅನುವಾದ. ಸೂರಾ ಅಲ್-ಜುಮುಆ (Medinan) 11 ಆಯತ್.
Related
- ಸೂರಾ ಅಲ್-ಜುಮುಆ ಅನುವಾದಕನ್ನಡ
- ಸೂರಾ ಅಲ್-ಜುಮುಆ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಜುಮುಆ

ﭑﭒﭓﭔﭕﭖﭗﭘﭙﭚﭛﭜﭝ
62:1
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳ ಸಾಮ್ರಾಟನು, ಪರಮ ಪಾವನನು, ಪ್ರತಾಪಶಾಲಿಯು ಮತ್ತು ಯುಕ್ತಿಪರ‍್ಣನಾದ ಅಲ್ಲಾಹನ ಪಾವಿತ್ರ‍್ಯವನ್ನು ಸ್ತುತಿಸುತ್ತಿವೆ.
ﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲﭳ
62:2
ಅನಕ್ಷರಿಗಳ ನಡುವೆ ಅವರಿಂದಲೇ ಆದ ಒಬ್ಬ ಸಂದೇಶವಾಹಕನನ್ನು ಕಳುಹಿಸಿದವನು ಅವನೇ. ಅವರು ಅವನ ಸೂಕ್ತಿಗಳನ್ನು ಅವರಿಗೆ ಓದಿ ಹೇಳುತ್ತಾರೆ. ಅವರನ್ನು ಸಂಸ್ಕರಿಸುತ್ತಾರೆ ಅವರಿಗೆ ಗ್ರಂಥ ಹಾಗೂ ಸುಜ್ಞಾನವನ್ನು ಕಲಿಸಿಕೊಡುತ್ತಾರೆ. ಖಂಡಿತವಾಗಿಯೂ ಅವರು (ಅರಬರು) ಇದಕ್ಕಿಂತ ಮುಂಚೆ ಸ್ಪಷ್ಟವಾದ ಪಥ ಭ್ರಷ್ಟತೆಯಲ್ಲಿದ್ದರು.
ﭴﭵﭶﭷﭸﭹﭺﭻﭼﭽ
62:3
. (ಈ ಪೈಗಂಬರರನ್ನು) ಇನ್ನೂ ಅವರೊಂದಿಗೆ ಸೇರಿಲ್ಲದ ಇತರ (ಅರಬೇತರರ ಕಡೆಗೂ ಕಳುಹಿಸಲಾಗಿದೆ) ಮತ್ತು ಅವನು ಪ್ರತಾಪಶಾಲಿಯೂ ಯುಕ್ತಿಪರ‍್ಣನೂ ಆಗಿದ್ದಾನೆ.
ﭾﭿﮀﮁﮂﮃﮄﮅﮆﮇﮈﮉ
62:4
ಇದು ಅಲ್ಲಾಹನ ಅನುಗ್ರಹವಾಗಿದೆ. ತಾನಿಚ್ಛಿಸುವವರಿಗೆ ಇದನ್ನು ಅವನು ದಯಪಾಲಿಸುತ್ತಾನೆ. ಮತ್ತು ಅಲ್ಲಾಹನು ಮಹಾ ಅನುಗ್ರಹದಾತನಾಗಿದ್ದಾನೆ.
ﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣ
62:5
ತೌರಾತೀನ ಹೊಣೆ ವಹಿಸಿ ಕೊಡಲಾದವರು ಮತ್ತು ಆ ಹೊಣೆಯನ್ನು ನರ‍್ವಹಿಸದೇ ಇದ್ದವರ ಉದಾಹರಣೆಯು ಗ್ರಂಥಗಳನ್ನು ಹೊರುವಂತಹ ಕತ್ತೆ ಯಂತಿದೆ. ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವವರ ಉದಾಹರಣೆಯು ಅದೆಷ್ಟು ನಿಕೃಷ್ಟವಾಗಿದೆ. ಅಲ್ಲಾಹನು ಅಕ್ರಮಿಗಳಿಗೆ ಸನ್ಮರ‍್ಗ ನೀಡುವುದಿಲ್ಲ.
ﮤﮥﮦﮧﮨﮩﮪﮫﮬﮭﮮﮯﮰﮱﯓﯔﯕﯖ
62:6
ಪೈಗಂಬರರೇ ಹೇಳಿರಿ; ಓ ಯಹೂದರೇ ಇತರ ಜನರ ಹೊರತು ನೀವೇ ಅಲ್ಲಾಹನ ಆತ್ಮೀಯರೆಂಬ ವಾದ ನಿಮ್ಮದಾಗಿದ್ದರೆ ನೀವು ಮರಣವನ್ನು ಆಶಿಸಿರಿ. ನೀವು ಸತ್ಯಸಂಧರಾಗಿದ್ದರೆ.
ﯗﯘﯙﯚﯛﯜﯝﯞﯟﯠﯡ
62:7
ಅವರ ಕೈಗಳು ಮುಂಗಡವಾಗಿ ಮಾಡಿದ ದುಷ್ರ‍್ಮಗಳ ಕಾರಣವಾಗಿ ಅವರು ಎಂದಿಗೂ ಮರಣವನ್ನು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
ﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵ
62:8
ಹೇಳಿರಿ; ಯಾವ ಮರಣದಿಂದ ನೀವು ಓಡಿ ಹೋಗುತ್ತಿರುವಿರೋ ಅದು ನಿಮಗೆ ಬಂದೇತೀರುವುದು. ಆ ಬಳಿಕ ನೀವು ಸಕಲ ರಹಸ್ಯ ಮತ್ತು ಬಹಿರಂಗವನ್ನು ಅರಿಯುವವನ ಕಡೆಗೆ ಮರಳಿಸಲಾಗುವಿರಿ, ಆಗ ನೀವು ಮಾಡುತ್ತಿದ್ದ ಸಕಲ ರ‍್ಮಗಳನ್ನು ಅವನು ನಿಮಗೆ ತಿಳಿಸಿಕೊಡುವನು.
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧ
62:9
ಓ ಸತ್ಯ ವಿಶ್ವಾಸಿಗಳೇ ಶುಕ್ರವಾರದ ದಿನ ನಮಾಜ್ಗಾಗಿ ನಿಮ್ಮನ್ನು ಕರೆಯಲಾದರೆ ಅಲ್ಲಾಹನ ಸ್ಮರಣೆಯತ್ತ ಧಾವಿಸಿರಿ ಮತ್ತು ವ್ಯಾಪಾರವನ್ನು ತ್ಯಜಿಸಿರಿ. ನೀವು ತಿಳಿಯುವವರಾಗಿದ್ದರೆ. ನಿಮ್ಮ ಪಾಲಿಗೆ ಅತ್ಯುತ್ತಮವಾಗಿದೆ.
ﭨﭩﭪﭫﭬﭭﭮﭯﭰﭱﭲﭳﭴﭵﭶﭷ
62:10
ನಮಾಜ್ ನರ‍್ವಹಿಸಲಾದರೆ ನೀವು ಭೂಮಿಯಲ್ಲಿ ಚದುರಿ ಹೋಗಿರಿ ಮತ್ತು ಅಲ್ಲಾಹನ ಅನುಗ್ರಹವನ್ನು ಅರಸಿರಿ. ನೀವು ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿರಿ, ಇದು ನೀವು ವಿಜಯಗಳಿಸಲೆಂದಾಗಿದೆ.
ﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏ
62:11
ಅವರು ವ್ಯಾಪಾರ ಮತ್ತು ಮನೋರಂಜನೆಯನ್ನು ನೋಡಿದಾಗ ಅತ್ತಕಡೆ ಧಾವಿಸುತ್ತಾರೆ ಮತ್ತು ನಿಮ್ಮನ್ನು ನಿಂತಲ್ಲಿ ಬಿಟ್ಟುಬಿಡುತ್ತಾರೆ. ನೀವು ಹೇಳಿರಿ; ಅಲ್ಲಾಹನ ಬಳಿ ಇರುವುದು ಮನೋರಂಜನೆ ಮತ್ತು ವ್ಯಾಪಾರಕ್ಕಿಂತಲೂ ಉತ್ತಮವಾಗಿದೆ. ಅಲ್ಲಾಹನು ಅತ್ಯುತ್ತಮ ಅನ್ನಾಧಾರ ನೀಡುವವನಾಗಿದ್ದಾನೆ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







