ಯೂಸುಫ್ · 20/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
وَشَرَوْهُ بِثَمَنٍ بَخْسٍ دَرَاهِمَ مَعْدُودَةٍ وَكَانُوا فِيهِ مِنَ الزَّاهِدِينَ ۝٢٠
Wa sharawhu bisamanim bakhsin daraahima ma`doo datinw wa kaanoo feehi minaz zaahideen
📖 ಕನ್ನಡ ಅರ್ಥ
ಮತ್ತು ಅವರು ಅವನನ್ನು ಅತ್ಯಲ್ಪ ಬೆಲೆಗೆ ಕೆಲವು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಅವರಂತೂ ಯೂಸುಫ್‌ರವರ ವಿಚಾರದಲ್ಲಿ ಅತ್ಯಂತ ನಿರಾಸಕ್ತರಾಗಿದ್ದರು.

🎧 ಆಲಿಸಿ


📜 ಆಯತ್ 18-22 — ಸೂರಾ ಯೂಸುಫ್

18وَجَاءُوا عَلَىٰ قَمِيصِهِ بِدَمٍ كَذِبٍ ۚ قَالَ بَلْ سَوَّلَتْ لَكُمْ أَنفُسُكُمْ أَمْرًا ۖ فَصَبْرٌ جَمِيلٌ ۖ وَاللَّهُ الْمُسْتَعَانُ عَلَىٰ مَا تَصِفُونَ
ಅವರು ಯೂಸುಫ್‌ರ ಅಂಗಿಗೆ ಹುಸಿ ರಕ್ತ ಹಚ್ಚಿ ತಂದಿದ್ದರು. ತಂದೆಯು ಹೇಳಿದರು; (ವಾಸ್ತವಿಕತೆ ಹೀಗಿಲ್ಲ) ಆದರೆ ನಿಮಗೆ ನಿಮ್ಮ ಮನಸ್ಸು ಈ ಸ್ವರಚಿತ ಕೃತ್ಯವನ್ನು ಸುಂದರವಾಗಿ ತೋರಿಸಿದೆ. ಇನ್ನು ನನಗೆ ಉತ್ತಮ ಸಹನÉಯೇ ಲೇಸು ಮತ್ತು ನಿಮ್ಮ ಕಲ್ಪಿತ ಕಥೆಗಳ ಮೇಲೆ ಅಲ್ಲಾಹನಿಂದಲೇ ಸಹಾಯ ಬೇಡಲಾಗುವುದು.
19وَجَاءَتْ سَيَّارَةٌ فَأَرْسَلُوا وَارِدَهُمْ فَأَدْلَىٰ دَلْوَهُ ۖ قَالَ يَا بُشْرَىٰ هَٰذَا غُلَامٌ ۚ وَأَسَرُّوهُ بِضَاعَةً ۚ وَاللَّهُ عَلِيمٌ بِمَا يَعْمَلُونَ
ಅಲ್ಲಿಗೆ ಯಾತ್ರಾ ತಂಡವೊAದು ಬಂತು ಮತ್ತು ಅವರು ತಮ್ಮ ನೀರು ಸೇದುವವನನ್ನು ಕಳುಹಿಸಿದರು, ಅವನು ತನ್ನ ತೊಟ್ಟಿಯನ್ನು ಇಳಿಸಿದಾಗ ಹೇಳತೊಡಗಿದನು, ಆಹಾ ಶುಭಸುದ್ದಿ ಇದೆ! ಇವನೊಬ್ಬ ಬಾಲಕನಾಗಿದ್ದಾನೆ. ಅವರು ಅವನನ್ನು ವ್ಯಾಪಾರ ಸರಕನ್ನಾಗಿಸಿ ಅಡಗಿಸಿಟ್ಟರು ಮತ್ತು ಅಲ್ಲಾಹನು ಅವರು ಮಾಡುತ್ತಿದ್ದ ಕೃತ್ಯಗಳ ಕುರಿತು ಅರಿವುಳ್ಳವನಾಗಿದ್ದನು
20وَشَرَوْهُ بِثَمَنٍ بَخْسٍ دَرَاهِمَ مَعْدُودَةٍ وَكَانُوا فِيهِ مِنَ الزَّاهِدِينَ
ಮತ್ತು ಅವರು ಅವನನ್ನು ಅತ್ಯಲ್ಪ ಬೆಲೆಗೆ ಕೆಲವು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಅವರಂತೂ ಯೂಸುಫ್‌ರವರ ವಿಚಾರದಲ್ಲಿ ಅತ್ಯಂತ ನಿರಾಸಕ್ತರಾಗಿದ್ದರು.
21وَقَالَ الَّذِي اشْتَرَاهُ مِن مِّصْرَ لِامْرَأَتِهِ أَكْرِمِي مَثْوَاهُ عَسَىٰ أَن يَنفَعَنَا أَوْ نَتَّخِذَهُ وَلَدًا ۚ وَكَذَٰلِكَ مَكَّنَّا لِيُوسُفَ فِي الْأَرْضِ وَلِنُعَلِّمَهُ مِن تَأْوِيلِ الْأَحَادِيثِ ۚ وَاللَّهُ غَالِبٌ عَلَىٰ أَمْرِهِ وَلَٰكِنَّ أَكْثَرَ النَّاسِ لَا يَعْلَمُونَ
ಈಜಿಪ್ಟಿನವರಲ್ಲಿ ಅವರನ್ನು ಖರೀಸಿದವನು ತನ್ನ ಪತ್ನಿಗೆ ಹೇಳಿದನು; ನೀನು ಅವನನ್ನು ಗೌರವದಿಂದ ಇರಿಸು ಪ್ರಾಯಶಃ ಅವನು ನಮಗೆ ಪ್ರಯೋಜನಕಾರಿಯಾಗಬಹುದು. ಅಥವಾ ನಾವು ಅವನನ್ನು ನಮ್ಮ ಪುತ್ರನನ್ನಾಗಿಯು ಮಾಡಿಕೊಳ್ಳಬಹುದು. ಹೀಗೆ ನಾವು ಈಜಿಪ್ಟ್ನ ಭೂಮಿಯಲ್ಲಿ ಯೂಸುಫ್‌ರವರಿಗೆ ನೆಲೆಯನ್ನು ಸುಭದ್ರವಾಗಿಸಿಕೊಟ್ಟೆವು ಮತ್ತು ನಾವು ಅವರಿಗೆ ವಿಷಯಗಳ ಆಳಕ್ಕೆ ತಲುಪುವ ಜ್ಞಾನವನ್ನು ಕಲಿಸಿಕೊಟ್ಟೆವು ಮತ್ತು ಅಲ್ಲಾಹನು ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಸಾಮರ್ಥ್ಯವುಳ್ಳವನಾಗಿದ್ದಾನೆ. ಆದರೆ ಹೆಚ್ಚಿನ ಜನರು ಅಜ್ಞಾನಿಗಳಾಗಿರುತ್ತಾರೆ.
22وَلَمَّا بَلَغَ أَشُدَّهُ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ
ಮತ್ತು ಯೂಸುಫ್ ಯೌವ್ವನಕ್ಕೆ ತಲುಪಿದಾಗ ನಾವು ಅವರಿಗೆ ಯುಕ್ತಿಯನ್ನು ಸುಜ್ಞಾನವನ್ನು ದಯಪಾಲಿಸಿದೆವು ಮತ್ತು ಸಜ್ಜನರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
20ಆಯತ್

ಅನುವಾದ — ಯೂಸುಫ್ 20

ಸೂರಾ ಯೂಸುಫ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರು ಅವನನ್ನು ಅತ್ಯಲ್ಪ ಬೆಲೆಗೆ ಕೆಲವು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಅವರಂತೂ…

ಸೂರಾ ಆಯತ್ 20/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 18–22. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers