PDF —
44 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಮಆರಿಜ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಮಆರಿಜ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮಆರಿಜ್ ಅನುವಾದ. ಸೂರಾ ಅಲ್-ಮಆರಿಜ್ (Meccan) 44 ಆಯತ್.

← ಅಲ್-ಹಾಕ್ಕಾಸೂರಾ ಅಲ್-ಮಆರಿಜ್ ನೂಹ್ →


44 ಆಯತ್ · Meccan · ಕನ್ನಡ
bismillah
ﮮﮯﮰﮱﯓ
70:1 ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.
ﯔﯕﯖﯗﯘ
70:2 ಸತ್ಯನಿಷೇಧಿಗಳ ಮೇಲೆ ಬಂದೆರಗುವುದನ್ನು ತಡೆಯುವವನಾರೂ ಇಲ್ಲ.
ﯙﯚﯛﯜﯝ
70:3 ಆರೋಹಣಾ ಮರ‍್ಗಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಸಂಭವಿಸುವುದು)
ﯞﯟﯠﯡﯢﯣﯤﯥﯦﯧﯨﯩ
70:4 ಐವತ್ತು ಸಾವಿರ ರ‍್ಷಗಳ ಕಾಲಾವಧಿಯುಳ್ಳ ಒಂದು ದಿನದಲ್ಲಿ, ಮಲಕ್ಗಳು ಮತ್ತು ರೂಹ್ ಅವನೆಡೆಗೆ ಏರಿಹೋಗುತ್ತಾರೆ,
ﯪﯫﯬﯭ
70:5 ಆದ್ದರಿಂದ ಪೈಗಂಬರರೇ ನೀವು ಅತ್ಯುತ್ತಮವಾಗಿ ಸಹನೆವಹಿಸಿರಿ.
ﯮﯯﯰﯱ
70:6 ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.
ﯲﯳﯴ
70:7 ನಾವು ಅದನ್ನು ಸಮೀಪದಲ್ಲೇ ಕಾಣುತ್ತೇವೆ,
ﯵﯶﯷﯸﯹ
70:8 ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.
ﯺﯻﯼﯽ
70:9 ರ‍್ವತಗಳು ಹಿಂಜಿದ ಉಣ್ಣೆಯಂತಾಗುವುವು.
ﯾﯿﰀﰁﰂ
70:10 ಯಾವ ಆಪ್ತಮಿತ್ರನೂ ತನ್ನ ಆಪ್ತಮಿತ್ರನನ್ನು ವಿಚಾರಿಸಲಾರನು.
ﭑﭒﭓﭔﭕﭖﭗﭘﭙﭚﭛ
70:11 (ವಸ್ತುತಃ) ಅವರು ಪರಸ್ಪರರನ್ನು ತೋರಿಸಲಾಗುವರು. ಅಪರಾಧಿಯು ಆದಿನದ ಶಿಕ್ಷೆಯ ಬದಲಿಗೆ ತನ್ನ ಮಕ್ಕಳನ್ನು
ﭜﭝﭞ
70:12 ತನ್ನ ಪತ್ನಿಯನ್ನು ತನ್ನ ಸಹೋದರನನ್ನು.
ﭟﭠﭡﭢ
70:13 . ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
ﭣﭤﭥﭦﭧﭨﭩ
70:14 ಮತ್ತು ಭೂಮುಖದ ಮೇಲಿರುವ ಸಕಲರನ್ನೂ ಪ್ರಾಯಶ್ಚಿತ್ತವಾಗಿ ನೀಡಿ ಆ ದಿನದ ಶಿಕ್ಷೆಯಿಂದ ಪಾರಾಗಲು ಬಯಸುವನು,
ﭪﭫﭬﭭﭮ
70:15 ಖಂಡಿತವಾಗಿಯೂ ಹೀಗಾಗದು ನಿಶ್ಚಯವಾಗಿಯೂ ಆದು ಜ್ವಾಲೆಗಳುಳ್ಳ ಅಗ್ನಿಯಾಗಿದೆ.
ﭯﭰﭱ
70:16 ರ‍್ಮವನ್ನು ಸುಲಿದುಬಿಡುವಂತಹದ್ದಾಗಿದೆ.
ﭲﭳﭴﭵﭶ
70:17 ಸತ್ಯದಿಂದ ವಿಮುಖನಾದವನನ್ನು ಬೆನ್ನು ತಿರುಗಿಸಿದವನನ್ನು
ﭷﭸﭹ
70:18 ಮತ್ತು ಸಂಪತ್ತನ್ನು ಸಂಗ್ರಹಿಸಿ ಬಚ್ಚಿಟ್ಟವನನ್ನು ಅದು ಕೂಗಿ ಕರೆಯುವುದು.
ﭺﭻﭼﭽﭾﭿ
70:19 ನಿಸ್ಸಂದೇಹವಾಗಿಯೂ ಮನುಷ್ಯನು ಅತ್ಯಂತ ಅಸಹನೆಯುಳ್ಳವನಾಗಿ ಸೃಷ್ಟಿಸಲಾಗಿರುವನು.
ﮀﮁﮂﮃﮄ
70:20 ಅವನಿಗೆ ಆಪತ್ತು ಬಾಧಿಸಿದರೆ ದಿಗ್ಭಾçಂತನಾಗಿಬಿಡುತ್ತಾನೆ.
ﮅﮆﮇﮈﮉ
70:21 ಮತ್ತು ಅನುಕೂಲತೆಯು ಲಭಿಸಿದರೆ ಜಿಪುಣತೆ ತೋರತೊಡಗುತ್ತಾನೆ.
ﮊﮋﮌ
70:22 ಆದರೆ ನಮಾಜ಼್ ನರ‍್ವಹಿಸುವವರ ಹೊರತು.
ﮍﮎﮏﮐﮑﮒ
70:23 ಅವರು ತಮ್ಮ ನಮಾಜ಼್ನಲ್ಲಿ ಸದಾ ಸ್ಥಿರತೆಯನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
ﮓﮔﮕﮖﮗﮘ
70:24 ಅವರ ಸಂಪತ್ತಿನಲ್ಲಿ ಒಂದು ನಿಶ್ಚಿತ ಪಾಲು ಇದೆ;
ﮙﮚﮛ
70:25 ಬೇಡುವವನಿಗೆ ಮತ್ತು ಬೇಡದವನಿಗೆ ,
ﮜﮝﮞﮟﮠ
70:26 ಅವರು ಪ್ರತಿಫಲದ ದಿನ ಸತ್ಯವೇನೆಂದು ನಂಬುತ್ತಾರೆ,
ﮡﮢﮣﮤﮥﮦﮧ
70:27 ಅವರು ತಮ್ಮ ಪ್ರಭುವಿನ ಶಿಕ್ಷೆಯ ಬಗ್ಗೆ ಭಯಪಡುತ್ತಾರೆ.
ﮨﮩﮪﮫﮬﮭ
70:28 ನಿಸ್ಸಂಶಯವಾಗಿಯೂ ಅವರ ಪ್ರಭುವಿನ ಶಿಕ್ಷೆಯು ನರ‍್ಭೀತಿಯಿಂದ ಇರುವಂತಹದ್ದಲ್ಲ.
ﮮﮯﮰﮱﯓ
70:29 ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.
ﯔﯕﯖﯗﯘﯙﯚﯛﯜﯝﯞ
70:30 ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ದಾಸಿಯರ ಹೊರತು ಇದರಲ್ಲಿ ಅವರು ಆಕ್ಷೇಪರ‍್ಹರಲ್ಲ,
ﯟﯠﯡﯢﯣﯤﯥﯦ
70:31 ಇನ್ನು ಯಾರು ಅದರ ಹೊರತು ಅನ್ಯಮರ‍್ಗವನ್ನು ಬಯಸುತ್ತಾರೋ ಅವರೇ ಮಿತಿಮೀರಿದವರಾಗಿರುತ್ತಾರೆ.
ﯧﯨﯩﯪﯫﯬ
70:32 ಅವರು ತಮ್ಮ ಅಮಾನತ್ತು ಮತ್ತು ತಮ್ಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ﯭﯮﯯﯰﯱ
70:33 ತಮ್ಮ ಸಾಕ್ಷö್ಯಗಳ ಮೇಲೆ ಸ್ಥಿರವಾಗಿ ನಿಲ್ಲುತ್ತಾರೆ.
ﯲﯳﯴﯵﯶﯷ
70:34 ಮತ್ತು ತಮ್ಮ ನಮಾಜ಼್ಗಳನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
ﯸﯹﯺﯻﯼ
70:35 ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.
ﯽﯾﯿﰀﰁﰂ
70:36 (ಓ ಪೈಗಂಬರರೇ) ಈ ಸತ್ಯನಿಷೇಧಿಗಳಿಗೆ ಏನಾಗಿಬಿಟ್ಟಿದೆ ? ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ.
ﰃﰄﰅﰆﰇﰈ
70:37 ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,
ﰉﰊﰋﰌﰍﰎﰏﰐﰑ
70:38 ಅವರಲ್ಲಿ ಪ್ರತಿಯೊಬ್ಬನು ಸುಖಾನುಗ್ರಹಗಳು ತುಂಬಿದ ಸ್ರ‍್ಗದಲ್ಲಿ ತಾನು ಪ್ರವೇಶಿಸಲಿಕ್ಕಿರುವೆನೆಂದು ನಿರೀಕ್ಷಿಸುತ್ತಿದ್ದಾನೆಯೇ ?
ﰒﰓﰔﰕﰖﰗﰘ
70:39 ಖಂಡಿತ ಇಲ್ಲ ನಾವು ಅವರನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದೇವೆಂದು ಅವರು ಅರಿತಿದ್ದಾರೆ,
ﰙﰚﰛﰜﰝﰞﰟﰠ
70:40 ನಾನು ಉದಯಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಪ್ರಭುವಿನ ಮೇಲೆ ಆಣೆಹಾಕುತ್ತೇನೆ,
ﭑﭒﭓﭔﭕﭖﭗﭘﭙ
70:41 ಖಚಿತವಾಗಿಯೂ ಅವರಿಗಿಂತಲೂ ಉತ್ತಮ ಜನರನ್ನು ಅವರ ಬದಲಿಗೆ ತರಲು ನಾವು ಸರ‍್ಥರಿದ್ದೇವೆ ಮತ್ತು ನಾವು (ಹೀಗೆ ಮಾಡಲು) ಅಶಕ್ತರಲ್ಲ.
ﭚﭛﭜﭝﭞﭟﭠﭡﭢ
70:42 ಆದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾದ ಆ ದಿನವನ್ನು ಭೇಟಿಯಾಗುವತನಕ ನೀವು ಅವರನ್ನು ಪರಸ್ಪರ ಜಗಳವಾಡುತ್ತಿರಲು, ಆಟವಾಡುತ್ತಿರಲು ಬಿಟ್ಟುಬಿಡಿರಿ.
ﭣﭤﭥﭦﭧﭨﭩﭪﭫﭬ
70:43 ಅವರು ಯಾವುದೋ ಒಂದು ವಿಗ್ರಹದತ್ತ ಅತಿವೇಗವಾಗಿ ಓಡುತ್ತಿರುವವರೋ ಎಂಬಂತೆ, ತಮ್ಮ ಗೋರಿಗಳಿಂದ ಧಾವಂತದಿಂದ ಹೊರಡುವ ದಿನ.
ﭭﭮﭯﭰﭱﭲﭳﭴﭵﭶﭷ
70:44 ಅವರ ದೃಷ್ಟಿಗಳು ತಗ್ಗಿರುವುವು, ನಿಂದ್ಯತೆಯು ಅವರನ್ನು ಆವರಿಸುತ್ತಿರುವುದು, ಅವರಿಗೆ ಎಚ್ಚರಿಕೆ ನೀಡಲ್ಪಟ್ಟ ದಿನ ಅದೇ ಆಗಿದೆ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers