PDF —
52 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಖಲಮ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಖಲಮ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಖಲಮ್ ಅನುವಾದ. ಸೂರಾ ಅಲ್-ಖಲಮ್ (Meccan) 52 ಆಯತ್.



52 ಆಯತ್ · Meccan · ಕನ್ನಡ
bismillah
ﮉﮊﮋﮌﮍﮎ
68:1 ನೂನ್, ಲೇಖನಿ ಮತ್ತು ಅವರು (ಮಲಕ್) ಬರೆಯುತ್ತಿರುವುದರಾಣೆ.
ﮏﮐﮑﮒﮓﮔ
68:2 ನಿಮ್ಮ ಪ್ರಭುವಿನ ಅನುಗ್ರಹದಿಂದ (ಪೈಗಂಬರರೇ) ನೀವು ಹುಚ್ಚರಲ್ಲ.
ﮕﮖﮗﮘﮙﮚ
68:3 ನಿಸ್ಸಂಶಯವಾಗಿಯೂ ನಿಮಗೆ ಅನಂತ ಪ್ರತಿಫಲವಿದೆ.
ﮛﮜﮝﮞﮟ
68:4 ನಿಸ್ಸಂಶಯವಾಗಿಯೂ ನೀವು ಅತ್ತುö್ಯನ್ನತ ಗುಣಸ್ವಭಾವದವರಾಗಿರುವಿರಿ.
ﮠﮡﮢ
68:5 ಸಧ್ಯವೇ ನೀವು ನೋಡುವಿರಿ, ಅವರೂ (ಸತ್ಯನಿಷೇಧಿಗಳು) ನೋಡಲಿರುವರು.
ﮣﮤﮥ
68:6 ನಿಮ್ಮಲ್ಲಿ ಹುಚ್ಚನಾರೆಂದು.
ﮦﮧﮨﮩﮪﮫﮬﮭﮮﮯﮰﮱ
68:7 ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ತನ್ನ ಮರ‍್ಗದಿಂದ ಭ್ರಷ್ಟರಾಗುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ ಮತ್ತು ಸನ್ಮರ‍್ಗ ಪಡೆದವರ ಕುರಿತೂ ಅವನು ಚೆನ್ನಾಗಿ ಬಲ್ಲನು.
ﯓﯔﯕﯖ
68:8 ಆದ್ದರಿಂದ ನೀವು ಸುಳ್ಳಾಗಿಸುವವರನ್ನು ಅನುಸರಿಸಬೇಡಿರಿ.
ﯗﯘﯙﯚﯛ
68:9 ನೀವು (ರ‍್ಮದ ವಿಷಯದಲ್ಲಿ) ಮೃದುತ್ವ ತೋರಿದರೆ ನಾವೂ ಮೃದುತ್ವ ತೋರುವೆವೆಂದು ಅವರು ಬಯಸುತ್ತಾರೆ,
ﯜﯝﯞﯟﯠﯡ
68:10 ನೀವು ಅತ್ಯಧಿಕ ಆಣೆ ಹಾಕುವ ಯಾವೊಬ್ಬ ವ್ಯಕ್ತಿಯನ್ನೂ ಅನುಸರಿಸಕೂಡದು,
ﯢﯣﯤﯥ
68:11 ಪರದೋಷಣೆ ಮಾಡುವವನ, ಚಾಡಿಕೋರನ.
ﯦﯧﯨﯩﯪ
68:12 ಒಳಿತಿನಿಂದ ತಡೆಯುವವನ, ಹದ್ದು ಮೀರುವವನ, ಪಾಪಿಷ್ಠನ,
ﯫﯬﯭﯮﯯ
68:13 ಕ್ರೂರ ಮತ್ತು ಕುಲಗೆಟ್ಟವನ (ಅನುಸರಿಸಬೇಡಿರಿ)
ﯰﯱﯲﯳﯴﯵ
68:14 ಅವನು ಸಂಪತ್ತು ಮತ್ತು ಸಂತಾನವುಳ್ಳವನಾಗಿದ್ದಾನೆ ಎಂಬ ಕಾರಣದಿಂದ (ಹಿಗ್ಗುತ್ತಾನೆ).
ﯶﯷﯸﯹﯺﯻﯼﯽ
68:15 ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಹೇಳಲಾದರೆ ಇವೆಲ್ಲಾ ‘ಪರ‍್ವಿಕರ ಕಟ್ಟು ಕಥೆಗಳು' ಎನ್ನುತ್ತಾನೆ.
ﯾﯿﰀﰁ
68:16 ಸದ್ಯವೇ ನಾವು ಅವನ ಸೊಂಡಲಿನ ಮೇಲೆ ಬರೆ ಹಾಕಲಿರುವೆವು.
ﭑﭒﭓﭔﭕﭖﭗﭘﭙﭚﭛ
68:17 ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ ಫಲಗಳನ್ನು ಕೊಯ್ಯುವೆವೆಂದು ಅವರು ಆಣೆ ಹಾಕಿದ ಸಂರ‍್ಭವನ್ನು ಸ್ಮರಿಸಿರಿ.
ﭜﭝﭞ
68:18 ಅವರು ಇನ್ಶಾಅಲ್ಲಾಹ್ (ಅಲ್ಲಾಹನು ಇಚ್ಛಿಸಿದರೆ) ಎಂದು ಹೇಳಲಿಲ್ಲ.
ﭟﭠﭡﭢﭣﭤﭥﭦ
68:19 ಅವರು ನಿದ್ರಿಸುತ್ತಿದ್ದಾಗ ನಿಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ಒಂದು ವಿಪತ್ತು ಆವರಿಸಿಬಿಟ್ಟಿತು.
ﭧﭨﭩ
68:20 ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.
ﭪﭫﭬ
68:21 ಮುಂಜಾನೆ ಆಗುತ್ತಲೇ ಅವರು ಪರಸ್ಪರ ಕೂಗಿ ಹೇಳಿದರು;
ﭭﭮﭯﭰﭱﭲﭳﭴ
68:22 ನಿಮಗೆ ಕೊಯ್ಯಲಿಕ್ಕಿದ್ದರೆ ನಿಮ್ಮ ತೋಟದೆಡೆಗೆ ಹೊರಡಿರಿ.
ﭵﭶﭷﭸ
68:23 ಅನಂತರ ಅವರೆಲ್ಲರೂ ಪರಸ್ಪರ ಪಿಸುಗುಟ್ಟುತ್ತಾ ತೆರಳಿದರು.
ﭹﭺﭻﭼﭽﭾﭿ
68:24 ಇಂದು ಯಾವೊಬ್ಬ ಬಡವನೂ ನಿಮ್ಮ ಬಳಿಗೆ ಬರದಂತಾಗಲಿ.
ﮀﮁﮂﮃﮄ
68:25 ನಾವು ಬಡವರನ್ನು ತಡೆಯಲು ಶಕ್ತರು ಎಂದು ಭಾವಿಸಿ ಅವರು ಮುಂಜಾನೆಯೇ ತೆರಳಿದರು,
ﮅﮆﮇﮈﮉﮊ
68:26 ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ
ﮋﮌﮍﮎ
68:27 . ಅಲ್ಲ, ನಾವು ವಂಚಿತರಾಗಿದ್ದೇವೆ.
ﮏﮐﮑﮒﮓﮔﮕﮖ
68:28 ಅವರ ಪೈಕಿ ಉತ್ತಮನಾಗಿದ್ದವನು ಹೇಳಿದನು; ನೀವು ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುವುದಿಲ್ಲವೇಕೆ? ಎಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
ﮗﮘﮙﮚﮛﮜﮝ
68:29 ಆಗ ಅವರು ನಮ್ಮ ಪ್ರಭು ಪರಮಪಾವವನು. ನಿಸ್ಸಂದೇಹವಾಗಿಯೂ ನಾವು ಅಕ್ರಮಿಗಳಾಗಿದ್ದೆವು ಎಂದರು.
ﮞﮟﮠﮡﮢﮣ
68:30 ಬಳಿಕ ಅವರು ಪರಸ್ಪರರನ್ನು ಆಕ್ಷೇಪಿಸತೊಡಗಿದರು.
ﮤﮥﮦﮧﮨﮩ
68:31 ಅಯ್ಯೋ ದರ‍್ಗತಿಯೇ, ಖಂಡಿತವಾಗಿಯೂ ನಾವು ಅತಿಕ್ರಮಿಗಳಾಗಿದ್ದೆವು ಎಂದರು.
ﮪﮫﮬﮭﮮﮯﮰﮱﯓﯔﯕ
68:32 ನಮ್ಮ ಪ್ರಭು ನಮಗೆ ಇದಕ್ಕಿಂತಲೂ ಉತ್ತಮವಾಗಿರುವುದನ್ನು ಇದರ ಬದಲಿಗೆ ಕೊಡಬಹುದು. ನಿಸ್ಸಂದೇಹವಾಗಿಯೂ ನಾವು ನಮ್ಮ ಪ್ರಭುವಿನಲ್ಲೇ ನಿರೀಕ್ಷೆಯನ್ನಿರಿಸಿದ್ದೇವೆ.
ﯖﯗﯘﯙﯚﯛﯜﯝﯞﯟﯠ
68:33 ಶಿಕ್ಷೆ ಹೀಗೆಯೇ ಇರುತ್ತದೆ ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ. ಅಕಟ ಅವರು ಅರಿಯುತ್ತಿದ್ದರೆ!
ﯡﯢﯣﯤﯥﯦﯧ
68:34 ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹಪರ‍್ಣ ಸ್ರ‍್ಗೋದ್ಯಾನಗಳಿವೆ.
ﯨﯩﯪﯫ
68:35 ನಾವು ಆಜ್ಞಾಪಾಲಕರನ್ನು ಅಪರಾಧಿಗಳಂತೆ ಮಾಡುವೆವೇ ?
ﯬﯭﯮﯯﯰ
68:36 ನಿಮಗೇನಾಗಿದೆ ? ನೀವು ಹೇಗೆ ತರ‍್ಮಾನ ಮಾಡುತ್ತಿರುವಿರಿ ?
ﯱﯲﯳﯴﯵﯶ
68:37 ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?
ﯷﯸﯹﯺﯻﯼ
68:38 ಅಂದರೆ ಅದರಲ್ಲಿ ನೀವು ಮೆಚ್ಚುವಂತಹ ವಿಚಾರಗಳು ಬರೆದಿವೆಯೇ ?
ﯽﯾﯿﰀﰁﰂﰃﰄﰅﰆﰇﰈﰉ
68:39 ನೀವು ತರ‍್ಮಾನಿಸುದೆಲ್ಲವೂ ನಿಮಗಿರುವುದೆಂದು ಪುನರುತ್ಥಾನದ ದಿನದವರೆಗೆ ನಾವು ಪಾಲಿಸಲೇಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದುಕೊಂಡಿರುವಿರಾ ?
ﰊﰋﰌﰍﰎ
68:40 ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.
ﰏﰐﰑﰒﰓﰔﰕﰖﰗ
68:41 ಅಥವಾ, ಅವರಿಗೆ ಸಹಭಾಗಿಗಳಿದ್ದಾರೆಯೇ ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ಕರೆತರಲಿ.
ﰘﰙﰚﰛﰜﰝﰞﰟﰠﰡ
68:42 ಕಣಕಾಲನ್ನು ಪ್ರಕಟ ಮಾಡಲಾಗುವ ದಿನ ಸಾಷ್ಟಾಂಗ ಮಾಡಲು ಅವರನ್ನು ಕರೆಯಲಾಗುವುದು, ಆಗ ಅವರಿಗೆ ಸಾಷ್ಟಾಂಗ ಮಾಡಲು ಸಾಧ್ಯವಾಗದು.
ﭑﭒﭓﭔﭕﭖﭗﭘﭙﭚﭛﭜﭝ
68:43 ಅವರ ದೃಷ್ಟಿಗಳು ತಗ್ಗಿರುವುವು ಮತ್ತು ಅಪಮಾನವು ಅವರನ್ನು ಆವರಿಸಿಕೊಂಡಿರುವುದು. ವಸ್ತುತಃ ಅವರು ಕ್ಷೇಮವಾಗಿದ್ದ ಸಮಯದಲ್ಲಿ ಸಾಷ್ಟಾಂಗ ಮಾಡಲಿಕ್ಕಾಗಿ ಕರೆಯಲ್ಪಡುತ್ತಿದ್ದರು.
ﭞﭟﭠﭡﭢﭣﭤﭥﭦﭧﭨﭩ
68:44 (ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ, ಅವರಿಗೆ ಅರಿವೇ ಆಗದಂತಹ ರೀತಿಯಲ್ಲಿ ನಾವು ಅವರನ್ನು ಮೆಲ್ಲ ಮೆಲ್ಲನೆ (ನರಕದೆಡೆಗೆ) ಎಳೆದೊಯ್ಯುವೆವು.
ﭪﭫﭬﭭﭮﭯﭰ
68:45 ನಾನು ಅವರಿಗೆ ಕಾಲಾವಕಾಶ ನೀಡುತ್ತೇನೆ, ನಿಸ್ಸಂಶಯವಾಗಿಯೂ ನನ್ನ ತಂತ್ರವು ಪ್ರಬಲವಾಗಿದೆ.
ﭱﭲﭳﭴﭵﭶﭷﭸ
68:46 ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?
ﭹﭺﭻﭼﭽﭾ
68:47 ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರದನ್ನು ಬರೆದಿಡುತ್ತಿದ್ದಾರೆಯೇ ?
ﭿﮀﮁﮂﮃﮄﮅﮆﮇﮈﮉﮊ
68:48 ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗಬೇಡಿರಿ. ಅವರು ತೀವ್ರ ದುಃಖಪೀಡಿತರಾಗಿದ್ದು ಪ್ರರ‍್ಥಿಸಿದ ಸಂರ‍್ಭ.
ﮋﮌﮍﮎﮏﮐﮑﮒﮓﮔﮕ
68:49 ತಮ್ಮ ಪ್ರಭುವಿನ ಅನುಗ್ರಹವು ಅವರಿಗೆ ಲಭಿಸದಿರುತ್ತಿದ್ದರೆ ಅವರು ನಿಂಧ್ಯರಾಗಿ ಬಟ್ಟಬಯಲಿನಲ್ಲಿ ಎಸೆಯಲ್ಪಡುತ್ತಿದ್ದರು.
ﮖﮗﮘﮙﮚﮛ
68:50 ಆದರೆ ಅವರ ಪ್ರಭು ಅವರನ್ನು ಪುನಃ ಆರಿಸಿಕೊಂಡನು. ಮತ್ತು ಅವರನ್ನು ಸಜ್ಜನರೊಂದಿಗೆ ಸೇರಿಸಿದನು.
ﮜﮝﮞﮟﮠﮡﮢﮣﮤﮥﮦﮧﮨ
68:51 ಸತ್ಯನಿಷೇಧಿಗಳು ಕುರ್ಆನನ್ನು ಆಲಿಸುವಾಗಲೆಲ್ಲ ತಮ್ಮ ತೀಕ್ಷ÷್ಣಕಣ್ಣುಗಳಿಂದ ನಿಮ್ಮನ್ನು ಬೀಳ್ಮಾಡುವಷ್ಟಕ್ಕೆ (ಮುಗ್ಗರಿಸಿ ಬೀಳಿಸಲು) ತಲುಪಿದ್ದಾರೆ ಮತ್ತು ಹೇಳುತ್ತಾರೆ; ಖಂಡಿತ ಇವನೊಬ್ಬ ಹುಚ್ಚನಾಗಿದ್ದಾನೆ.
ﮩﮪﮫﮬﮭﮮ
68:52 ವಾಸ್ತವದಲ್ಲಿ ಇದು (ಕುರ್ಆನ್) ರ‍್ವಲೋಕದವರಿಗೆ ಸ್ಪಷ್ಟ ಉದ್ಭೋಧೆಯಾಗಿದೆ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers