ಸೂರಾ ಅಲ್-ಮುರ್ಸಲಾತ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಮುರ್ಸಲಾತ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (50 ಆಯತ್ — مكية). ಅಲ್-ಮುರ್ಸಲಾತ್ ಆಲಿಸಿ, ಅಲ್-ಮುರ್ಸಲಾತ್ ಅನುವಾದ, ಅಲ್-ಮುರ್ಸಲಾತ್ mp3, ಅಲ್-ಮುರ್ಸಲಾತ್ pdf.

ಸೂರಾ ಅಲ್-ಮುರ್ಸಲಾತ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالْمُرْسَلَاتِ عُرْفًا ۝١
📖 ಅನುವಾದ ಆಯತ್ 1
ನಿರಂತರವಾಗಿ ಕಳುಹಿಸಲಾಗುವ ಮಾರುತಗಳಾಣೆ.
فَالْعَاصِفَاتِ عَصْفًا ۝٢
📖 ಅನುವಾದ ಆಯತ್ 2
ಅನಂತರ ರಭಸದಿಂದ ಬಿರುಸಾಗಿ ಬೀಸುವ ಚಂಡಮಾರುತಗಳಾಣೆ.
وَالنَّاشِرَاتِ نَشْرًا ۝٣
📖 ಅನುವಾದ ಆಯತ್ 3
ಅನಂತರ (ಮೋಡವನ್ನು) ಎಬ್ಬಿಸಿ ಹರಡಿಸುವ ಮಾರುತಗಳಾಣೆ.
فَالْفَارِقَاتِ فَرْقًا ۝٤
📖 ಅನುವಾದ ಆಯತ್ 4
ಬಳಿಕ (ಅವುಗಳನ್ನು) ಸೀಳಿ ಬರ‍್ಪಡಿಸುವ ಮಲಕ್ಗಳಾಣೆ.
فَالْمُلْقِيَاتِ ذِكْرًا ۝٥
📖 ಅನುವಾದ ಆಯತ್ 5
ಮತ್ತು ಸಂದೇಶ ತರುವಂತಹ ದೂತರಾಣೆ. ಮತ್ತು ಮನಸ್ಸಿನಲ್ಲಿ ಅಲ್ಲಾಹನ ಸ್ಮರಣೆಯನ್ನು ಹಾಕುವ ಮಲಕ್ಗಳಾಣೆ.
عُذْرًا أَوْ نُذْرًا ۝٦
📖 ಅನುವಾದ ಆಯತ್ 6
ಅದು ನೆಪವನ್ನು ನಿವಾರಿಸಲು ಅಥವಾ ಎಚ್ಚರಿಕೆ ನೀಡಲು ಆಗಿರುತ್ತದೆ.
إِنَّمَا تُوعَدُونَ لَوَاقِعٌ ۝٧
📖 ಅನುವಾದ ಆಯತ್ 7
ನಿಮಗೆ ಎಚ್ಚರಿಕೆ ನೀಡಲಾಗುತ್ತಿರುವ (ಪ್ರಳಯ) ಖಂಡಿತ ಸಂಭವಿಸಿಯೇ ತೀರುವುದು.
فَإِذَا النُّجُومُ طُمِسَتْ ۝٨
📖 ಅನುವಾದ ಆಯತ್ 8
ನಕ್ಷತ್ರಗಳ ಪ್ರಕಾಶ ಅಳಿಸಲಾಗುವಾಗ.
وَإِذَا السَّمَاءُ فُرِجَتْ ۝٩
📖 ಅನುವಾದ ಆಯತ್ 9
ಆಕಾಶವನ್ನು ಸೀಳಲಾಗುವಾಗ.
وَإِذَا الْجِبَالُ نُسِفَتْ ۝١٠
📖 ಅನುವಾದ ಆಯತ್ 10
ರ‍್ವತಗಳು ಧೂಳಾಗಿಸಲಾಗುವಾಗ
وَإِذَا الرُّسُلُ أُقِّتَتْ ۝١١
📖 ಅನುವಾದ ಆಯತ್ 11
ಸಂದೇಶವಾಹಕರನ್ನು ನಿಶ್ಚಿತ ಸಮಯಕ್ಕೆ (ಸಾಕ್ಷಿ ನೀಡಲು) ಕರೆತರಲಾಗುವಾಗ
لِأَيِّ يَوْمٍ أُجِّلَتْ ۝١٢
📖 ಅನುವಾದ ಆಯತ್ 12
ಯಾವ ದಿನಕ್ಕಾಗಿ ಅವರಿಗೆ ಕಾಲಾವಕಾಶ ನೀಡಲಾಗಿದೇ ?
لِيَوْمِ الْفَصْلِ ۝١٣
📖 ಅನುವಾದ ಆಯತ್ 13
ತರ‍್ಪಿನ ದಿನಕ್ಕಾಗಿ.
وَمَا أَدْرَاكَ مَا يَوْمُ الْفَصْلِ ۝١٤
📖 ಅನುವಾದ ಆಯತ್ 14
(ಓ ಪೈಗಂಬರರೇ) ತರ‍್ಪಿನ ದಿನ ಏನೆಂದು ನಿಮಗೇನು ಗೊತ್ತು ?
وَيْلٌ يَوْمَئِذٍ لِّلْمُكَذِّبِينَ ۝١٥
📖 ಅನುವಾದ ಆಯತ್ 15
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.
أَلَمْ نُهْلِكِ الْأَوَّلِينَ ۝١٦
📖 ಅನುವಾದ ಆಯತ್ 16
(ಸತ್ಯನಿಷೇಧಿ) ನಾವು ಪರ‍್ವಿಕರನ್ನು ನಾಶ ಗೊಳಿಸಲಿಲ್ಲವೇ ?
ثُمَّ نُتْبِعُهُمُ الْآخِرِينَ ۝١٧
📖 ಅನುವಾದ ಆಯತ್ 17
ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.
كَذَٰلِكَ نَفْعَلُ بِالْمُجْرِمِينَ ۝١٨
📖 ಅನುವಾದ ಆಯತ್ 18
ನಾವು ಅಪರಾಧಿಗಳೊಂದಿಗೆ ಹೀಗೇ ರ‍್ತಿಸುತ್ತೇವೆ.
وَيْلٌ يَوْمَئِذٍ لِّلْمُكَذِّبِينَ ۝١٩
📖 ಅನುವಾದ ಆಯತ್ 19
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿದೆ.
أَلَمْ نَخْلُقكُّم مِّن مَّاءٍ مَّهِينٍ ۝٢٠
📖 ಅನುವಾದ ಆಯತ್ 20
ಏನು ನಾವು ನಿಮಗೆ ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ ?
فَجَعَلْنَاهُ فِي قَرَارٍ مَّكِينٍ ۝٢١
📖 ಅನುವಾದ ಆಯತ್ 21
ತರುವಾಯ ನಾವು ಅದನ್ನು ಸುರಕ್ಷಿತ ಸ್ಥಳದಲ್ಲಿಟ್ಟೆವು.
إِلَىٰ قَدَرٍ مَّعْلُومٍ ۝٢٢
📖 ಅನುವಾದ ಆಯತ್ 22
ಒಂದು ನಿಶ್ಚಿತಾವಧಿಯವರೆಗೆ.
فَقَدَرْنَا فَنِعْمَ الْقَادِرُونَ ۝٢٣
📖 ಅನುವಾದ ಆಯತ್ 23
ನಂತರ ನಾವು (ಅವನ ಅಂಗಗಳ) ಪರಿಮಾಣ ನಿಶ್ಚಯಿಸಿದೆವು ಮತ್ತು ನಾವು ಅದೆಷ್ಟು ಚೆನ್ನಾಗಿ ಪರಿಮಾಣವನ್ನು ನಿಶ್ಚಯಿಸುವವರಾಗಿರುವೆವು.
وَيْلٌ يَوْمَئِذٍ لِّلْمُكَذِّبِينَ ۝٢٤
📖 ಅನುವಾದ ಆಯತ್ 24
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
أَلَمْ نَجْعَلِ الْأَرْضَ كِفَاتًا ۝٢٥
📖 ಅನುವಾದ ಆಯತ್ 25
ನಾವು ಭೂಮಿಯನ್ನು ಒಟ್ಟುಗೂಡಿಸುವುದನ್ನಾಗಿ ಮಾಡಲಿಲ್ಲವೇ?
أَحْيَاءً وَأَمْوَاتًا ۝٢٦
📖 ಅನುವಾದ ಆಯತ್ 26
ಜೀವಂತರನ್ನೂ ಮೃತರನ್ನೂ?
وَجَعَلْنَا فِيهَا رَوَاسِيَ شَامِخَاتٍ وَأَسْقَيْنَاكُم مَّاءً فُرَاتًا ۝٢٧
📖 ಅನುವಾದ ಆಯತ್ 27
ನಾವು ಅದರಲ್ಲಿ ಎತ್ತರವಾದ ರ‍್ವತಗಳನ್ನಿರಿಸಿದೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಯಲು ನೀಡಿದೆವು.
وَيْلٌ يَوْمَئِذٍ لِّلْمُكَذِّبِينَ ۝٢٨
📖 ಅನುವಾದ ಆಯತ್ 28
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
انطَلِقُوا إِلَىٰ مَا كُنتُم بِهِ تُكَذِّبُونَ ۝٢٩
📖 ಅನುವಾದ ಆಯತ್ 29
(ಸತ್ಯನಿಷೇಧಿಗಳೊಡನೆ ಹೇಳಲಾಗುವುದು) ನೀವು ಯಾವುದನ್ನು ಸುಳ್ಳಾಗಿಸುತ್ತಿದ್ದಿರೋ ಆ ನರಕದತ್ತ ನಡೆಯಿರಿ.
انطَلِقُوا إِلَىٰ ظِلٍّ ذِي ثَلَاثِ شُعَبٍ ۝٣٠
📖 ಅನುವಾದ ಆಯತ್ 30
ನರಕದ ಹೊಗೆಯ ಮೂರು ಶಾಖೆಗಳಿರುವ ನೆರಳಿನೆಡೆಗೆ ನಡೆಯಿರಿ.
لَّا ظَلِيلٍ وَلَا يُغْنِي مِنَ اللَّهَبِ ۝٣١
📖 ಅನುವಾದ ಆಯತ್ 31
ಆ ನೆರಳು ತಂಪನ್ನೂ ನೀಡಲಾರದು ಮತ್ತು ಅಗ್ನಿಜ್ವಾಲೆಯಿಂದಲೂ ರಕ್ಷಿಸಲಾರದು.
إِنَّهَا تَرْمِي بِشَرَرٍ كَالْقَصْرِ ۝٣٢
📖 ಅನುವಾದ ಆಯತ್ 32
ಖಂಡಿತವಾಗಿಯೂ ಆ ನರಕಾಗ್ನಿಯು ದೊಡ್ಡ ದೊಡ್ಡ ಭವನಗಳಂತಿರುವ ಕಿಡಿಗಳನ್ನು ಹಾರಿಸುತ್ತಿರುವುದು.
كَأَنَّهُ جِمَالَتٌ صُفْرٌ ۝٣٣
📖 ಅನುವಾದ ಆಯತ್ 33
ಅವು ಬಿದ್ದು ಹಳದಿ ರ‍್ಣದ ಒಂಟೆಗಳಂತಿರುವುವು.
وَيْلٌ يَوْمَئِذٍ لِّلْمُكَذِّبِينَ ۝٣٤
📖 ಅನುವಾದ ಆಯತ್ 34
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
هَٰذَا يَوْمُ لَا يَنطِقُونَ ۝٣٥
📖 ಅನುವಾದ ಆಯತ್ 35
ಅದು ಅವರು ಮಾತನಾಡಲಾಗದ ದಿನವಾಗಿದೆ.
وَلَا يُؤْذَنُ لَهُمْ فَيَعْتَذِرُونَ ۝٣٦
📖 ಅನುವಾದ ಆಯತ್ 36
ಅಂದು ನೆಪಗಳನ್ನು ಒಡ್ಡಲೂ ಅವರಿಗೆ ಅನುಮತಿ ನೀಡಲಾಗದು.
وَيْلٌ يَوْمَئِذٍ لِّلْمُكَذِّبِينَ ۝٣٧
📖 ಅನುವಾದ ಆಯತ್ 37
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
هَٰذَا يَوْمُ الْفَصْلِ ۖ جَمَعْنَاكُمْ وَالْأَوَّلِينَ ۝٣٨
📖 ಅನುವಾದ ಆಯತ್ 38
ಇದುವೇ ತರ‍್ಪಿನ ದಿನ. ನಾವು ನಿಮ್ಮನ್ನು ಮತ್ತು ಪರ‍್ವಿಕರನ್ನು ಒಟ್ಟುಗೂಡಿಸಿದ್ದೇವೆ
فَإِن كَانَ لَكُمْ كَيْدٌ فَكِيدُونِ ۝٣٩
📖 ಅನುವಾದ ಆಯತ್ 39
ನಿಮ್ಮ ಬಳಿ ತಂತ್ರವೇನಾದರೂ ಇದ್ದರೆ ನನ್ನ ಮೇಲೆ ಪ್ರಯೋಗಿಸಿರಿ.
وَيْلٌ يَوْمَئِذٍ لِّلْمُكَذِّبِينَ ۝٤٠
📖 ಅನುವಾದ ಆಯತ್ 40
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
إِنَّ الْمُتَّقِينَ فِي ظِلَالٍ وَعُيُونٍ ۝٤١
📖 ಅನುವಾದ ಆಯತ್ 41
ನಿಸ್ಸಂದೇಹವಾಗಿಯೂ ಭಯ ಭಕ್ತಿಯುಳ್ಳವರು ತಂಪು ನೆರಳುಗಳಲ್ಲಿಯೂ ಮತ್ತು ಹರಿಯುವ ಚಿಲುಮೆಗಳಲ್ಲಿರುವರು.
وَفَوَاكِهَ مِمَّا يَشْتَهُونَ ۝٤٢
📖 ಅನುವಾದ ಆಯತ್ 42
ಅವರು ಬಯಸುವಂತಹ ಫಲಗಳಲ್ಲಿ.
كُلُوا وَاشْرَبُوا هَنِيئًا بِمَا كُنتُمْ تَعْمَلُونَ ۝٤٣
📖 ಅನುವಾದ ಆಯತ್ 43
(ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.
إِنَّا كَذَٰلِكَ نَجْزِي الْمُحْسِنِينَ ۝٤٤
📖 ಅನುವಾದ ಆಯತ್ 44
ಖಂಡಿತವಾಗಿಯೂ ನಾವು ಸದಾಚಾರಿಗಳಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
وَيْلٌ يَوْمَئِذٍ لِّلْمُكَذِّبِينَ ۝٤٥
📖 ಅನುವಾದ ಆಯತ್ 45
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
كُلُوا وَتَمَتَّعُوا قَلِيلًا إِنَّكُم مُّجْرِمُونَ ۝٤٦
📖 ಅನುವಾದ ಆಯತ್ 46
. (ಓ ಸುಳ್ಳಾಗಿಸುವವರೇ) ನೀವು ಸ್ವಲ್ಪ ಕಾಲ ತಿನ್ನಿರಿ ಕುಡಿಯಿರಿ ಮತ್ತು ಸುಖವನ್ನು ಅನುಭವಿಸಿರಿ. ನಿಸ್ಸಂಶಯವಾಗಿಯೂ ನೀವು ಅಪರಾಧಿಗಳಾಗಿರುವಿರಿ.
وَيْلٌ يَوْمَئِذٍ لِّلْمُكَذِّبِينَ ۝٤٧
📖 ಅನುವಾದ ಆಯತ್ 47
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
وَإِذَا قِيلَ لَهُمُ ارْكَعُوا لَا يَرْكَعُونَ ۝٤٨
📖 ಅನುವಾದ ಆಯತ್ 48
ಅವರೊಡನೆ ತಲೆಬಾಗಿರಿ ಎಂದಾಗ ಅವರು ತಲೆಬಾಗುವುದಿಲ್ಲ.
وَيْلٌ يَوْمَئِذٍ لِّلْمُكَذِّبِينَ ۝٤٩
📖 ಅನುವಾದ ಆಯತ್ 49
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
فَبِأَيِّ حَدِيثٍ بَعْدَهُ يُؤْمِنُونَ ۝٥٠
📖 ಅನುವಾದ ಆಯತ್ 50
ಸತ್ಯನಿಷೇಧಿಗಳು ಈ ಕುರ್ಆನಿನ ನಂತರ ಇನ್ನಾವ ವಚನÀದಲ್ಲಿ ವಿಶ್ವಾಸವಿಡುವರು ?
← 76 ಅಲ್-ಮುರ್ಸಲಾತ್ (77/114) 78 →
ಓದಿ ಸೂರಾ ಅಲ್-ಮುರ್ಸಲಾತ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

77المرسلات Al-Mursalat 📚 50 ಆಯತ್ مكية

ಆಯತ್‌ವಾರು – ಸೂರಾ ಅಲ್-ಮುರ್ಸಲಾತ್ — 50 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers