PDF —
50 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಮುರ್ಸಲಾತ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಮುರ್ಸಲಾತ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮುರ್ಸಲಾತ್ ಅನುವಾದ. ಸೂರಾ ಅಲ್-ಮುರ್ಸಲಾತ್ (Meccan) 50 ಆಯತ್.

← ಅಲ್-ಇನ್ಸಾನ್ಸೂರಾ ಅಲ್-ಮುರ್ಸಲಾತ್ ಅನ್-ನಬಾ →


50 ಆಯತ್ · Meccan · ಕನ್ನಡ
bismillah
ﮑﮒﮓ
77:1 ನಿರಂತರವಾಗಿ ಕಳುಹಿಸಲಾಗುವ ಮಾರುತಗಳಾಣೆ.
ﮔﮕﮖ
77:2 ಅನಂತರ ರಭಸದಿಂದ ಬಿರುಸಾಗಿ ಬೀಸುವ ಚಂಡಮಾರುತಗಳಾಣೆ.
ﮗﮘﮙ
77:3 ಅನಂತರ (ಮೋಡವನ್ನು) ಎಬ್ಬಿಸಿ ಹರಡಿಸುವ ಮಾರುತಗಳಾಣೆ.
ﮚﮛﮜ
77:4 ಬಳಿಕ (ಅವುಗಳನ್ನು) ಸೀಳಿ ಬರ‍್ಪಡಿಸುವ ಮಲಕ್ಗಳಾಣೆ.
ﮝﮞﮟ
77:5 ಮತ್ತು ಸಂದೇಶ ತರುವಂತಹ ದೂತರಾಣೆ. ಮತ್ತು ಮನಸ್ಸಿನಲ್ಲಿ ಅಲ್ಲಾಹನ ಸ್ಮರಣೆಯನ್ನು ಹಾಕುವ ಮಲಕ್ಗಳಾಣೆ.
ﮠﮡﮢﮣ
77:6 ಅದು ನೆಪವನ್ನು ನಿವಾರಿಸಲು ಅಥವಾ ಎಚ್ಚರಿಕೆ ನೀಡಲು ಆಗಿರುತ್ತದೆ.
ﮤﮥﮦﮧ
77:7 ನಿಮಗೆ ಎಚ್ಚರಿಕೆ ನೀಡಲಾಗುತ್ತಿರುವ (ಪ್ರಳಯ) ಖಂಡಿತ ಸಂಭವಿಸಿಯೇ ತೀರುವುದು.
ﮨﮩﮪﮫ
77:8 ನಕ್ಷತ್ರಗಳ ಪ್ರಕಾಶ ಅಳಿಸಲಾಗುವಾಗ.
ﮬﮭﮮﮯ
77:9 ಆಕಾಶವನ್ನು ಸೀಳಲಾಗುವಾಗ.
ﮰﮱﯓﯔ
77:10 ರ‍್ವತಗಳು ಧೂಳಾಗಿಸಲಾಗುವಾಗ
ﯕﯖﯗﯘ
77:11 ಸಂದೇಶವಾಹಕರನ್ನು ನಿಶ್ಚಿತ ಸಮಯಕ್ಕೆ (ಸಾಕ್ಷಿ ನೀಡಲು) ಕರೆತರಲಾಗುವಾಗ
ﯙﯚﯛﯜ
77:12 ಯಾವ ದಿನಕ್ಕಾಗಿ ಅವರಿಗೆ ಕಾಲಾವಕಾಶ ನೀಡಲಾಗಿದೇ ?
ﯝﯞﯟ
77:13 ತರ‍್ಪಿನ ದಿನಕ್ಕಾಗಿ.
ﯠﯡﯢﯣﯤﯥ
77:14 (ಓ ಪೈಗಂಬರರೇ) ತರ‍್ಪಿನ ದಿನ ಏನೆಂದು ನಿಮಗೇನು ಗೊತ್ತು ?
ﯦﯧﯨﯩ
77:15 ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.
ﯪﯫﯬﯭ
77:16 (ಸತ್ಯನಿಷೇಧಿ) ನಾವು ಪರ‍್ವಿಕರನ್ನು ನಾಶ ಗೊಳಿಸಲಿಲ್ಲವೇ ?
ﯮﯯﯰﯱ
77:17 ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.
ﯲﯳﯴﯵ
77:18 ನಾವು ಅಪರಾಧಿಗಳೊಂದಿಗೆ ಹೀಗೇ ರ‍್ತಿಸುತ್ತೇವೆ.
ﯶﯷﯸﯹ
77:19 ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿದೆ.
ﭑﭒﭓﭔﭕﭖ
77:20 ಏನು ನಾವು ನಿಮಗೆ ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ ?
ﭗﭘﭙﭚﭛ
77:21 ತರುವಾಯ ನಾವು ಅದನ್ನು ಸುರಕ್ಷಿತ ಸ್ಥಳದಲ್ಲಿಟ್ಟೆವು.
ﭜﭝﭞﭟ
77:22 ಒಂದು ನಿಶ್ಚಿತಾವಧಿಯವರೆಗೆ.
ﭠﭡﭢﭣ
77:23 ನಂತರ ನಾವು (ಅವನ ಅಂಗಗಳ) ಪರಿಮಾಣ ನಿಶ್ಚಯಿಸಿದೆವು ಮತ್ತು ನಾವು ಅದೆಷ್ಟು ಚೆನ್ನಾಗಿ ಪರಿಮಾಣವನ್ನು ನಿಶ್ಚಯಿಸುವವರಾಗಿರುವೆವು.
ﭤﭥﭦﭧ
77:24 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﭨﭩﭪﭫﭬ
77:25 ನಾವು ಭೂಮಿಯನ್ನು ಒಟ್ಟುಗೂಡಿಸುವುದನ್ನಾಗಿ ಮಾಡಲಿಲ್ಲವೇ?
ﭭﭮﭯ
77:26 ಜೀವಂತರನ್ನೂ ಮೃತರನ್ನೂ?
ﭰﭱﭲﭳﭴﭵﭶﭷ
77:27 ನಾವು ಅದರಲ್ಲಿ ಎತ್ತರವಾದ ರ‍್ವತಗಳನ್ನಿರಿಸಿದೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಯಲು ನೀಡಿದೆವು.
ﭸﭹﭺﭻ
77:28 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﭼﭽﭾﭿﮀﮁﮂ
77:29 (ಸತ್ಯನಿಷೇಧಿಗಳೊಡನೆ ಹೇಳಲಾಗುವುದು) ನೀವು ಯಾವುದನ್ನು ಸುಳ್ಳಾಗಿಸುತ್ತಿದ್ದಿರೋ ಆ ನರಕದತ್ತ ನಡೆಯಿರಿ.
ﮃﮄﮅﮆﮇﮈﮉ
77:30 ನರಕದ ಹೊಗೆಯ ಮೂರು ಶಾಖೆಗಳಿರುವ ನೆರಳಿನೆಡೆಗೆ ನಡೆಯಿರಿ.
ﮊﮋﮌﮍﮎﮏﮐ
77:31 ಆ ನೆರಳು ತಂಪನ್ನೂ ನೀಡಲಾರದು ಮತ್ತು ಅಗ್ನಿಜ್ವಾಲೆಯಿಂದಲೂ ರಕ್ಷಿಸಲಾರದು.
ﮑﮒﮓﮔﮕ
77:32 ಖಂಡಿತವಾಗಿಯೂ ಆ ನರಕಾಗ್ನಿಯು ದೊಡ್ಡ ದೊಡ್ಡ ಭವನಗಳಂತಿರುವ ಕಿಡಿಗಳನ್ನು ಹಾರಿಸುತ್ತಿರುವುದು.
ﮖﮗﮘﮙ
77:33 ಅವು ಬಿದ್ದು ಹಳದಿ ರ‍್ಣದ ಒಂಟೆಗಳಂತಿರುವುವು.
ﮚﮛﮜﮝ
77:34 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﮞﮟﮠﮡﮢ
77:35 ಅದು ಅವರು ಮಾತನಾಡಲಾಗದ ದಿನವಾಗಿದೆ.
ﮣﮤﮥﮦﮧ
77:36 ಅಂದು ನೆಪಗಳನ್ನು ಒಡ್ಡಲೂ ಅವರಿಗೆ ಅನುಮತಿ ನೀಡಲಾಗದು.
ﮨﮩﮪﮫ
77:37 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﮬﮭﮮﮯﮰﮱﯓ
77:38 ಇದುವೇ ತರ‍್ಪಿನ ದಿನ. ನಾವು ನಿಮ್ಮನ್ನು ಮತ್ತು ಪರ‍್ವಿಕರನ್ನು ಒಟ್ಟುಗೂಡಿಸಿದ್ದೇವೆ
ﯔﯕﯖﯗﯘﯙ
77:39 ನಿಮ್ಮ ಬಳಿ ತಂತ್ರವೇನಾದರೂ ಇದ್ದರೆ ನನ್ನ ಮೇಲೆ ಪ್ರಯೋಗಿಸಿರಿ.
ﯚﯛﯜﯝ
77:40 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﯞﯟﯠﯡﯢﯣ
77:41 ನಿಸ್ಸಂದೇಹವಾಗಿಯೂ ಭಯ ಭಕ್ತಿಯುಳ್ಳವರು ತಂಪು ನೆರಳುಗಳಲ್ಲಿಯೂ ಮತ್ತು ಹರಿಯುವ ಚಿಲುಮೆಗಳಲ್ಲಿರುವರು.
ﯤﯥﯦﯧ
77:42 ಅವರು ಬಯಸುವಂತಹ ಫಲಗಳಲ್ಲಿ.
ﯨﯩﯪﯫﯬﯭﯮ
77:43 (ಹೇಳಲಾಗುವುದು) ನೀವು ಮಾಡುತ್ತಿದ್ದ ರ‍್ಮಗಳ ಫಲವಾಗಿ ಸಂತಸದೊಂದಿಗೆ ತಿನ್ನಿರಿ ಮತ್ತು ಕುಡಿಯಿರಿ.
ﯯﯰﯱﯲﯳ
77:44 ಖಂಡಿತವಾಗಿಯೂ ನಾವು ಸದಾಚಾರಿಗಳಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
ﯴﯵﯶﯷ
77:45 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﯸﯹﯺﯻﯼﯽ
77:46 . (ಓ ಸುಳ್ಳಾಗಿಸುವವರೇ) ನೀವು ಸ್ವಲ್ಪ ಕಾಲ ತಿನ್ನಿರಿ ಕುಡಿಯಿರಿ ಮತ್ತು ಸುಖವನ್ನು ಅನುಭವಿಸಿರಿ. ನಿಸ್ಸಂಶಯವಾಗಿಯೂ ನೀವು ಅಪರಾಧಿಗಳಾಗಿರುವಿರಿ.
ﯾﯿﰀﰁ
77:47 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﰂﰃﰄﰅﰆﰇﰈ
77:48 ಅವರೊಡನೆ ತಲೆಬಾಗಿರಿ ಎಂದಾಗ ಅವರು ತಲೆಬಾಗುವುದಿಲ್ಲ.
ﰉﰊﰋﰌ
77:49 ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
ﰍﰎﰏﰐﰑ
77:50 ಸತ್ಯನಿಷೇಧಿಗಳು ಈ ಕುರ್ಆನಿನ ನಂತರ ಇನ್ನಾವ ವಚನÀದಲ್ಲಿ ವಿಶ್ವಾಸವಿಡುವರು ?

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers