ಅಲ್-ಬಕರಾ · 229/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
الطَّلَاقُ مَرَّتَانِ ۖ فَإِمْسَاكٌ بِمَعْرُوفٍ أَوْ تَسْرِيحٌ بِإِحْسَانٍ ۗ وَلَا يَحِلُّ لَكُمْ أَن تَأْخُذُوا مِمَّا آتَيْتُمُوهُنَّ شَيْئًا إِلَّا أَن يَخَافَا أَلَّا يُقِيمَا حُدُودَ اللَّهِ ۖ فَإِنْ خِفْتُمْ أَلَّا يُقِيمَا حُدُودَ اللَّهِ فَلَا جُنَاحَ عَلَيْهِمَا فِيمَا افْتَدَتْ بِهِ ۗ تِلْكَ حُدُودُ اللَّهِ فَلَا تَعْتَدُوهَا ۚ وَمَن يَتَعَدَّ حُدُودَ اللَّهِ فَأُولَٰئِكَ هُمُ الظَّالِمُونَ ۝٢٢٩
Attalaaqu marrataani fa imsaakum bima`roofin aw tasreehum bi ihsaan; wa laa yahillu lakum an taakhuzoo mimmaaa aataitumoohunna shai`an illaaa ai yakhaafaaa alla yuqeemaa hudoodallahi fa in khiftum allaa yuqeemaa budoodal laahi falaa junaaha `Alaihimaa feemaf tadat bihee tilka hudoodul laahi falaa ta`tadoohaa; wa mai yata`adda hudoodal laahi fa ulaaa`ika humuzzaa limoon
📖 ಕನ್ನಡ ಅರ್ಥ
(ಮರಳಿ ಪಡೆಯಲು ಅನುಮತಿಯಿರುವ) ವಿಚ್ಛೇದನೆ (ಅಧಿಕವೆಂದರೆ) ಎರಡು ಬಾರಿಯಾಗಿರುತ್ತದೆ. ಅನಂತರ (ಪತಿಗೆ ಎರಡೇ ಮಾರ್ಗಗಳಿವೆ) ಒಂದು ಸದಾಚಾರದೊಂದಿಗೆ ತಡೆದಿರಿಸಿಕೊಳ್ಳಿರಿ ಇಲ್ಲವೇ ಒಳಿತಿನೊಂದಿಗೆ ವಿದಾಯ ಹೇಳಿರಿ. ನೀವು ಅವರಿಗೆ ನೀಡಿರುವ ವಧು ಧನದಿಂದ ಏನನ್ನಾದರೂ ಮರಳಿಪಡೆಯುವುÀದು ನಿಮಗೆ ಧರ್ಮ ಸಮ್ಮತವಲ್ಲ. ಆದರೆ (ವಿವಾಹ ಸಂಬAಧÀವನ್ನು ಬಾಕಿ ಉಳಿಸಿದರೆ) ಅಲ್ಲಾಹನು ಮೇರೆಗಳನ್ನು ದಂಪತಿಗಳು ನೆಲೆ ನಿಲ್ಲಿಸಲಾರೆವು ಎಂದು ಭಯಪಟ್ಟರೆ ಬೇರೆ ವಿಚಾರ. ಆದ್ದರಿಂದ ಅವರು ಅಲ್ಲಾಹನ ಮೇರೆಗಳನ್ನು ನೆಲೆ ನಿಲ್ಲಿಸಲಾರರೆÉಂದು ನೀವು ಭಯಪಟ್ಟರೆ ಪತ್ನಿಯು ಬಿಡುಗಡೆ ಪಡೆಯಲ್ಲಿಕ್ಕಾಗಿ ಮಹರ್ (ವಧು) ಧನವನ್ನು ಮರಳಿಸಿದರೆ ಈ ವಿಚಾರದಲ್ಲಿ ಅವರಿಬ್ಬರ ಮೇಲೆ ದೋಷವಿರುವುದಿಲ್ಲ. ಇವು ಅಲ್ಲಾಹನ ಮೇರೆಗಳು. ಜಾಗೃತೆ! ಇವುಗಳನ್ನು ಮೀರಬೇಡಿರಿ ಮತ್ತು ಯಾರು ಅಲ್ಲಾಹನ ಮೇರೆಗಳನ್ನು ಉಲ್ಲಂಘಿಸುತ್ತಾರೋ ಅವರು ಅಕ್ರಮಿಗಳಾಗಿರುತ್ತಾರೆ.

🎧 ಆಲಿಸಿ


📜 ಆಯತ್ 227-231 — ಸೂರಾ ಅಲ್-ಬಕರಾ

227وَإِنْ عَزَمُوا الطَّلَاقَ فَإِنَّ اللَّهَ سَمِيعٌ عَلِيمٌ
ಮತ್ತು ಅವರು ವಿವಾಹ ವಿಚ್ಛೇದನೆಯ ನಿರ್ಧಾರ ಮಾಡಿದ್ದರೆ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿರುವನು.
228وَالْمُطَلَّقَاتُ يَتَرَبَّصْنَ بِأَنفُسِهِنَّ ثَلَاثَةَ قُرُوءٍ ۚ وَلَا يَحِلُّ لَهُنَّ أَن يَكْتُمْنَ مَا خَلَقَ اللَّهُ فِي أَرْحَامِهِنَّ إِن كُنَّ يُؤْمِنَّ بِاللَّهِ وَالْيَوْمِ الْآخِرِ ۚ وَبُعُولَتُهُنَّ أَحَقُّ بِرَدِّهِنَّ فِي ذَٰلِكَ إِنْ أَرَادُوا إِصْلَاحًا ۚ وَلَهُنَّ مِثْلُ الَّذِي عَلَيْهِنَّ بِالْمَعْرُوفِ ۚ وَلِلرِّجَالِ عَلَيْهِنَّ دَرَجَةٌ ۗ وَاللَّهُ عَزِيزٌ حَكِيمٌ
ಮತ್ತು ವಿಚ್ಛೇದಿತ ಸ್ತಿçÃಯರು ತಮ್ಮನ್ನು ಮೂರು ಆರ್ತವಗಳವರೆಗೆ ತಡೆದಿರಿಸಿಕೊಳ್ಳಲಿ ಮತ್ತು ಅವರು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಾದರೆ ತಮ್ಮ ಗರ್ಭಾಶಯಗಳಲ್ಲಿ ಅಲ್ಲಾಹನು ಸೃಷ್ಟಿಸಿರುವುದನ್ನು ಮುಚ್ಚಿಡುವುದು ಅವರ ಪಾಲಿಗೆ ಧರ್ಮಸಮ್ಮತವಲ್ಲ. ಮತ್ತು ಅವರ ಪತಿಯರು ಹೊಂದಾಣಿಕೆಯನ್ನು ಬಯಸುವುದಾದರೆ ಆ ಅವಧಿಯೊಳಗೆ ಅವರನ್ನು ಮರಳಿ ಸ್ವೀಕರಿಸಲು ಹೆಚ್ಚು ಹಕ್ಕುಳ್ಳವರಾಗಿದ್ದಾರೆ. ಮತ್ತು ಸ್ತಿçÃಯರ ಮೇಲೆ ತಮ್ಮ ಪತಿಯರ ಹಕ್ಕುಗಳಿರುವ ಹಾಗೆ ಪತಿಯರ ಮೇಲೂ ನ್ಯಾಯೋಚಿತವಾಗಿ ಸ್ತಿçÃಯರ ಹಕ್ಕುಗಳಿವೆ. ಆದರೆ ಪುರುಷರಿಗೆ ಸ್ತಿçÃಯರಿಗಿಂತ ಒಂದು ದರ್ಜೆ ಹೆಚ್ಚಿದೆ. ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆ.
229الطَّلَاقُ مَرَّتَانِ ۖ فَإِمْسَاكٌ بِمَعْرُوفٍ أَوْ تَسْرِيحٌ بِإِحْسَانٍ ۗ وَلَا يَحِلُّ لَكُمْ أَن تَأْخُذُوا مِمَّا آتَيْتُمُوهُنَّ شَيْئًا إِلَّا أَن يَخَافَا أَلَّا يُقِيمَا حُدُودَ اللَّهِ ۖ فَإِنْ خِفْتُمْ أَلَّا يُقِيمَا حُدُودَ اللَّهِ فَلَا جُنَاحَ عَلَيْهِمَا فِيمَا افْتَدَتْ بِهِ ۗ تِلْكَ حُدُودُ اللَّهِ فَلَا تَعْتَدُوهَا ۚ وَمَن يَتَعَدَّ حُدُودَ اللَّهِ فَأُولَٰئِكَ هُمُ الظَّالِمُونَ
(ಮರಳಿ ಪಡೆಯಲು ಅನುಮತಿಯಿರುವ) ವಿಚ್ಛೇದನೆ (ಅಧಿಕವೆಂದರೆ) ಎರಡು ಬಾರಿಯಾಗಿರುತ್ತದೆ. ಅನಂತರ (ಪತಿಗೆ ಎರಡೇ ಮಾರ್ಗಗಳಿವೆ) ಒಂದು ಸದಾಚಾರದೊಂದಿಗೆ ತಡೆದಿರಿಸಿಕೊಳ್ಳಿರಿ ಇಲ್ಲವೇ ಒಳಿತಿನೊಂದಿಗೆ ವಿದಾಯ ಹೇಳಿರಿ. ನೀವು ಅವರಿಗೆ ನೀಡಿರುವ ವಧು ಧನದಿಂದ ಏನನ್ನಾದರೂ ಮರಳಿಪಡೆಯುವುÀದು ನಿಮಗೆ ಧರ್ಮ ಸಮ್ಮತವಲ್ಲ. ಆದರೆ (ವಿವಾಹ ಸಂಬAಧÀವನ್ನು ಬಾಕಿ ಉಳಿಸಿದರೆ) ಅಲ್ಲಾಹನು ಮೇರೆಗಳನ್ನು ದಂಪತಿಗಳು ನೆಲೆ ನಿಲ್ಲಿಸಲಾರೆವು ಎಂದು ಭಯಪಟ್ಟರೆ ಬೇರೆ ವಿಚಾರ. ಆದ್ದರಿಂದ ಅವರು ಅಲ್ಲಾಹನ ಮೇರೆಗಳನ್ನು ನೆಲೆ ನಿಲ್ಲಿಸಲಾರರೆÉಂದು ನೀವು ಭಯಪಟ್ಟರೆ ಪತ್ನಿಯು ಬಿಡುಗಡೆ ಪಡೆಯಲ್ಲಿಕ್ಕಾಗಿ ಮಹರ್ (ವಧು) ಧನವನ್ನು ಮರಳಿಸಿದರೆ ಈ ವಿಚಾರದಲ್ಲಿ ಅವರಿಬ್ಬರ ಮೇಲೆ ದೋಷವಿರುವುದಿಲ್ಲ. ಇವು ಅಲ್ಲಾಹನ ಮೇರೆಗಳು. ಜಾಗೃತೆ! ಇವುಗಳನ್ನು ಮೀರಬೇಡಿರಿ ಮತ್ತು ಯಾರು ಅಲ್ಲಾಹನ ಮೇರೆಗಳನ್ನು ಉಲ್ಲಂಘಿಸುತ್ತಾರೋ ಅವರು ಅಕ್ರಮಿಗಳಾಗಿರುತ್ತಾರೆ.
230فَإِن طَلَّقَهَا فَلَا تَحِلُّ لَهُ مِن بَعْدُ حَتَّىٰ تَنكِحَ زَوْجًا غَيْرَهُ ۗ فَإِن طَلَّقَهَا فَلَا جُنَاحَ عَلَيْهِمَا أَن يَتَرَاجَعَا إِن ظَنَّا أَن يُقِيمَا حُدُودَ اللَّهِ ۗ وَتِلْكَ حُدُودُ اللَّهِ يُبَيِّنُهَا لِقَوْمٍ يَعْلَمُونَ
ಇನ್ನು (ಮೂರನೆ ಸಲ) ಅವನು ಅವಳನ್ನು ವಿಚ್ಛೇದಿಸಿದರೆ ಇನ್ನು ಅವಳು ಬೇರೊಬ್ಬ ಪತಿಯನ್ನು ವಿವಾಹ ಮಾಡಿಕೊಳ್ಳುವವರೆಗೆ ಅವÀಳು ಅವನಿಗೆ ಧರ್ಮ ಸಮ್ಮತವಾಗುವುದಿಲ್ಲ. ಒಂದೊಮ್ಮೆ ಅವನು (ಎರಡನೇ ಪತಿ ಸಂಭೋಗದ ನಂತರ) ಸಹ ಅವಳನ್ನು ವಿಚ್ಛೇದಿಸಿದರೆ (ಮೊದಲನೇ ಪತಿಯೊಡನೆ) ಅವರಿಬ್ಬರೂ ಪರಸ್ಪರ ಹೊಂದಿಕೊಳ್ಳುವುದರಿAದ ಯಾವ ದೋಷವೂ ಇರುವುದಿಲ್ಲ. (ಆದರೆ) ಅವರು ಅಲ್ಲಾಹನ ಮೇರೆಗಳನ್ನು ನೆಲೆನಿಲ್ಲಿಸಬಲ್ಲೆವೆಂದು ದೃಢವಾಗಿ ಅರಿತಿರಬೇಕು ಮತ್ತು ಇವುಗಳು ಅಲ್ಲಾಹನ ಮೇರೆಗಳಾಗಿವೆ. ಅವನು ಇವುಗಳನ್ನು ತಿಳುವಳಿಕೆಯುಳ್ಳ ಜನರಿಗೆ ವಿವರಿಸಿ ಕೊಡುತ್ತಾನೆ.
231وَإِذَا طَلَّقْتُمُ النِّسَاءَ فَبَلَغْنَ أَجَلَهُنَّ فَأَمْسِكُوهُنَّ بِمَعْرُوفٍ أَوْ سَرِّحُوهُنَّ بِمَعْرُوفٍ ۚ وَلَا تُمْسِكُوهُنَّ ضِرَارًا لِّتَعْتَدُوا ۚ وَمَن يَفْعَلْ ذَٰلِكَ فَقَدْ ظَلَمَ نَفْسَهُ ۚ وَلَا تَتَّخِذُوا آيَاتِ اللَّهِ هُزُوًا ۚ وَاذْكُرُوا نِعْمَتَ اللَّهِ عَلَيْكُمْ وَمَا أَنزَلَ عَلَيْكُم مِّنَ الْكِتَابِ وَالْحِكْمَةِ يَعِظُكُم بِهِ ۚ وَاتَّقُوا اللَّهَ وَاعْلَمُوا أَنَّ اللَّهَ بِكُلِّ شَيْءٍ عَلِيمٌ
ಮತ್ತು ನೀವು ಪತ್ನಿಯರಿಗೆ ವಿಚ್ಛೇದನೆ ನೀಡಿ ಅವರು ತಮ್ಮ ಅವಧಿಯನ್ನು ತಲುಪಿದರೆ ಒಂದೋ ಅವರನ್ನು ಸದಾಚಾರದೊಂದಿಗೆ (ದಾಂಪತ್ಯದಲ್ಲಿ) ತಡೆÀದಿರಿಸಿಕೊಳ್ಳಿರಿ, ಇಲ್ಲವೇ, ಅವರಿಗೆ ಸದಾಚಾರದೊಂದಿಗೆ ವಿದಾಯ ಹೇಳಿರಿ ಮತ್ತು ಅವರನ್ನು ಪೀಡಿಸುವ ಉದ್ದೇಶದಿಂದ ತಡೆದಿರಿಸಿಕೊಳ್ಳಬೇಡಿರಿ ಮತ್ತು ಯಾರು ಹೀಗೆ ಮಾಡುತ್ತಾನೋ ಅವನು ತನ್ನ ಮೇಲೆಯೇ ಅಕ್ರಮವೆಸಗುತ್ತಾನೆ. ಮತ್ತು ನೀವು ಅಲ್ಲಾಹನ ನಿಯಮಗಳನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡಿಕೊಳ್ಳಬೇಡಿರಿ ಮತ್ತು ನಿಮ್ಮ ಮೇಲಿರುವ ಅಲ್ಲಾಹನ ಉಪಕಾರವನ್ನು ಸ್ಮರಿಸಿರಿ ಮತ್ತು ಅವನು ನಿಮ್ಮ ಮೇಲೆ ಅವತೀರ್ಣಗೊಳಿಸಿದ ಗ್ರಂಥ ಹಾಗೂ ಸುಜ್ಞಾನವನ್ನು ಸ್ಮರಿಸಿರಿ. ಅದರ ಮೂಲಕ ಅವನು ನಿಮಗೆ ಉಪದೇಶ ನೀಡುತ್ತಿದ್ದಾನೆ. ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನಿಜವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಸರ್ವಜ್ಞಾನಿಯಾಗಿರುವನು ಎಂಬುದನ್ನು ನೀವು ಅರಿತುಕೊಳ್ಳಿರಿ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
229ಆಯತ್

ಅನುವಾದ — ಅಲ್-ಬಕರಾ 229

ಸೂರಾ ಅಲ್-ಬಕರಾ ಆಯತ್ 229 - ಓದಿ, ಆಲಿಸಿ, ಅನುವಾದ, ಕನ್ನಡ : (ಮರಳಿ ಪಡೆಯಲು ಅನುಮತಿಯಿರುವ) ವಿಚ್ಛೇದನೆ (ಅಧಿಕವೆಂದರೆ) ಎರಡು ಬಾರಿಯಾಗಿರುತ್ತದೆ. ಅನಂತರ (ಪತಿಗೆ ಎರಡೇ…

ಸೂರಾ ಆಯತ್ 229/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 227–231. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers