PDF —
49 ಆಯತ್ Meccan PDF
Built right in your browser — download starts automatically

ಸೂರಾ ಅತ್-ತೂರ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅತ್-ತೂರ್ pdf ಕನ್ನಡ — ಡೌನ್‌ಲೋಡ್ ಸೂರಾ ಅತ್-ತೂರ್ ಅನುವಾದ. ಸೂರಾ ಅತ್-ತೂರ್ (Meccan) 49 ಆಯತ್.



49 ಆಯತ್ · Meccan · ಕನ್ನಡ
bismillah
ﮞﮟ
52:1 ತೂರ್ ಪರ್ವತದ ಆಣೆ.
ﮠﮡﮢ
52:2 ಬರೆದಿಡಲ್ಪಟ್ಟ ಗ್ರಂಥದಾಣೆ.
ﮣﮤﮥﮦ
52:3 ಅದು ತೆಳುವಾದ ತೆರೆದಿಟ್ಟ ಹಾಳೆಯಲ್ಲಿದೆ.
ﮧﮨﮩ
52:4 (ದೇವದೂತರಿಂದ) ಸದಾ ತುಂಬಿರುವ ಭವನದಾಣೆ.
ﮪﮫﮬ
52:5 ಎತ್ತರಿಸಲಾದ (ಆಕಾಶ) ಮೇಲ್ಛಾವಣಿಯಾಣೆ.
ﮭﮮﮯ
52:6 ಉಕ್ಕೇರುವ ಸಮುದ್ರದಾಣೆ.
ﮰﮱﯓﯔﯕ
52:7 ನಿಸ್ಸಂದೇಹವಾಗಿಯು ನಿಮ್ಮ ಪ್ರಭುವಿನ ಯಾತನೆಯು ಸಂಭವಿಸಲಿದೆ.
ﯖﯗﯘﯙﯚ
52:8 ಅದನ್ನು ತಡೆಯುವವರು ಯಾರೂ ಇಲ್ಲ.
ﯛﯜﯝﯞﯟ
52:9 ಅಂದು ಆಕಾಶವು ತೀವ್ರವಾಗಿ ಕಂಪಿಸತೊಡಗುವುದು.
ﯠﯡﯢﯣ
52:10 ಪರ್ವತಗಳು ತೀವ್ರವಾಗಿ ಚಲಿಸತೊಡಗುವುದು.
ﯤﯥﯦﯧ
52:11 ಅಂದು ಸುಳ್ಳಾಗಿಸುವವರಿಗೆ ನಾಶವಿದೆ.
ﯨﯩﯪﯫﯬﯭ
52:12 ಅವರು ವ್ಯರ್ಥ ಮಾತುಗಳಲ್ಲಿ ಮಗ್ನರಾಗಿ ಆಟವಾಡುತ್ತಾರೆ.
ﯮﯯﯰﯱﯲﯳﯴ
52:13 ಅಂದು ಅವರನ್ನು ತಳ್ಳುತ್ತಾ ನರಕಾಗ್ನಿಯೆಡೆಗೆ ತರಲಾಗುವುದು.
ﯵﯶﯷﯸﯹﯺﯻ
52:14 ನೀವು ಸುಳ್ಳಾಗಿಸುತ್ತಿದ್ದ ಆ ನರಕ ಇದುವೇ ಆಗಿದೆ.
ﭑﭒﭓﭔﭕﭖﭗ
52:15 ಏನು ಇದು ಮಾಟ ಆಗಿದೆಯೇ? ಅಥವ ನಿಮಗೆ ಕಾಣುವುದಿಲ್ಲವೇ?
ﭘﭙﭚﭛﭜﭝﭞﭟﭠﭡﭢﭣﭤﭥ
52:16 ಈ ನರಕದೊಳಗೆ ನೀವು ಪ್ರವೇಶಿಸಿರಿ. ಇನ್ನು ನೀವು ಸಹನೆ ವಹಿಸಿದರೂ, ಸಹನೆ ವಹಿಸದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿದೆ, ನಿಜವಾಗಿಯು ನಿಮಗೆ ನಿಮ್ಮ ಕೃತ್ಯಗಳ ಪ್ರತಿಫಲವನ್ನೇ ನೀಡಲಾಗುವುದು.
ﭦﭧﭨﭩﭪﭫ
52:17 ಖಂಡಿತವಾಗಿಯು ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲೂ ಮತ್ತು ಸುಖಾನುಗ್ರಹಗಳಲ್ಲೂ ಇರುವರು.
ﭬﭭﭮﭯﭰﭱﭲﭳﭴ
52:18 ಅವರ ಪ್ರಭುವು ಅವರಿಗೆ ದಯಪಾಲಿಸಿರುವು ದರಲ್ಲಿ ಸುಖಾನುಭವಿಸುವರು. ಅವರ ಪ್ರಭುವು ಅವರನ್ನು ನರಕದ ಯಾತನೆಯಿಂದ ರಕ್ಷಿಸುವನು.
ﭵﭶﭷﭸﭹﭺﭻ
52:19 (ಹೇಳಲಾಗುವುದು) ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ತಿನ್ನಿರಿ ಮತ್ತು ಕುಡಿಯಿರಿ.
ﭼﭽﭾﭿﮀﮁﮂﮃﮄ
52:20 ಅವರು ಸಾಲು ಸಾಲಾಗಿ ಇರಿಸಲಾದ ಅಲಂಕೃತ ಮಂಚಗಳ ಮೇಲೆ ದಿಂಬುಗಳಿಗೆ ಒರಗಿರುವರು ಮತ್ತು ನಾವು ಅವರನ್ನು ವಿಶಾಲ ನಯನವುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
ﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙ
52:21 ಸತ್ಯವಿಶ್ವಾಸಿಗಳನ್ನು ಹಾಗು ಸತ್ಯವಿಶ್ವಾಸದಲ್ಲಿ ಅವರನ್ನು ಅನುಸರಿಸಿದ ಅವರ ಸಂತತಿಗಳನ್ನು ನಾವು ಅವರೊಂದಿಗೆ (ಸ್ವರ್ಗದಲ್ಲಿ) ಸೇರಿಸುವೆವು ಮತ್ತು ಅವರ ಕರ್ಮಗಳಿಂದ ಏನನ್ನು ಕಡಿತಗೊಳಿಸಲಾರೆವು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ಮಗಳಿಗೆ ಗಿರವಿಯಾಗಿದ್ದಾನೆ.
ﮚﮛﮜﮝﮞﮟ
52:22 ನಾವು ಅವರಿಗೆ ಹಣ್ಣು ಹಂಪಲುಗಳನ್ನು ಮತ್ತು ಅವರಿಚ್ಛಿಸುವ ಮಾಂಸವನ್ನೂ ಸಮೃದ್ಧವಾಗಿ ನೀಡುವೆವು.
ﮠﮡﮢﮣﮤﮥﮦﮧﮨ
52:23 ನಾವು ಅವರಿಗೆ ಹಣ್ಣು ಹಂಪಲುಗಳನ್ನು ಮತ್ತು ಅವರಿಚ್ಛಿಸುವ ಮಾಂಸವನ್ನೂ ಸಮೃದ್ಧವಾಗಿ ನೀಡುವೆವು.
ﮩﮪﮫﮬﮭﮮﮯﮰﮱ
52:24 ಅವರ ಸೇವೆಗಾಗಿ ಹರೆಯದ ಬಾಲಕರು ಅವರ ಸುತ್ತ ಸುತ್ತುತ್ತಲಿರುವರು. ಅವರು ಬಚ್ಚಿಡಲಾದ ಮುತ್ತುಗಳಂತೆ ಸುಂದರವಾಗಿರುವರು.
ﯓﯔﯕﯖﯗﯘ
52:25 ಅವರು ಅಭಿಮುಖವಾಗಿ ಪರಸ್ಪರರೊಡನೆ ಪ್ರಶ್ನಿಸುವರು.
ﯙﯚﯛﯜﯝﯞﯟﯠ
52:26 ಅವರು ಹೇಳುವರು; ನಾವು ಈ ಮೊದಲು (ಭೂಲೋಕದಲ್ಲಿ) ನಮ್ಮ ಕುಟುಂಬದವರ ನಡುವೆ ಭಯಪಡುತ್ತಿದ್ದೆವು.
ﯡﯢﯣﯤﯥﯦﯧ
52:27 ಆದರೆ ಅಲ್ಲಾಹನು ನಮ್ಮ ಮೇಲೆ ಮಹಾ ಉಪಕಾರವನ್ನು ಮಾಡಿದನು ಹಾಗು ಅತ್ಯುಷ್ಣ ಗಾಳಿಯ ಯಾತನೆಯಿಂದ ನಮ್ಮನ್ನು ರಕ್ಷಿಸಿದನು.
ﯨﯩﯪﯫﯬﯭﯮﯯﯰﯱﯲ
52:28 ಖಂಡಿತವಾಗಿಯೂ ನಾವು ಇದಕ್ಕೆ ಮೊದಲು ಭೂಲೋಕದಲ್ಲಿ ಅವನ ಆರಾಧನೆಯನ್ನೇ ಮಾಡುತ್ತಿದ್ದೆವು. ನಿಸ್ಸಂಶಯವಾಗಿಯು ಅವನು ಮಹಾ ಉಪಕಾರಿಯು ಕರುಣಾನಿಧಿಯು ಆಗಿರುವನು.
ﯳﯴﯵﯶﯷﯸﯹﯺﯻ
52:29 ಆದ್ದರಿಂದ ನೀವು ಉಪದೇಶಿಸುತ್ತಿರಿ. ನೀವು ತಮ್ಮ ಪ್ರಭುವಿನ ಅನುಗ್ರಹದಿಂದ ಜ್ಯೋತಿಷ್ಯರೂ, ಹುಚ್ಚರೂ ಅಲ್ಲ.
ﯼﯽﯾﯿﰀﰁﰂﰃ
52:30 ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
ﰄﰅﰆﰇﰈﰉﰊ
52:31 ಹೇಳಿರಿ ನೀವು ಕಾಯುತ್ತಿರಿ, ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಕಾಯುತ್ತಿರುವೆನು.
ﭑﭒﭓﭔﭕﭖﭗﭘﭙﭚ
52:32 ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.
ﭛﭜﭝﭞﭟﭠﭡﭢ
52:33 ಆ ಪೈಗಂಬರರು ಇದನ್ನು (ಕುರ್‌ಆನನ್ನು) ಸ್ವತಃ ರಚಿಸಿರುತ್ತಾನೆಂದು ಅವರು ಹೇಳುತ್ತಿದ್ದಾರೆಯೇ ? ವಾಸ್ತವವೇನೆಂದರೆ ಅವರು ವಿಶ್ವಾಸವಿರಿಸುತ್ತಿಲ್ಲ.
ﭣﭤﭥﭦﭧﭨﭩ
52:34 ಸರಿ ಅವರು ಸತ್ಯವಂತರಾಗಿದ್ದರೆ ಇಂತಹದೇ ಒಂದು ವಚನವನ್ನು ತರಲಿ.
ﭪﭫﭬﭭﭮﭯﭰﭱﭲ
52:35 ಅವರು ಒಬ್ಬ ಸೃಷ್ಟಿಕರ್ತನಿಲ್ಲದೇ ಸೃಷ್ಟಿಸಲಾಗಿರುವರೇ ? ಅಥವಾ ಅವರೇ ಸ್ವಯಂ ಸೃಷ್ಟಿಕರ್ತರೇ?
ﭳﭴﭵﭶﭷﭸﭹﭺﭻ
52:36 ಅಥವಾ ಅವರೇ ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದಾರೆಯೇ ? ಅಲ್ಲ ಅವರು ನಂಬಿಕೆಯಿಡದ ಜನರಾಗಿದ್ದಾರೆ.
ﭼﭽﭾﭿﮀﮁﮂﮃ
52:37 ಅಥವ ನಿಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ ? ಅಥವಾ ಅವರು (ಆ ಭಂಡಾರಗಳ) ಸಂರಕ್ಷಕರೇ ?
ﮄﮅﮆﮇﮈﮉﮊﮋﮌﮍﮎ
52:38 ಅಥವಾ ಏರಿ ಹೋಗಿ ಆಕಾಶದ ರಹಸ್ಯ ಮಾತುಗಳನ್ನು ಆಲಿಸಲು ಅವರ ಬಳಿ ಯಾವುದಾದರೂ ಏಣಿ ಇದೆಯೇ ? ಹಾಗಿದ್ದರೆ ಆಲಿಸಿದವನು ಸ್ಪಷ್ಟವಾದ ಪುರಾವೆಯನ್ನು ತರಲಿ.
ﮏﮐﮑﮒﮓﮔ
52:39 ಏನು ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇ ?
ﮕﮖﮗﮘﮙﮚﮛﮜ
52:40 ಅಥವಾ ಅವರು ಸಾಲದ ಭಾರವನ್ನು ಹೊರುವಂತಾಗಲು ನೀವು ಅವರಿಂದ ಪ್ರತಿಫಲವನ್ನೇನಾದರೂ ಕೇಳುತ್ತಿರುವಿರಾ ?
ﮝﮞﮟﮠﮡﮢ
52:41 ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?
ﮣﮤﮥﮦﮧﮨﮩﮪﮫ
52:42 ಅಥವಾ ಅವರು ಏನಾದರೂ ಕುತಂತ್ರ ಹೂಡಲು ಉದ್ದೇಶಿಸುತ್ತಾರೆಯೇ ? ಹಾಗಾದರೆ ಸತ್ಯನಿಷೇಧಿಗಳೇ ಕುತಂತ್ರಕ್ಕೆ ಬಲಿಯಾಗುವರು.
ﮬﮭﮮﮯﮰﮱﯓﯔﯕﯖﯗ
52:43 ಅಥವಾ ಅವರಿಗೆ ಅಲ್ಲಾಹನ ಹೊರತು ಅನ್ಯಆರಾಧ್ಯನಿದ್ದಾನೆಯೇ ? ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅಲ್ಲಾಹನು ಪರಮಪಾವನನು.
ﯘﯙﯚﯛﯜﯝﯞﯟﯠﯡ
52:44 ಅವರು ಆಕಾಶದಿಂದ ಒಂದು ತುಂಡು ಬೀಳುತ್ತಿರುವುದಾಗಿ ಕಂಡರೂ ಅದು ದಟ್ಟವಾಗಿರುವ ಮೋಡವೆಂದು ಅವರು ಹೇಳುವರು.
ﯢﯣﯤﯥﯦﯧﯨﯩ
52:45 ಆದ್ದರಿಂದ ಮೂರ್ಛೆಗೊಳಗಾಗುವಂತಹ ಅವರ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
ﯪﯫﯬﯭﯮﯯﯰﯱﯲﯳ
52:46 ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.
ﯴﯵﯶﯷﯸﯹﯺﯻﯼﯽﯾ
52:47 ಖಂಡಿತವಾಗಿಯೂ ಅಕ್ರಮವೆಸಗಿದವರಿಗೆ ಇದರ ಹೊರತು ಇಹಲೋಕದಲ್ಲೂ ಯಾತನೆ ಇದೆ, ಆದರೆ ಅವರಲ್ಲಿ ಅಧಿಕ ಮಂದಿ ತಿಳಿಯುವುದಿಲ್ಲ.
ﯿﰀﰁﰂﰃﰄﰅﰆﰇﰈﰉﰊ
52:48 ನೀವು ನಿಮ್ಮ ಪ್ರಭುವಿನ ತೀರ್ಪು ಬರುವವರೆಗೆ ಸಹನೆವಹಿಸಿರಿ, ನಿಸ್ಸಂಶಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂದಿರುವಿರಿ, ನೀವು ಎದ್ದೇಳುವಾಗ ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
ﰋﰌﰍﰎﰏﰐ
52:49 ರಾತ್ರಿಯು ಸ್ವಲ್ಪ ಭಾಗ ಮತ್ತು ನಕ್ಷತ್ರಗಳು ಅಸ್ತಮಿಸುವ ವೇಳೆಯಲ್ಲೂ ಅವನ ಪಾವಿತ್ರö್ಯವನ್ನು ಸ್ತುತಿಸಿರಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers