ಸೂರಾ ಅನ್-ನಾಜಿಆತ್ ಅರೇಬಿಕ್ ಮತ್ತು ಕನ್ನಡ

ಸೂರಾ ಅನ್-ನಾಜಿಆತ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (46 ಆಯತ್ — مكية). ಅನ್-ನಾಜಿಆತ್ ಆಲಿಸಿ, ಅನ್-ನಾಜಿಆತ್ ಅನುವಾದ, ಅನ್-ನಾಜಿಆತ್ mp3, ಅನ್-ನಾಜಿಆತ್ pdf.

ಸೂರಾ ಅನ್-ನಾಜಿಆತ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالنَّازِعَاتِ غَرْقًا ۝١
📖 ಅನುವಾದ ಆಯತ್ 1
ಮುಳುಗಿ ಸತ್ಯನಿಷೇಧಿಗಳ ಆತ್ಮಗಳನ್ನು ಕಠೋರವಾಗಿ ಎಳೆಯುವ ಮಲಕ್ಗಳಾಣೆ.
وَالنَّاشِطَاتِ نَشْطًا ۝٢
📖 ಅನುವಾದ ಆಯತ್ 2
(ಸತ್ಯ ವಿಶ್ವಾಸಿಗಳ) ಆತ್ಮಗಳನ್ನು ಮೃದುವಾಗಿ ಎಳೆಯುವ ಮಲಕ್ಗಳಾಣೆ.
وَالسَّابِحَاتِ سَبْحًا ۝٣
📖 ಅನುವಾದ ಆಯತ್ 3
(ಭೂಮಿ ಆಕಾಶಗಳ ನಡುವೆ) ವೇಗವಾಗಿ ಈಜಿ ಸಾಗುವ ಮಲಕ್ಗಳಾಣೆ.
فَالسَّابِقَاتِ سَبْقًا ۝٤
📖 ಅನುವಾದ ಆಯತ್ 4
(ಅಲ್ಲಾಹನ ಆಜ್ಞೆ ಪಾಲಿಸಲು) ಓಡುತ್ತಾ ಮುಂದಕ್ಕೆ ಸಾಗುವ ಮಲಕ್ಗಳಾಣೆ.
فَالْمُدَبِّرَاتِ أَمْرًا ۝٥
📖 ಅನುವಾದ ಆಯತ್ 5
(ತಮ್ಮ ಪ್ರಭುವಿನ ಆಜ್ಞೆಯಿಂದ) ಕರ‍್ಯಗಳ ಯೋಜನೆ ಹಾಕುವ ಮಲಕ್ಗಳಾಣೆ.
يَوْمَ تَرْجُفُ الرَّاجِفَةُ ۝٦
📖 ಅನುವಾದ ಆಯತ್ 6
ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.
تَتْبَعُهَا الرَّادِفَةُ ۝٧
📖 ಅನುವಾದ ಆಯತ್ 7
ಅದರ ನಂತರ ಹಿಂಬಾಲಿಸಿ (ಮತ್ತೊಂದು ಕಂಪನ)ಬರುವಂತದ್ದು ಬರಲಿರುವುದು.
قُلُوبٌ يَوْمَئِذٍ وَاجِفَةٌ ۝٨
📖 ಅನುವಾದ ಆಯತ್ 8
ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.
أَبْصَارُهَا خَاشِعَةٌ ۝٩
📖 ಅನುವಾದ ಆಯತ್ 9
ಅವರ ಕಣ್ಣುಗಳು ಕೆಳಕ್ಕೆ ತಗ್ಗಿರುವುವು.
يَقُولُونَ أَإِنَّا لَمَرْدُودُونَ فِي الْحَافِرَةِ ۝١٠
📖 ಅನುವಾದ ಆಯತ್ 10
ಅವರು (ಸತ್ಯ ನಿಷೇಧಿಗಳು) ಕೇಳುವರು; ನಾವು (ಮರಣಾ ನಂತರ) ಮೊದಲಿನ ಸ್ಥಿತಿಗೆ ಪುನಃ ಮರಳಿಸಲಾಗುವೆವೇ ?
أَإِذَا كُنَّا عِظَامًا نَّخِرَةً ۝١١
📖 ಅನುವಾದ ಆಯತ್ 11
ನಾವು ಶಿಥಿಲ ಎಲುಬುಗಳಾಗಿ ಬಿಟ್ಟರೂ ?
قَالُوا تِلْكَ إِذًا كَرَّةٌ خَاسِرَةٌ ۝١٢
📖 ಅನುವಾದ ಆಯತ್ 12
ಅವರು ಹೇಳುವರು; ಹಾಗಾದರೆ ಆ ಮರಳುವಿಕೆಯು ಹಾನಿಕರವಾಗಿದೆ.
فَإِنَّمَا هِيَ زَجْرَةٌ وَاحِدَةٌ ۝١٣
📖 ಅನುವಾದ ಆಯತ್ 13
ಅದಂತು ಒಂದು ಘೋರ ರ‍್ಭಟವಾಗಿದೆ.
فَإِذَا هُم بِالسَّاهِرَةِ ۝١٤
📖 ಅನುವಾದ ಆಯತ್ 14
(ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.
هَلْ أَتَاكَ حَدِيثُ مُوسَىٰ ۝١٥
📖 ಅನುವಾದ ಆಯತ್ 15
ಏನು ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ ?
إِذْ نَادَاهُ رَبُّهُ بِالْوَادِ الْمُقَدَّسِ طُوًى ۝١٦
📖 ಅನುವಾದ ಆಯತ್ 16
ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ
اذْهَبْ إِلَىٰ فِرْعَوْنَ إِنَّهُ طَغَىٰ ۝١٧
📖 ಅನುವಾದ ಆಯತ್ 17
(ಆದೇಶ ನೀಡಲಾಯಿತು) ನೀವು ಫಿರ್ಔನನ ಬಳಿಗೆ ಹೋಗಿರಿ, ಅವನು ಧಿಕ್ಕಾರವನ್ನು ತೋರುತ್ತಿದ್ದಾನೆ.
فَقُلْ هَل لَّكَ إِلَىٰ أَن تَزَكَّىٰ ۝١٨
📖 ಅನುವಾದ ಆಯತ್ 18
ಅವನೊಡನೆ ಹೇಳಿರಿ ನೀನು (ಸತ್ಯನಿಷೇಧದಿಂದ) ಪರಿಶುದ್ಧತೆಯನ್ನು ಬಯಸುತ್ತೀಯಾ ?
وَأَهْدِيَكَ إِلَىٰ رَبِّكَ فَتَخْشَىٰ ۝١٩
📖 ಅನುವಾದ ಆಯತ್ 19
ಹಾಗಾದರೆ ನಾನು ನಿನಗೆ ನಿನ್ನ ಪ್ರಭುವಿನೆಡೆಗೆ ಮರ‍್ಗರ‍್ಶನ ಮಾಡುವೆನು. ಇದು ನೀನು ಅವನನ್ನು ಭಯಪಡಲೆಂದಾಗಿದೆ
فَأَرَاهُ الْآيَةَ الْكُبْرَىٰ ۝٢٠
📖 ಅನುವಾದ ಆಯತ್ 20
ತರುವಾಯ ಅವರು ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.
فَكَذَّبَ وَعَصَىٰ ۝٢١
📖 ಅನುವಾದ ಆಯತ್ 21
ಆದರೆ ಅವನು ಸುಳ್ಳಾಗಿಸಿದನು ಮತ್ತು ಧಿಕ್ಕರಿಸಿದನು.
ثُمَّ أَدْبَرَ يَسْعَىٰ ۝٢٢
📖 ಅನುವಾದ ಆಯತ್ 22
ನಂತರ ಅವನು ವಿಮುಖನಾದನು ಮತ್ತು ಯೋಜನೆ ಹಾಕಲಾರಂಭಿಸಿದನು,
فَحَشَرَ فَنَادَىٰ ۝٢٣
📖 ಅನುವಾದ ಆಯತ್ 23
ಅನಂತರ ಅವನು ಎಲ್ಲ ಜನರನ್ನು ಒಟ್ಟುಗೂಡಿಸಿ ಘೋಷಿಸಿದನು.
فَقَالَ أَنَا رَبُّكُمُ الْأَعْلَىٰ ۝٢٤
📖 ಅನುವಾದ ಆಯತ್ 24
ನಾನೇ ನಿಮ್ಮೆಲ್ಲರ ಅತ್ಯುನ್ನತ ಪ್ರಭು ಎಂದು ಹೇಳಿದನು.
فَأَخَذَهُ اللَّهُ نَكَالَ الْآخِرَةِ وَالْأُولَىٰ ۝٢٥
📖 ಅನುವಾದ ಆಯತ್ 25
ಆಗ ಪರಲೋಕದ ಮತ್ತು ಇಹಲೋಕದ ಶಿಕ್ಷೆಗಾಗಿ ಅಲ್ಲಾಹನು ಅವನನ್ನು ಹಿಡಿದನು.
إِنَّ فِي ذَٰلِكَ لَعِبْرَةً لِّمَن يَخْشَىٰ ۝٢٦
📖 ಅನುವಾದ ಆಯತ್ 26
ನಿಸ್ಸಂಶಯವಾಗಿಯೂ ಅಲ್ಲಾಹನಿಂದ ಭಯಪಡುವವನಿಗೆ ಇದರಲ್ಲಿ ಪಾಠವಿದೆ.
أَأَنتُمْ أَشَدُّ خَلْقًا أَمِ السَّمَاءُ ۚ بَنَاهَا ۝٢٧
📖 ಅನುವಾದ ಆಯತ್ 27
ಏನು ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ ? ಅಲ್ಲಾಹನು ಅದನ್ನು ನರ‍್ಮಿಸಿದನು.
رَفَعَ سَمْكَهَا فَسَوَّاهَا ۝٢٨
📖 ಅನುವಾದ ಆಯತ್ 28
ಅದರ ಛಾವಣಿಯನ್ನು ಏರಿಸಿದನು ಮತ್ತು ಅದನ್ನು ಸುವ್ಯವಸ್ಥಿತಗೊಳಿಸಿದನು.
وَأَغْطَشَ لَيْلَهَا وَأَخْرَجَ ضُحَاهَا ۝٢٩
📖 ಅನುವಾದ ಆಯತ್ 29
ಅವನು ಅದರ ರಾತ್ರಿಯನ್ನು ಕತ್ತಲನ್ನಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರಕಾಶಮಯಗೊಳಿಸಿದನು.
وَالْأَرْضَ بَعْدَ ذَٰلِكَ دَحَاهَا ۝٣٠
📖 ಅನುವಾದ ಆಯತ್ 30
ಅದರ ನಂತರ ಅವನು ಭೂಮಿಯನ್ನು ಹಾಸಿದನು.
أَخْرَجَ مِنْهَا مَاءَهَا وَمَرْعَاهَا ۝٣١
📖 ಅನುವಾದ ಆಯತ್ 31
ಅವನೇ (ಭೂಮಿಯಿಂದ) ಅದರ ನೀರನ್ನು ಬರ‍್ಪಡಿಸಿ ತೆಗೆದನು ಮತ್ತು ಅದರಿಂದ ಮೇವನ್ನು ಹೊರತೆಗೆದನು.
وَالْجِبَالَ أَرْسَاهَا ۝٣٢
📖 ಅನುವಾದ ಆಯತ್ 32
ಅವನು ರ‍್ವತಗಳನ್ನು ಸದೃಢವಾಗಿ ನಾಟಿಬಿಟ್ಟನು.
مَتَاعًا لَّكُمْ وَلِأَنْعَامِكُمْ ۝٣٣
📖 ಅನುವಾದ ಆಯತ್ 33
ಇದೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
فَإِذَا جَاءَتِ الطَّامَّةُ الْكُبْرَىٰ ۝٣٤
📖 ಅನುವಾದ ಆಯತ್ 34
ಆ ಮಹಾ ವಿಪತ್ತು (ಪ್ರಳಯ ದಿನ) ಬಂದಾಗ.
يَوْمَ يَتَذَكَّرُ الْإِنسَانُ مَا سَعَىٰ ۝٣٥
📖 ಅನುವಾದ ಆಯತ್ 35
ಅಂದು ಮನುಷ್ಯನು ತಾನು ಮಾಡಿದ್ದ ಪರಿಶ್ರಮವನ್ನು ಸ್ಮರಿಸುವನು.
وَبُرِّزَتِ الْجَحِيمُ لِمَن يَرَىٰ ۝٣٦
📖 ಅನುವಾದ ಆಯತ್ 36
ನೋಡುವವನ ಮುಂದೆ ನರಕಾಗ್ನಿಯನ್ನು ಪ್ರಕಟ ಗೊಳಿಸಲಾಗುವುದು.
فَأَمَّا مَن طَغَىٰ ۝٣٧
📖 ಅನುವಾದ ಆಯತ್ 37
ಇನ್ನು ಯಾರು ಧಿಕ್ಕಾರತೋರಿರುವನೋ
وَآثَرَ الْحَيَاةَ الدُّنْيَا ۝٣٨
📖 ಅನುವಾದ ಆಯತ್ 38
ಇಹಲೋಕ ಜೀವನಕ್ಕೆ ಆದ್ಯತೆ ನೀಡಿರುವನೋ.
فَإِنَّ الْجَحِيمَ هِيَ الْمَأْوَىٰ ۝٣٩
📖 ಅನುವಾದ ಆಯತ್ 39
ಖಂಡಿತವಾಗಿಯೂ (ಅವನ) ನೆಲೆಯು ನರಕವಾಗಿದೆ.
وَأَمَّا مَنْ خَافَ مَقَامَ رَبِّهِ وَنَهَى النَّفْسَ عَنِ الْهَوَىٰ ۝٤٠
📖 ಅನುವಾದ ಆಯತ್ 40
ಆದರೆ ಯಾರು ತನ್ನ ಪ್ರಭುವಿನ ಮುಂದೆ ನಿಲ್ಲುವ ಕುರಿತು ಭಯಪಟ್ಟನೋ ಮತ್ತು ತನ್ನನ್ನು ದೇಹೇಚ್ಛೆಗಳಿಂದ ತಡೆದನೋ
فَإِنَّ الْجَنَّةَ هِيَ الْمَأْوَىٰ ۝٤١
📖 ಅನುವಾದ ಆಯತ್ 41
ಖಂಡಿತವಾಗಿಯೂ ಅವನ ನೆಲೆಯು ಸ್ರ‍್ಗವಾಗಿದೆ.
يَسْأَلُونَكَ عَنِ السَّاعَةِ أَيَّانَ مُرْسَاهَا ۝٤٢
📖 ಅನುವಾದ ಆಯತ್ 42
ಅವÀರು ನಿಮ್ಮೊಂದಿಗೆ ಪ್ರಳಯ ಸಂಭವಿಸುವ ಸಮಯದ ಕುರಿತು ವಿಚಾರಿಸುತ್ತಾರೆ.
فِيمَ أَنتَ مِن ذِكْرَاهَا ۝٤٣
📖 ಅನುವಾದ ಆಯತ್ 43
ಅದನ್ನು ತಿಳಿಸಿಕೊಡುವುದರಿಂದ ನಿಮಗೇನು ಬೇಕು?
إِلَىٰ رَبِّكَ مُنتَهَاهَا ۝٤٤
📖 ಅನುವಾದ ಆಯತ್ 44
ಅದರ ಜ್ಞಾನದ ಅಂತ್ಯವು ನಿಮ್ಮ ಪ್ರಭುವಿನ ಕಡೆಗೇ ಸೀಮಿತವಾಗಿದೆ.
إِنَّمَا أَنتَ مُنذِرُ مَن يَخْشَاهَا ۝٤٥
📖 ಅನುವಾದ ಆಯತ್ 45
ನೀವು ಅದನ್ನು ಭಯಪಡುತ್ತಿರುವವರಿಗೆ ಎಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ.
كَأَنَّهُمْ يَوْمَ يَرَوْنَهَا لَمْ يَلْبَثُوا إِلَّا عَشِيَّةً أَوْ ضُحَاهَا ۝٤٦
📖 ಅನುವಾದ ಆಯತ್ 46
ಅವರು ಅದನ್ನು ಕಣ್ಣಾರೆ ಕಾಣುವ ದಿನ ನಾವು (ಇಹಲೋಕದಲ್ಲಿ) ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರವೇ ತಂಗಿದ್ದೆವು ಎಂಬಂತೆ ಅವರಿಗೆ ಭಾಸವಾಗುವುದು.
← 78 ಅನ್-ನಾಜಿಆತ್ (79/114) 80 →
ಓದಿ ಸೂರಾ ಅನ್-ನಾಜಿಆತ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

79النازعات An-Nazi'at 📚 46 ಆಯತ್ مكية

ಆಯತ್‌ವಾರು – ಸೂರಾ ಅನ್-ನಾಜಿಆತ್ — 46 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers