PDF —
46 ಆಯತ್ Meccan PDF
Built right in your browser — download starts automatically

ಸೂರಾ ಅನ್-ನಾಜಿಆತ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅನ್-ನಾಜಿಆತ್ pdf ಕನ್ನಡ — ಡೌನ್‌ಲೋಡ್ ಸೂರಾ ಅನ್-ನಾಜಿಆತ್ ಅನುವಾದ. ಸೂರಾ ಅನ್-ನಾಜಿಆತ್ (Meccan) 46 ಆಯತ್.

← ಅನ್-ನಬಾಸೂರಾ ಅನ್-ನಾಜಿಆತ್ ಅಬಸಾ →


46 ಆಯತ್ · Meccan · ಕನ್ನಡ
bismillah
ﮢﮣﮤ
79:1 ಮುಳುಗಿ ಸತ್ಯನಿಷೇಧಿಗಳ ಆತ್ಮಗಳನ್ನು ಕಠೋರವಾಗಿ ಎಳೆಯುವ ಮಲಕ್ಗಳಾಣೆ.
ﮥﮦﮧ
79:2 (ಸತ್ಯ ವಿಶ್ವಾಸಿಗಳ) ಆತ್ಮಗಳನ್ನು ಮೃದುವಾಗಿ ಎಳೆಯುವ ಮಲಕ್ಗಳಾಣೆ.
ﮨﮩﮪ
79:3 (ಭೂಮಿ ಆಕಾಶಗಳ ನಡುವೆ) ವೇಗವಾಗಿ ಈಜಿ ಸಾಗುವ ಮಲಕ್ಗಳಾಣೆ.
ﮫﮬﮭ
79:4 (ಅಲ್ಲಾಹನ ಆಜ್ಞೆ ಪಾಲಿಸಲು) ಓಡುತ್ತಾ ಮುಂದಕ್ಕೆ ಸಾಗುವ ಮಲಕ್ಗಳಾಣೆ.
ﮮﮯﮰ
79:5 (ತಮ್ಮ ಪ್ರಭುವಿನ ಆಜ್ಞೆಯಿಂದ) ಕರ‍್ಯಗಳ ಯೋಜನೆ ಹಾಕುವ ಮಲಕ್ಗಳಾಣೆ.
ﮱﯓﯔﯕ
79:6 ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.
ﯖﯗﯘ
79:7 ಅದರ ನಂತರ ಹಿಂಬಾಲಿಸಿ (ಮತ್ತೊಂದು ಕಂಪನ)ಬರುವಂತದ್ದು ಬರಲಿರುವುದು.
ﯙﯚﯛﯜ
79:8 ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.
ﯝﯞﯟ
79:9 ಅವರ ಕಣ್ಣುಗಳು ಕೆಳಕ್ಕೆ ತಗ್ಗಿರುವುವು.
ﯠﯡﯢﯣﯤﯥ
79:10 ಅವರು (ಸತ್ಯ ನಿಷೇಧಿಗಳು) ಕೇಳುವರು; ನಾವು (ಮರಣಾ ನಂತರ) ಮೊದಲಿನ ಸ್ಥಿತಿಗೆ ಪುನಃ ಮರಳಿಸಲಾಗುವೆವೇ ?
ﯦﯧﯨﯩﯪ
79:11 ನಾವು ಶಿಥಿಲ ಎಲುಬುಗಳಾಗಿ ಬಿಟ್ಟರೂ ?
ﯫﯬﯭﯮﯯﯰ
79:12 ಅವರು ಹೇಳುವರು; ಹಾಗಾದರೆ ಆ ಮರಳುವಿಕೆಯು ಹಾನಿಕರವಾಗಿದೆ.
ﯱﯲﯳﯴﯵ
79:13 ಅದಂತು ಒಂದು ಘೋರ ರ‍್ಭಟವಾಗಿದೆ.
ﯶﯷﯸﯹ
79:14 (ಅದು ಪ್ರಕಟವಾಗುತ್ತಲೇ) ಅವರು ಹಠಾತ್ತನೆ ಒಂದು ಮೈದಾನದಲ್ಲಿ ಒಟ್ಟು ಸೇರುವರು.
ﯺﯻﯼﯽﯾ
79:15 ಏನು ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ ?
ﯿﰀﰁﰂﰃﰄﰅ
79:16 ಪವಿತ್ರ ಕಣಿವೆ ತುವಾದಲ್ಲಿ ಅವರ ಪ್ರಭು ಅವರನ್ನು ಕರೆದಾಗ
ﭑﭒﭓﭔﭕﭖ
79:17 (ಆದೇಶ ನೀಡಲಾಯಿತು) ನೀವು ಫಿರ್ಔನನ ಬಳಿಗೆ ಹೋಗಿರಿ, ಅವನು ಧಿಕ್ಕಾರವನ್ನು ತೋರುತ್ತಿದ್ದಾನೆ.
ﭗﭘﭙﭚﭛﭜﭝ
79:18 ಅವನೊಡನೆ ಹೇಳಿರಿ ನೀನು (ಸತ್ಯನಿಷೇಧದಿಂದ) ಪರಿಶುದ್ಧತೆಯನ್ನು ಬಯಸುತ್ತೀಯಾ ?
ﭞﭟﭠﭡﭢ
79:19 ಹಾಗಾದರೆ ನಾನು ನಿನಗೆ ನಿನ್ನ ಪ್ರಭುವಿನೆಡೆಗೆ ಮರ‍್ಗರ‍್ಶನ ಮಾಡುವೆನು. ಇದು ನೀನು ಅವನನ್ನು ಭಯಪಡಲೆಂದಾಗಿದೆ
ﭣﭤﭥﭦ
79:20 ತರುವಾಯ ಅವರು ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.
ﭧﭨﭩ
79:21 ಆದರೆ ಅವನು ಸುಳ್ಳಾಗಿಸಿದನು ಮತ್ತು ಧಿಕ್ಕರಿಸಿದನು.
ﭪﭫﭬﭭ
79:22 ನಂತರ ಅವನು ವಿಮುಖನಾದನು ಮತ್ತು ಯೋಜನೆ ಹಾಕಲಾರಂಭಿಸಿದನು,
ﭮﭯﭰ
79:23 ಅನಂತರ ಅವನು ಎಲ್ಲ ಜನರನ್ನು ಒಟ್ಟುಗೂಡಿಸಿ ಘೋಷಿಸಿದನು.
ﭱﭲﭳﭴﭵ
79:24 ನಾನೇ ನಿಮ್ಮೆಲ್ಲರ ಅತ್ಯುನ್ನತ ಪ್ರಭು ಎಂದು ಹೇಳಿದನು.
ﭶﭷﭸﭹﭺﭻ
79:25 ಆಗ ಪರಲೋಕದ ಮತ್ತು ಇಹಲೋಕದ ಶಿಕ್ಷೆಗಾಗಿ ಅಲ್ಲಾಹನು ಅವನನ್ನು ಹಿಡಿದನು.
ﭼﭽﭾﭿﮀﮁﮂ
79:26 ನಿಸ್ಸಂಶಯವಾಗಿಯೂ ಅಲ್ಲಾಹನಿಂದ ಭಯಪಡುವವನಿಗೆ ಇದರಲ್ಲಿ ಪಾಠವಿದೆ.
ﮃﮄﮅﮆﮇﮈﮉﮊ
79:27 ಏನು ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ ? ಅಲ್ಲಾಹನು ಅದನ್ನು ನರ‍್ಮಿಸಿದನು.
ﮋﮌﮍﮎ
79:28 ಅದರ ಛಾವಣಿಯನ್ನು ಏರಿಸಿದನು ಮತ್ತು ಅದನ್ನು ಸುವ್ಯವಸ್ಥಿತಗೊಳಿಸಿದನು.
ﮏﮐﮑﮒﮓ
79:29 ಅವನು ಅದರ ರಾತ್ರಿಯನ್ನು ಕತ್ತಲನ್ನಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರಕಾಶಮಯಗೊಳಿಸಿದನು.
ﮔﮕﮖﮗﮘ
79:30 ಅದರ ನಂತರ ಅವನು ಭೂಮಿಯನ್ನು ಹಾಸಿದನು.
ﮙﮚﮛﮜﮝ
79:31 ಅವನೇ (ಭೂಮಿಯಿಂದ) ಅದರ ನೀರನ್ನು ಬರ‍್ಪಡಿಸಿ ತೆಗೆದನು ಮತ್ತು ಅದರಿಂದ ಮೇವನ್ನು ಹೊರತೆಗೆದನು.
ﮞﮟﮠ
79:32 ಅವನು ರ‍್ವತಗಳನ್ನು ಸದೃಢವಾಗಿ ನಾಟಿಬಿಟ್ಟನು.
ﮡﮢﮣﮤ
79:33 ಇದೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
ﮥﮦﮧﮨﮩ
79:34 ಆ ಮಹಾ ವಿಪತ್ತು (ಪ್ರಳಯ ದಿನ) ಬಂದಾಗ.
ﮪﮫﮬﮭﮮﮯ
79:35 ಅಂದು ಮನುಷ್ಯನು ತಾನು ಮಾಡಿದ್ದ ಪರಿಶ್ರಮವನ್ನು ಸ್ಮರಿಸುವನು.
ﮰﮱﯓﯔﯕ
79:36 ನೋಡುವವನ ಮುಂದೆ ನರಕಾಗ್ನಿಯನ್ನು ಪ್ರಕಟ ಗೊಳಿಸಲಾಗುವುದು.
ﯖﯗﯘﯙ
79:37 ಇನ್ನು ಯಾರು ಧಿಕ್ಕಾರತೋರಿರುವನೋ
ﯚﯛﯜﯝ
79:38 ಇಹಲೋಕ ಜೀವನಕ್ಕೆ ಆದ್ಯತೆ ನೀಡಿರುವನೋ.
ﯞﯟﯠﯡﯢ
79:39 ಖಂಡಿತವಾಗಿಯೂ (ಅವನ) ನೆಲೆಯು ನರಕವಾಗಿದೆ.
ﯣﯤﯥﯦﯧﯨﯩﯪﯫﯬ
79:40 ಆದರೆ ಯಾರು ತನ್ನ ಪ್ರಭುವಿನ ಮುಂದೆ ನಿಲ್ಲುವ ಕುರಿತು ಭಯಪಟ್ಟನೋ ಮತ್ತು ತನ್ನನ್ನು ದೇಹೇಚ್ಛೆಗಳಿಂದ ತಡೆದನೋ
ﯭﯮﯯﯰﯱ
79:41 ಖಂಡಿತವಾಗಿಯೂ ಅವನ ನೆಲೆಯು ಸ್ರ‍್ಗವಾಗಿದೆ.
ﯲﯳﯴﯵﯶﯷ
79:42 ಅವÀರು ನಿಮ್ಮೊಂದಿಗೆ ಪ್ರಳಯ ಸಂಭವಿಸುವ ಸಮಯದ ಕುರಿತು ವಿಚಾರಿಸುತ್ತಾರೆ.
ﯸﯹﯺﯻﯼ
79:43 ಅದನ್ನು ತಿಳಿಸಿಕೊಡುವುದರಿಂದ ನಿಮಗೇನು ಬೇಕು?
ﯽﯾﯿﰀ
79:44 ಅದರ ಜ್ಞಾನದ ಅಂತ್ಯವು ನಿಮ್ಮ ಪ್ರಭುವಿನ ಕಡೆಗೇ ಸೀಮಿತವಾಗಿದೆ.
ﰁﰂﰃﰄﰅﰆ
79:45 ನೀವು ಅದನ್ನು ಭಯಪಡುತ್ತಿರುವವರಿಗೆ ಎಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ.
ﰇﰈﰉﰊﰋﰌﰍﰎﰏﰐ
79:46 ಅವರು ಅದನ್ನು ಕಣ್ಣಾರೆ ಕಾಣುವ ದಿನ ನಾವು (ಇಹಲೋಕದಲ್ಲಿ) ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರವೇ ತಂಗಿದ್ದೆವು ಎಂಬಂತೆ ಅವರಿಗೆ ಭಾಸವಾಗುವುದು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers