ಅಲ್-ಮುಮ್ತಹಿನಾ · 2/13
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮ್ತಹಿನಾ
إِن يَثْقَفُوكُمْ يَكُونُوا لَكُمْ أَعْدَاءً وَيَبْسُطُوا إِلَيْكُمْ أَيْدِيَهُمْ وَأَلْسِنَتَهُم بِالسُّوءِ وَوَدُّوا لَوْ تَكْفُرُونَ ۝٢
Iny yasqafookum yakoonoo lakum a`daaa`anw wa yabsutooo ilaikum aydiyahum wa alsinatahum bissooo`i wa waddoo law takfuroon
📖 ಕನ್ನಡ ಅರ್ಥ
ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮ ವೈರಿಗಳಾಗಿ ಬಿಡುವರು ಮತ್ತು ತಮ್ಮ ಕೈಗಳನ್ನು ಹಾಗೂ ನಾಲಗೆಗಳನ್ನೂ ಕೆಟ್ಟ ಉದ್ದೇಶದಿಂದ ನಿಮ್ಮೆಡೆಗೆ ಚಾಚುವರು ನೀವೂ ಸಹ ಸತ್ಯನಿಷೇಧಿಗಳಾಗಲೆಂದು ಅವರು ಬಯಸುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಅಲ್-ಮುಮ್ತಹಿನಾ

1يَا أَيُّهَا الَّذِينَ آمَنُوا لَا تَتَّخِذُوا عَدُوِّي وَعَدُوَّكُمْ أَوْلِيَاءَ تُلْقُونَ إِلَيْهِم بِالْمَوَدَّةِ وَقَدْ كَفَرُوا بِمَا جَاءَكُم مِّنَ الْحَقِّ يُخْرِجُونَ الرَّسُولَ وَإِيَّاكُمْ ۙ أَن تُؤْمِنُوا بِاللَّهِ رَبِّكُمْ إِن كُنتُمْ خَرَجْتُمْ جِهَادًا فِي سَبِيلِي وَابْتِغَاءَ مَرْضَاتِي ۚ تُسِرُّونَ إِلَيْهِم بِالْمَوَدَّةِ وَأَنَا أَعْلَمُ بِمَا أَخْفَيْتُمْ وَمَا أَعْلَنتُمْ ۚ وَمَن يَفْعَلْهُ مِنكُمْ فَقَدْ ضَلَّ سَوَاءَ السَّبِيلِ
ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಅವರೆಡೆಗೆ ಸ್ನೇಹ ಸಂದೇಶಗಳನ್ನು ಕಳುಹಿಸುತ್ತಿರುವಿರಿ, ವಾಸ್ತವದಲ್ಲಿ ಅವರು ನಿಮ್ಮೆಡೆಗೆ ಬಂದAತಹ ಸತ್ಯವನ್ನು ನಿಷೇಧಿಸುತ್ತಾರೆ. ಅವರು ಸಂದೇಶವಾಹಕರನ್ನೂ ಸ್ವತಃ ನಿಮ್ಮನ್ನೂ ಕೇವಲ ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೀರಿ ಎಂಬ ಕಾರಣಕ್ಕೆ ಗಡಿಪಾರು ಮಾಡುತ್ತಾರೆ. ನೀವು ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಸಂತೃಪ್ತಿಯನ್ನು ಅರಸಲಿಕ್ಕಾಗಿ ಹೊರಟಿದ್ದೀರೆಂದಾದರೆ ನೀವು ಅವರೆಡೆಗೆ ಗುಪ್ತವಾಗಿ ಸ್ನೇಹ ಸಂದೇಶವನ್ನು ಏಕೆ ಕಳುಹಿಸುತ್ತಿರುವಿರಿ? ನೀವು ರಹಸ್ಯವಾಗಿಡುವುದನ್ನು, ಬಹಿರಂಗಗೊಳಿಸುವುದನ್ನು ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಯಾರು ಈ ಕೃತ್ಯವನ್ನು ಮಾಡುತ್ತಾರೋ ಅವನು ಖಂಡಿತವಾಗಿಯೂ ನೇರ ಮಾರ್ಗದಿಂದ ಭ್ರಷ್ಟನಾಗುವನು.
2إِن يَثْقَفُوكُمْ يَكُونُوا لَكُمْ أَعْدَاءً وَيَبْسُطُوا إِلَيْكُمْ أَيْدِيَهُمْ وَأَلْسِنَتَهُم بِالسُّوءِ وَوَدُّوا لَوْ تَكْفُرُونَ
ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮ ವೈರಿಗಳಾಗಿ ಬಿಡುವರು ಮತ್ತು ತಮ್ಮ ಕೈಗಳನ್ನು ಹಾಗೂ ನಾಲಗೆಗಳನ್ನೂ ಕೆಟ್ಟ ಉದ್ದೇಶದಿಂದ ನಿಮ್ಮೆಡೆಗೆ ಚಾಚುವರು ನೀವೂ ಸಹ ಸತ್ಯನಿಷೇಧಿಗಳಾಗಲೆಂದು ಅವರು ಬಯಸುತ್ತಾರೆ.
3لَن تَنفَعَكُمْ أَرْحَامُكُمْ وَلَا أَوْلَادُكُمْ ۚ يَوْمَ الْقِيَامَةِ يَفْصِلُ بَيْنَكُمْ ۚ وَاللَّهُ بِمَا تَعْمَلُونَ بَصِيرٌ
ಪುನರುತ್ಥಾನ ದಿನದಂದು ನಿಮ್ಮ ಕುಟುಂಬ ಸಂಬAಧವಾಗಲಿ ನಿಮ್ಮ ಸಂತಾನಗಳಾಗಲಿ ನಿಮಗೆ ಯಾವ ಪ್ರಯೋಜನಕ್ಕೂ ಬಾರದು, ಅಲ್ಲಾಹನು ನಿಮ್ಮ ನಡುವೆ ತೀರ್ಮಾನ ಮಾಡುವನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ನೋಡುವವನಾಗಿದ್ದಾನೆ.
4قَدْ كَانَتْ لَكُمْ أُسْوَةٌ حَسَنَةٌ فِي إِبْرَاهِيمَ وَالَّذِينَ مَعَهُ إِذْ قَالُوا لِقَوْمِهِمْ إِنَّا بُرَآءُ مِنكُمْ وَمِمَّا تَعْبُدُونَ مِن دُونِ اللَّهِ كَفَرْنَا بِكُمْ وَبَدَا بَيْنَنَا وَبَيْنَكُمُ الْعَدَاوَةُ وَالْبَغْضَاءُ أَبَدًا حَتَّىٰ تُؤْمِنُوا بِاللَّهِ وَحْدَهُ إِلَّا قَوْلَ إِبْرَاهِيمَ لِأَبِيهِ لَأَسْتَغْفِرَنَّ لَكَ وَمَا أَمْلِكُ لَكَ مِنَ اللَّهِ مِن شَيْءٍ ۖ رَّبَّنَا عَلَيْكَ تَوَكَّلْنَا وَإِلَيْكَ أَنَبْنَا وَإِلَيْكَ الْمَصِيرُ
ನಿಮಗೆ ಪೈಗಂಬರ್ ಇಬ್ರಾಹೀಮರಲ್ಲೂ ಅವರ ಸಂಗಡಿಗರಲ್ಲೂ ಉತ್ತಮ ಮಾದರಿಯಿದೆ. ಅವರು ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭ; ಖಂಡಿತ ನಾವು ನಿಮ್ಮಿಂದ ಮತ್ತು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಸ್ತುಗಳಿಂದ ಸಂಬAಧ ಮುಕ್ತರಾಗಿದ್ದೇವೆ. ನೀವು ಏಕೈಕನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವ ತನಕ ನಮ್ಮ ಮತ್ತು ನಿಮ್ಮ ನಡುವೆ ಹಗೆತನ, ದ್ವೇಷ ಸದಾ ಕಾಲಕ್ಕೆ ಪ್ರಕಟಗೊಂಡಿದೆ. ಆದರೆ ಇಬ್ರಾಹೀಮರು ತಮ್ಮ ತಂದೆಯೊAದಿಗೆ ನಾನು ಖಂಡಿತಾ ನಿಮಗಾಗಿ ಕ್ಷಮೆ ಬೇಡುವೆನು ಮತ್ತು ಅಲ್ಲಾಹನ ಮುಂದೆ ನನಗೆ ನಿಮಗೋಸ್ಕರ ಯಾವುದೇ ವಸ್ತುವಿನ ಅಧಿಕಾರವಿಲ್ಲ ಎಂದು ಹೇಳಿದ ಮಾತಿನ ಹೊರತು. ಓ ನಮ್ಮ ಪ್ರಭು, ನಾವು ನಿನ್ನ ಮೇಲೆ ಭರವಸೆಯನ್ನಿರಿಸಿದ್ದೇವೆ ಮತ್ತೂ ನಿನ್ನೆಡೆಗೆ ಪಶ್ಚಾತ್ತಾಪದಿಂದ ಮರಳುತ್ತೇವೆ ಮತ್ತು ನಿನ್ನೆಡೆಗೇ ಮರಳಲಿಕ್ಕಿರುವುದು.
ಅಲ್-ಮುಮ್ತಹಿನಾಕುರಾನ್ ಸೂಚಿ
13ಆಯತ್
MedinanRevelation
2ಆಯತ್

ಅನುವಾದ — ಅಲ್-ಮುಮ್ತಹಿನಾ 2

ಸೂರಾ ಅಲ್-ಮುಮ್ತಹಿನಾ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮ ವೈರಿಗಳಾಗಿ ಬಿಡುವರು ಮತ್ತು ತಮ್ಮ…

ಸೂರಾ ಆಯತ್ 2/13 — ಸೂರಾ ಅಲ್-ಮುಮ್ತಹಿನಾ الممتحنة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮ್ತಹಿನಾ ಆಲಿಸಿ, ಸೂರಾ ಅಲ್-ಮುಮ್ತಹಿನಾ ಅನುವಾದ, ಸೂರಾ ಅಲ್-ಮುಮ್ತಹಿನಾ mp3, ಸೂರಾ ಅಲ್-ಮುಮ್ತಹಿನಾ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers