ಅತ್-ತೌಬಾ · 29/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
قَاتِلُوا الَّذِينَ لَا يُؤْمِنُونَ بِاللَّهِ وَلَا بِالْيَوْمِ الْآخِرِ وَلَا يُحَرِّمُونَ مَا حَرَّمَ اللَّهُ وَرَسُولُهُ وَلَا يَدِينُونَ دِينَ الْحَقِّ مِنَ الَّذِينَ أُوتُوا الْكِتَابَ حَتَّىٰ يُعْطُوا الْجِزْيَةَ عَن يَدٍ وَهُمْ صَاغِرُونَ ۝٢٩
Qaatilul lazeena laa yu`minoona billaahi wa laa bil yawmil Aakhiri wa laa yuharrimoona maa harramal laahu wa Rasooluhoo wa laa yadeenoona deenal haqqi minal lazeena ootul Kitaaba hattaa yu`tul jizyata ai yadinw wa hum saaghiroon
📖 ಕನ್ನಡ ಅರ್ಥ
ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು ನಿಷಿದ್ಧಗೊಳಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸಿದವರೊಡನೆ ಯುದ್ಧ ಮಾಡಿರಿ. ಹಾಗೂ ಸತ್ಯ ಧರ್ಮವನ್ನು ಸ್ವೀಕರಿಸದವರು ಯಾರೋ ಅವರು ಅಪಮಾನಿತರೂ, ನಿಂದ್ಯರೂ ಆಗಿ ತಮ್ಮ ಕೈಯಿಂದ ಜಿಜಿಯಾ (ತೆರಿಗೆ) ಪಾವತಿಸುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ.

🎧 ಆಲಿಸಿ


📜 ಆಯತ್ 27-31 — ಸೂರಾ ಅತ್-ತೌಬಾ

27ثُمَّ يَتُوبُ اللَّهُ مِن بَعْدِ ذَٰلِكَ عَلَىٰ مَن يَشَاءُ ۗ وَاللَّهُ غَفُورٌ رَّحِيمٌ
ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.
28يَا أَيُّهَا الَّذِينَ آمَنُوا إِنَّمَا الْمُشْرِكُونَ نَجَسٌ فَلَا يَقْرَبُوا الْمَسْجِدَ الْحَرَامَ بَعْدَ عَامِهِمْ هَٰذَا ۚ وَإِنْ خِفْتُمْ عَيْلَةً فَسَوْفَ يُغْنِيكُمُ اللَّهُ مِن فَضْلِهِ إِن شَاءَ ۚ إِنَّ اللَّهَ عَلِيمٌ حَكِيمٌ
ಓ ಸತ್ಯವಿಶ್ವಾಸಿಗಳೇ, ನಿಸ್ಸಂಶಯವಾಗಿಯು ಬಹುದೇವವಿಶ್ವಾಸಿಗಳು ಮಲಿನರಾಗಿದ್ದಾರೆ. ಆದ್ದರಿಂದ ಅವರು ಈ ವರ್ಷದ ಬಳಿಕ ಮಸ್ಜಿದುಲ್ ಹರಾಮ್‌ನ ಸಮೀಪಕ್ಕು ಬರದಿರಲಿ. ನಿಮಗೆ ದಾರಿದ್ರö್ಯದ ಭಯವಿದ್ದರೆ ಅಲ್ಲಾಹನು ಇಚ್ಛಿಸಿದರೆ ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನಗೊಳಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
29قَاتِلُوا الَّذِينَ لَا يُؤْمِنُونَ بِاللَّهِ وَلَا بِالْيَوْمِ الْآخِرِ وَلَا يُحَرِّمُونَ مَا حَرَّمَ اللَّهُ وَرَسُولُهُ وَلَا يَدِينُونَ دِينَ الْحَقِّ مِنَ الَّذِينَ أُوتُوا الْكِتَابَ حَتَّىٰ يُعْطُوا الْجِزْيَةَ عَن يَدٍ وَهُمْ صَاغِرُونَ
ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು ನಿಷಿದ್ಧಗೊಳಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸಿದವರೊಡನೆ ಯುದ್ಧ ಮಾಡಿರಿ. ಹಾಗೂ ಸತ್ಯ ಧರ್ಮವನ್ನು ಸ್ವೀಕರಿಸದವರು ಯಾರೋ ಅವರು ಅಪಮಾನಿತರೂ, ನಿಂದ್ಯರೂ ಆಗಿ ತಮ್ಮ ಕೈಯಿಂದ ಜಿಜಿಯಾ (ತೆರಿಗೆ) ಪಾವತಿಸುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ.
30وَقَالَتِ الْيَهُودُ عُزَيْرٌ ابْنُ اللَّهِ وَقَالَتِ النَّصَارَى الْمَسِيحُ ابْنُ اللَّهِ ۖ ذَٰلِكَ قَوْلُهُم بِأَفْوَاهِهِمْ ۖ يُضَاهِئُونَ قَوْلَ الَّذِينَ كَفَرُوا مِن قَبْلُ ۚ قَاتَلَهُمُ اللَّهُ ۚ أَنَّىٰ يُؤْفَكُونَ
ಉಝೈರ್ ಅಲ್ಲಾಹನ ಪುತ್ರನೆಂದು ಯಹೂದರು ಹೇಳುತ್ತಾರೆ. ಮತ್ತು ಕ್ರೆöÊಸ್ತರು: ಮಸೀಹ ಅಲ್ಲಾಹನ ಪುತ್ರನೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು ಮಾತ್ರ. ಹಿಂದಿನ ಸತ್ಯನಿಷೇಧಿಗಳ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹನು ಅವರನ್ನು ನಾಶಗೊಳಿಸಲಿ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ.
31اتَّخَذُوا أَحْبَارَهُمْ وَرُهْبَانَهُمْ أَرْبَابًا مِّن دُونِ اللَّهِ وَالْمَسِيحَ ابْنَ مَرْيَمَ وَمَا أُمِرُوا إِلَّا لِيَعْبُدُوا إِلَٰهًا وَاحِدًا ۖ لَّا إِلَٰهَ إِلَّا هُوَ ۚ سُبْحَانَهُ عَمَّا يُشْرِكُونَ
ಅವರು (ಕ್ರೆöÊಸ್ತರು) ಅಲ್ಲಾಹನ ಹೊರತು ತಮ್ಮ ವಿದ್ವಾಂಸರನ್ನೂ, ಸನ್ಯಾಸಿಗಳನ್ನೂ ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಮರ್ಯಮರ ಪುತ್ರನಾದ ಮಸೀಹರನ್ನು ಸಹ, ವಸ್ತುತಃ ಅವರಿಗೆ ಕೇವಲ ಏಕೈಕ ಆರಾಧ್ಯನ ಆರಾಧನೆಯ ಆದೇಶ ನೀಡಲಾಗಿತ್ತು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅವನು ಪರಿಶುದ್ಧನಾಗಿದ್ದಾನೆ.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
29ಆಯತ್

ಅನುವಾದ — ಅತ್-ತೌಬಾ 29

ಸೂರಾ ಅತ್-ತೌಬಾ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು…

ಸೂರಾ ಆಯತ್ 29/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 27–31. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers