PDF —
118 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಮುಮಿನೂನ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಮುಮಿನೂನ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮುಮಿನೂನ್ ಅನುವಾದ. ಸೂರಾ ಅಲ್-ಮುಮಿನೂನ್ (Meccan) 118 ಆಯತ್.

← ಅಲ್-ಹಜ್ಜ್ಸೂರಾ ಅಲ್-ಮುಮಿನೂನ್ ಅನ್-ನೂರ್ →


118 ಆಯತ್ · Meccan · ಕನ್ನಡ
bismillah
ﭑﭒﭓﭔ
23:1 ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಯಶಸ್ಸು ಹೊಂದಿದರು.
ﭕﭖﭗﭘﭙﭚ
23:2 ಅವರು ತಮ್ಮ ನಮಾಜ಼್ನಲ್ಲಿ ಭಯಭಕ್ತಿಯನ್ನಿರಿಸಿಕೊಳ್ಳುತ್ತಾರೆ.
ﭛﭜﭝﭞﭟﭠ
23:3 ಅವರು ವ್ಯರ್ಥ ಕಾರ್ಯದಿಂದ ವಿಮುಖರಾಗುತ್ತಾರೆ.
ﭡﭢﭣﭤﭥ
23:4 ಮತ್ತು ಅವರು ಝಕಾತ್ (ಕಡ್ಡಾಯ ದಾನವನ್ನು) ಪಾವತಿಸುವವರಾಗಿದ್ದಾರೆ.
ﭦﭧﭨﭩﭪ
23:5 ಮತ್ತು ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸುವವರಾಗಿದ್ದಾರೆ.
ﭫﭬﭭﭮﭯﭰﭱﭲﭳﭴﭵ
23:6 ಆದರೆ ತಮ್ಮ ಪತ್ನಿಯರ ಅಥವಾ ತಮ್ಮ ಅಧೀನದಲ್ಲಿರುವ ದಾಸಿಯ ಹೊರತು. ಖಂಡಿತವಾಗಿಯು ಅವರು ಆಕ್ಷೆಪರ್ಹರಲ್ಲ.
ﭶﭷﭸﭹﭺﭻﭼﭽ
23:7 ಆದರೆ ಯಾರಾದರೂ ಇದರಾಚೆಗೆ ದಾಟಲು ಬಯಸಿದರೆ ಅವರೇ ಮಿತಿ ಮೀರಿದವರಾಗಿದ್ದಾರೆ.
ﭾﭿﮀﮁﮂﮃ
23:8 ಮತ್ತು ಅವರು ತಮ್ಮ ಅಮಾನತ್ತು ಹಾಗೂ ವಾಗ್ದಾನಗಳನ್ನು ಕಾಪಾಡುವವರಾಗಿದ್ದಾರೆ.
ﮄﮅﮆﮇﮈﮉ
23:9 ಮತ್ತು ಅವರು ತಮ್ಮ ನಮಾಜ಼್ಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವವರಾಗಿದ್ದಾರೆ.
ﮊﮋﮌﮍ
23:10 ಇವರೇ ವಾರೀಸುದಾರರು.
ﮎﮏﮐﮑﮒﮓﮔ
23:11 ಅವರು ಫಿರ್‌ದೌಸ್ (ಮಹೋನ್ನತ ಸ್ವರ್ಗ) ಅನ್ನು ವಾರೀಸು ಪಡೆಯುವರು. ಅದರಲ್ಲಿ ಅವರು ಶಾಶ್ವತವಾಗಿರುವರು.
ﮕﮖﮗﮘﮙﮚﮛﮜ
23:12 ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಆವೆಮಣ್ಣಿನ ಸತ್ವದಿಂದ ಸೃಷ್ಟಿಸಿರುತ್ತೇವೆ.
ﮝﮞﮟﮠﮡﮢﮣ
23:13 ನಂತರ ನಾವು ಅವನನ್ನು ವೀರ್ಯಾಣುವನ್ನಾಗಿ ಮಾಡಿ, ಸುಭದ್ರವಾದ ನೆಲೆಯಲ್ಲಿರಿಸಿದೆವು.
ﮤﮥﮦﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚﯛ
23:14 ನಂತರ ನಾವು ವೀರ್ಯವನ್ನು ರಕ್ತ ಪಿಂಡವನ್ನಾಗಿ ಮಾಡಿದೆವು. ಅನಂತರ ನಾವು ರಕ್ತಪಿಂಡವನ್ನು ಮಾಂಸ ಪಿಂಡವನ್ನಾಗಿ ಮಾಡಿದೆವು ಮತ್ತು ಮಾಂಸ ಪಿಂಡವನ್ನು ಎಲುಬನ್ನಾಗಿ ಮಾಡಿದೆವು. ಬಳಿಕ ಎಲುಬುಗಳನ್ನು ಮಾಂಸದಿAದ ಹೊದಿಸಿದೆವು. ತರುವಾಯ ನಾವು ಅವನನ್ನು ಬೇರೊಂದು ಸೃಷ್ಟಿಯನ್ನಾಗಿ ಸೃಷ್ಟಿಸಿದೆವು. ಹಾಗೆಯೇ ಸೃಷ್ಟಿಸುವವರಲ್ಲಿ ಅತ್ಯುತ್ತಮನಾದ ಅಲ್ಲಾಹನು ಮಹಾ ಮಂಗಳಮಯನು.
ﯜﯝﯞﯟﯠﯡ
23:15 ಇದರ ಬಳಿಕ ನೀವು ಖಂಡಿತ ಮರಣ ಹೊಂದುವಿರಿ.
ﯢﯣﯤﯥﯦﯧ
23:16 ನಂತರ ಪುನರುತ್ಥಾನದ ದಿನದಂದು ಖಂಡಿತ ನೀವು ಎಬ್ಬಿಸಲಾಗುವಿರಿ.
ﯨﯩﯪﯫﯬﯭﯮﯯﯰﯱﯲ
23:17 ನಾವು ನಿಮ್ಮ ಮೇಲೆ ಹಂತ ಹಂತವಾಗಿ ಏಳು ಆಕಾಶ ಪಥಗಳನ್ನು ಸೃಷ್ಟಿಸಿದ್ದೇವೆ ಹಾಗೂ ನಾವು ಸೃಷ್ಟಿಗಳ ಕುರಿತು ಅಲಕ್ಷö್ಯರಾಗಿಲ್ಲ.
ﭑﭒﭓﭔﭕﭖﭗﭘﭙﭚﭛﭜﭝﭞﭟ
23:18 ನಾವು ಆಕಾಶದಿಂದ ನೀರನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸುರಿಸಿದೆವು. ಮತ್ತು ಅದನ್ನು ಭೂಮಿಯಲ್ಲಿ ತಂಗಿಸಿದೆವು ಖಂಡಿತ ನಾವು ಅದನ್ನು ಬತ್ತಿಸಲು ಶಕ್ತರು.
ﭠﭡﭢﭣﭤﭥﭦﭧﭨﭩﭪﭫﭬﭭ
23:19 ಆ ನೀರಿನ ಮೂಲಕ ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷೆಗಳ ತೋಟಗಳನ್ನು ಉಂಟು ಮಾಡಿದೆವು. ಹಾಗೂ ನಿಮಗೋಸ್ಕರ ಅದರಲ್ಲಿ ಅನೇಕ ಹಣ್ಣು ಹಂಪಲುಗಳಿವೆ. ಮತ್ತು ಅವುಗಳಿಂದ ನೀವು ತಿನ್ನುತ್ತೀರಿ.
ﭮﭯﭰﭱﭲﭳﭴﭵﭶﭷ
23:20 ತೂರೆಸೀನಾ ಪರ್ವತದಿಂದ ಒಂದು ಮರ ಬೆಳೆಯುತ್ತದೆ. ಅದು ಎಣ್ಣೆಯನ್ನು ಮತ್ತು ತಿನ್ನುವವರಿಗೆ ಪದಾರ್ಥವನ್ನು ಉತ್ಪಾದಿಸುತ್ತದೆ.
ﭸﭹﭺﭻﭼﭽﭾﭿﮀﮁﮂﮃﮄﮅﮆﮇﮈ
23:21 ಖಂಡಿತವಾಗಿಯು ಜಾನುವಾರುಗಳಲ್ಲಿ ನಿಮಗೊಂದು ಪಾಠವಿದೆ. ನಾವು ಅವುಗಳ ಹೊಟ್ಟೆಗಳಿಂದ ನಿಮಗೆ ಹಾಲನ್ನು ಕುಡಿಸುತ್ತೇವೆ ಮತ್ತು ನಿಮಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಹಾಗೂ ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ.
ﮉﮊﮋﮌﮍ
23:22 ಮತ್ತು ಅವುಗಳ ಮೇಲೂ, ಹಡಗಿನ ಮೇಲೂ ನೀವು ಸವಾರಿ ಮಾಡುತ್ತೀರಿ.
ﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟ
23:23 ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮ್ಮ ಯಾವ ಆರಾಧ್ಯನಿಲ್ಲ ನೀವು (ಅವನನ್ನು) ಭಯಪಡುವುದಿಲ್ಲವೇ?
ﮠﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚﯛ
23:24 ಅವರ ಜನಾಂಗದ ಸತ್ಯನಿಷೇಧಿ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ಇವನು ನಿಮ್ಮ ಮೇಲೆ ಶ್ರೇಷ್ಠತೆ ಮೆರೆಯಲು ಬಯಸುತ್ತಿದ್ದಾನೆ ಮತ್ತು ಹಾಗೇನಾದರು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವನು ಮಲಕ್‌ಗಳನ್ನು ಇಳಿಸುತ್ತಿದ್ದನು. ನಾವು ಇದನ್ನು ನಮ್ಮ ಪೂರ್ವಿಕರಾದ ತಂದೆ ತಾತಂದಿರಿAದ ಕೇಳಿಯೇ ಇಲ್ಲ.
ﯜﯝﯞﯟﯠﯡﯢﯣﯤﯥﯦ
23:25 ಅವರ ಜನಾಂಗದ ಸತ್ಯನಿಷೇಧಿ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ಇವನು ನಿಮ್ಮ ಮೇಲೆ ಶ್ರೇಷ್ಠತೆ ಮೆರೆಯಲು ಬಯಸುತ್ತಿದ್ದಾನೆ ಮತ್ತು ಹಾಗೇನಾದರು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವನು ಮಲಕ್‌ಗಳನ್ನು ಇಳಿಸುತ್ತಿದ್ದನು. ನಾವು ಇದನ್ನು ನಮ್ಮ ಪೂರ್ವಿಕರಾದ ತಂದೆ ತಾತಂದಿರಿAದ ಕೇಳಿಯೇ ಇಲ್ಲ.
ﯧﯨﯩﯪﯫﯬ
23:26 ನೂಹರು ಪ್ರಾರ್ಥಿಸಿದರು: ನನ್ನ ಪ್ರಭು, ಇವರು ನನ್ನನು ಸುಳ್ಳಾಗಿಸಿರುವುದರಿಂದ ನೀನು ನನಗೆ ಸಹಾಯ ಮಾಡು.
ﯭﯮﯯﯰﯱﯲﯳﯴﯵﯶﯷﯸﯹﯺﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎ
23:27 ನಾವು ಅವರೆಡೆಗೆ ದಿವ್ಯ ಸಂದೇಶ ಮಾಡಿದೆವು: “ನೀವು ನಮ್ಮ ಮೇಲ್ನೋಟದಲ್ಲಿ, ನಮ್ಮ ನಿರ್ದೇಶನದ ಪ್ರಕಾರ ಹಡಗೊಂದನ್ನು ನಿರ್ಮಿಸಿರಿ. ನಮ್ಮ ಆಜ್ಞೆಯು ಬಂದಾಗ ಹಾಗೂ ತಂದೂರಿ ಓಲೆಯು ಉಕ್ಕಿ ಹರಿದರೆ ನೀವು ಪ್ರತಿಯೊಂದು ಜಾತಿಯ ಒಂದೊAದು ಜೋಡಿಯನ್ನು (ಗಂಡು-ಹೆಣ್ಣನ್ನು) ಅದರಲ್ಲಿ ಹತ್ತಿಸಿರಿ. ಮತ್ತು ನಿಮ್ಮ ಕುಟುಂಬದವರನ್ನು ಸಹ. ಆದರೆ ಅವರ ಪೈಕಿ ಯಾರ ಮೇಲೆ ನಮ್ಮ ಶಿಕ್ಷೆಯು ನಿಶ್ಚಿತವಾಗಿದೆಯೋ ಅವರ ಹೊರತು. ಮತ್ತು ಅಕ್ರಮವೆಸಗಿದವರ ವಿಚಾರದಲ್ಲಿ ನೀವು ನನ್ನೊಂದಿಗೆ ಚಕಾರವೆತ್ತಬೇಡಿರಿ. ಏಕೆಂದರೆ, ಅವರು ಮುಳುಗಿ ಹೋಗುವವರಿದ್ದಾರೆ”.
ﭑﭒﭓﭔﭕﭖﭗﭘﭙﭚﭛﭜﭝﭞﭟﭠ
23:28 ನೀವು, ನಿಮ್ಮ ಸಂಗಡಿಗರು ನೌಕೆಯಲ್ಲಿ ಕುಳಿತುಕೊಂಡಾಗ “ನಮ್ಮನ್ನು ಅಕ್ರಮಿಗಳಾದ ಜನರಿಂದ ರಕ್ಷಿಸಿದಂತಹ ಅಲ್ಲಾಹನಿಗೆ ಸರ್ವಸ್ತುತಿ ಎಂದು ಹೇಳಿ”.
ﭡﭢﭣﭤﭥﭦﭧﭨﭩ
23:29 ನೀವು, ನಿಮ್ಮ ಸಂಗಡಿಗರು ನೌಕೆಯಲ್ಲಿ ಕುಳಿತುಕೊಂಡಾಗ “ನಮ್ಮನ್ನು ಅಕ್ರಮಿಗಳಾದ ಜನರಿಂದ ರಕ್ಷಿಸಿದಂತಹ ಅಲ್ಲಾಹನಿಗೆ ಸರ್ವಸ್ತುತಿ ಎಂದು ಹೇಳಿ”.
ﭪﭫﭬﭭﭮﭯﭰﭱ
23:30 ಖಂಡಿತವಾಗಿಯು ಇದರಲ್ಲಿ (ಘಟನೆಯಲ್ಲಿ) ಅನೇಕ ದೃಷ್ಟಾಂತಗಳಿವೆ ಮತ್ತು ನಿಸ್ಸಂದೇಹವಾಗಿಯು ನಾವು ಜನರನ್ನು ಪರೀಕ್ಷಿಸುತ್ತೇವೆ.
ﭲﭳﭴﭵﭶﭷﭸ
23:31 ತರುವಾಯ ನಾವು ಅವರ ನಂತರ ಬೇರೊಂದು ಜನಾಂಗವನ್ನು ಸೃಷ್ಟಿಸಿದೆವು
ﭹﭺﭻﭼﭽﭾﭿﮀﮁﮂﮃﮄﮅﮆﮇﮈ
23:32 . “ನೀವು ಅಲ್ಲಾಹನನ್ನು ಆರಾಧಿಸಿರಿ, ಅವನ ಹೊರತು ನಿಮಗೆ ಬೇರೆ ಆರಾಧ್ಯನಿಲ್ಲ” ಎಂಬ ಸಂದೇಶದೊAದಿಗೆ ನಾವು ಅವರಿಂದಲೇ ಒಬ್ಬ ಸಂದೇಶವಾಹಕನನ್ನು ಕಳುಹಿಸಿದೆವು. ಹಾಗಿದ್ದೂ ನೀವು ಭಯವಿರಿಸಿಕೊಳ್ಳುವು ದಿಲ್ಲವೇ?
ﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢ
23:33 ಸತ್ಯನಿಷೇಧಿಸಿ, ಪರಲೋಕದ ಭೇಟಿಯನ್ನು ಸುಳ್ಳಾಗಿಸಿದ ಮತ್ತು ಐಹಿಕ ಜೀವನದಲ್ಲಿ ನಮ್ಮ ಸುಖಾನುಕೂಲತೆಗಳನ್ನು ಅನುಭವಿಸಿದ ಅವರ ಜನಾಂಗದ ಮುಖಂಡರು ಹೇಳಿದರು: ಇವನು ನಿಮ್ಮಂತಹ ಮನುಷ್ಯನಲ್ಲದೆ ಬೇರೇನೂ ಅಲ್ಲ. ನೀವು ತಿನ್ನುವುದನ್ನೇ ಇವನು ತಿನ್ನುತ್ತಾನೆ ಮತ್ತು ನೀವು ಕುಡಿಯುವುದನ್ನೇ ಇವನೂ ಕುಡಿಯುತ್ತಾನೆ.
ﮣﮤﮥﮦﮧﮨﮩﮪ
23:34 ಇನ್ನು ನೀವು ನಿಮ್ಮಂತೆಯೇ ಇರುವ ಮನುಷ್ಯನನ್ನು ಅನುಸರಿಸಿದರೆ ನಿಸ್ಸಂದೇಹವಾಗಿಯು ನೀವು ಅಪಾರ ನಷ್ಟ ಹೊಂದಿದವರಾಗಿರುವಿರಿ.
ﮫﮬﮭﮮﮯﮰﮱﯓﯔﯕ
23:35 ನೀವು ಸತ್ತು ಮಣ್ಣಾಗಿ, ಮತ್ತು ಎಲುಬಾಗಿ ಬಿಟ್ಟರೂ ಪುನಃ ನಿಮ್ಮನ್ನು ಜೀವಂತಗೊಳಿಸಿ ಹೊರತರಲಾಗುವುದೆಂದು ಅವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?
ﯖﯗﯘﯙﯚﯛ
23:36 ನಿಮ್ಮೊಂದಿಗೆ ಮಾಡಲಾಗುತ್ತಿರುವ ಈ ವಾಗ್ದಾನ ದೂರ, ಅತಿ ದೂರ!
ﯜﯝﯞﯟﯠﯡﯢﯣﯤﯥﯦ
23:37 (ಜೀವನವೆಂದರೆ) ಕೇವಲ ಲೌಕಿಕ ಜೀವನವಾಗಿದೆ. ಇಲ್ಲೇ ನಾವು ಸಾಯುತ್ತೇವೆ, ಬದುಕುತ್ತೇವೆ ಮತ್ತು ನಾವು ಪುನಃ ಜೀವಂತಗೊಳಿಸಲಾರೆವು.
ﯧﯨﯩﯪﯫﯬﯭﯮﯯﯰﯱﯲﯳ
23:38 ಇವನು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದಾನೆ ಮತ್ತು ನಾವು ಇವನನ್ನು ನಂಬುವುದಿಲ್ಲ.
ﯴﯵﯶﯷﯸﯹ
23:39 ಪೈಗಂಬರರು ಪ್ರಾರ್ಥಿಸಿದರು: ಓ ನನ್ನ ಪ್ರಭು, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನೀನೇ ನನಗೆ ಸಹಾಯ ಮಾಡು.
ﯺﯻﯼﯽﯾﯿ
23:40 ಅಲ್ಲಾಹನು ಹೇಳಿದನು: ಇವರು ಬಹು ಬೇಗನೇ ಪಶ್ಚಾತ್ತಾಪ ಪಡಲಿದ್ದಾರೆ.
ﰀﰁﰂﰃﰄﰅﰆﰇﰈﰉ
23:41 ಕೊನೆಗೆ ನ್ಯಾಯ ಪ್ರಕಾರ ಅವರನ್ನು ಘೋರ ಗರ್ಜನೆಯು ಹಿಡಿದು ಬಿಟ್ಟಿತು ಮತ್ತು ನಾವು ಅವರನ್ನು ಒಣಗಿದ ಕಸಕಡ್ಡಿಯಂತೆ ಮಾಡಿ ಬಿಟ್ಟೆವು. ಹಾಗೆಯೇ ಅಕ್ರಮಿ ಜನರಿಗೆ ಶಾಪವಿರಲಿ.
ﰊﰋﰌﰍﰎﰏﰐ
23:42 ಅವರ ನಂತರ ನಾವು ಇತರ ಅನೇಕ ಜನಾಂಗಗಳನ್ನು ಉಂಟುಮಾಡಿದೆವು.
ﭑﭒﭓﭔﭕﭖﭗﭘ
23:43 ಯಾವೊಂದು ಸಮುದಾಯವು ತನ್ನ ನಿಶ್ಚಿತ ಅವಧಿಯನ್ನು ದಾಟಿ ಮುಂದೆ ಸಾಗುವುದೂ ಇಲ್ಲ, ಹಿಂದುಳಿಯುವುದೂ ಇಲ್ಲ.
ﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯ
23:44 ತರುವಾಯ ನಾವು ನಮ್ಮ ಸಂದೇಶವಾಹಕರನ್ನು ನಿರಂತರವಾಗಿ ಕಳಿಹಿಸಿದೆವು. ಪ್ರತಿಯೊಂದು ಸಮುದಾಯಕ್ಕೆ ಅವರ ಸಂದೇಶವಾಹಕನು ಬಂದಾಗಲೆಲ್ಲಾ ಅವರು ಅವನನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಂದರ ಹಿಂದೆ ಒಂದರAತೆ ನಾಶ ಮಾಡಿದೆವು ಮತ್ತು ನಾವು ಅವರನ್ನು ಕಥೆಗಳನ್ನಾಗಿ ಮಾಡಿಬಟ್ಟೆವು. ಸತ್ಯವಿಶ್ವಾಸವನ್ನು ಸ್ವೀಕರಿಸದ ಜನರಿಗೆ ಶಾಪವಿರಲಿ.
ﭰﭱﭲﭳﭴﭵﭶﭷﭸ
23:45 ಅನಂತರ ನಾವು ಮೂಸ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳೊAದಿಗೆ ಹಾಗೂ ಸುಸ್ಪಷ್ಟ ಪುರಾವೆಯೊಂದಿಗೆ ಕಳುಹಿಸಿದೆವು.
ﭹﭺﭻﭼﭽﭾﭿﮀ
23:46 ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ, (ಕಳುಹಿಸಿದೆವು) ಆದರೆ ಅವರು ದುರಹಂಕಾರ ತೋರಿದರು ಮತ್ತು ಅವರು ದರ್ಪವುಳ್ಳ ಜನರಾಗಿದ್ದರು.
ﮁﮂﮃﮄﮅﮆﮇﮈ
23:47 ಅವರು ಹೇಳಿದರು: ನಮ್ಮಂತೆಯೇ ಇರುವ ಇಬ್ಬರು ಮನುಷ್ಯರ ಮೇಲೆ ನಾವು ವಿಶ್ವಾಸವಿಡುವುದೇ? ವಸ್ತುತಃ ಅವರ ಜನಾಂಗದವರು ನಮ್ಮ ದಾಸರಾಗಿದ್ದಾರೆ!
ﮉﮊﮋﮌﮍ
23:48 ಹಾಗೆಯೇ ಅವರು ಅವರಿಬ್ಬರನ್ನೂ ಸುಳ್ಳಾಗಿಸಿದರು. ಕೊನೆಗೆ ಅವರು ನಾಶ ಹೊಂದುವವರೊAದಿಗೆ ಸೇರಿಬಿಟ್ಟರು.
ﮎﮏﮐﮑﮒﮓﮔ
23:49 ಅವರು ಸನ್ಮಾರ್ಗ ಪಡೆಯಲೆಂದು ನಾವು ಮೂಸಾರವರಿಗೆ ಗ್ರಂಥವನ್ನು ದಯಪಾಲಿಸಿದೆವು.
ﮕﮖﮗﮘﮙﮚﮛﮜﮝﮞﮟﮠ
23:50 ನಾವು ಮರ್ಯಮರ ಪುತ್ರನನ್ನು, ಅವನ ತಾಯಿಯನ್ನು ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅವರಿಬ್ಬರಿಗೂ ಪ್ರಶಾಂತತೆಯ, ನೀರಿನ ಧಾರೆಯುಳ್ಳ ಉನ್ನತವಾದ ಪ್ರದೇಶದಲ್ಲಿ ಆಶ್ರಯ ನೀಡಿದೆವು.
ﮡﮢﮣﮤﮥﮦﮧﮨﮩﮪﮫﮬﮭ
23:51 ನಾವು ಮರ್ಯಮರ ಪುತ್ರನನ್ನು, ಅವನ ತಾಯಿಯನ್ನು ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅವರಿಬ್ಬರಿಗೂ ಪ್ರಶಾಂತತೆಯ, ನೀರಿನ ಧಾರೆಯುಳ್ಳ ಉನ್ನತವಾದ ಪ್ರದೇಶದಲ್ಲಿ ಆಶ್ರಯ ನೀಡಿದೆವು.
ﮮﮯﮰﮱﯓﯔﯕﯖﯗ
23:52 ನಿಶ್ಚಯವಾಗಿಯೂ ನಿಮ್ಮ ಈ ಧರ್ಮವು ಏಕೈಕ ಧರ್ಮವಾಗಿದೆ ಮತ್ತು ನಾನು ನಿಮ್ಮೆಲ್ಲರ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಭಯಪಡಿರಿ.
ﯘﯙﯚﯛﯜﯝﯞﯟﯠﯡﯢ
23:53 ಅನಂತರ ಅವರು ತಮ್ಮ ಧರ್ಮವನ್ನು ಪರಸ್ಪರ ಭಿನ್ನವಿಭಿನ್ನಗೊಳಿಸಿದರು. ಪ್ರತಿಯೊಂದು ಗುಂಪು ತಮ್ಮ ಬಳಿಯಿರುವುದರ ಕುರಿತು ಹೆಮ್ಮೆಪಡುತ್ತಿದೆ.
ﯣﯤﯥﯦﯧﯨ
23:54 ಆದ್ದರಿಂದ ನೀವು ಅವರನ್ನು ಅವರ ಅಲಕ್ಷö್ಯತೆಯಲ್ಲಿ ಸ್ವಲ್ಪ ಕಾಲದವರೆಗೆ ಬಿಟ್ಟು ಬಿಡಿರಿ.
ﯩﯪﯫﯬﯭﯮﯯﯰ
23:55 ನಾವು ಅವರ ಸಂಪತ್ತು ಹಾಗೂ ಸಂತಾನಗಳನ್ನು ಹೆಚ್ಚಿಸುತ್ತಿದ್ದೇವೆಂದು
ﯱﯲﯳﯴﯵﯶﯷﯸﯹ
23:56 ಅವರಿಗೆ ಒಳಿತುಗಳಲ್ಲಿ ಶೀಘ್ರಗೊಳಿಸುತ್ತೇವೆಂದು ಅವರು ಭಾವಿಸುತ್ತಿದ್ದಾರೆಯೇ? ಹಾಗಲ್ಲ! ಆದರೆ ಅವರು ಗ್ರಹಿಸಿಕೊಳ್ಳುವುದಿಲ್ಲ.
ﯺﯻﯼﯽﯾﯿﰀﰁ
23:57 ನಿಶ್ಚಯವಾಗಿಯು ಯಾರು ತಮ್ಮ ಪ್ರಭುವಿನ ಭಯದಿಂದ ನಡುಗುತ್ತಾರೋ,
ﰂﰃﰄﰅﰆﰇ
23:58 ಯಾರು ತಮ್ಮ ಪ್ರಭುವಿನ ಸೂಕ್ತಿಗಳಲ್ಲಿ ವಿಶ್ವಾಸವಿಡುತ್ತಾರೋ!
ﰈﰉﰊﰋﰌﰍ
23:59 ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
ﭑﭒﭓﭔﭕﭖﭗﭘﭙﭚﭛ
23:60 ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
ﭜﭝﭞﭟﭠﭡﭢﭣ
23:61 ಅವರೇ ಒಳಿತುಗಳೆಡೆಗೆ ತ್ವರೆ ಮಾಡುವವರು ಮತ್ತು ಅವರೇ ಅದರತ್ತ ಸ್ಪರ್ಧಿಸುವವರಾಗಿದ್ದಾರೆ.
ﭤﭥﭦﭧﭨﭩﭪﭫﭬﭭﭮﭯﭰﭱ
23:62 ನಾವು ಯಾವೊಬ್ಬ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ಹೊರೆಯನ್ನು ಹೇರುವುದಿಲ್ಲ. ನಮ್ಮ ಬಳಿ ಸತ್ಯದೊಂದಿಗೆ ಮಾತನಾಡುವ ಗ್ರಂಥವಿದೆ ಮತ್ತು ಜನರ ಮೇಲೆ ಅನ್ಯಾಯವೆಸಗಲಾಗದು.
ﭲﭳﭴﭵﭶﭷﭸﭹﭺﭻﭼﭽﭾﭿﮀ
23:63 ಆದರೆ! ಸತ್ಯನಿಷೇಧಿಗಳ ಹೃದಯಗಳು ಈ ವಿಷಯದ (ಕುರ್‌ಆನ್) ಬಗ್ಗೆ ಅಲಕ್ಷö್ಯತೆಯಲ್ಲಿವೆ ಮತ್ತು ಅವರಿಗೆ ಅದರ ಹೊರತು ಬೇರೆ (ಅನೇಕ ಕೆಟ್ಟ) ಕೆಲಸಗಳಿವೆ. ಅವುಗಳನ್ನು ಅವರು ಮಾಡಲಿರುವರು.
ﮁﮂﮃﮄﮅﮆﮇﮈﮉ
23:64 ಕೊನೆಗೆ ಅವರ ಪೈಕಿ ಸುಖಲೋಲುಪರನ್ನು ನಾವು ಶಿಕ್ಷೆಗೆ ಗುರಿಪಡಿಸಿದಾಗ ಅವರು ಗೋಗರೆಯತೊಡಗುತ್ತಾರೆ.
ﮊﮋﮌﮍﮎﮏﮐﮑﮒ
23:65 ನೀವಿಂದು ಗೋಗರೆಯ ಬೇಡಿರಿ. ಖಂಡಿತವಾಗಿಯು ನಮ್ಮಿಂದ ನಿಮಗೆ ಯಾವ ಸಹಾಯ ನೀಡಲಾಗದು.
ﮓﮔﮕﮖﮗﮘﮙﮚﮛﮜ
23:66 ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾದಾಗ. ನೀವು ಹಿಂದೆ ತಿರುಗಿ ಓಡುತ್ತಿದ್ದೀರಿ!
ﮝﮞﮟﮠﮡ
23:67 ಅಹಂಕಾರ ತೋರುತ್ತಾ ಮತ್ತು ಕಾಲ್ಪನಿಕ ಕಥೆ ಎಂದು ಹೇಳುತ್ತಾ ಅದನ್ನು ತೊರೆದು ಬಿಡುತ್ತಿದ್ದಿರಿ.
ﮢﮣﮤﮥﮦﮧﮨﮩﮪﮫﮬ
23:68 ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ?
ﮭﮮﮯﮰﮱﯓﯔﯕ
23:69 ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ?
ﯖﯗﯘﯙﯚﯛﯜﯝﯞﯟﯠﯡ
23:70 ಅಥವಾ ಅವರು ಅವರಿಗೆ ಹುಚ್ಚು ಹಿಡಿದಿದೆಯೆಂದು ಹೇಳುತ್ತಿದ್ದಾರೆಯೇ? ಹಾಗಲ್ಲ ಅವರಂತು ಅವರ ಬಳಿ ಸತ್ಯವನ್ನು ತಂದಿದ್ದಾರೆ ಮತ್ತು ಅವರ ಪೈಕಿ ಅಧಿಕ ಜನರು ಸತ್ಯವನ್ನು ಅಸಹ್ಯಪಡುವವರಾಗಿದ್ದಾರೆ.
ﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳ
23:71 ಮತ್ತು ಸತ್ಯವೇ ಅವರ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದರೆ ಭೂಮಿ, ಆಕಾಶಗಳು ಮತ್ತು ಅವುಗಳಲ್ಲಿರುವುದೆಲ್ಲವೂ ಹದಗೆಡುತ್ತಿತ್ತು. ಹಾಗಲ್ಲ! ನಾವು ಅವರಿಗಾಗಿ ಅವರದೇ ಉದ್ಭೋಧೆಯನ್ನು ತಂದಿದ್ದೇವೆ ಆದರೆ ಅವರು ತಮ್ಮ ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ.
ﯴﯵﯶﯷﯸﯹﯺﯻﯼﯽﯾ
23:72 ಏನು, ನೀವು ಅವರೊಡನೆ ಪ್ರತಿಫಲವನ್ನೇನಾದರು ಕೇಳುತ್ತಿರುವಿರಾ? ನಿಮಗೆ ನಿಮ್ಮ ಪ್ರಭುವಿನ ಪ್ರತಿಫಲವು ಅತ್ಯುತ್ತಮವಾಗಿದೆ ಮತ್ತು ಜೀವನಾಧಾರ ನೀಡುವವರಲ್ಲಿ ಅವನೇ ಅತ್ಯುತ್ತಮನಾಗಿದ್ದಾನೆ.
ﯿﰀﰁﰂﰃﰄ
23:73 ನಿಶ್ಚಯವಾಗಿಯು ನೀವು ಅವರನ್ನು ಋಜುವಾದ ಮಾರ್ಗದೆಡೆಗೆ ಕರೆÀಯುತ್ತಿರಿ.
ﰅﰆﰇﰈﰉﰊﰋﰌﰍ
23:74 ನಿಸ್ಸಂಶಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಸನ್ಮಾರ್ಗದಿಂದ ಖಂಡಿತ ತಪ್ಪಿ ಹೋಗುತ್ತಾರೆ.
ﭑﭒﭓﭔﭕﭖﭗﭘﭙﭚﭛﭜﭝ
23:75 ಮತ್ತು ನಾವು ಅವರ ಮೇಲೆ ಕರುಣೆ ತೋರಿದರೆ ಹಾಗೂ ಅವರಿಗೆ ಬಾಧಿಸಿದ ಸಂಕಷ್ಟವನ್ನು ನೀಗಿಸಿದರೆ ಖಂಡಿತ ಅವರು ತಮ್ಮ ಅತಿಕ್ರಮದಲ್ಲಿ ಅಂಧರಾಗಿ ದಾರಿಗೆಡುವರು.
ﭞﭟﭠﭡﭢﭣﭤﭥﭦ
23:76 ನಿಶ್ಚಯವಾಗಿಯೂ ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದು ಬಿಟ್ಟೆವು. ಆದರೂ ಅವರು ತಮ್ಮ ಪ್ರಭುವಿಗೆ ವಿಧೇಯರಾಗಲಿಲ್ಲ ಮತ್ತು ದೈನ್ಯತೆ ತೋರಲಿಲ್ಲ.
ﭧﭨﭩﭪﭫﭬﭭﭮﭯﭰﭱﭲﭳ
23:77 ಕೊನೆಗೆ ನಾವು ಅವರ ಮೇಲೆ ಅತ್ಯುಗ್ರ ಯಾತನೆಯ ದ್ವಾರವನ್ನು ತೆರೆದಾಗ ಕೂಡಲೇ ಅವರು ಅದರಲ್ಲಿ ಹತಾಶರಾಗಿ ಬಿಡುತ್ತಾರೆ.
ﭴﭵﭶﭷﭸﭹﭺﭻﭼﭽﭾﭿ
23:78 ಅವನೇ ನಿಮಗೆ ಕಿವಿಯನ್ನು, ಕಣ್ಣುಗಳನ್ನು, ಹೃದಯಗಳನ್ನು ಸೃಷ್ಟಿಸಿದನು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ.
ﮀﮁﮂﮃﮄﮅﮆﮇ
23:79 ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿ ಹಬ್ಬಿಸಿದನು ಮತ್ತು ಅವನೆಡೆಗೇ ನೀವು ಒಟ್ಟು ಗೂಡಿಸಲಾಗುವಿರಿ.
ﮈﮉﮊﮋﮌﮍﮎﮏﮐﮑﮒﮓ
23:80 ಅವನೇ ಜೀವನ ನೀಡುತ್ತಾನೆ ಮತ್ತು ಮರಣ ಕೊಡುತ್ತಾನೆ. ಮತ್ತು ರಾತ್ರಿ ಹಗಲಿನ ಬದಲಾವಣೆಯ ನಿಯಂತ್ರಣ ಅವನ ಅಧೀನದಲ್ಲಿದೆ. ನೀವು ವಿವೇಚಿಸುವುದಿಲ್ಲವೆ?
ﮔﮕﮖﮗﮘﮙﮚ
23:81 ಆದರೆ, ಅವರ ಪೂರ್ವಜರು ಹೇಳಿದಂತೆಯೇ ಹೇಳುತ್ತಾರೆ.
ﮛﮜﮝﮞﮟﮠﮡﮢﮣ
23:82 ನಾವು ಸತ್ತು ಮಣ್ಣಾಗಿ ಮತ್ತು ಎಲುಬುಗಳಾದ ಬಳಿಕವೂ ನಮ್ಮನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲಾಗವುದೇ? ಎನ್ನತ್ತಾರೆ.
ﮤﮥﮦﮧﮨﮩﮪﮫﮬﮭﮮﮯﮰ
23:83 ಖಂಡಿತ ಇದಕ್ಕಿಂತ ಮೊದಲು ನಮ್ಮೊಂದಿಗೂ, ನಮ್ಮ ಪೂರ್ವಜರೊಂದಿಗೂ ಇಂತಹದೇ ವಾಗ್ದಾನ ಮಾಡಲಾಗುತ್ತಿತ್ತು. ಇದು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಬೇರೇನೂ ಅಲ್ಲ.
ﮱﯓﯔﯕﯖﯗﯘﯙﯚ
23:84 (ಪೈಗಂಬರರೇ) ಕೇಳಿರಿ, ನೀವು ಬಲ್ಲವರಾಗಿದ್ದರೆ: ಭೂಮಿ ಮತ್ತು ಅದರಲ್ಲಿರುವವರ ಒಡೆಯನಾರು?
ﯛﯜﯝﯞﯟﯠﯡ
23:85 ಅವರು ಉತ್ತರಿಸುವರು: ಅಲ್ಲಾಹನಾಗಿದ್ದಾನೆ. ಹೇಳಿರಿ: ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
ﯢﯣﯤﯥﯦﯧﯨﯩﯪ
23:86 ಕೇಳಿರಿ: ಏಳು ಆಕಾಶಗಳ ಮತ್ತು ಸಿಂಹಾಸನದ ಪ್ರಭು ಯಾರು?
ﯫﯬﯭﯮﯯﯰﯱ
23:87 ಅವರು ಉತ್ತರಿಸುವರು: ಅಲ್ಲಾಹನು. ಹೇಳಿರಿ: ಹಾಗಿದ್ದೂ ನೀವು ಭಯ ಪಡುವುದಿಲ್ಲವೇ?
ﯲﯳﯴﯵﯶﯷﯸﯹﯺﯻﯼﯽﯾﯿﰀ
23:88 ಕೇಳಿರಿ: ಸರ್ವ ವಸ್ತುಗಳ ಅಧಿಪತ್ಯವು ಯಾರ ಕೈಯಲ್ಲಿದೆ? ಅವನು ಎಲ್ಲರಿಗೂ ಆಶ್ರಯ ನೀಡುತ್ತಾನೆ ಮತ್ತು ಅವನ ವಿರುದ್ಧ ಯಾರಿಗೂ ಆಶ್ರಯ ನೀಡಲಾಗದು. ನೀವು ಬಲ್ಲವರಾಗಿದ್ದರೆ ಹೇಳಿರಿ.
ﰁﰂﰃﰄﰅﰆﰇ
23:89 ಕೇಳಿರಿ: ಸರ್ವ ವಸ್ತುಗಳ ಅಧಿಪತ್ಯವು ಯಾರ ಕೈಯಲ್ಲಿದೆ? ಅವನು ಎಲ್ಲರಿಗೂ ಆಶ್ರಯ ನೀಡುತ್ತಾನೆ ಮತ್ತು ಅವನ ವಿರುದ್ಧ ಯಾರಿಗೂ ಆಶ್ರಯ ನೀಡಲಾಗದು. ನೀವು ಬಲ್ಲವರಾಗಿದ್ದರೆ ಹೇಳಿರಿ.
ﭑﭒﭓﭔﭕﭖ
23:90 ಹಾಗಲ್ಲ! ನಾವು ಅವರ ಬಳಿಗೆ ಸತ್ಯವನ್ನು ತಂದಿದ್ದೇವೆ ಮತ್ತು ನಿಸ್ಸಂದೇಹವಾಗಿಯೂ ಅವರು ಸುಳ್ಳರಾಗಿದ್ದಾರೆ.
ﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱ
23:91 ಅಲ್ಲಾಹನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ, ಅವನೊಂದಿಗೆ ಬೇರೆ ದೇವನೂ ಇಲ್ಲ. ಅನ್ಯಥಾ ಪ್ರತಿಯೊಬ್ಬ ದೇವನೂ ತನ್ನ ಸೃಷ್ಟಿಯನ್ನು ತೆಗೆದುಕೊಂಡು ಬೇರ್ಪಡುತ್ತಿದ್ದನು. ಮತ್ತು ಪ್ರತಿಯೊಬ್ಬನೂ ಇನ್ನೊಬ್ಬನ ಮೇಲೆ ದಂಡೆತ್ತಿ ಹೋಗುತ್ತಿದ್ದನು. ಅವರು ಹೇಳುತ್ತಿರುವ ಮಾತುಗಳಿಂದ ಅಲ್ಲಾಹನು ಪರಮಪಾವನನು.
ﭲﭳﭴﭵﭶﭷﭸ
23:92 ಗೋಚರ ಹಾಗೂ ಅಗೋಚರಗಳ ಜ್ಞಾನಿಯವನು ಮತ್ತು ಅವರು ಕಲ್ಪಿಸುತ್ತಿರುವ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು.
ﭹﭺﭻﭼﭽﭾﭿ
23:93 (ಓ ಪೈಗಂಬರರೇ) ಹೀಗೆ ಪ್ರಾರ್ಥಿಸಿರಿ: ಓ ನನ್ನ ಪ್ರಭುವೇ, ಅವರಿಗೆ ಎಚ್ಚರಿಕೆ ನೀಡಲಾಗುತ್ತಿರುವುದನ್ನು ನೀನು ನನ್ನ ಉಪಸ್ಥಿತಿಯಲ್ಲಿ ತರುವುದಾದರೆ.
ﮀﮁﮂﮃﮄﮅﮆ
23:94 ನೀನು ನನ್ನನ್ನು ಅಕ್ರಮಿ ಜನರಲ್ಲಿ ಸೇರಿಸದಿರು. ಪ್ರಭುವೇ.
ﮇﮈﮉﮊﮋﮌﮍﮎ
23:95 ಖಂಡಿತ ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ನಿಮಗೆ ತೋರಿಸಿ ಕೊಡಲು ಶಕ್ತರಿದ್ದೇವೆ.
ﮏﮐﮑﮒﮓﮔﮕﮖﮗﮘﮙ
23:96 (ಓ ಪೈಗಂಬರರೇ) ಕೆಡುಕನ್ನು ಅತ್ಯುತ್ತಮ ರೀತಿಯಲ್ಲಿ ನೀಗಿಸಿರಿ. ಅವರು ವರ್ಣಿಸಿ ಹೇಳುತ್ತಿರುವುದನ್ನು ನಾವು ಚೆನ್ನಾಗಿ ಬಲ್ಲೆವು.
ﮚﮛﮜﮝﮞﮟﮠﮡ
23:97 ಮತ್ತು ಹೀಗೆ ಪ್ರಾರ್ಥಿಸಿರಿ: ನನ್ನ ಪ್ರಭುವೇ, ನಾನು ಶೈತಾನರ ದುಷ್ಪೆçÃರಣೆಗಳಿಂದ ನಿನ್ನ ಅಭಯ ಯಾಚಿಸುತ್ತೇನೆ.
ﮢﮣﮤﮥﮦﮧ
23:98 ನನ್ನ ಪ್ರಭುವೇ, ಅವರು ನನ್ನ ಬಳಿಗೆ ಹಾಜರಾಗುವುದರಿಂದಲೂ ನಿನ್ನ ಅಭಯ ಯಾಚಿಸುತ್ತೇನೆ.
ﮨﮩﮪﮫﮬﮭﮮﮯﮰ
23:99 ಕೊನೆಗೆ ಅವರಲ್ಲಿ ಯಾರಿಗಾದರೂ ಮರಣವು ಬಂದು ಬಿಟ್ಟರೆ ಹೇಳುತ್ತಾನೆ: ನನ್ನ ಪ್ರಭುವೇ, ನನ್ನನ್ನು ಮರಳಿಸಿ ಬಿಡು.
ﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥ
23:100 ನಾನು ತೊರೆದಿರುವ ಸತ್ಕರ್ಮಗಳನ್ನು ಮಾಡಬಹುದಲ್ಲ, ಖಂಡಿತ ಇಲ್ಲ, ಇದು ಕೇವಲ ಅವನಾಡುವ ಮಾತು ಮಾತ್ರ. ಅವರು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವ ದಿನದವರೆಗೆ ಅವರ ಹಿಂದೆ ಒಂದು ತಡೆಯಿದೆ.
ﯦﯧﯨﯩﯪﯫﯬﯭﯮﯯﯰ
23:101 ಹಾಗೆಯೇ ಕಹಳೆಯು ಊದಲಾಗುವ ದಿನ ಅವರ ನಡುವೆ ಯಾವುದೇ ಸಂಬAಧವಿರದು. ಅವರು ಪರಸ್ಪರ ವಿಚಾರಿಸಿಕೊಳ್ಳುವುದೂ ಇಲ್ಲ.
ﯱﯲﯳﯴﯵﯶﯷ
23:102 ಇನ್ನು ಯಾರ ತುಲ ಭಾರವಾಗಿರುವುದೋ ಅವರು ವಿಜಯಶಾಲಿಗಳಾಗುವರು.
ﯸﯹﯺﯻﯼﯽﯾﯿﰀﰁﰂ
23:103 ಮತ್ತು ಯಾರ ತುಲ ಹಗುರವಾಗಿರುವುದೋ ಅವರೇ ತಮ್ಮನ್ನು ತಾವೇ ನಷ್ಟ ಮಾಡಿಕೊಂಡವರು. ಅವರು ನರಕದಲ್ಲಿ ಶಾಶ್ವತವಾಗಿರುವವರು.
ﰃﰄﰅﰆﰇﰈﰉ
23:104 ಅವರ ಮುಖಗಳನ್ನು ಅಗ್ನಿಯು ಸುಡುತ್ತಿರುವುದು ಮತ್ತು ಅವರು ಅದರಲ್ಲಿ ವಿಕಾರ ರೂಪಿಗಳಾಗಿರುವರು.
ﭑﭒﭓﭔﭕﭖﭗﭘﭙ
23:105 ಅಲ್ಲಾಹನು ಅವರೊಡನೆ (ನರಕವಾಸಿಗಳಿಂದ) ಕೇಳುವನು: ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾಗುತ್ತಿರಲಿಲ್ಲವೇ? ಹಾಗಿದ್ದೂ ನೀವು ಅದನ್ನು ಸುಳ್ಳಾಗಿಸುತ್ತಿದ್ದಿರಿ.
ﭚﭛﭜﭝﭞﭟﭠﭡﭢ
23:106 ಅವರು ಹೇಳುವರು: ನಮ್ಮ ಪ್ರಭುವೇ, ನಮ್ಮ ಮೇಲೆ ನಮ್ಮ ದುರಾದೃಷ್ಟವು ಪ್ರಾಬಲ್ಯ ಸಾಧಿಸಿತು ಮತ್ತು ನಾವು ಮಾರ್ಗಭ್ರಷ್ಟ ಜನರಾಗಿದ್ದೆವು.
ﭣﭤﭥﭦﭧﭨﭩﭪ
23:107 ನಮ್ಮ ಪ್ರಭುವೇ, ನೀನು ನಮ್ಮನ್ನು ಇಲ್ಲಿಂದ ಹೊರ ಹಾಕು. ಪುನಃ ನಾವು ಹಾಗೆ ಮಾಡಿದರೆ ಖಂಡಿತ ನಾವು ಅಕ್ರಮಿಗಳಾಗುವೆವು.
ﭫﭬﭭﭮﭯﭰ
23:108 ಅಲ್ಲಾಹನು ಹೇಳುವನು: ನೀವು ನಿಂದ್ಯರಾಗಿ ಇಲ್ಲೇ (ನರಕದಲ್ಲೇ) ಬಿದ್ದಿರಿ ಮತ್ತು ನನ್ನೊಂದಿಗೆ ಮಾತನಾಡಬೇಡಿರಿ.
ﭱﭲﭳﭴﭵﭶﭷﭸﭹﭺﭻﭼﭽﭾﭿ
23:109 ನನ್ನ ದಾಸರ ಪೈಕಿ ಒಂದು ಸಮೂಹ: ಓ ನಮ್ಮ ಪ್ರಭುವೇ, ನಾವು ವಿಶ್ವಾಸವಿರಿಸಿದೆವು. ಆದ್ದರಿಂದ ನೀನು ನಮ್ಮನ್ನು ಕ್ಷಮಿಸು ಹಾಗೂ ನಮ್ಮ ಮೇಲೆ ಕರುಣೆ ತೋರು. ನೀನು ಸಕಲ ಕಾರುಣ್ಯವಂತರಲ್ಲಿ ಅತ್ಯುತ್ತಮನಾಗಿರುವೆ ಎಂದು ಪ್ರಾರ್ಥಿಸುತ್ತಿತ್ತು.
ﮀﮁﮂﮃﮄﮅﮆﮇﮈ
23:110 ಆಗ ನೀವು ಅವರನ್ನು ಪರಿಹಾಸ್ಯ ಮಾಡಿದಿರಿ. ಕೊನೆಗೆ ಅದು ನಿಮಗೆ ನನ್ನ ಸ್ಮರಣೆಯನ್ನೇ ಮರೆಯುವಂತೆ ಮಾಡಿತು ಮತ್ತು ನೀವು ಅವರನ್ನು ಕಂಡು ನಗುತ್ತಿದ್ದಿರಿ.
ﮉﮊﮋﮌﮍﮎﮏﮐﮑ
23:111 ನಾನಿಂದು ಅವರಿಗೆ ಅವರ ಸಹನೆಯ ಪ್ರತಿಫಲವನ್ನು ನೀಡಿರುವೆನು. ನಿಜವಾಗಿಯೂ ಅವರೇ ಜಯಶಾಲಿಗಳು.
ﮒﮓﮔﮕﮖﮗﮘﮙ
23:112 ಅಲ್ಲಾಹನು ಕೇಳುವನು: ನೀವು ಭೂಮಿಯಲ್ಲಿ ವರ್ಷಗಳ ಗಣನೆಯ ಪ್ರಕಾರ ಎಷ್ಟು ಕಾಲ ತಂಗಿದ್ದೀರಿ?
ﮚﮛﮜﮝﮞﮟﮠﮡﮢ
23:113 ಅವರು ಹೇಳುವರು: ಒಂದು ದಿನ ಇಲ್ಲವೇ ದಿನದ ಒಂದು ಭಾಗ ತಂಗಿದ್ದೆವು. ಎಣಿಕೆ ಮಾಡುವ ಮಲಕ್‌ಗಳೊಂದಿಗೆ ಕೇಳಿ ನೋಡು.
ﮣﮤﮥﮦﮧﮨﮩﮪﮫﮬﮭ
23:114 ಅಲ್ಲಾಹನು ಹೇಳುವನು: ನಿಜವಾಗಿಯೂ ನೀವು ಅತ್ಯಲ್ಪ ಕಾಲವೆ ತಂಗಿದ್ದೀರಿ. ನೀವು ಮೊದಲೇ ತಿಳಿದಿರುತ್ತಿದ್ದರೆ!.
ﮮﮯﮰﮱﯓﯔﯕﯖﯗ
23:115 ನಾವು ನಿಮ್ಮನ್ನು ನಿರರ್ಥಕವಾಗಿ ಸೃಷ್ಟಿಸಿದ್ದೇವೆಂದೂ ಮತ್ತು ನೀವು ನಮ್ಮೆಡೆಗೆ ಮರಳಿಸಲಾಗುವುದಿಲ್ಲವೆಂದೂ ಭಾವಿಸಿ ಕೊಂಡಿದ್ದೀರಾ
ﯘﯙﯚﯛﯜﯝﯞﯟﯠﯡﯢﯣﯤ
23:116 ಅಲ್ಲಾಹನು ಮಹೋನ್ನತನು, ನೈಜ ಅಧಿಪತಿಯಾಗಿರುವನು. ಅವನ ಹೊರತು ಬೇರೆ ದೇವನಿಲ್ಲ. ಅವನೇ ಸಿಂಹಾಸನದ ಒಡೆಯನಾಗಿದ್ದಾನೆ.
ﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸ
23:117 ಯಾರು ಅಲ್ಲಾಹನ ಜೊತೆ ಬೇರೊಬ್ಬ ಆರಾಧ್ಯ ದೇವನನ್ನು ಕರೆದು ಬೇಡುತ್ತಾನೋ ವಸ್ತುತಃ ಅವನ ಬಳಿ ಅದರ ಕುರಿತು ಯಾವ ಆಧಾರವು ಇಲ್ಲ. ಅವನ ಲೆಕ್ಕಾಚಾರವು ಅವನ ಪ್ರಭುವಿನ ಬಳಿಯಿದೆ. ಸತ್ಯನಿಷೇಧಿಗಳು ಖಂಡಿತ ಯಶಸ್ಸು ಪಡೆಯಲಾರರು.
ﯹﯺﯻﯼﯽﯾﯿﰀ
23:118 ಓ ಪೈಗಂಬರರೇ ಹೇಳಿರಿ: ನನ್ನ ಪ್ರಭುವೇ, ನನ್ನನ್ನು ಕ್ಷಮಿಸು ಹಾಗೂ ನನ್ನ ಮೇಲೆ ಕರುಣೆ ತೋರು ಮತ್ತು ನೀನು ಸಕಲ ಕಾರುಣ್ಯವಂತರಲ್ಲಿ ಅತ್ಯುತ್ತಮನಾಗಿರುವೆ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers