PDF —
56 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಮುದ್ದಸ್ಸಿರ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಮುದ್ದಸ್ಸಿರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮುದ್ದಸ್ಸಿರ್ ಅನುವಾದ. ಸೂರಾ ಅಲ್-ಮುದ್ದಸ್ಸಿರ್ (Meccan) 56 ಆಯತ್.

← ಅಲ್-ಮುಜ್ಜಮ್ಮಿಲ್ಸೂರಾ ಅಲ್-ಮುದ್ದಸ್ಸಿರ್ ಅಲ್-ಕಿಯಾಮಾ →


56 ಆಯತ್ · Meccan · ಕನ್ನಡ
bismillah
ﮪﮫﮬ
74:1 ಓ ಕಂಬಳಿ ಹೊದ್ದುಕೊಂಡವರೇ,
ﮭﮮﮯ
74:2 ಎದ್ದೇಳಿ ಮತ್ತು (ಜನರಿಗೆ) ಎಚ್ಚರಿಕೆ ನೀಡಿರಿ.
ﮰﮱﯓ
74:3 ತಮ್ಮ ಪ್ರಭುವಿನ ಹಿರಿಮೆಯನ್ನು ಕೊಂಡಾಡಿರಿ.
ﯔﯕﯖ
74:4 ನಿಮ್ಮ ಉಡುಪುಗಳನ್ನು ಶುಚಿಯಾಗಿಡಿರಿ.
ﯗﯘﯙ
74:5 ಮಾಲಿನ್ಯದಿಂದ ದೂರವಿರಿ.
ﯚﯛﯜﯝ
74:6 ಹೆಚ್ಚು ಪಡೆಯುವ ಉದ್ದೇಶದಿಂದ ಉಪಕಾರ ಮಾಡದಿರಿ.
ﯞﯟﯠ
74:7 ನಿಮ್ಮ ಪ್ರಭುವಿಗಾಗಿ ಸಹನೆವಹಿಸಿರಿ.
ﯡﯢﯣﯤﯥ
74:8 ಕಹಳೆಯನ್ನು (ಮತ್ತೊಮ್ಮೆ) ಮೊಳಗಿಸಿದಾಗ.
ﯦﯧﯨﯩﯪ
74:9 ಆ ಪ್ರಳಯ ದಿನವು ಅತ್ಯಂತ ಕಠಿಣ ದಿನವಾಗಿರುವುದು
ﯫﯬﯭﯮﯯ
74:10 ಸತ್ಯನಿಷೇಧಿಗಳಿಗೆ ಅದು ಸುಲಭವಾಗಿರಲಾರದು.
ﯰﯱﯲﯳﯴ
74:11 ನನ್ನನ್ನು ಮತ್ತು ನಾನು, ಒಬ್ಬಂಟಿಗನನ್ನಾಗಿ ಸೃಷ್ಟಿಸಿದವನನ್ನು (ಪ್ರತಿಕಾರ ಪಡೆಯಲು) ಬಿಟ್ಟುಬಿಡಿರಿ.
ﯵﯶﯷﯸﯹ
74:12 ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು.
ﯺﯻﯼ
74:13 ಮತ್ತು ಸದಾ ಅವನ ಜೊತೆಗೆ ಸನ್ನದ್ಧರಾದ ಪುತ್ರರನ್ನು ಸಹ.
ﯽﯾﯿﰀ
74:14 ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು.
ﰁﰂﰃﰄﰅ
74:15 ಇಷ್ಟಿದ್ದೂ ನಾನು ಇನ್ನಷ್ಟು ನೀಡಬೇಕೆಂದು ಅವನು ಹಂಬಲಿಸುತ್ತಿರುವನು.
ﰆﰇﰈﰉﰊﰋﰌ
74:16 ಖಂಡಿತಇಲ್ಲ ಅವನು ನಮ್ಮ ಸೂಕ್ತಿಗಳ ವಿರೋಧಿಯಾಗಿದ್ದಾನೆ.
ﰍﰎﰏ
74:17 ಸಧ್ಯದಲ್ಲೇ ನಾನು ಅವನನ್ನು ಒಂದು ಪ್ರಯಾಸಕರವಾದ ಏರುವಿಕೆಗೆ ಏರಿಸುವೆನು.
ﰐﰑﰒﰓ
74:18 ಅವನು ಯೋಚಿಸಿದನು ಮತ್ತು ನರ‍್ಧರಿಸಿದನು.
ﭑﭒﭓﭔ
74:19 ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,
ﭕﭖﭗﭘﭙ
74:20 ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,
ﭚﭛﭜ
74:21 ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು.
ﭝﭞﭟﭠ
74:22 ತರುವಾಯ ಅವನು ಮುಖ ಗಂಟಿಕ್ಕಿಕೊಂಡನು ಮತ್ತು ಮುಖವನ್ನು ಸಿಂಡರಿಸಿಕೊಂಡನು.
ﭡﭢﭣﭤ
74:23 ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು.
ﭥﭦﭧﭨﭩﭪﭫ
74:24 ಮತ್ತು ಹೇಳಿದನು; ಇದಂತು ಹಿಂದಿನಿಂದ ನಡೆದು ಬರುತ್ತಿರುವ ಜಾದೂ ಅಲ್ಲದೇ ಇನ್ನೇನೂ ಅಲ್ಲ.
ﭬﭭﭮﭯﭰﭱ
74:25 ಇದು (ಕುರ್ಆನ್) ಮನುಷ್ಯನ ಮಾತಲ್ಲದೆ ಇನ್ನೇನೂ ಅಲ್ಲ.
ﭲﭳﭴ
74:26 ಸಧ್ಯವೇ ನಾನು ಅವನನ್ನು ನರಕಾಗ್ನಿಗೆ ಹಾಕುವೆನು.
ﭵﭶﭷﭸﭹ
74:27 ನರಕಾಗ್ನಿ ಏನೆಂದು ನಿಮಗೇನು ಗೊತ್ತು ?
ﭺﭻﭼﭽﭾ
74:28 ಅದು ಬಾಕಿ ಉಳಿಸುವುದೂ ಇಲ್ಲ ಬಿಡುವುದೂ ಇಲ್ಲ.
ﭿﮀﮁ
74:29 ಅದು ರ‍್ಮವನ್ನು ಸುಟ್ಟು ಹಾಕುವಂತದ್ದಾಗಿದೆ.
ﮂﮃﮄﮅ
74:30 ಅದರಲ್ಲಿ ಹತ್ತೊಂಬತ್ತು ಮಲಕ್ಗಳು ನಿಯೋಗಿಸಲ್ಪಟ್ಟಿದ್ದಾರೆ.
ﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤ
74:31 ನರಕದ ಕಾವಲುಗಾರರನ್ನಾಗಿ ನಾವು ಕೇವಲ ಮಲಕ್ಗಳನ್ನು ನಿಯೋಗಿಸುತ್ತೇವೆ ಮತ್ತು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ನಿಶ್ಚಯಿಸಿದ್ದೇವೆ, ಇದು ಗ್ರಂಥ ನೀಡಲಾದವರು ನಂಬಲೆಂದೂ (ಅವರ ಗ್ರಂಥದಲ್ಲೂ ಇದೇ ಸಂಖ್ಯೆ ಇದೆ) ಸತ್ಯವಿಶ್ವಾಸಿಗಳ ವಿಶ್ವಾಸವು ವೃದ್ಧಿಸಲೆಂದೂ, ಗ್ರಂಥ ನೀಡಲಾದವರು ಮತ್ತು ಸತ್ಯವಿಶ್ವಾಸಿಗಳು ಕುರ್ಆನಿನಲ್ಲಿ ಸಂದೇಹ ಪಡದಿರಲೆಂದು ಮತ್ತು ಹೃದಯದಲ್ಲಿ (ಕಾಪಟ್ಯದ) ರೋಗವಿದ್ದವರು ಮತ್ತು ಸತ್ಯನಿಷೇಧಿಗಳು “ಈ ಮಾತಿನ ಮೂಲಕ ಅಲ್ಲಾಹನ ಉದ್ದೇಶವೇನು?” ಎಂದು ಹೇಳಲೆಂದಾಗಿದೆ, ಇದೇ ಪ್ರಕಾರ ಅಲ್ಲಾಹನು (ಒಂದೇ ಮಾತಿನಿಂದ) ತಾನಿಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮರ‍್ಗದಲ್ಲಿ ಮುನ್ನಡೆಸುತ್ತಾನೆ. ನಿನ್ನ ಪ್ರಭುವಿನ ಸೈನ್ಯಗಳನ್ನು ಅವನ ಹೊರತು ಇನ್ನಾರೂ ಅರಿಯಲಾರರು, ಇದು ಸಕಲ ಮಾನವರಿಗೆ ಸ್ಪಷ್ಟ ಉಪದೇಶವಲ್ಲದೇ ಇನ್ನೇನೂ ಅಲ್ಲ.
ﯥﯦﯧ
74:32 ಅನುಮಾನವೇ ಇಲ್ಲ, ಚಂದ್ರನ ಮೇಲಾಣೆ.
ﯨﯩﯪﯫ
74:33 ರಾತ್ರಿಯು ಮರಳುವಾಗಿನ ಆಣೆ.
ﯬﯭﯮﯯ
74:34 ಪ್ರಭಾತದಾಣೆ, ಅದು ಪ್ರಕಾಶಮಾನವಾಗುವಾಗ
ﯰﯱﯲﯳ
74:35 ಖಂಡಿತವಾಗಿಯೂ (ಆ ನರಕಾಗ್ನಿ) ಮಹಾ ವಿಷಯಗಳಲ್ಲೊಂದಾಗಿದೆ,
ﯴﯵﯶ
74:36 ಮಾನವರಿಗೆ ಎಚ್ಚರಿಕೆ ನೀಡುವಂತಹದು.
ﯷﯸﯹﯺﯻﯼﯽﯾ
74:37 ನಿಮ್ಮ ಪೈಕಿ (ಸನ್ಮರ‍್ಗದಲ್ಲಿ) ಮುಂದೆ ಸಾಗಲು ಅಥವ ಹಿಂದೆ ಸರಿಯಲು ಇಚ್ಛಿಸುವವರಿಗೆ.
ﯿﰀﰁﰂﰃﰄ
74:38 ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರ‍್ಮಗಳ ಬದಲಿಗೆ ಅಡವಿಸಲ್ಪಟ್ಟಿದ್ದಾನೆ.
ﰅﰆﰇﰈ
74:39 ಆದರೆ ಬಲಗಡೆಯವರ ಹೊರತು
ﰉﰊﰋﰌ
74:40 ಅವರು ಸ್ರ‍್ಗೋದ್ಯಾನಗಳಲ್ಲಿ ಪರಸ್ಪರ ಪ್ರಶ್ನಿಸುವರು.
ﰍﰎﰏ
74:41 ಅಪರಾಧಿಗಳ ಕುರಿತು
ﰐﰑﰒﰓﰔ
74:42 ನಿಮ್ಮನ್ನು ನರಕಕ್ಕೆ ಒಯ್ದುದ್ದು ಯಾವುದು ?
ﰕﰖﰗﰘﰙﰚ
74:43 ಅವರು ಉತ್ತರಿಸುವರು; ನಾವು ನಮಾಜ್ ಮಾಡುವವರಲ್ಲಾಗಿರಲಿಲ್ಲ.
ﰛﰜﰝﰞﰟ
74:44 ಮತ್ತು ನಾವು ನರ‍್ಗತಿಕರಿಗೆ ಉಣಿಸುತ್ತಿರಲಿಲ್ಲ.
ﰠﰡﰢﰣﰤ
74:45 ನಾವು ಸತ್ಯದ ವಿರುದ್ಧ ರ‍್ಕಿಸುವವರ ಜೊತೆ ಸೇರಿರ‍್ಕದಲ್ಲಿ ತಲ್ಲೀನರಾಗಿರುತ್ತಿದ್ದೆವು.
ﰥﰦﰧﰨﰩ
74:46 ಹಾಗು ನಾವು ಪ್ರತಿಫಲ ದಿನವನ್ನು ನಿಷೇಧಿಸುತ್ತಿದ್ದೆವು.
ﰪﰫﰬﰭ
74:47 ಕೊನೆಗೆ ಖಚಿತವಾದುದು(ಮರಣವು) ನಮಗೆ ಬಂದುಬಿಟ್ಟಿತು.
ﭑﭒﭓﭔﭕ
74:48 ಶಿಫಾರಸ್ಸು ಮಾಡುವವರ ಶಿಫಾರಸ್ಸು ಅಂದು ಅವರಿಗೆ ಯಾವ ಪ್ರಯೋಜನ ನೀಡದು.
ﭖﭗﭘﭙﭚﭛ
74:49 ಅವರಿಗೇನಾಗಿಬಿಟ್ಟಿದೆ ? ಅವರು ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ!
ﭜﭝﭞﭟ
74:50 50&51
ﭠﭡﭢﭣ
74:51 ಅವರ ಅವಸ್ಥೆಯು ಸಿಂಹವನ್ನು ಕಂಡು ಹೆದರಿ ಬೆಚ್ಚಿಬಿದ್ದು ಓಡಿಹೋದ ಕಾಡು ಕತ್ತೆಗಳೆಂಬಂತಿದೆ.
ﭤﭥﭦﭧﭨﭩﭪﭫﭬﭭ
74:52 ವಾಸ್ತವದಲ್ಲಿ ಅವರ ಪೈಕಿ ಪ್ರತಿಯೊಬ್ಬನೂ ತನಗೆ ನೇರವಾಗಿ ತೆರೆದ ದೈವಿಕ ಗ್ರಂಥಗಳನ್ನು ನೀಡಬೇಕೆಂದು ಬಯಸುತ್ತಾನೆ.
ﭮﭯﭰﭱﭲﭳﭴ
74:53 ಖಂಡಿತ ಇದು ಸಾಧ್ಯವಿಲ್ಲ (ವಾಸ್ತವದಲ್ಲಿ) ಅವರು ಅಂತ್ಯ ದಿನವನ್ನು ಭಯಪಡುವುದಿಲ್ಲ.
ﭵﭶﭷﭸ
74:54 ವಾಸ್ತವವೇನೆಂದರೆ ಇದು (ಕುರ್ಆನ್) ಒಂದು ಉಪದೇಶವಾಗಿದೆ.
ﭹﭺﭻﭼ
74:55 ಆದ್ದರಿಂದ ಇಚ್ಛಿಸುವವನು ಇದರಿಂದ ಉದ್ಭೋದೆ ಪಡೆಯಲಿ.
ﭽﭾﭿﮀﮁﮂﮃﮄﮅﮆﮇﮈﮉ
74:56 ಅಲ್ಲಾಹನು ಇಚ್ಛಿಸದೇ ಅವರು (ಸತ್ಯನಿಷೇಧಿಗಳು) ಉದ್ಭೋದೆ ಪಡೆಯಲಾರರು. ಭಯ ಭಕ್ತಿಯಿರಿಸಿಕೊಳ್ಳಲು ಮತ್ತು ಕ್ಷಮೆ ನೀಡಲೂ ಅವನೇ ರ‍್ಹನಾಗಿದ್ದಾನೆ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers