ಸೂರಾ ಅಲ್-ಕಿಯಾಮಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಕಿಯಾಮಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಕಿಯಾಮಾ ಅನುವಾದ. ಸೂರಾ ಅಲ್-ಕಿಯಾಮಾ (Meccan) 40 ಆಯತ್.
Related
- ಸೂರಾ ಅಲ್-ಕಿಯಾಮಾ ಅನುವಾದಕನ್ನಡ
- ಸೂರಾ ಅಲ್-ಕಿಯಾಮಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಕಿಯಾಮಾ

ﮊﮋﮌﮍﮎ
75:1
ನಾನು ಪುನರುತ್ಥಾನದ ದಿನದ ಮೇಲೆ ಆಣೆಯಿಡುತ್ತೇನೆ.
ﮏﮐﮑﮒﮓ
75:2
ಸ್ವಯಂದೋಷಿಸುವಂತಹ ಮನಸ್ಸಿನ ಮೇಲೆ ಆಣೆಯಿಟ್ಟು ಹೇಳುತ್ತೇನೆ. (ಪ್ರಳಯವು ಬಂದೇತೀರುವುದು)
ﮔﮕﮖﮗﮘﮙ
75:3
ನಾವು ಮಾನವನ ಎಲುಬುಗಳನ್ನು (ಶಿಥಿಲವಾದ ನಂತರ) ಒಟ್ಟುಗೂಡಿಸಲಾರೆವೆಂದು ಅವನು ಭಾವಿಸುತ್ತಾನೆಯೇ ?
ﮚﮛﮜﮝﮞﮟﮠ
75:4
ಏಕಿಲ್ಲ ನಾವು ಅವನ ಬೆರಳ ತುದಿಗಳನ್ನು ಸಹ (ಪ್ರತ್ಯೇಕವಾಗಿ) ಸರಿಪಡಿಸಲು ಸರ‍್ಥರಿದ್ದೇವೆ.
ﮡﮢﮣﮤﮥﮦ
75:5
ವಸ್ತುತಃ ಮನುಷ್ಯನು ಮುಂದೆಯೂ ಧಿಕ್ಕಾರತೋರಲು ಬಯಸುತ್ತಾನೆ.
ﮧﮨﮩﮪﮫ
75:6
ಪುನರುತ್ಥಾನದ ದಿನ ಯಾವಾಗ ಬರುವುದೆಂದು ಅವನು (ಪರಿಹಾಸ್ಯವಾಗಿ) ಕೇಳುತ್ತಾನೆ.
ﮬﮭﮮﮯ
75:7
ದೃಷ್ಟಿಯು ಸ್ಥಂಭಿಭೂತವಾದಾಗ
ﮰﮱﯓ
75:8
ಚಂದ್ರನು ಕಳೆಗುಂದುವಾಗ
ﯔﯕﯖﯗ
75:9
ಮತ್ತು ಸರ‍್ಯ-ಚಂದ್ರರು ಒಟ್ಟುಗೂಡಿಸಲ್ಪಟ್ಟಾಗ
ﯘﯙﯚﯛﯜﯝ
75:10
ಆ ದಿನ ಮನುಷ್ಯನು; ಎಲ್ಲಿಗೆ ಪಲಾಯನಗೈಯ್ಯಲಿ ಎಂದು ಹೇಳುವನು.
ﯞﯟﯠﯡ
75:11
ಖಂಡಿತ ಇಲ್ಲ ಯಾವುದೇ ಅಭಯ ಸ್ಥಾನ ಇಲ್ಲ.
ﯢﯣﯤﯥﯦ
75:12
ಅಂದು ನಿಮ್ಮ ಪ್ರಭುವಿನ ಬಳಿಯೇ ನೆಲೆಯಿರುವುದು.
ﯧﯨﯩﯪﯫﯬﯭ
75:13
ಅಂದು ಮನುಷ್ಯನಿಗೆ ಅವನು ಮುಂದೆ ಕಳುಹಿಸಿದ ಮತ್ತು ಹಿಂದೆ ಬಿಟ್ಟು ಬಂದಿರುವ ಸಕಲ ರ‍್ಮಗಳ ಕುರಿತು ತಿಳಿಸಲಾಗುವುದು.
ﯮﯯﯰﯱﯲﯳ
75:14
ಮಾತ್ರವಲ್ಲ ಸ್ವತಃ ಮನುಷ್ಯನೇ ತನ್ನ ಬಗ್ಗೆ ಚೆನ್ನಾಗಿ ಬಲ್ಲನು.
ﯴﯵﯶﯷ
75:15
ಅವನು ತನಗಾಗಿ ಎಷ್ಟೇ ನೆಪಗಳನ್ನು ಒಡ್ಡಿದರೂ ಸರಿಯೇ.
ﯸﯹﯺﯻﯼﯽﯾ
75:16
ಓ ಪೈಗಂಬರರೇ ನೀವು ಕುರ್ಆನನ್ನು ಅವಸರದಿಂದ ಕಂಠಪಾಠ ಮಾಡುವ ಸಲುವಾಗಿ ತಮ್ಮ ನಾಲಗೆಯನ್ನು ಚಲಿಸಬೇಡಿರಿ.
ﯿﰀﰁﰂﰃ
75:17
ನಿಶ್ಚಯವಾಗಿಯೂ ಅದನ್ನು (ನಿಮ್ಮ ಹೃದಯದಲ್ಲಿ) ಸಂಗ್ರಹ ಮಾಡುವ ಮತ್ತು ಓದಿಸುವ ಹೊಣೆ ನಮ್ಮ ಮೇಲಿದೆ.
ﰄﰅﰆﰇﰈ
75:18
ಆದುದರಿಂದ ನಾವು ಅದನ್ನು (ಜಿಬ್ರಯೀಲರ ಮೂಲಕ) ಓದಿಕೊಟ್ಟಾಗ ನೀವು ಅದರ ಪಠಣವನ್ನು ಅನುಸರಿಸಿರಿ.
ﰉﰊﰋﰌﰍ
75:19
ತರುವಾಯ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
ﭑﭒﭓﭔﭕ
75:20
(ಓ ಸತ್ಯನಿಷೇಧಿಗಳೇ) ವಾಸ್ತವವೇನೆಂದರೆ ನೀವು ಶೀಘ್ರ ಪ್ರಾಪ್ತವಾಗುವ ಇಹಲೋಕವನ್ನು ಪ್ರೀತಿಸುತ್ತೀರಿ.
ﭖﭗﭘ
75:21
ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ,
ﭙﭚﭛﭜ
75:22
ಅಂದು ಕೆಲವು ಮುಖಗಳು ಪ್ರಸನ್ನವಾಗಿರುವವು
ﭝﭞﭟﭠ
75:23
ಅವು (ತೆರೆರಹಿತ) ತಮ್ಮ ಪ್ರಭುವಿನತ್ತ ನೋಡುತ್ತಿರುವವು.
ﭡﭢﭣﭤ
75:24
ಇನ್ನು ಕೆಲವು ಮುಖಗಳು ಕಳೆಗುಂದಿರುವುವು.
ﭥﭦﭧﭨﭩﭪ
75:25
ಅವರು ತಮ್ಮೊಂದಿಗೆ ಸೊಂಟ ಮುರಿಯುವ ರೀತಿಯಲ್ಲಿ ರ‍್ತಿಸಲಾಗುವುದೆಂದು ಭಾವಿಸುತ್ತಿರುವರು.
ﭫﭬﭭﭮﭯ
75:26
ಹಾಗಲ್ಲ ಪ್ರಾಣವು ಗಂಟಲಿಗೆ ತಲುಪಿದಾಗ.
ﭰﭱﭲﭳﭴ
75:27
ಮಂತ್ರಿಸುವವನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವುದು.
ﭵﭶﭷﭸ
75:28
(ಆಗ) ಇದು ಇಹಲೋಕದಿಂದ ವಿದಾಯದ ಸಮಯವೆಂದು ಅವನು ಅರಿತುಕೊಳ್ಳುವನು.
ﭹﭺﭻﭼ
75:29
ಕಣಕಾಲು ಕಣಕಾಲಿನೊಂದಿಗೆ ಅಂಟಿಕೊಳ್ಳುವುದು.
ﭽﭾﭿﮀﮁ
75:30
ಇಂದು ನಿನಗೆ ನಿನ್ನ ಪ್ರಭುವಿನೆಡೆಗೆ ಹೋಗಲಿಕ್ಕಿರುವುದು.
ﮂﮃﮄﮅﮆ
75:31
ಅವನು ಸತ್ಯವನ್ನು ಸರ‍್ಥಿಸಲಿಲ್ಲ ಮತ್ತು ನಮಾಜ್ ನರ‍್ವಹಿಸಲೂ ಇಲ್ಲ.
ﮇﮈﮉﮊ
75:32
ಮಾತ್ರವಲ್ಲ ಅವನು ಸುಳ್ಳಾಗಿಸಿಬಿಟ್ಟನು ಮತ್ತು ವಿಮುಖನಾದನು.
ﮋﮌﮍﮎﮏﮐ
75:33
ಬಳಿಕ ಅವನು ದುರಭಿಮಾನ ತೋರುತ್ತಾ ತನ್ನ ಮನೆಯವರ ಬಳಿ ತೆರಳಿದನು.
ﮑﮒﮓﮔ
75:34
ನಿನ್ನ ಕುರಿತು ವಿಷಾದವಿದೆ! ನಿನ್ನ ಕುರಿತು ದುಖಃವಿದೆ!
ﮕﮖﮗﮘﮙ
75:35
(ನಿನಗೆ ಪುನರುತ್ಥಾನ ದಿನದ) ಸಂಕಟವಿದೆ ಮತ್ತು ನಿನಗೆ (ನರಕದ) ವಿನಾಶವಿದೆ.
ﮚﮛﮜﮝﮞﮟ
75:36
ತನ್ನನ್ನು (ಲೆಕ್ಕಾಚಾರವಿಲ್ಲದೆ) ಸುಮ್ಮನೆ ಬಿಟ್ಟುಬಿಡಲಾಗುವುದು ಎಂದು ಮನುಷ್ಯನು ತಿಳಿದುಕೊಂಡಿದ್ದಾನೆಯೇ ?
ﮠﮡﮢﮣﮤﮥﮦ
75:37
ಅವನು (ರ‍್ಭದಲ್ಲಿ) ಸ್ರವಿಸಲಾದ ವರ‍್ಯದ ಬಿಂದುವಾಗಿರಲಿಲ್ಲವೇ ?
ﮧﮨﮩﮪﮫﮬ
75:38
ತರುವಾಯ ಅವನೊಂದು ರಕ್ತಪಿಂಡವಾದನು ತರುವಾಯ ಅಲ್ಲಾಹನು ಅವನನ್ನು ಸೃಷ್ಟಿಸಿದನು ಮತ್ತು ಸಂತುಲಿತ ಗೊಳಿಸಿದನು.
ﮭﮮﮯﮰﮱﯓ
75:39
ಅನಂತರ ಅವನು ಅದರಿಂದ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿಸಿದನು.
ﯔﯕﯖﯗﯘﯙﯚﯛ
75:40
ಏನು ಆ ಅಲ್ಲಾಹನು ಮೃತರನ್ನು ಜೀವಂತಗೊಳಿಸಲು ಸಾರ‍್ಥ್ಯವುಳ್ಳವನಲ್ಲವೇ?
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







