ಸೂರಾ ಅಲ್-ಫುರ್ಕಾನ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಫುರ್ಕಾನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (77 ಆಯತ್ — مكية). ಅಲ್-ಫುರ್ಕಾನ್ ಆಲಿಸಿ, ಅಲ್-ಫುರ್ಕಾನ್ ಅನುವಾದ, ಅಲ್-ಫುರ್ಕಾನ್ mp3, ಅಲ್-ಫುರ್ಕಾನ್ pdf.

ಸೂರಾ ಅಲ್-ಫುರ್ಕಾನ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
تَبَارَكَ الَّذِي نَزَّلَ الْفُرْقَانَ عَلَىٰ عَبْدِهِ لِيَكُونَ لِلْعَالَمِينَ نَذِيرًا ۝١
📖 ಅನುವಾದ ಆಯತ್ 1
ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು ಅವತೀರ್ಣಗೊಳಿಸಿದವನು ಮಹಾಮಂಗಳಮಯನು.
الَّذِي لَهُ مُلْكُ السَّمَاوَاتِ وَالْأَرْضِ وَلَمْ يَتَّخِذْ وَلَدًا وَلَمْ يَكُن لَّهُ شَرِيكٌ فِي الْمُلْكِ وَخَلَقَ كُلَّ شَيْءٍ فَقَدَّرَهُ تَقْدِيرًا ۝٢
📖 ಅನುವಾದ ಆಯತ್ 2
ಅಲ್ಲಾಹನಿಗೇ ಭೂಮಿ ಆಕಾಶಗಳ ಆಧಿಪತ್ಯವಿದೆ. ಅವನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅಧಿಪತ್ಯದಲ್ಲಿ ಅವನಿಗೆ ಯಾವ ಸಹಭಾಗಿಯೂ ಇಲ್ಲ ಮತ್ತು ಅವನು ಸಕಲ ವಸ್ತಗಳನ್ನೂ ಸೃಷ್ಟಿಸಿ ಒಂದು ಸರಿಯಾದ ಕ್ರಮದಲ್ಲಿರಿಸಿದನು.
وَاتَّخَذُوا مِن دُونِهِ آلِهَةً لَّا يَخْلُقُونَ شَيْئًا وَهُمْ يُخْلَقُونَ وَلَا يَمْلِكُونَ لِأَنفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَاةً وَلَا نُشُورًا ۝٣
📖 ಅನುವಾದ ಆಯತ್ 3
ಅವರು ಅಲ್ಲಾಹನ ಹೊರತು ಇತರರನ್ನುಆರಾಧ್ಯರನ್ನಾಗಿ ಮಾಡಿಕೊಂಡಿದ್ದಾರೆ. ವಸ್ತುತಃ ಅವರು ಏನನ್ನೂ ಸೃಷ್ಟಿಸಿಲ್ಲ, ಸ್ವತಃ ಅವರೇ ಸೃಷ್ಟಿಗಳು. ಮತ್ತು ಅವರು ತಮಗೂ ಯಾವುದೇ ಲಾಭ ಅಥವಾ ಹಾನಿಯ ಅಧಿಕಾರ ಹೊಂದಿಲ್ಲ ಮತ್ತು ಅವರು ಮರಣವನ್ನಾಗಲೀ, ಜೀವನವನ್ನಾಗಲೀ, ಪುನರುತ್ಥಾನಗೊಳಿಸುವುದನ್ನಾಗಲೀ ತಮ್ಮ ಅಧಿನದಲ್ಲಿ ಹೊಂದಿಲ್ಲ.
وَقَالَ الَّذِينَ كَفَرُوا إِنْ هَٰذَا إِلَّا إِفْكٌ افْتَرَاهُ وَأَعَانَهُ عَلَيْهِ قَوْمٌ آخَرُونَ ۖ فَقَدْ جَاءُوا ظُلْمًا وَزُورًا ۝٤
📖 ಅನುವಾದ ಆಯತ್ 4
ಸತ್ಯ ನಿಷೇಧಿಗಳು ಹೇಳಿದರು: ಈ ಕುರ್‌ಆನಂತು ಅವನು ಸ್ವತಃ ರಚಿಸಿರುವಂತಹ ಒಂದು ಸುಳ್ಳಾಗಿದೆ ಮತ್ತು ಇದಕ್ಕೆ ಇತರ ಜನರು ಅವನ ಸಹಾಯ ಮಾಡಿರುತ್ತಾರೆ. ವಾಸ್ತವದಲ್ಲಿ ಸತ್ಯನಿಷೇಧಿಗಳು ಮಹಾ ಅನ್ಯಾಯ ಮತ್ತು ಅಪ್ಪಟ ಸುಳ್ಳಿಗೆ ಇಳಿದಿದ್ದಾರೆ.
وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا ۝٥
📖 ಅನುವಾದ ಆಯತ್ 5
ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ. ಸಂಜೆ ಮುಂಜಾನೆಯಲ್ಲಿ ಇದನ್ನು ಅವನ ಮುಂದೆ ಓದಿ ಹೇಳಲಾಗುತ್ತವೆ.
قُلْ أَنزَلَهُ الَّذِي يَعْلَمُ السِّرَّ فِي السَّمَاوَاتِ وَالْأَرْضِ ۚ إِنَّهُ كَانَ غَفُورًا رَّحِيمًا ۝٦
📖 ಅನುವಾದ ಆಯತ್ 6
ಹೇಳಿರಿ: ಇದನ್ನು ಆಕಾಶಗಳ ಮತ್ತು ಭೂಮಿಯ ರಹಸ್ಯವನ್ನು ಬಲ್ಲವನೇ ಅವತೀರ್ಣಗೊಳಿಸಿದ್ದಾನೆ. ನಿಸ್ಸಂಶಯವಾಗಿಯು ಅವನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنزِلَ إِلَيْهِ مَلَكٌ فَيَكُونَ مَعَهُ نَذِيرًا ۝٧
📖 ಅನುವಾದ ಆಯತ್ 7
ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”.
أَوْ يُلْقَىٰ إِلَيْهِ كَنزٌ أَوْ تَكُونُ لَهُ جَنَّةٌ يَأْكُلُ مِنْهَا ۚ وَقَالَ الظَّالِمُونَ إِن تَتَّبِعُونَ إِلَّا رَجُلًا مَّسْحُورًا ۝٨
📖 ಅನುವಾದ ಆಯತ್ 8
ಅಥವಾ ಇವನೆಡೆಗೆ ಒಂದು ನಿಧಿಯನ್ನು ಇಳಿಸಬಹುದಿತ್ತಲ್ಲ! ಅಥವಾ ಇವನಿಗೆ ಯಾವುದಾದರೂ ಒಂದು ತೋಟವಿದ್ದು ಅದರಿಂದ ಇವನು ತಿನ್ನಬಹುದಿತ್ತಲ್ಲ ಮತ್ತು ಅಕ್ರಮಿಗಳು ಹೀಗೂ ಹೇಳಿದರು: ನೀವು ಮಾಟ ಬಾಧೆಗೊಳಗಾದಂತಹ ವ್ಯಕ್ತಿಯನ್ನು ಅನುಸರಿಸುತ್ತಿರುವಿರಿ.
انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا ۝٩
📖 ಅನುವಾದ ಆಯತ್ 9
(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.
تَبَارَكَ الَّذِي إِن شَاءَ جَعَلَ لَكَ خَيْرًا مِّن ذَٰلِكَ جَنَّاتٍ تَجْرِي مِن تَحْتِهَا الْأَنْهَارُ وَيَجْعَل لَّكَ قُصُورًا ۝١٠
📖 ಅನುವಾದ ಆಯತ್ 10
(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.
بَلْ كَذَّبُوا بِالسَّاعَةِ ۖ وَأَعْتَدْنَا لِمَن كَذَّبَ بِالسَّاعَةِ سَعِيرًا ۝١١
📖 ಅನುವಾದ ಆಯತ್ 11
ವಾಸ್ತವದಲ್ಲಿ ಅವರು ಅಂತ್ಯ ದಿನವನ್ನು ಸುಳ್ಳಾಗಿಸಿದ್ದಾರೆ ಮತ್ತು ನಾವು ಅಂತ್ಯ ದಿನವನ್ನು ಸುಳ್ಳಾಗಿಸಿದವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
إِذَا رَأَتْهُم مِّن مَّكَانٍ بَعِيدٍ سَمِعُوا لَهَا تَغَيُّظًا وَزَفِيرًا ۝١٢
📖 ಅನುವಾದ ಆಯತ್ 12
ಅದು ಅವರನ್ನು ದೂರದಿಂದಲೇ ಕಾಣುವಾಗ ಅವರು ಅದರ ಉಗ್ರ ಕೋಪವನ್ನು, ಅರ್ಭಟವನ್ನು ಕೇಳುವರು.
وَإِذَا أُلْقُوا مِنْهَا مَكَانًا ضَيِّقًا مُّقَرَّنِينَ دَعَوْا هُنَالِكَ ثُبُورًا ۝١٣
📖 ಅನುವಾದ ಆಯತ್ 13
ಮತು ್ತಅವರು ಬಂಧಿಸಲ್ಪಟ್ಟು ನರಕದ ಇಕ್ಕಟ್ಟಿನ ಸ್ಥಳವೊಂದರಲ್ಲಿ ಎಸೆಯಲ್ಲಪಟ್ಟರೆ ಅಲ್ಲಿ ಅವರು ತಮಗೆ ವಿನಾಶವನ್ನು ಕೂಗಿ ಕರೆಯುವರು.
لَّا تَدْعُوا الْيَوْمَ ثُبُورًا وَاحِدًا وَادْعُوا ثُبُورًا كَثِيرًا ۝١٤
📖 ಅನುವಾದ ಆಯತ್ 14
(ಅವರೊಂದಿಗೆ ಹೇಳಲಾಗುವುದು:) ನೀವಿಂದು ಒಂದು ವಿನಾಶವನ್ನಲ್ಲ ಅನೇಕ ವಿನಾಶಗಳನ್ನು ಕೂಗಿ ಕರೆಯಿರಿ.
قُلْ أَذَٰلِكَ خَيْرٌ أَمْ جَنَّةُ الْخُلْدِ الَّتِي وُعِدَ الْمُتَّقُونَ ۚ كَانَتْ لَهُمْ جَزَاءً وَمَصِيرًا ۝١٥
📖 ಅನುವಾದ ಆಯತ್ 15
ಹೇಳರಿ: ನಿಮಗೆ ಇದು ಉತ್ತಮವೋ ಅಥವಾ ಭಯಭಕ್ತಿವುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ಶಾಶ್ವತ ಸ್ವರ್ಗೋದ್ಯಾನವೋ? ಅದು ಅವರ ಪಾಲಿಗೆ ಪ್ರತಿಫಲವೂ ಮತ್ತು ಅವರು ಮರಳುವ ನೈಜತಾಣವೂ ಆಗಿದೆ.
لَّهُمْ فِيهَا مَا يَشَاءُونَ خَالِدِينَ ۚ كَانَ عَلَىٰ رَبِّكَ وَعْدًا مَّسْئُولًا ۝١٦
📖 ಅನುವಾದ ಆಯತ್ 16
ಅವರಿಗೆ ಅದರಲ್ಲಿ ಅವರಿಚ್ಛಿಸುವುದೆಲ್ಲವೂ ಇರುವುದು. ಅಲ್ಲಿ ಅವರು ಶಾಶ್ವತವಾಗಿರುವರು. ಇದು ನಿಮ್ಮ ಪ್ರಭುವಿನ ಮೇಲೆ ಹೊಣೆಯಾಗಿರುವ, ಒಂದು ವಾಗ್ದಾನವಾಗಿದೆ.
وَيَوْمَ يَحْشُرُهُمْ وَمَا يَعْبُدُونَ مِن دُونِ اللَّهِ فَيَقُولُ أَأَنتُمْ أَضْلَلْتُمْ عِبَادِي هَٰؤُلَاءِ أَمْ هُمْ ضَلُّوا السَّبِيلَ ۝١٧
📖 ಅನುವಾದ ಆಯತ್ 17
ಅವನು ಅವರನ್ನು, ಮತ್ತು ಅಲ್ಲಾಹನ ಹೊರತು ಅವರು ಆರಾಧಿಸುತ್ತಿದ್ದ ವಸ್ತುಗಳನ್ನು ಒಟ್ಟು ಸೇರಿಸುವ ದಿನದಂದು ಕೇಳುವನು: ನನ್ನ ಈ ದಾಸರನ್ನು ದಾರಿ ತಪ್ಪಿಸಿದ್ದು ನೀವೋ?
قَالُوا سُبْحَانَكَ مَا كَانَ يَنبَغِي لَنَا أَن نَّتَّخِذَ مِن دُونِكَ مِنْ أَوْلِيَاءَ وَلَٰكِن مَّتَّعْتَهُمْ وَآبَاءَهُمْ حَتَّىٰ نَسُوا الذِّكْرَ وَكَانُوا قَوْمًا بُورًا ۝١٨
📖 ಅನುವಾದ ಆಯತ್ 18
ಅವರು ಉತ್ತರಿಸುವರು: ನೀನು ಪರಮ ಪಾವನನಾಗಿರುವೆ. ನಾವು ನಿನ್ನ ಹೊರತು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಳ್ಳುವುದು ನಮಗೆ ಭೂಷಣವಾಗಿರಲಿಲ್ಲ. ವಾಸ್ತವ ವಿಚಾವೇನೆಂದರೆ ನೀನು ಅವರಿಗೂ, ಅವರ ಪೂರ್ವಿಕರಿಗೂ ಸುಖಾನುಕೂಲತೆಯನ್ನು ನೀಡಿದ್ದೆ ಕೊನೆಗೆ ಅವರು ಉದ್ಬೋಧೆಯನ್ನೇ ಮರೆತು ಬಿಟ್ಟರು ಮತ್ತು ಅವರು ನಾಶ ಹೊಂದುವ ಜನರಾಗಿದ್ದರು.
فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَن يَظْلِم مِّنكُمْ نُذِقْهُ عَذَابًا كَبِيرًا ۝١٩
📖 ಅನುವಾದ ಆಯತ್ 19
ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು ಸಹಾಯ ಮಾಡಲಿಕ್ಕಾಗಲೀ, ನೀವು ಅಶಕ್ತರು ಮತ್ತು ನಿಮ್ಮ ಪೈಕಿ ಅಕ್ರಮವನ್ನು ಮಾಡಿದವನಿಗೆ ನಾವು ಮಹಾ ಯಾತನೆಯನ್ನು ಸವಿಯುವಂತೆ ಮಾಡುವೆವು.
وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا ۝٢٠
📖 ಅನುವಾದ ಆಯತ್ 20
ನಾವು ನಿಮಗಿಂತ ಮೊದಲು ಕಳುಹಿಸಿರುವ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲೂ ನಡೆದಾಡುತ್ತಿದ್ದರು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಇನ್ನೂ ಕೆಲವರ ಪಾಲಿಗೆ ಪರೀಕ್ಷೆಯ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ಸಹನೆ ವಹಿಸುವಿರಾ? ನಿಮ್ಮ ಪ್ರಭುವು ಸರ್ವರನ್ನೂ ವೀಕ್ಷಿಸುವವನಾಗಿದ್ದಾನೆ.
۞ وَقَالَ الَّذِينَ لَا يَرْجُونَ لِقَاءَنَا لَوْلَا أُنزِلَ عَلَيْنَا الْمَلَائِكَةُ أَوْ نَرَىٰ رَبَّنَا ۗ لَقَدِ اسْتَكْبَرُوا فِي أَنفُسِهِمْ وَعَتَوْا عُتُوًّا كَبِيرًا ۝٢١
📖 ಅನುವಾದ ಆಯತ್ 21
ನಮ್ಮ ಭೇಟಿಯ ನಿರೀಕ್ಷೆಯಿಲ್ಲದವರು ಹೇಳುತ್ತಾರೆ: ನಮ್ಮ ಮೇಲೆ ಮಲಕ್‌ಗಳನ್ನು ಏಕೆ ಇಳಿಸಲಾಗಿಲ್ಲಾ? ಅಥವಾ ನಾವು ನಮ್ಮ ಪ್ರಭುವನ್ನು ನಮ್ಮ ಕಣ್ಣಾರೆ ನೋಡುವುದಿಲ್ಲವೇಕೆ? ನಿಜವಾಗಿಯೂ ಅವರು ಅಹಂಭಾವಿಗಳಾಗಿದ್ದಾರೆ ಮತ್ತು ಮಹಾ ಅತಿಕ್ರಮವನ್ನುತೋರಿದ್ದಾರೆ.
يَوْمَ يَرَوْنَ الْمَلَائِكَةَ لَا بُشْرَىٰ يَوْمَئِذٍ لِّلْمُجْرِمِينَ وَيَقُولُونَ حِجْرًا مَّحْجُورًا ۝٢٢
📖 ಅನುವಾದ ಆಯತ್ 22
ಅವರು ಮಲಕ್‌ಗಳÀನ್ನು ಕಾಣುವ ದಿನದಂದು ಅಪರಾಧಿಗಳಿಗೆ ಯಾವುದೇ ರೀತಿಯ ಸಂತೋಷದ ಸುದ್ಧಿ ಇರಲಾರದು. ಅವರು ಹೇಳುವರು: ನಿಮ್ಮ ಮೇಲೆ ಸ್ವರ್ಗವು ಖಡಾಖಂಡಿತವಾಗಿ ನಿಷಿದ್ಧಗೊಳಿಸಲಾಗಿದೆ.
وَقَدِمْنَا إِلَىٰ مَا عَمِلُوا مِنْ عَمَلٍ فَجَعَلْنَاهُ هَبَاءً مَّنثُورًا ۝٢٣
📖 ಅನುವಾದ ಆಯತ್ 23
ಅವರು ಮಾಡಿರುವ ಎಲ್ಲಾ ಕರ್ಮಗಳೆಡೆಗೆ ನಾವು ಗಮನಹರಿಸುವೆವು. ಅನಂತರ ಅವುಗಳನ್ನು ಧೂಳಿನಂತೆ ಹರಡಿ ಬಿಡುವೆವು.
أَصْحَابُ الْجَنَّةِ يَوْمَئِذٍ خَيْرٌ مُّسْتَقَرًّا وَأَحْسَنُ مَقِيلًا ۝٢٤
📖 ಅನುವಾದ ಆಯತ್ 24
ಅಂದು ಸ್ವರ್ಗವಾಗಸಿಗಳ ತಾಣವು ಉತ್ತಮವಾಗಿರುವುದು ಮತ್ತು ವಿಶ್ರಾಂತಿ ಗೃಹವೂ ಅತ್ಯುತ್ತಮ ವಾಗಿರುವುದು.
وَيَوْمَ تَشَقَّقُ السَّمَاءُ بِالْغَمَامِ وَنُزِّلَ الْمَلَائِكَةُ تَنزِيلًا ۝٢٥
📖 ಅನುವಾದ ಆಯತ್ 25
ಅಂದು ಆಕಾಶವು ಮೋಡದೊಂದಿಗೆ ಸೀಳಿ ಹೋಗುವುದು ಮತ್ತು ಮಲಕ್‌ಗಳು ನಿರಂತರರಾಗಿ ಇಳಿಸಲಾಗುವರು.
الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا ۝٢٦
📖 ಅನುವಾದ ಆಯತ್ 26
ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ ಮಹಾ ಸಂಕಷ್ಟಭರಿತ ದಿನವಾಗಿರುವುದು.
وَيَوْمَ يَعَضُّ الظَّالِمُ عَلَىٰ يَدَيْهِ يَقُولُ يَا لَيْتَنِي اتَّخَذْتُ مَعَ الرَّسُولِ سَبِيلًا ۝٢٧
📖 ಅನುವಾದ ಆಯತ್ 27
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
يَا وَيْلَتَىٰ لَيْتَنِي لَمْ أَتَّخِذْ فُلَانًا خَلِيلًا ۝٢٨
📖 ಅನುವಾದ ಆಯತ್ 28
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
لَّقَدْ أَضَلَّنِي عَنِ الذِّكْرِ بَعْدَ إِذْ جَاءَنِي ۗ وَكَانَ الشَّيْطَانُ لِلْإِنسَانِ خَذُولًا ۝٢٩
📖 ಅನುವಾದ ಆಯತ್ 29
ಉದ್ಭೋಧೆಯು ನನ್ನ ಬಳಿಗೆ ಬಂದ ನಂತರವೂ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು ಮತ್ತು ಶೈತಾನನು ಮನುಷ್ಯನ ಪಾಲಿಗೆ ದ್ರೋಹ ಮಾಡುವವನಾಗಿದ್ದಾನೆ.
وَقَالَ الرَّسُولُ يَا رَبِّ إِنَّ قَوْمِي اتَّخَذُوا هَٰذَا الْقُرْآنَ مَهْجُورًا ۝٣٠
📖 ಅನುವಾದ ಆಯತ್ 30
ಸಂದೇಶವಾಹಕರು ಹೇಳುವರು: ಓ ನನ್ನ ಪ್ರಭುವೇ, ನಿಸ್ಸಂಶಯವಾಗಿಯೂ ನನ್ನ ಸಮುದಾಯದವರು ಈ ಕುರ್‌ಆನನ್ನು ತೊರೆದು ಬಿಟ್ಟಿದ್ದರು.
وَكَذَٰلِكَ جَعَلْنَا لِكُلِّ نَبِيٍّ عَدُوًّا مِّنَ الْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا ۝٣١
📖 ಅನುವಾದ ಆಯತ್ 31
ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು ಮಾರ್ಗದರ್ಶಕನಾಗಿಯೂ, ಸಹಾಯಕನಾಗಿಯೂ ನಿಮ್ಮ ಪ್ರಭುವೇ ಸಾಕು.
وَقَالَ الَّذِينَ كَفَرُوا لَوْلَا نُزِّلَ عَلَيْهِ الْقُرْآنُ جُمْلَةً وَاحِدَةً ۚ كَذَٰلِكَ لِنُثَبِّتَ بِهِ فُؤَادَكَ ۖ وَرَتَّلْنَاهُ تَرْتِيلًا ۝٣٢
📖 ಅನುವಾದ ಆಯತ್ 32
ಸತ್ಯನಿಷೇಧಿಸಿದವರು ಇವನ ಮೇಲೆ ಸಂಪೂರ್ಣ ಕುರ್‌ಆನ್ ಒಂದೇ ಸಲ ಏಕೆ ಅವತೀರ್ಣಗೊಳಿಸಲಾಗಿಲ್ಲ? ಎಂದು ಕೇಳುತ್ತಾರೆ. ಏಕೆಂದರೆ ಇದರ ಮೂಲಕ ನಾವು ನಿಮ್ಮ ಹೃದಯವನ್ನು ಸ್ಥಿರವಾಗಿಸಲೆಂದಾಗಿದೆ. ಆದುದರಿಂದ ನಾವು ಅದನ್ನು ಸಾವಕಾಶವಾಗಿ ಓದಿಕೊಡುತ್ತಿದ್ದೇವೆ.
وَلَا يَأْتُونَكَ بِمَثَلٍ إِلَّا جِئْنَاكَ بِالْحَقِّ وَأَحْسَنَ تَفْسِيرًا ۝٣٣
📖 ಅನುವಾದ ಆಯತ್ 33
ಅವರು ಸತ್ಯವನ್ನು ವಿರೋಧಿಸಲು ಯಾವ ಉಪಮೆಯನ್ನು ತಂದರೂ ನಾವು ಅದರ ಸಮರ್ಪಕವಾದ ಉತ್ತರ ಹಾಗೂ ಉನ್ನತ ವಿವರಣೆ ನಿಮಗೆ ತಿಳಿಸಿಕೊಡದೆ ಇರಲಾರೆವು.
الَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُولَٰئِكَ شَرٌّ مَّكَانًا وَأَضَلُّ سَبِيلًا ۝٣٤
📖 ಅನುವಾದ ಆಯತ್ 34
ಅವರು ಅಧೋಮುಖರಾಗಿ ನರಕದೆಡೆಗೆ ಒಟ್ಟು ಸೇರಿಸಲಾಗುವರು. ಅವರೇ ಅತ್ಯಂತ ನಿಕೃಷ್ಟ ಮಟ್ಟದವರು ಮತ್ತು ಭ್ರಷ್ಟ ಮಾರ್ಗದವರಾಗಿದ್ದಾರೆ.
وَلَقَدْ آتَيْنَا مُوسَى الْكِتَابَ وَجَعَلْنَا مَعَهُ أَخَاهُ هَارُونَ وَزِيرًا ۝٣٥
📖 ಅನುವಾದ ಆಯತ್ 35
ನಿಸ್ಸಂಶಯವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಮತ್ತು ನಾವು ಅವರ ಜೊತೆ ಅವರ ಸಹೋದರ ಹಾರೂನರನ್ನು ಅವರ ಸಹಾಯಕನಾಗಿ ನಿಶ್ಚಯಿಸಿದೆವು.
فَقُلْنَا اذْهَبَا إِلَى الْقَوْمِ الَّذِينَ كَذَّبُوا بِآيَاتِنَا فَدَمَّرْنَاهُمْ تَدْمِيرًا ۝٣٦
📖 ಅನುವಾದ ಆಯತ್ 36
ಮತ್ತು ಹೇಳಿದೆವು: ನೀವಿಬ್ಬರೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದೆಡೆಗೆ ಹೋಗಿರಿ. ಅನಂತರ ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು.
وَقَوْمَ نُوحٍ لَّمَّا كَذَّبُوا الرُّسُلَ أَغْرَقْنَاهُمْ وَجَعَلْنَاهُمْ لِلنَّاسِ آيَةً ۖ وَأَعْتَدْنَا لِلظَّالِمِينَ عَذَابًا أَلِيمًا ۝٣٧
📖 ಅನುವಾದ ಆಯತ್ 37
ನೂಹರವರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿದಾಗ ನಾವು ಅವರನ್ನು ಮುಳುಗಿಸಿಬಿಟ್ಟೆವು ಮತ್ತು ಅವರನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅಕ್ರಮಿಗಳಿಗೆ ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿಟ್ಟಿರುತ್ತೇವೆ.
وَعَادًا وَثَمُودَ وَأَصْحَابَ الرَّسِّ وَقُرُونًا بَيْنَ ذَٰلِكَ كَثِيرًا ۝٣٨
📖 ಅನುವಾದ ಆಯತ್ 38
ಇದೇ ರೀತಿ ಆದ್, ಸಮೂದ್ ಜನಾಂಗವನ್ನು, ರಸ್ ಜನಾಂಗವನ್ನು ಮತ್ತು ಅವುಗಳ ನಡುವಿನ ಅನೇಕ ಜನಾಂಗಗಳನ್ನೂ (ನಾಶಪಡಿಸಿರುವೆವು).
وَكُلًّا ضَرَبْنَا لَهُ الْأَمْثَالَ ۖ وَكُلًّا تَبَّرْنَا تَتْبِيرًا ۝٣٩
📖 ಅನುವಾದ ಆಯತ್ 39
ನಾವು ಪ್ರತಿಯೊಂದು (ಜನಾಂಗಕ್ಕೂ) ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೆವು. ಅನಂತರ (ನಿರಾಕರಿಸಿದುದರ ನಿಮಿತ್ತ) ಪ್ರತಿಯೊಂದನ್ನೂ ಸಂಪೂರ್ಣವಾಗಿ ನಾಶಗೊಳಿಸಿದೆವು.
وَلَقَدْ أَتَوْا عَلَى الْقَرْيَةِ الَّتِي أُمْطِرَتْ مَطَرَ السَّوْءِ ۚ أَفَلَمْ يَكُونُوا يَرَوْنَهَا ۚ بَلْ كَانُوا لَا يَرْجُونَ نُشُورًا ۝٤٠
📖 ಅನುವಾದ ಆಯತ್ 40
ಇವರು (ಸತ್ಯ ನಿಷೇಧಿಗಳು) ವಿನಾಶಕಾರಿ ಮಳೆಯು ವರ್ಷಿಸಲಾದಂತಹ ನಾಡಿನಿಂದ ಹಾದು ಹೋಗಿದ್ದಾರೆ. ಹಾಗಿದ್ದೂ ಇವರು ಅದನ್ನು ನೋಡುವುದಿಲ್ಲವೇ? ವಾಸ್ತವದಲ್ಲಿ ಇವರಿಗೆ ಮರಣಾನಂತರ ಪುನರುತ್ಥಾನಗೊಳ್ಳು ವುದರ ನಿರೀಕ್ಷೆಯೇ ಇಲ್ಲ.
وَإِذَا رَأَوْكَ إِن يَتَّخِذُونَكَ إِلَّا هُزُوًا أَهَٰذَا الَّذِي بَعَثَ اللَّهُ رَسُولًا ۝٤١
📖 ಅನುವಾದ ಆಯತ್ 41
ಅವರು ನಿಮ್ಮನ್ನು (ಪೈಗಂಬರರನ್ನು) ಕಂಡಾಗಲೆಲ್ಲಾ ನಿಮ್ಮನ್ನು ಪರಿಹಾಸ್ಯ ಮಾಡತೊಡಗುತ್ತಾರೆ. ಅಲ್ಲಾಹನು ಸಂದೇಶವಾಹಕನಾಗಿ ನಿಯೋಗಿಸಿರುವುದು ಇವನನ್ನೇ?
إِن كَادَ لَيُضِلُّنَا عَنْ آلِهَتِنَا لَوْلَا أَن صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ الْعَذَابَ مَنْ أَضَلُّ سَبِيلًا ۝٤٢
📖 ಅನುವಾದ ಆಯತ್ 42
ನಾವು ಇದರಲ್ಲೇ ಸ್ಥಿರಚಿತ್ತರಾಗಿರದಿರುತ್ತಿದ್ದರೆ ಈ ವ್ಯಕ್ತಿ ನಮ್ಮನ್ನು ನಮ್ಮ ಆರಾಧ್ಯ ದೇವರುಗಳಿಂದ ದಾರಿತಪ್ಪಿಸುತ್ತಿದ್ದನು. ಅವರು ಸಧ್ಯದಲ್ಲೆ ಯಾತನೆಗಳನ್ನು ಕಾಣುವಾಗ ಹೆಚ್ಚು ಮಾರ್ಗಭ್ರಷ್ಟನಾರೆಂದು ಸ್ಪಷ್ಟವಾಗಿ ಅರಿಯುವರು.
أَرَأَيْتَ مَنِ اتَّخَذَ إِلَٰهَهُ هَوَاهُ أَفَأَنتَ تَكُونُ عَلَيْهِ وَكِيلًا ۝٤٣
📖 ಅನುವಾದ ಆಯತ್ 43
ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿರುವಿರಾ?
أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَالْأَنْعَامِ ۖ بَلْ هُمْ أَضَلُّ سَبِيلًا ۝٤٤
📖 ಅನುವಾದ ಆಯತ್ 44
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.
أَلَمْ تَرَ إِلَىٰ رَبِّكَ كَيْفَ مَدَّ الظِّلَّ وَلَوْ شَاءَ لَجَعَلَهُ سَاكِنًا ثُمَّ جَعَلْنَا الشَّمْسَ عَلَيْهِ دَلِيلًا ۝٤٥
📖 ಅನುವಾದ ಆಯತ್ 45
ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ.
ثُمَّ قَبَضْنَاهُ إِلَيْنَا قَبْضًا يَسِيرًا ۝٤٦
📖 ಅನುವಾದ ಆಯತ್ 46
ಆ ನಂತರ ನಾವು ಆ ನೆರಳನ್ನು ಮೆಲ್ಲ ಮೆಲ್ಲನೆ ನಮ್ಮೆಡೆಗೆ ಎಳೆಯುತ್ತೇವೆ.
وَهُوَ الَّذِي جَعَلَ لَكُمُ اللَّيْلَ لِبَاسًا وَالنَّوْمَ سُبَاتًا وَجَعَلَ النَّهَارَ نُشُورًا ۝٤٧
📖 ಅನುವಾದ ಆಯತ್ 47
ಅವನೇ ಅಲ್ಲಾಹ್ ನಿಮಗೆ ರಾತ್ರಿಯನ್ನು ಮರೆಯನ್ನಾಗಿಯೂ, ನಿದ್ರೆಯನ್ನು ವಿಶ್ರಾಂತಿಯನ್ನಾಗಿಯೂ ಮತ್ತು ಹಗಲನ್ನು ಚಟುವಟಿಕೆಯ ವೇಳೆಯನ್ನಾಗಿಯೂ ಮಾಡಿದನು.
وَهُوَ الَّذِي أَرْسَلَ الرِّيَاحَ بُشْرًا بَيْنَ يَدَيْ رَحْمَتِهِ ۚ وَأَنزَلْنَا مِنَ السَّمَاءِ مَاءً طَهُورًا ۝٤٨
📖 ಅನುವಾದ ಆಯತ್ 48
ಅವನೇ ತನ್ನ ಕರುಣೆಗೆ ಮುಂಚೆ ಸುವಾರ್ತೆಯನ್ನು ನೀಡುವ ಮಾರುತಗಳನ್ನು ಕಳುಹಿಸುತ್ತಾನೆ ನಾವು ಆಕಾಶದಿಂದ ಶುದ್ಧ ನೀರನ್ನು ಸುರಿಸುತ್ತೇವೆ.
لِّنُحْيِيَ بِهِ بَلْدَةً مَّيْتًا وَنُسْقِيَهُ مِمَّا خَلَقْنَا أَنْعَامًا وَأَنَاسِيَّ كَثِيرًا ۝٤٩
📖 ಅನುವಾದ ಆಯತ್ 49
ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡಲೆಂದಾಗಿದೆ ಮತ್ತು ನಾವು ಅದನ್ನು ನಮ್ಮ ಸೃಷ್ಟಿಗಳ ಪೈಕಿ ಅನೇಕ ಜಾನುವಾರುಗಳಿಗೂ, ಅಸಂಖ್ಯಾತ ಮನುಷ್ಯರಿಗೂ ಕುಡಿಸಲಿಕ್ಕಾಗಿ.
وَلَقَدْ صَرَّفْنَاهُ بَيْنَهُمْ لِيَذَّكَّرُوا فَأَبَىٰ أَكْثَرُ النَّاسِ إِلَّا كُفُورًا ۝٥٠
📖 ಅನುವಾದ ಆಯತ್ 50
ಅವರು ಉಪದೇಶ ಸ್ವೀಕರಿಸಲೆಂದು ನಾವು ಅದನ್ನು ಅವರ ನಡುವೆ ವಿವಿಧ ರೂಪದಲ್ಲಿ ವಿವರಿಸಿ ಕೊಟ್ಟಿದ್ದೇವೆ. ಆದರೆ ಹೆಚ್ಚಿನ ಜನರು ಕೃತಘ್ನತೆಯ ಹೊರತು ಇನ್ನಾವುದಕ್ಕೂ ಒಪ್ಪಲಿಲ್ಲ.
وَلَوْ شِئْنَا لَبَعَثْنَا فِي كُلِّ قَرْيَةٍ نَّذِيرًا ۝٥١
📖 ಅನುವಾದ ಆಯತ್ 51
ನಾವು ಇಚ್ಛಿಸಿರುತ್ತಿದ್ದರೆ ಪ್ರತಿಯೊಂದು ನಾಡಿನಲ್ಲೂ ಒಬ್ಬ ಮುನ್ನೆಚ್ಚರಿಕೆ ನೀಡುವವನನ್ನು ಕಳುಹಿಸುತ್ತಿದ್ದೆವು.
فَلَا تُطِعِ الْكَافِرِينَ وَجَاهِدْهُم بِهِ جِهَادًا كَبِيرًا ۝٥٢
📖 ಅನುವಾದ ಆಯತ್ 52
ಆದುದರಿಂದ ನೀವು ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ ಹಾಗೂ ಅವರಜೊತೆ ಈ ಕುರ್‌ಆನಿನ ಮೂಲಕ ಮಹಾ ಹೋರಾಟ ನಡೆಸಿರಿ.
۞ وَهُوَ الَّذِي مَرَجَ الْبَحْرَيْنِ هَٰذَا عَذْبٌ فُرَاتٌ وَهَٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَّحْجُورًا ۝٥٣
📖 ಅನುವಾದ ಆಯತ್ 53
ಅವನೇ ಎರಡು ಸಮುದ್ರಗಳನ್ನು ಪರಸ್ಪರ ಒಂದುಗೂಡಿಸಿರುವನು. ಒಂದು ಸಿಹಿಯಾದುದೂ, ಸ್ವಾದಭರಿತವೂ ಆಗಿದೆ, ಮೊತ್ತೊಂದು ಉಪ್ಪ್ಪು, ಕಹಿಯಾದುದೂ ಆಗಿರುತ್ತದೆ ಮತ್ತು ಇವುಗಳೆರಡರ ನಡುವೆ ಒಂದು ತೆರೆಯನ್ನೂ ಹಾಗೂ ಬಲಿಷ್ಠ ತಡೆಯನ್ನು ಅವನು ನಿಶ್ಚಯಿಸಿರುವನು.
وَهُوَ الَّذِي خَلَقَ مِنَ الْمَاءِ بَشَرًا فَجَعَلَهُ نَسَبًا وَصِهْرًا ۗ وَكَانَ رَبُّكَ قَدِيرًا ۝٥٤
📖 ಅನುವಾದ ಆಯತ್ 54
ಮತ್ತು ಅವನೇ ನೀರಿನಿಂದ ಮನುಷ್ಯನನ್ನು ಸೃಷ್ಟಿಸಿದ್ದಾನೆ. ಅನಂತರ ಅವನನ್ನು ವಂಶೀಯನಾಗಿಯೂ, ವೈವಾಹಿಕ ಸಂಬAಧವುಳ್ಳವನಾಗಿಯೂ ಮಾಡಿದನು. ನಿಸ್ಸಂದೇಹವಾಗಿಯೂ ನಿಮ್ಮ ಪ್ರಭುವು ಸರ್ವಶಕ್ತನಾಗಿದ್ದಾನೆ.
وَيَعْبُدُونَ مِن دُونِ اللَّهِ مَا لَا يَنفَعُهُمْ وَلَا يَضُرُّهُمْ ۗ وَكَانَ الْكَافِرُ عَلَىٰ رَبِّهِ ظَهِيرًا ۝٥٥
📖 ಅನುವಾದ ಆಯತ್ 55
ಅವರು ಅಲ್ಲಾಹನ ಹೊರತು ತಮಗೆ ಪ್ರಯೋಜನವನ್ನಾಗಲೀ, ಹಾನಿಯನ್ನಾಗಲೀ ಮಾಡಲಾಗದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಸತ್ಯನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಶೈತಾನನ) ಬೆಂಬಲಿಗನಾಗಿರುತ್ತಾನೆ.
وَمَا أَرْسَلْنَاكَ إِلَّا مُبَشِّرًا وَنَذِيرًا ۝٥٦
📖 ಅನುವಾದ ಆಯತ್ 56
ನಾವು ನಿಮ್ಮನ್ನು (ಮುಹಮ್ಮದರನ್ನು) ಕೇವಲ ಸುವಾರ್ತೆ ನೀಡುವವನಾಗಿಯೂ ಮತ್ತು ಮುನ್ನೆಚ್ಚರಿಕೆ ಕೊಡುವವನಾಗಿಯೂ ಕಳುಹಿಸಿರುತ್ತೇವೆ.
قُلْ مَا أَسْأَلُكُمْ عَلَيْهِ مِنْ أَجْرٍ إِلَّا مَن شَاءَ أَن يَتَّخِذَ إِلَىٰ رَبِّهِ سَبِيلًا ۝٥٧
📖 ಅನುವಾದ ಆಯತ್ 57
ಹೇಳಿರಿ ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ಆದರೆ ಇಚ್ಛಿಸುವವನು ತನ್ನ ಪ್ರಭುವಿನ ಹಾದಿಯನ್ನು ಹಿಡಿಯಲಿ.
وَتَوَكَّلْ عَلَى الْحَيِّ الَّذِي لَا يَمُوتُ وَسَبِّحْ بِحَمْدِهِ ۚ وَكَفَىٰ بِهِ بِذُنُوبِ عِبَادِهِ خَبِيرًا ۝٥٨
📖 ಅನುವಾದ ಆಯತ್ 58
ಎಂದೂ ಮರಣ ಹೊಂದದ ಚಿರಂತನನಾದ ಅಲ್ಲಾಹನ ಮೇಲೆ ನೀವು ಭರವಸೆಯನ್ನಿಡಿ, ಮತ್ತು ಅವನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಹೊಗಳುತ್ತಿರಿ ಮತ್ತು ಅವನು ತನ್ನ ದಾಸರ ಪಾಪಗಳ ಬಗ್ಗೆ ಚೆನ್ನಾಗಿ ಬಲ್ಲನು.
الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۚ الرَّحْمَٰنُ فَاسْأَلْ بِهِ خَبِيرًا ۝٥٩
📖 ಅನುವಾದ ಆಯತ್ 59
ಅವನೇ ಆಕಾಶಗಳನ್ನು, ಭೂಮಿಯನ್ನು ಅವೆರೆಡರ ನಡುವೆಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ತರುವಾಯ ಅವನು ಸಿಂಹಾಸನದ ಮೇಲೆ ಆರೋಢನಾದನು. ಅವನು ಪರಮದಯಾಮಯನು; ನೀವು ಅವನ ಬಗ್ಗೆ ವಿಚಾರವಂತರಲ್ಲಿ ಕೇಳಿ ನೋಡಿರಿ.
وَإِذَا قِيلَ لَهُمُ اسْجُدُوا لِلرَّحْمَٰنِ قَالُوا وَمَا الرَّحْمَٰنُ أَنَسْجُدُ لِمَا تَأْمُرُنَا وَزَادَهُمْ نُفُورًا ۩ ۝٦٠
📖 ಅನುವಾದ ಆಯತ್ 60
ನೀವು ಪರಮದಯಾಮಯನಿಗೆ ಸಾಷ್ಟಾಂಗವೆರಗಿರೆAದು ಅವರೊಂದಿಗೆ ಹೇಳಲಾದರೆ ಅವರು ಪರಮದಯಾಮಯನೆಂದರೇನು? ನೀವು ಆಜ್ಞಾಪಿಸಿದುದಕ್ಕೆ ನಾವು ಸಾಷ್ಟಾಂಗವೆರಗಬೇಕೆ? ಎಂದು ಕೇಳುತ್ತಾರೆ ಮತ್ತು ಅವರಿಗೆ ಇದು ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸಿ ಕೊಡುತ್ತದೆ.
تَبَارَكَ الَّذِي جَعَلَ فِي السَّمَاءِ بُرُوجًا وَجَعَلَ فِيهَا سِرَاجًا وَقَمَرًا مُّنِيرًا ۝٦١
📖 ಅನುವಾದ ಆಯತ್ 61
ಆಕಾಶದಲ್ಲಿ ನಕ್ಷತ್ರ ಮಂಡಲಗಳನ್ನು ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನು, ಹೊಳೆಯುವ ಚಂದ್ರನನ್ನು ನಿಶ್ಚಯಿಸಿದವನು ಮಹಾ ಮಂಗಳಮಯನು!
وَهُوَ الَّذِي جَعَلَ اللَّيْلَ وَالنَّهَارَ خِلْفَةً لِّمَنْ أَرَادَ أَن يَذَّكَّرَ أَوْ أَرَادَ شُكُورًا ۝٦٢
📖 ಅನುವಾದ ಆಯತ್ 62
ಉಪದೇಶ ಸ್ವೀಕರಿಸಲು ಬಯಸುವವನಿಗೆ ಅಥವಾ ಕೃತಜ್ಞತೆ ಸಲ್ಲಿಸಲು ಬಯಸುವವನಿಗೆ ಅವನೇ ರಾತ್ರಿಯನ್ನು, ಹಗಲನ್ನು ಒಂದನ್ನೊAದು ಹಿಂಬಾಲಿಸುವುದನ್ನಾಗಿ ಮಾಡಿದನು.
وَعِبَادُ الرَّحْمَٰنِ الَّذِينَ يَمْشُونَ عَلَى الْأَرْضِ هَوْنًا وَإِذَا خَاطَبَهُمُ الْجَاهِلُونَ قَالُوا سَلَامًا ۝٦٣
📖 ಅನುವಾದ ಆಯತ್ 63
ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು ಮಾತನಾಡತೊಡಗಿದರೆ ಸಲಾಮ್ (ಶಾಂತಿ) ಎಂದು ಹೇಳುವವರಾಗಿದ್ದರೆ.
وَالَّذِينَ يَبِيتُونَ لِرَبِّهِمْ سُجَّدًا وَقِيَامًا ۝٦٤
📖 ಅನುವಾದ ಆಯತ್ 64
ಅವರು ರಾತ್ರಿಯನ್ನು ತಮ್ಮ ಪ್ರಭುವಿಗೆ ಸಾಷ್ಟಾಂಗವೆರಗುತ್ತಾ, ನಿಂತು ಪ್ರಾರ್ಥಿಸುತ್ತಾರೆ.
وَالَّذِينَ يَقُولُونَ رَبَّنَا اصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا ۝٦٥
📖 ಅನುವಾದ ಆಯತ್ 65
ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮ್ಮಿಂದ ನರಕದಯಾತನೆಯನ್ನು ದೂರ ಮಾಡು, ನಿಜವಾಗಿಯು ಅದರ ಯಾತನೆಯು ವಿನಾಶಕಾರಿಯಾಗಿದೆ.
إِنَّهَا سَاءَتْ مُسْتَقَرًّا وَمُقَامًا ۝٦٦
📖 ಅನುವಾದ ಆಯತ್ 66
ನಿಸ್ಸಂದೇಹವಾಗಿಯು ಅದು ತಂಗಲು ಮತ್ತು ವಾಸಮಾಡಲು ಅತಿ ನಿಕೃಷ್ಟ ತಾಣವಾಗಿದೆ.
وَالَّذِينَ إِذَا أَنفَقُوا لَمْ يُسْرِفُوا وَلَمْ يَقْتُرُوا وَكَانَ بَيْنَ ذَٰلِكَ قَوَامًا ۝٦٧
📖 ಅನುವಾದ ಆಯತ್ 67
ಅವರು ಖರ್ಚು ಮಾಡುವಾಗ ದುಂದುವೆಚ್ಚ ಮಾಡುವುದಿಲ್ಲ ಮತ್ತು ಜಿಪುಣತೆ ತೋರುವುದಿಲ್ಲ ಹಾಗೂ ಅವರೆಡರ ನಡುವೆ ಮಧ್ಯಮರೀತಿಯಲ್ಲಿ ಖರ್ಚು ಮಾಡುತ್ತಾರೆ.
وَالَّذِينَ لَا يَدْعُونَ مَعَ اللَّهِ إِلَٰهًا آخَرَ وَلَا يَقْتُلُونَ النَّفْسَ الَّتِي حَرَّمَ اللَّهُ إِلَّا بِالْحَقِّ وَلَا يَزْنُونَ ۚ وَمَن يَفْعَلْ ذَٰلِكَ يَلْقَ أَثَامًا ۝٦٨
📖 ಅನುವಾದ ಆಯತ್ 68
ಅವರು ಅಲ್ಲಾಹನೊಂದಿಗೆ ಇತರ ಯಾವ ದೇವರನ್ನು ಕರೆದು ಬೇಡುವುದಿಲ್ಲ ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ವ್ಯಭಿಚಾರವೆಸಗುವುದಿಲ್ಲ ಮತ್ತು ಇದನ್ನು ಮಾಡುವವನು ತನ್ನ ಪಾಪದ ಪ್ರತಿಫಲವನ್ನು ಪಡೆಯುವನು.
يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا ۝٦٩
📖 ಅನುವಾದ ಆಯತ್ 69
ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ ಶಾಶ್ವತನಾಗಿರುವನು.
إِلَّا مَن تَابَ وَآمَنَ وَعَمِلَ عَمَلًا صَالِحًا فَأُولَٰئِكَ يُبَدِّلُ اللَّهُ سَيِّئَاتِهِمْ حَسَنَاتٍ ۗ وَكَانَ اللَّهُ غَفُورًا رَّحِيمًا ۝٧٠
📖 ಅನುವಾದ ಆಯತ್ 70
ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದವನಿಗೆ ಅಲ್ಲಾಹನು ಅವರ ಕೆಡುಕುಗಳನ್ನು ಒಳಿತುಗಳೊಂದಿಗೆ ಮಾರ್ಪಡಿಸುತ್ತಾನೆ. ಮತ್ತು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
وَمَن تَابَ وَعَمِلَ صَالِحًا فَإِنَّهُ يَتُوبُ إِلَى اللَّهِ مَتَابًا ۝٧١
📖 ಅನುವಾದ ಆಯತ್ 71
ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ.
وَالَّذِينَ لَا يَشْهَدُونَ الزُّورَ وَإِذَا مَرُّوا بِاللَّغْوِ مَرُّوا كِرَامًا ۝٧٢
📖 ಅನುವಾದ ಆಯತ್ 72
ಅವರು ಸುಳ್ಳು ಸಾಕ್ಷö್ಯವಹಿಸುವುದಿಲ್ಲ ಹಾಗೂ ಅವರು ಯಾವುದಾದರೂ ವ್ಯರ್ಥ ವಿನೋದಗಳ ಮುಂದಿನಿAದ ಹಾದು ಹೋದರೆ ಸಭ್ಯತೆಯೊಂದಿಗೆ ಹಾದು ಹೋಗುತ್ತಾರೆ.
وَالَّذِينَ إِذَا ذُكِّرُوا بِآيَاتِ رَبِّهِمْ لَمْ يَخِرُّوا عَلَيْهَا صُمًّا وَعُمْيَانًا ۝٧٣
📖 ಅನುವಾದ ಆಯತ್ 73
ಅವರಿಗೆ ತಮ್ಮ ಪ್ರಭುವಿನ ಸೂಕ್ತಿಗಳನ್ನು ಓದಿ ಹೇಳಲಾದರೆ ಕಿವುಡರೂ, ಅಂಧರೂ ಆಗಿ ಅವುಗಳ ಮುಂದೆ ಎರಗುವುದಿಲ್ಲ.
وَالَّذِينَ يَقُولُونَ رَبَّنَا هَبْ لَنَا مِنْ أَزْوَاجِنَا وَذُرِّيَّاتِنَا قُرَّةَ أَعْيُنٍ وَاجْعَلْنَا لِلْمُتَّقِينَ إِمَامًا ۝٧٤
📖 ಅನುವಾದ ಆಯತ್ 74
ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮಗೆ ನಮ್ಮ ಪತ್ನಿಯರಿಂದಲೂ, ನಮ್ಮ ಸಂತತಿಗಳಿAದಲೂ ಕಣ್ಣುಗಳಿಗೆ ತಂಪನ್ನು ದಯಪಾಲಿಸು ಮತ್ತು ನಮ್ಮನ್ನು ಭಯಭಕ್ತಿಯುಳ್ಳವರ ಮುಂದಾಳುಗಳನ್ನಾಗಿ ಮಾಡು.
أُولَٰئِكَ يُجْزَوْنَ الْغُرْفَةَ بِمَا صَبَرُوا وَيُلَقَّوْنَ فِيهَا تَحِيَّةً وَسَلَامًا ۝٧٥
📖 ಅನುವಾದ ಆಯತ್ 75
ಅವರಿಗೇ ತಮ್ಮ ಸಹನೆ ವಹಿಸಿದುದರ ಬದಲಿಗೆ ಸ್ವರ್ಗದ ಉನ್ನತ ಅಂತಸ್ತಿನ ಪ್ರತಿಫಲ ನೀಡಲಾಗುವುದು ಮತ್ತು ಅಲ್ಲಿ ಅವರಿಗೆ ಸಲಾಮ್‌ಗಳನ್ನು ತಲುಪಿಸಲಾಗುವುದು.
خَالِدِينَ فِيهَا ۚ حَسُنَتْ مُسْتَقَرًّا وَمُقَامًا ۝٧٦
📖 ಅನುವಾದ ಆಯತ್ 76
ಅದರಲ್ಲವರು ಶಾಶ್ವತವಾಗಿರುವರು. ಅದು ಉತ್ತಮ ತಂಗುದಾಣವೂ, ಉತ್ತಮ ಸ್ಥಾನವೂ ಆಗಿದೆ.
قُلْ مَا يَعْبَأُ بِكُمْ رَبِّي لَوْلَا دُعَاؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًا ۝٧٧
📖 ಅನುವಾದ ಆಯತ್ 77
ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು ಸುಳ್ಳಾಗಿಸಿರುತ್ತೀರಿ. ಇನ್ನು ಬಹು ಬೇಗನೇ ಅದರ ಶಿಕ್ಷೆಯು ನಿಮಗೆ ತಲುಪಲಿದೆ.
← 24 ಅಲ್-ಫುರ್ಕಾನ್ (25/114) 26 →
ಓದಿ ಸೂರಾ ಅಲ್-ಫುರ್ಕಾನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

25الفرقان Al-Furqan 📚 77 ಆಯತ್ مكية

ಆಯತ್‌ವಾರು – ಸೂರಾ ಅಲ್-ಫುರ್ಕಾನ್ — 77 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers