ಅಲ್-ಬಕರಾ · 182/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
فَمَنْ خَافَ مِن مُّوصٍ جَنَفًا أَوْ إِثْمًا فَأَصْلَحَ بَيْنَهُمْ فَلَا إِثْمَ عَلَيْهِ ۚ إِنَّ اللَّهَ غَفُورٌ رَّحِيمٌ ۝١٨٢
Faman khaafa mim moosin janafan aw isman fa aslaha bainahum falaaa ismaa `alayh; innal laaha Ghafooru Raheem
📖 ಕನ್ನಡ ಅರ್ಥ
ಇನ್ನು ಉಯಿಲುಗಾರನಿಂದ ಪಕ್ಷಪಾತ ಅಥವಾ ಪಾಪದ ನಿಮಿತ್ತ ಭಯಪಟ್ಟು ಯಾರಾದರೂ ಅವರ ನಡುವೆ ಸುಧಾರಣೆ ಮಾಡಿದರೆ ಅವನ ಮೇಲೆ ಯಾವುದೇ ದೋಷವಿರುವುದಿಲ್ಲ. ನಿಜವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 180-184 — ಸೂರಾ ಅಲ್-ಬಕರಾ

180كُتِبَ عَلَيْكُمْ إِذَا حَضَرَ أَحَدَكُمُ الْمَوْتُ إِن تَرَكَ خَيْرًا الْوَصِيَّةُ لِلْوَالِدَيْنِ وَالْأَقْرَبِينَ بِالْمَعْرُوفِ ۖ حَقًّا عَلَى الْمُتَّقِينَ
ನಿಮ್ಮಲ್ಲಿ ಯಾರಿಗಾದರೂ ಮರಣಾಸನ್ನವಾದಾಗ ಅವನು ಸಂಪತ್ತು ಬಿಟ್ಟು ಹೋಗುವುದಾದರೆ ಮಾತಾಪಿತರಿಗೂ, ಆಪ್ತ ಸಂಬAಧಿಕರಿಗೂ ಸದಾಚಾರದೊಂದಿಗೆ ಉಯಿಲು ಮಾಡುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ. ಇದು ಭಯಭಕ್ತಿಯುಳ್ಳವರ ಮೇಲೆ ಬಾಧ್ಯತೆಯಾಗಿದೆ.
181فَمَن بَدَّلَهُ بَعْدَمَا سَمِعَهُ فَإِنَّمَا إِثْمُهُ عَلَى الَّذِينَ يُبَدِّلُونَهُ ۚ إِنَّ اللَّهَ سَمِيعٌ عَلِيمٌ
ಅದನ್ನು ಆಲಿಸಿದ ನಂತರವೂ ಯಾರಾದರೂ ಅದನ್ನು ಬದಲಾಯಿಸಿದರೆ ಅದರ ಪಾಪವು ಅದನ್ನು ಬದಲಾಯಿಸಿದವನ ಮೇಲೆ ಮಾತ್ರ ಇರುವುದು. ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
182فَمَنْ خَافَ مِن مُّوصٍ جَنَفًا أَوْ إِثْمًا فَأَصْلَحَ بَيْنَهُمْ فَلَا إِثْمَ عَلَيْهِ ۚ إِنَّ اللَّهَ غَفُورٌ رَّحِيمٌ
ಇನ್ನು ಉಯಿಲುಗಾರನಿಂದ ಪಕ್ಷಪಾತ ಅಥವಾ ಪಾಪದ ನಿಮಿತ್ತ ಭಯಪಟ್ಟು ಯಾರಾದರೂ ಅವರ ನಡುವೆ ಸುಧಾರಣೆ ಮಾಡಿದರೆ ಅವನ ಮೇಲೆ ಯಾವುದೇ ದೋಷವಿರುವುದಿಲ್ಲ. ನಿಜವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
183يَا أَيُّهَا الَّذِينَ آمَنُوا كُتِبَ عَلَيْكُمُ الصِّيَامُ كَمَا كُتِبَ عَلَى الَّذِينَ مِن قَبْلِكُمْ لَعَلَّكُمْ تَتَّقُونَ
ಓ ಸತ್ಯವಿಶ್ವಾಸಿಗಳೇ, ಉಪವಾಸ ವ್ರತವನ್ನು ನಿಮ್ಮ ಹಿಂದಿನವರ ಮೇಲೆ ಕಡ್ಡಾಯಗೊಳಿಸಲಾದಂತೆ ನಿಮ್ಮ ಮೇಲೂ ಕಡ್ಡಾಯಗೊಳಿಸಲಾಗಿದೆ. ನೀವು ಭಯಭಕ್ತಿ ಹೊಂದಲೆAದು.
184أَيَّامًا مَّعْدُودَاتٍ ۚ فَمَن كَانَ مِنكُم مَّرِيضًا أَوْ عَلَىٰ سَفَرٍ فَعِدَّةٌ مِّنْ أَيَّامٍ أُخَرَ ۚ وَعَلَى الَّذِينَ يُطِيقُونَهُ فِدْيَةٌ طَعَامُ مِسْكِينٍ ۖ فَمَن تَطَوَّعَ خَيْرًا فَهُوَ خَيْرٌ لَّهُ ۚ وَأَن تَصُومُوا خَيْرٌ لَّكُمْ ۖ إِن كُنتُمْ تَعْلَمُونَ
ಬೆರಳೆಣಿಕೆಯ ಕೆಲವು ದಿನಗಳು ಮಾತ್ರವಾಗಿದೆ. ಇನ್ನು ನಿಮ್ಮಲ್ಲಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಸಂಖ್ಯೆಯನ್ನು ಪೂರ್ತಿಗೊಳಿಸಲಿ ಮತ್ತು ಸಾಮರ್ಥ್ಯವಿಲ್ಲದೆ ಉಪವಾಸವಿರದವರೂ ಪ್ರಾಯಶ್ಚಿತವಾಗಿ ಒಬ್ಬ ನಿರ್ಗತಿಕನಿಗೆ ಆಹಾರವನ್ನು ನೀಡಲಿ. ಇನ್ನು ಯಾರು ಸ್ವಇಚ್ಛೆಯಿಂದ ಒಳಿತಿನಲ್ಲಿ ಮುಂದೆ ಸಾಗುತ್ತಾನೋ ಅದು ಅವನ ಪಾಲಿಗೆ ಉತ್ತಮವಾಗಿರುವುದು. ನೀವು ಪ್ರಯಾಸಪಟ್ಟಾದರೂ- ಉಪವಾಸ ಆಚರಿಸುವುದೇ ನಿಮಗೆ ಅತ್ಯುತ್ತಮವಾಗಿರುತ್ತದೆ. ನೀವು ಅರಿಯುಳ್ಳವರಾಗಿದ್ದರೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
182ಆಯತ್

ಅನುವಾದ — ಅಲ್-ಬಕರಾ 182

ಸೂರಾ ಅಲ್-ಬಕರಾ ಆಯತ್ 182 - ಓದಿ, ಆಲಿಸಿ, ಅನುವಾದ, ಕನ್ನಡ : ಇನ್ನು ಉಯಿಲುಗಾರನಿಂದ ಪಕ್ಷಪಾತ ಅಥವಾ ಪಾಪದ ನಿಮಿತ್ತ ಭಯಪಟ್ಟು ಯಾರಾದರೂ ಅವರ ನಡುವೆ…

ಸೂರಾ ಆಯತ್ 182/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 180–184. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers