ಅನ್-ನಿಸಾ · 103/176
ಅನುವಾದ ಉಚ್ಚಾರಣೆ — ಸೂರಾ ಅನ್-ನಿಸಾ
فَإِذَا قَضَيْتُمُ الصَّلَاةَ فَاذْكُرُوا اللَّهَ قِيَامًا وَقُعُودًا وَعَلَىٰ جُنُوبِكُمْ ۚ فَإِذَا اطْمَأْنَنتُمْ فَأَقِيمُوا الصَّلَاةَ ۚ إِنَّ الصَّلَاةَ كَانَتْ عَلَى الْمُؤْمِنِينَ كِتَابًا مَّوْقُوتًا ۝١٠٣
Fa izaa qadaitumus Salaata fazkurul laaha qiyaamanw wa qu`oodanw wa `alaa junoobikum; fa izat maanantum fa aqeemus Salaah; innas Salaata kaanat `alal mu`mineena kitaabam mawqootaa
📖 ಕನ್ನಡ ಅರ್ಥ
ನೀವು ನಮಾಝ್ ನಿರ್ವಹಿಸಿದ ನಂತರ ನಿಂತುಕೊAಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹನನ್ನು ಸ್ಮರಿಸಿರಿ. ಮತ್ತು ಶಾಂತತೆ ಪ್ರಾಪ್ತವಾದರೆ ನಮಾಝನ್ನು ಕ್ರಮ ಪ್ರಕಾರ ನಿರ್ವಹಿಸಿರಿ. ಖಂಡಿತವಾಗಿಯು ನಮಾಝನ್ನು ಸತ್ಯವಿಶ್ವಾಸಿಗಳ ಮೇಲೆ ನಿಶ್ಚಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.

🎧 ಆಲಿಸಿ


📜 ಆಯತ್ 101-105 — ಸೂರಾ ಅನ್-ನಿಸಾ

101وَإِذَا ضَرَبْتُمْ فِي الْأَرْضِ فَلَيْسَ عَلَيْكُمْ جُنَاحٌ أَن تَقْصُرُوا مِنَ الصَّلَاةِ إِنْ خِفْتُمْ أَن يَفْتِنَكُمُ الَّذِينَ كَفَرُوا ۚ إِنَّ الْكَافِرِينَ كَانُوا لَكُمْ عَدُوًّا مُّبِينًا
ನೀವು ಪ್ರಯಾಣಿಸುತ್ತಿರುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆ ಕೊಡುವರೆಂಬ ಭಯವಿದ್ದಲ್ಲಿ ನೀವು ನಮಾಝನ್ನು ಸಂಕ್ಷಿಪ್ತಗೊಳಿಸಿ ನಿರ್ವಹಿಸುವುದರಲ್ಲಿ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಖಂಡಿತವಾಗಿಯು ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ.
102وَإِذَا كُنتَ فِيهِمْ فَأَقَمْتَ لَهُمُ الصَّلَاةَ فَلْتَقُمْ طَائِفَةٌ مِّنْهُم مَّعَكَ وَلْيَأْخُذُوا أَسْلِحَتَهُمْ فَإِذَا سَجَدُوا فَلْيَكُونُوا مِن وَرَائِكُمْ وَلْتَأْتِ طَائِفَةٌ أُخْرَىٰ لَمْ يُصَلُّوا فَلْيُصَلُّوا مَعَكَ وَلْيَأْخُذُوا حِذْرَهُمْ وَأَسْلِحَتَهُمْ ۗ وَدَّ الَّذِينَ كَفَرُوا لَوْ تَغْفُلُونَ عَنْ أَسْلِحَتِكُمْ وَأَمْتِعَتِكُمْ فَيَمِيلُونَ عَلَيْكُم مَّيْلَةً وَاحِدَةً ۚ وَلَا جُنَاحَ عَلَيْكُمْ إِن كَانَ بِكُمْ أَذًى مِّن مَّطَرٍ أَوْ كُنتُم مَّرْضَىٰ أَن تَضَعُوا أَسْلِحَتَكُمْ ۖ وَخُذُوا حِذْرَكُمْ ۗ إِنَّ اللَّهَ أَعَدَّ لِلْكَافِرِينَ عَذَابًا مُّهِينًا
ಪೈಗಂಬರರೇ, ನೀವು ಅವರ (ಮುಜಾಹಿದ್‌ಗಳ) ಜೊತೆಗಿದ್ದು, ಅವರ ನಮಾಝ್‌ನ ನೇತೃತ್ವ ನಿರ್ವಹಿಸುತ್ತಿರುವಾಗ ಅವರಲ್ಲಿ ಒಂದು ಗುಂಪು ನಿಮ್ಮ ಹಿಂದೆ ಬಂದು ನಿಲ್ಲಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್(ಸಾಷ್ಟಾಂಗ)ಮುಗಿಸಿದ ನಂತರ ಸರಿದು ನಿಂತು ನಮಾಝ್ ಮಾಡಿರದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ಮಾಡಲಿ. ಅವರು ಎಚ್ಚರ ವಹಿಸಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಆಯುಧಗಳನ್ನು ಮತ್ತು ಸಾವiಗ್ರಿಗಳ ಕುರಿತು ಅಲಕ್ಷö್ಯರಾದರೆ, ನಿಮ್ಮ ಮೇಲೆ ಒಮ್ಮೇಲೆ ಮುಗಿಬೀಳಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನಿಮಗೆ ಮಳೆ ಅಥವಾ ರೋಗದ ನಿಮಿತ್ತ ತೊಂದರೆಯಿದ್ದರೆ ನಿಮ್ಮ ಆಯುಧಗಳನ್ನು ಕೆಳಗಿಡುವುದುರಲ್ಲಿ ದೋಷವಿಲ್ಲ ಮತ್ತು ನೀವು ನಿಮ್ಮ ಎಚ್ಚರ ವಹಿಸಿರಿ ಖಂಡಿತವಾಗಿಯು ಅಲ್ಲಾಹನು ಆ ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.
103فَإِذَا قَضَيْتُمُ الصَّلَاةَ فَاذْكُرُوا اللَّهَ قِيَامًا وَقُعُودًا وَعَلَىٰ جُنُوبِكُمْ ۚ فَإِذَا اطْمَأْنَنتُمْ فَأَقِيمُوا الصَّلَاةَ ۚ إِنَّ الصَّلَاةَ كَانَتْ عَلَى الْمُؤْمِنِينَ كِتَابًا مَّوْقُوتًا
ನೀವು ನಮಾಝ್ ನಿರ್ವಹಿಸಿದ ನಂತರ ನಿಂತುಕೊAಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹನನ್ನು ಸ್ಮರಿಸಿರಿ. ಮತ್ತು ಶಾಂತತೆ ಪ್ರಾಪ್ತವಾದರೆ ನಮಾಝನ್ನು ಕ್ರಮ ಪ್ರಕಾರ ನಿರ್ವಹಿಸಿರಿ. ಖಂಡಿತವಾಗಿಯು ನಮಾಝನ್ನು ಸತ್ಯವಿಶ್ವಾಸಿಗಳ ಮೇಲೆ ನಿಶ್ಚಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.
104وَلَا تَهِنُوا فِي ابْتِغَاءِ الْقَوْمِ ۖ إِن تَكُونُوا تَأْلَمُونَ فَإِنَّهُمْ يَأْلَمُونَ كَمَا تَأْلَمُونَ ۖ وَتَرْجُونَ مِنَ اللَّهِ مَا لَا يَرْجُونَ ۗ وَكَانَ اللَّهُ عَلِيمًا حَكِيمًا
ಶತ್ರುಗಳನ್ನು ಬೆನ್ನಟ್ಟಿ ಹೋಗುವ ವಿಚಾರದಲ್ಲಿ ನೀವು ಎದೆಗುಂದಬಾರದು. ನೀವು ನೋವು ಅನುಭವಿಸಿದಂತೆ ಅವರೂ ನೋವು ಅನುಭವಿಸುತ್ತಾರೆ. ಮತ್ತು ಅವರು ನಿರೀಕ್ಷಿಸದ ಅನುಗ್ರಹವನ್ನು ನೀವೂ ಅಲ್ಲಾಹನಿಂದ (ಅವನ ಸನ್ನಿಧಿ ಹಾಗೂ ಸ್ವರ್ಗವನ್ನು) ನಿರೀಕ್ಷಿಸುತ್ತೀರಿ ಮತ್ತು ಅಲ್ಲಾಹನು ಸರ್ವಜ್ಞನೂ, ಯುಕ್ತಿಪೂರ್ಣನೂ ಆಗಿದ್ದಾನೆ.
105إِنَّا أَنزَلْنَا إِلَيْكَ الْكِتَابَ بِالْحَقِّ لِتَحْكُمَ بَيْنَ النَّاسِ بِمَا أَرَاكَ اللَّهُ ۚ وَلَا تَكُن لِّلْخَائِنِينَ خَصِيمًا
ಇದೇಕೆಂದರೆ ನೀವು (ಓ ಪೈಗಂಬರರೇ) ಅಲ್ಲಾಹನು ತೋರಿಸಿಕೊಟ್ಟ ಪ್ರಕಾರ ಜನರ ನಡುವೆ ತೀರ್ಪನ್ನು ನೀಡಲೆಂದು ನಾವು ಗ್ರಂಥವನ್ನು ನಿಮ್ಮೆಡೆಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ನೀವು ಮೋಸಗಾರರಿಗೆ ಬೆಂಬಲಿಗನಾಗಬೇಡಿರಿ.
ಅನ್-ನಿಸಾಕುರಾನ್ ಸೂಚಿ
176ಆಯತ್
MedinanRevelation
103ಆಯತ್

ಅನುವಾದ — ಅನ್-ನಿಸಾ 103

ಸೂರಾ ಅನ್-ನಿಸಾ ಆಯತ್ 103 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನಮಾಝ್ ನಿರ್ವಹಿಸಿದ ನಂತರ ನಿಂತುಕೊAಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹನನ್ನು ಸ್ಮರಿಸಿರಿ.…

ಸೂರಾ ಆಯತ್ 103/176 — ಸೂರಾ ಅನ್-ನಿಸಾ النساء (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಿಸಾ ಆಲಿಸಿ, ಸೂರಾ ಅನ್-ನಿಸಾ ಅನುವಾದ, ಸೂರಾ ಅನ್-ನಿಸಾ mp3, ಸೂರಾ ಅನ್-ನಿಸಾ pdf. ಆಯತ್ 101–105. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers