ಅಲ್-ಬಕರಾ · 216/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
كُتِبَ عَلَيْكُمُ الْقِتَالُ وَهُوَ كُرْهٌ لَّكُمْ ۖ وَعَسَىٰ أَن تَكْرَهُوا شَيْئًا وَهُوَ خَيْرٌ لَّكُمْ ۖ وَعَسَىٰ أَن تُحِبُّوا شَيْئًا وَهُوَ شَرٌّ لَّكُمْ ۗ وَاللَّهُ يَعْلَمُ وَأَنتُمْ لَا تَعْلَمُونَ ٢١٦
Transliteration
Kutiba alaikumulqitaalu wa huwa kurhullakum wa `asaaa an takrahoo shai`anw wa huwa khairullakum wa `asaaa an tuhibbo shai`anw wa huwa sharrullakum; wallaahu ya`lamu wa antum laa ta`lamoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಧರ್ಮ ಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ, ನಿಮಗದನ್ನು ಶಾಸನಗೊಳಿಸಲಾಗಿದೆ. ನೀವು ಒಂದು ವಸ್ತುವನ್ನು ಅಸಹ್ಯ ಪಡುತ್ತೀರಾ ಆದರೆ ಅದು ನಿಮ್ಮ ಪಾಲಿಗೆ ಒಳಿತಾಗಿರಬಹುದು. ಮತ್ತು ನೀವು ಒಂದು ವಸ್ತುವನ್ನು ಇಷ್ಟಪಡುತ್ತೀರಾದರೆ ಅದು ನಿಮ್ಮ ಪಾಲಿಗೆ ಹಾನಿಕರವಾಗಿರಬಹುದು. ಅಲ್ಲಾಹನು ಅರಿಯುತ್ತಾನೆ. ಮತ್ತು ನೀವು ಅರಿಯದವರಾಗಿದ್ದೀರಿ.
Additional reference in தமிழ்
🎧 ಆಲಿಸಿ
📜 ಆಯತ್ 214-218 — ಸೂರಾ ಅಲ್-ಬಕರಾ
214أَمْ حَسِبْتُمْ أَن تَدْخُلُوا الْجَنَّةَ وَلَمَّا يَأْتِكُم مَّثَلُ الَّذِينَ خَلَوْا مِن قَبْلِكُم ۖ مَّسَّتْهُمُ الْبَأْسَاءُ وَالضَّرَّاءُ وَزُلْزِلُوا حَتَّىٰ يَقُولَ الرَّسُولُ وَالَّذِينَ آمَنُوا مَعَهُ مَتَىٰ نَصْرُ اللَّهِ ۗ أَلَا إِنَّ نَصْرَ اللَّهِ قَرِيبٌ
(ಓ ಸತ್ಯವಿಶ್ವಾಸಿಗಳೇ) ನಿಮ್ಮ ಪೂರ್ವಿಕರಿಗೆ ಬಂದAತಹಾ ಸ್ಥಿತಿಯು (ಪರೀಕ್ಷೆ) ನಿಮಗೂ ಬರದೆ ಸ್ವರ್ಗವನ್ನು ಪ್ರವೇಶಿಸಬಿಡಬಹುದೆಂದು ನೀವು ಭಾವಿಸಿಕೊಂಡಿದ್ದೀರಾ? ವಸ್ತುತಃ ಅವರನ್ನು, ದಟ್ಟ ದಾರಿದ್ರö್ಯವೂ, ರೋಗರುಜಿನವೂ ಬಾಧಿಸಿಬಿಟ್ಟಿದ್ದವು. ಮತ್ತು ಸಂದೇಶವಾಹಕರು ಹಾಗೂ ಅವರ ಜೊತೆಯಿದ್ದಂತಹ ಸತ್ಯವಿಶ್ವಾಸಿಗಳು ಅಲ್ಲಾಹನ ಸಹಾಯವು ಯಾವಾಗ ಬರುತ್ತದೆ? ಎಂದು ಹೇಳುವಷ್ಟರ ಮಟ್ಟಿಗೆ ಅವರು ಕಂಪಿಸಲ್ಪಟ್ಟರು. ತಿಳಿದುಕೊಳ್ಳಿರಿ! ನಿಶ್ಚಯವಾಗಿಯು ಅಲ್ಲಾಹನ ಸಹಾಯವು ಸಮೀಪದಲ್ಲೇ ಇದೆ.
215يَسْأَلُونَكَ مَاذَا يُنفِقُونَ ۖ قُلْ مَا أَنفَقْتُم مِّنْ خَيْرٍ فَلِلْوَالِدَيْنِ وَالْأَقْرَبِينَ وَالْيَتَامَىٰ وَالْمَسَاكِينِ وَابْنِ السَّبِيلِ ۗ وَمَا تَفْعَلُوا مِنْ خَيْرٍ فَإِنَّ اللَّهَ بِهِ عَلِيمٌ
ಓ ಪೈಗಂಬರರೇ, ಏನನ್ನು ಖರ್ಚು ಮಾಡಬೇಕೆಂದು ಜನರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ; ನೀವು ಖರ್ಚು ಮಾಡಿದಂತಹ ಸಂಪತ್ತು (ದಾನಧರ್ಮ) ಮಾತಾಪಿತರಿಗೂ, ಆಪ್ತಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ವಿಪ್ಪತ್ತಿಗೀಡಾದ ಪ್ರಯಾಣಿಕರಿಗೂ, ತಲುಪಲಿ ಮತ್ತು ನೀವು ಯಾವುದೇ ಒಳಿತನ್ನು ಮಾಡಿರಲಿ, ಖಂಡಿತವಾಗಿಯು ಅಲ್ಲಾಹನು ಅದರ ಕುರಿತು ಅರಿಯುಳ್ಳವನಾಗಿದ್ದಾನೆ.
216كُتِبَ عَلَيْكُمُ الْقِتَالُ وَهُوَ كُرْهٌ لَّكُمْ ۖ وَعَسَىٰ أَن تَكْرَهُوا شَيْئًا وَهُوَ خَيْرٌ لَّكُمْ ۖ وَعَسَىٰ أَن تُحِبُّوا شَيْئًا وَهُوَ شَرٌّ لَّكُمْ ۗ وَاللَّهُ يَعْلَمُ وَأَنتُمْ لَا تَعْلَمُونَ
ಧರ್ಮ ಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ, ನಿಮಗದನ್ನು ಶಾಸನಗೊಳಿಸಲಾಗಿದೆ. ನೀವು ಒಂದು ವಸ್ತುವನ್ನು ಅಸಹ್ಯ ಪಡುತ್ತೀರಾ ಆದರೆ ಅದು ನಿಮ್ಮ ಪಾಲಿಗೆ ಒಳಿತಾಗಿರಬಹುದು. ಮತ್ತು ನೀವು ಒಂದು ವಸ್ತುವನ್ನು ಇಷ್ಟಪಡುತ್ತೀರಾದರೆ ಅದು ನಿಮ್ಮ ಪಾಲಿಗೆ ಹಾನಿಕರವಾಗಿರಬಹುದು. ಅಲ್ಲಾಹನು ಅರಿಯುತ್ತಾನೆ. ಮತ್ತು ನೀವು ಅರಿಯದವರಾಗಿದ್ದೀರಿ.
217يَسْأَلُونَكَ عَنِ الشَّهْرِ الْحَرَامِ قِتَالٍ فِيهِ ۖ قُلْ قِتَالٌ فِيهِ كَبِيرٌ ۖ وَصَدٌّ عَن سَبِيلِ اللَّهِ وَكُفْرٌ بِهِ وَالْمَسْجِدِ الْحَرَامِ وَإِخْرَاجُ أَهْلِهِ مِنْهُ أَكْبَرُ عِندَ اللَّهِ ۚ وَالْفِتْنَةُ أَكْبَرُ مِنَ الْقَتْلِ ۗ وَلَا يَزَالُونَ يُقَاتِلُونَكُمْ حَتَّىٰ يَرُدُّوكُمْ عَن دِينِكُمْ إِنِ اسْتَطَاعُوا ۚ وَمَن يَرْتَدِدْ مِنكُمْ عَن دِينِهِ فَيَمُتْ وَهُوَ كَافِرٌ فَأُولَٰئِكَ حَبِطَتْ أَعْمَالُهُمْ فِي الدُّنْيَا وَالْآخِرَةِ ۖ وَأُولَٰئِكَ أَصْحَابُ النَّارِ ۖ هُمْ فِيهَا خَالِدُونَ
ಆದರಣೀಯ ತಿಂಗಳಲ್ಲಿ ಯುದ್ಧ ಮಾಡುವುದರ ಕುರಿತು ಅವರು ನಿಮ್ಮೊಡನೆ ಕೇಳುತ್ತಾರೆ? ಹೇಳಿರಿ! ಅವುಗಳಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿರುತ್ತದೆ. ಆದರೆ ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದು ಹಾಗೂ ಅವನಲ್ಲಿ ಅವಿಶ್ವಾಸ ತಾಳುವುದು ಮತ್ತು ಮಸ್ಜಿದುಲ್ ಹರಾಮ್‌ನಿಂದ ತಡೆಯುವುದು ಮತ್ತು ಅಲ್ಲಿನ (ಮಕ್ಕಾ) ನಿವಾಸಿಗಳನ್ನು ಅಲ್ಲಿಂದ ಹೊರ ಹಾಕುವುದು ಅಲ್ಲಾಹನ ಬಳಿ ಅದಕ್ಕಿಂತಲೂ ಗಂಭೀರ ಅಪರಾಧವಾಗಿರುತ್ತದೆ ಮತ್ತು ಕ್ಷೆÆÃಭೆ ಕೊಲೆಗಿಂತಲೂ ಗಂಭೀರ ಅಪರಾಧವಾಗಿರುತ್ತದೆ. ತಿಳಿದಿರಲೀ ! ಎಲ್ಲಿಯವರೆಗೆ ಅಂದರೆ ಅವರಿಗೆ ಸಾಧ್ಯವಾಗುವುದಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ಅವರು ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ಮತ್ತು ನಿಮ್ಮ ಪೈಕಿ ಯಾರು ತನ್ನ ಧರ್ಮದಿಂದ ವಿಮುಖನಾಗಿ ಸತ್ಯನಿಷೇಧಿಯಾಗಿರುವ ಸ್ಥಿತಿಯಲ್ಲಿ ಮರಣ ಹೊಂದುತ್ತಾರೋ ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿಬಿಡುವುವು ಮತ್ತು ಅವರು ನರಕಾಗ್ನಿಯವರಾಗಿರುವರು ಮತ್ತು ನರಕದಲ್ಲೇ ಶಾಶ್ವತರಾಗಿರುವರು.
218إِنَّ الَّذِينَ آمَنُوا وَالَّذِينَ هَاجَرُوا وَجَاهَدُوا فِي سَبِيلِ اللَّهِ أُولَٰئِكَ يَرْجُونَ رَحْمَتَ اللَّهِ ۚ وَاللَّهُ غَفُورٌ رَّحِيمٌ
ನಿಶ್ಚಯವಾಗಿಯು ಸತ್ಯವಿಶ್ವಾಸವಿರಿಸಿದವರು, (ಮನೆಮಾರು ಬಿಟ್ಟು) ವಲಸೆ ಹೋದವರು, ಅಲ್ಲಾಹನ ಮಾರ್ಗದಲ್ಲಿ ಹೋರಾಟ ಮಾಡಿದವರೇ ಅಲ್ಲಾಹನ ಕಾರುಣ್ಯದ ನಿರೀಕ್ಷೆಯಲ್ಲಿರುವವರು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯು ಆಗಿದ್ದಾನೆ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
216ಆಯತ್
ಅನುವಾದ — ಅಲ್-ಬಕರಾ 216
ಸೂರಾ ಅಲ್-ಬಕರಾ ಆಯತ್ 216 - ಓದಿ, ಆಲಿಸಿ, ಅನುವಾದ, ಕನ್ನಡ : ಧರ್ಮ ಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ, ನಿಮಗದನ್ನು ಶಾಸನಗೊಳಿಸಲಾಗಿದೆ. ನೀವು ಒಂದು ವಸ್ತುವನ್ನು ಅಸಹ್ಯ…ಸೂರಾ ಆಯತ್ 216/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 214–218. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








