ಅಲ್-ಹುಜುರಾತ್ · 7/18
ಅನುವಾದ ಉಚ್ಚಾರಣೆ — ಸೂರಾ ಅಲ್-ಹುಜುರಾತ್
وَاعْلَمُوا أَنَّ فِيكُمْ رَسُولَ اللَّهِ ۚ لَوْ يُطِيعُكُمْ فِي كَثِيرٍ مِّنَ الْأَمْرِ لَعَنِتُّمْ وَلَٰكِنَّ اللَّهَ حَبَّبَ إِلَيْكُمُ الْإِيمَانَ وَزَيَّنَهُ فِي قُلُوبِكُمْ وَكَرَّهَ إِلَيْكُمُ الْكُفْرَ وَالْفُسُوقَ وَالْعِصْيَانَ ۚ أُولَٰئِكَ هُمُ الرَّاشِدُونَ ۝٧
Wa`lamooo anna feekum Rasoolal laah; law yutee`ukum fee kaseerim minal amrila`anittum wa laakinnal laaha habbaba ilaikumul eemaana wa zaiyanahoo fee quloobikum wa karraha ilaikumul kufra walfusooqa wal`isyaan; ulaaaika humur raashidoon
📖 ಕನ್ನಡ ಅರ್ಥ
ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು ಅನುಸರಿಸುತ್ತಿದ್ದರೆ ನೀವು ಸಂಕಷ್ಟಕ್ಕೀಡಾಗುತ್ತಿದ್ದಿರಿ. ಆದರೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಮಗೆ ಪ್ರಿಯಗೊಳಿಸಿದನು ಹಾಗು ಅದನ್ನು ನಿಮ್ಮ ಹೃದಯಗಳಲ್ಲಿ ಅಲಂಕರಿಸಿದನು ಮತ್ತು ಸತ್ಯನಿಷೇಧವನ್ನು, ದುರಾಚಾರವನ್ನು ಮತ್ತು ಆಜ್ಞೋಲ್ಲಂಘನೆಯನ್ನು ನಿಮ್ಮ ದೃಷ್ಟಿಯಲ್ಲಿ ಅಪ್ರಿಯವನ್ನಾಗಿ ಮಾಡಿದನು, ಅಂತಹವರೇ ಸನ್ಮಾರ್ಗ ಪ್ರಾಪ್ತರು.

🎧 ಆಲಿಸಿ


📜 ಆಯತ್ 5-9 — ಸೂರಾ ಅಲ್-ಹುಜುರಾತ್

5وَلَوْ أَنَّهُمْ صَبَرُوا حَتَّىٰ تَخْرُجَ إِلَيْهِمْ لَكَانَ خَيْرًا لَّهُمْ ۚ وَاللَّهُ غَفُورٌ رَّحِيمٌ
ನೀವು ಅವರ ಬಳಿ ಹೊರಟು ಬರುವತನಕ ಅವರು ತಾಳ್ಮೆ ವಹಿಸಿದ್ದರೆ ಅದುವೇ ಅವರಿಗೆ ಅತ್ಯುತ್ತಮವಾಗಿತ್ತು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
6يَا أَيُّهَا الَّذِينَ آمَنُوا إِن جَاءَكُمْ فَاسِقٌ بِنَبَإٍ فَتَبَيَّنُوا أَن تُصِيبُوا قَوْمًا بِجَهَالَةٍ فَتُصْبِحُوا عَلَىٰ مَا فَعَلْتُمْ نَادِمِينَ
ಓ ಸತ್ಯವಿಶ್ವಾಸಿಗಳೇ, ನಿಮ್ಮ ಬಳಿ ದುಷ್ಟನೂಬ್ಬನು ಯಾವುದಾದರು ಸುದ್ದಿಯನ್ನು ತಂದರೆ ನೀವು ಚೆನ್ನಾಗಿ ಪರಿಶೀಲಿಸಿರಿ, ನೀವು ಒಂದು ಜನತೆಗೆ ಅಜ್ಞಾನದಿಂದ ಹಾನಿಯನ್ನುಂಟು ಮಾಡಿ, ಆ ಬಳಿಕ ನೀವು ಮಾಡಿದ ಕೃತ್ಯಕ್ಕೆ ಖೇದ ಪಡಬೇಕಾದೀತು.
7وَاعْلَمُوا أَنَّ فِيكُمْ رَسُولَ اللَّهِ ۚ لَوْ يُطِيعُكُمْ فِي كَثِيرٍ مِّنَ الْأَمْرِ لَعَنِتُّمْ وَلَٰكِنَّ اللَّهَ حَبَّبَ إِلَيْكُمُ الْإِيمَانَ وَزَيَّنَهُ فِي قُلُوبِكُمْ وَكَرَّهَ إِلَيْكُمُ الْكُفْرَ وَالْفُسُوقَ وَالْعِصْيَانَ ۚ أُولَٰئِكَ هُمُ الرَّاشِدُونَ
ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು ಅನುಸರಿಸುತ್ತಿದ್ದರೆ ನೀವು ಸಂಕಷ್ಟಕ್ಕೀಡಾಗುತ್ತಿದ್ದಿರಿ. ಆದರೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಮಗೆ ಪ್ರಿಯಗೊಳಿಸಿದನು ಹಾಗು ಅದನ್ನು ನಿಮ್ಮ ಹೃದಯಗಳಲ್ಲಿ ಅಲಂಕರಿಸಿದನು ಮತ್ತು ಸತ್ಯನಿಷೇಧವನ್ನು, ದುರಾಚಾರವನ್ನು ಮತ್ತು ಆಜ್ಞೋಲ್ಲಂಘನೆಯನ್ನು ನಿಮ್ಮ ದೃಷ್ಟಿಯಲ್ಲಿ ಅಪ್ರಿಯವನ್ನಾಗಿ ಮಾಡಿದನು, ಅಂತಹವರೇ ಸನ್ಮಾರ್ಗ ಪ್ರಾಪ್ತರು.
8فَضْلًا مِّنَ اللَّهِ وَنِعْمَةً ۚ وَاللَّهُ عَلِيمٌ حَكِيمٌ
ಇದು ಅಲ್ಲಾಹನ ಅನುಗ್ರಹ ಮತ್ತು ಉಪಕಾರವಾಗಿದೆ, ಅಲ್ಲಾಹನು ಸರ್ವಜ್ಞಾನಿಯು ಯುಕ್ತಿ ಪೂರ್ಣನೂ ಆಗಿದ್ದಾನೆ.
9وَإِن طَائِفَتَانِ مِنَ الْمُؤْمِنِينَ اقْتَتَلُوا فَأَصْلِحُوا بَيْنَهُمَا ۖ فَإِن بَغَتْ إِحْدَاهُمَا عَلَى الْأُخْرَىٰ فَقَاتِلُوا الَّتِي تَبْغِي حَتَّىٰ تَفِيءَ إِلَىٰ أَمْرِ اللَّهِ ۚ فَإِن فَاءَتْ فَأَصْلِحُوا بَيْنَهُمَا بِالْعَدْلِ وَأَقْسِطُوا ۖ إِنَّ اللَّهَ يُحِبُّ الْمُقْسِطِينَ
ಸತ್ಯವಿಶ್ವಾಸಿಗಳ ಎರಡು ತಂಡಗಳು ಪರಸ್ಪರ ಜಗಳವಾಡಿದರೆ ನೀವು ಅವರಿಬ್ಬರ ನಡುವೆ ಸಂಧಾನ ಮಾಡಿರಿ, ಬಳಿಕ ಅವುಗಳಲ್ಲೊಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿಕ್ರಮತೋರಿದರೆ ನೀವು ಅತಿಕ್ರಮ ತೋರುತ್ತಿರುವ ಗುಂಪಿನೊAದಿಗೆ ಅದು ಅಲ್ಲಾಹನ ಆಜ್ಞೆಯೆಡೆಗೆ ಮರಳಿ ಬರುವವರೆಗೆ ಹೋರಾಡಿರಿ, ಇನ್ನುಅದು ಮರಳಿ ಬಂದರೆ ಅವರ ನಡುವೆ ನ್ಯಾಯದೊಂದಿಗೆ ಸಂಧಾನ ಮಾಡಿರಿ, ಹಾಗು ನ್ಯಾಯನೀತಿ ಪಾಲಿಸಿರಿ, ನಿಸ್ಸಂಶಯವಾಗಿಯು ಅಲ್ಲಾಹನು ನ್ಯಾಯ ಪಾಲಿಸುವವರನ್ನು ಇಷ್ಟಪಡುತ್ತಾನೆ.
ಅಲ್-ಹುಜುರಾತ್ಕುರಾನ್ ಸೂಚಿ
18ಆಯತ್
MedinanRevelation
7ಆಯತ್

ಅನುವಾದ — ಅಲ್-ಹುಜುರಾತ್ 7

ಸೂರಾ ಅಲ್-ಹುಜುರಾತ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು…

ಸೂರಾ ಆಯತ್ 7/18 — ಸೂರಾ ಅಲ್-ಹುಜುರಾತ್ الحجرات (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹುಜುರಾತ್ ಆಲಿಸಿ, ಸೂರಾ ಅಲ್-ಹುಜುರಾತ್ ಅನುವಾದ, ಸೂರಾ ಅಲ್-ಹುಜುರಾತ್ mp3, ಸೂರಾ ಅಲ್-ಹುಜುರಾತ್ pdf. ಆಯತ್ 5–9. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers