ಸೂರಾ ಅಲ್-ಇನ್ಫಿತಾರ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಇನ್ಫಿತಾರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (19 ಆಯತ್ — مكية). ಅಲ್-ಇನ್ಫಿತಾರ್ ಆಲಿಸಿ, ಅಲ್-ಇನ್ಫಿತಾರ್ ಅನುವಾದ, ಅಲ್-ಇನ್ಫಿತಾರ್ mp3, ಅಲ್-ಇನ್ಫಿತಾರ್ pdf.

ಸೂರಾ ಅಲ್-ಇನ್ಫಿತಾರ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
إِذَا السَّمَاءُ انفَطَرَتْ ۝١
📖 ಅನುವಾದ ಆಯತ್ 1
ಆಕಾಶವು ಬಿರಿದುಹೋಗುವಾಗ.
وَإِذَا الْكَوَاكِبُ انتَثَرَتْ ۝٢
📖 ಅನುವಾದ ಆಯತ್ 2
ನಕ್ಷತ್ರಗಳು ಚದುರಿ ಹೋಗುವಾಗ.
وَإِذَا الْبِحَارُ فُجِّرَتْ ۝٣
📖 ಅನುವಾದ ಆಯತ್ 3
ಸಮುದ್ರಗಳು ಉಕ್ಕಿ ಹರಿಯುವಾಗ.
وَإِذَا الْقُبُورُ بُعْثِرَتْ ۝٤
📖 ಅನುವಾದ ಆಯತ್ 4
ಗೋರಿಗಳು ಬುಡಮೇಲಾಗುವಾಗ.
عَلِمَتْ نَفْسٌ مَّا قَدَّمَتْ وَأَخَّرَتْ ۝٥
📖 ಅನುವಾದ ಆಯತ್ 5
ಆಗ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂಚಿತವಾಗಿ ಕಳುಹಿಸಿರುವ ಮತ್ತು ಹಿಂದೆ ಬಿಟ್ಟು ಬಂದಿರುವ ರ‍್ಮಗಳನ್ನು ಅರಿತುಕೊಳ್ಳುವನು.
يَا أَيُّهَا الْإِنسَانُ مَا غَرَّكَ بِرَبِّكَ الْكَرِيمِ ۝٦
📖 ಅನುವಾದ ಆಯತ್ 6
ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು ಯಾವುದು ?
الَّذِي خَلَقَكَ فَسَوَّاكَ فَعَدَلَكَ ۝٧
📖 ಅನುವಾದ ಆಯತ್ 7
ಅವನು ನಿನ್ನನ್ನು ಸೃಷ್ಟಿಸಿದನು, ಬಳಿಕ ನಿನ್ನನ್ನು ಸರಿಯಾದ ವಿಧದಲ್ಲಿರಿಸಿದನು, ಅನಂತರ ಸಂತುಲಿತ ಗೊಳಿಸಿದನು.
فِي أَيِّ صُورَةٍ مَّا شَاءَ رَكَّبَكَ ۝٨
📖 ಅನುವಾದ ಆಯತ್ 8
ಅವನು ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
كَلَّا بَلْ تُكَذِّبُونَ بِالدِّينِ ۝٩
📖 ಅನುವಾದ ಆಯತ್ 9
ಖಂಡಿತ ಇಲ್ಲ, ನೀವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿರುವಿರಿ.
وَإِنَّ عَلَيْكُمْ لَحَافِظِينَ ۝١٠
📖 ಅನುವಾದ ಆಯತ್ 10
ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.
كِرَامًا كَاتِبِينَ ۝١١
📖 ಅನುವಾದ ಆಯತ್ 11
ಅವರು ಆದರಣೀಯ ಬರಹಗಾರರಾಗಿದ್ದಾರೆ.
يَعْلَمُونَ مَا تَفْعَلُونَ ۝١٢
📖 ಅನುವಾದ ಆಯತ್ 12
ನೀವು ಮಾಡುತ್ತಿರುವುದೆಲ್ಲವನ್ನು ಅವರು ಅರಿಯುತ್ತಾರೆ.
إِنَّ الْأَبْرَارَ لَفِي نَعِيمٍ ۝١٣
📖 ಅನುವಾದ ಆಯತ್ 13
ಖಂಡಿತವಾಗಿಯೂ ಸತ್ರ‍್ಮಿಗಳು ಸುಖಾನುಗ್ರಹಗಳಲ್ಲಿರುವರು.
وَإِنَّ الْفُجَّارَ لَفِي جَحِيمٍ ۝١٤
📖 ಅನುವಾದ ಆಯತ್ 14
ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.
يَصْلَوْنَهَا يَوْمَ الدِّينِ ۝١٥
📖 ಅನುವಾದ ಆಯತ್ 15
ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸುವರು.
وَمَا هُمْ عَنْهَا بِغَائِبِينَ ۝١٦
📖 ಅನುವಾದ ಆಯತ್ 16
ಅವರಿಗೆ ಅದರಿಂದ ಮರೆಯಾಗಿರಲು ಸಾಧ್ಯವಾಗಲಾರದು.
وَمَا أَدْرَاكَ مَا يَوْمُ الدِّينِ ۝١٧
📖 ಅನುವಾದ ಆಯತ್ 17
(ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?
ثُمَّ مَا أَدْرَاكَ مَا يَوْمُ الدِّينِ ۝١٨
📖 ಅನುವಾದ ಆಯತ್ 18
ನಾನು ಪುನಃ (ಕೇಳುತ್ತೇನೆ) ಪ್ರತಿಫಲ ಮತ್ತು ಶಿಕ್ಷೆಯ ದಿನ ಎಂದರೆ ಏನೆಂದು ನಿಮಗೇನು ಗೊತ್ತು ?
يَوْمَ لَا تَمْلِكُ نَفْسٌ لِّنَفْسٍ شَيْئًا ۖ وَالْأَمْرُ يَوْمَئِذٍ لِّلَّهِ ۝١٩
📖 ಅನುವಾದ ಆಯತ್ 19
ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.
← 81 ಅಲ್-ಇನ್ಫಿತಾರ್ (82/114) 83 →
ಓದಿ ಸೂರಾ ಅಲ್-ಇನ್ಫಿತಾರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

82الإنفطار Al-Infitar 📚 19 ಆಯತ್ مكية

ಆಯತ್‌ವಾರು – ಸೂರಾ ಅಲ್-ಇನ್ಫಿತಾರ್ — 19 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers