ಸೂರಾ ಅಲ್-ಇನ್ಫಿತಾರ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಇನ್ಫಿತಾರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಇನ್ಫಿತಾರ್ ಅನುವಾದ. ಸೂರಾ ಅಲ್-ಇನ್ಫಿತಾರ್ (Meccan) 19 ಆಯತ್.
Related
More ಸೂರಾ PDF
ಸೂರಾ ಅಲ್-ಇನ್ಫಿತಾರ್

ﭑﭒﭓﭔ
82:1
ಆಕಾಶವು ಬಿರಿದುಹೋಗುವಾಗ.
ﭕﭖﭗﭘ
82:2
ನಕ್ಷತ್ರಗಳು ಚದುರಿ ಹೋಗುವಾಗ.
ﭙﭚﭛﭜ
82:3
ಸಮುದ್ರಗಳು ಉಕ್ಕಿ ಹರಿಯುವಾಗ.
ﭝﭞﭟﭠ
82:4
ಗೋರಿಗಳು ಬುಡಮೇಲಾಗುವಾಗ.
ﭡﭢﭣﭤﭥﭦ
82:5
ಆಗ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂಚಿತವಾಗಿ ಕಳುಹಿಸಿರುವ ಮತ್ತು ಹಿಂದೆ ಬಿಟ್ಟು ಬಂದಿರುವ ರ‍್ಮಗಳನ್ನು ಅರಿತುಕೊಳ್ಳುವನು.
ﭧﭨﭩﭪﭫﭬﭭ
82:6
ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು ಯಾವುದು ?
ﭮﭯﭰﭱﭲ
82:7
ಅವನು ನಿನ್ನನ್ನು ಸೃಷ್ಟಿಸಿದನು, ಬಳಿಕ ನಿನ್ನನ್ನು ಸರಿಯಾದ ವಿಧದಲ್ಲಿರಿಸಿದನು, ಅನಂತರ ಸಂತುಲಿತ ಗೊಳಿಸಿದನು.
ﭳﭴﭵﭶﭷﭸﭹ
82:8
ಅವನು ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
ﭺﭻﭼﭽﭾ
82:9
ಖಂಡಿತ ಇಲ್ಲ, ನೀವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿರುವಿರಿ.
ﭿﮀﮁﮂ
82:10
ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.
ﮃﮄﮅ
82:11
ಅವರು ಆದರಣೀಯ ಬರಹಗಾರರಾಗಿದ್ದಾರೆ.
ﮆﮇﮈﮉ
82:12
ನೀವು ಮಾಡುತ್ತಿರುವುದೆಲ್ಲವನ್ನು ಅವರು ಅರಿಯುತ್ತಾರೆ.
ﮊﮋﮌﮍﮎ
82:13
ಖಂಡಿತವಾಗಿಯೂ ಸತ್ರ‍್ಮಿಗಳು ಸುಖಾನುಗ್ರಹಗಳಲ್ಲಿರುವರು.
ﮏﮐﮑﮒﮓ
82:14
ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.
ﮔﮕﮖﮗ
82:15
ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸುವರು.
ﮘﮙﮚﮛﮜ
82:16
ಅವರಿಗೆ ಅದರಿಂದ ಮರೆಯಾಗಿರಲು ಸಾಧ್ಯವಾಗಲಾರದು.
ﮝﮞﮟﮠﮡﮢ
82:17
(ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?
ﮣﮤﮥﮦﮧﮨﮩ
82:18
ನಾನು ಪುನಃ (ಕೇಳುತ್ತೇನೆ) ಪ್ರತಿಫಲ ಮತ್ತು ಶಿಕ್ಷೆಯ ದಿನ ಎಂದರೆ ಏನೆಂದು ನಿಮಗೇನು ಗೊತ್ತು ?
ﮪﮫﮬﮭﮮﮯﮰﮱﯓﯔﯕ
82:19
ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







