PDF —
31 ಆಯತ್ Medinan PDF
Built right in your browser — download starts automatically

ಸೂರಾ ಅಲ್-ಇನ್ಸಾನ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಇನ್ಸಾನ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಇನ್ಸಾನ್ ಅನುವಾದ. ಸೂರಾ ಅಲ್-ಇನ್ಸಾನ್ (Medinan) 31 ಆಯತ್.



31 ಆಯತ್ · Medinan · ಕನ್ನಡ
bismillah
ﯜﯝﯞﯟﯠﯡﯢﯣﯤﯥﯦﯧ
76:1 ಏನು ಪ್ರಸ್ತಾಪಯೋಗ್ಯ ವಸ್ತುವೇ ಆಗಿರದಂತಹ ಸುದರ‍್ಘ ಕಾಲವೊಂದು ಮಾನವನ ಮೇಲೆ ಗತಿಸಿಲ್ಲವೇ ?
ﯨﯩﯪﯫﯬﯭﯮﯯﯰﯱﯲ
76:2 ನಿಸ್ಸಂಶಯವಾಗಿಯೂ ನಾವು ಮಾನವನನ್ನು ಪರೀಕ್ಷಿಸಲಿಕ್ಕಾಗಿ ಸಮ್ಮಿಶ್ರ ವರ‍್ಯದಿಂದ ಸೃಷ್ಟಿಸಿದ್ದೆವು ಮತ್ತು ಅವನನ್ನು ಆಲಿಸುವವನನ್ನಾಗಿಯೂ ನೋಡುವವನನ್ನಾಗಿಯೂ ಮಾಡಿದೆವು.
ﯳﯴﯵﯶﯷﯸﯹﯺ
76:3 ಖಂಡಿತವಾಗಿಯೂ ನಾವು ಅವನಿಗೆ (ಸತ್ಯಾಸತ್ಯತೆಯ) ಮರ‍್ಗರ‍್ಶನ ಮಾಡಿದೆವು, ಇನ್ನು ಅವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ.
ﯻﯼﯽﯾﯿﰀﰁ
76:4 ಖಂಡಿತವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು ಕಂಠಕಡಗಗಳನ್ನು ಮತ್ತು ಜ್ವಾಲೆಗಳಿರುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
ﰂﰃﰄﰅﰆﰇﰈﰉﰊ
76:5 ನಿಸ್ಸಂದೇಹವಾಗಿಯೂ ಪುಣ್ಯಶೀಲರು ಪಾನಪಾತ್ರೆಯಿಂದ ಕುಡಿಯುವರು. ಅದರ ಮಿಶ್ರಿತವು ರ‍್ಪೂರದ್ದಾಗಿರುವುದು.
ﭑﭒﭓﭔﭕﭖﭗﭘ
76:6 ಅದೊಂದು ಚಿಲುಮೆ ಯಾಗಿದೆ, ಅದರಿಂದ ಅಲ್ಲಾಹನದಾಸರು ಕುಡಿಯುವರು. ತಾವಿಚ್ಛಿಸುವ ಕಡೆಗೆ ಅವರು ಅದರ ಕಾಲುವೆಗಳನ್ನು ಹರಿಸುವರು.
ﭙﭚﭛﭜﭝﭞﭟﭠ
76:7 ಅವರು ಹರಕೆಗಳನ್ನು ನೆರವೇರಿಸುತ್ತಾರೆ ಮತ್ತು ರ‍್ವ ವ್ಯಾಪಕವಾದ ಆಪತ್ತಿನ ಪ್ರಳಯ ದಿನವನ್ನು ಭಯಪಡುತ್ತಾರೆ.
ﭡﭢﭣﭤﭥﭦﭧﭨ
76:8 ಅವರಿಗೆ ಆಹಾರದ ಅಗತ್ಯವಿದ್ದರೂ ಅಲ್ಲಾಹನ ಸಂಪ್ರೀತಿಗಾಗಿ ನರ‍್ಗತಿಕರಿಗೂ, ಅನಾಥರಿಗೂ ಮತ್ತು ಸೆರೆವಾಸಿಗಳಿಗೂ ಉಣಿಸುತ್ತಾರೆ.
ﭩﭪﭫﭬﭭﭮﭯﭰﭱﭲﭳ
76:9 ನಾವು ನಿಮಗೆ ಕೇವಲ ಅಲ್ಲಾಹನ ಸಂತೃಪ್ತಿಗೋಸ್ಕರ, ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ, (ಎನ್ನುತ್ತಾರೆ)
ﭴﭵﭶﭷﭸﭹﭺﭻ
76:10 ನಿಸ್ಸಂಶಯವಾಗಿಯೂ ನಾವು ನಮ್ಮ ಪ್ರಭುವಿನ ವತಿಯಿಂದ ಬರುವ ಮುಖಗಳನ್ನು ವಿಕೃತಗೊಳಿಸುವ ಮತ್ತು ಸಂಕಷ್ಟಕರವಾಗಿರುವ ಆ ದಿನವನ್ನು ಭಯಪಡುತ್ತೇವೆ.
ﭼﭽﭾﭿﮀﮁﮂﮃﮄ
76:11 ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು ದಯಪಾಲಿಸಿದನು.
ﮅﮆﮇﮈﮉﮊ
76:12 ಅವರ ಸಹನೆಯ ಪ್ರತಿಫಲವಾಗಿ ಸ್ರ‍್ಗೋದ್ಯಾನವನ್ನು ಮತ್ತು ರೇಷ್ಮೆ ಉಡುಪುಗಳನ್ನು ಅವರಿಗೆ ಕರುಣಿಸಿದನು
ﮋﮌﮍﮎﮏﮐﮑﮒﮓﮔﮕﮖ
76:13 ಅವರು ಅಲ್ಲಿ ಉನ್ನತ ಆಸನಗಳಲ್ಲಿ ದಿಂಬುಗಳಿಗೆ ಒರಗಿ ಕುಳಿತಿರುವರು. ಅಲ್ಲಿ ಅವರು ಕಡು ಸೆಖೆಯಾಗಲಿ ತೀವ್ರಚಳಿಯಾಗಲಿ ಕಾಣಲಾರರು.
ﮗﮘﮙﮚﮛﮜﮝ
76:14 (ಓ ಪೈಗಂಬರರೇ) ಅದರ ನೆರಳು ಅವರಿಗೆ ಆವರಿಸಿರುವುದು ಮತ್ತು ಅವುಗಳ ಫಲಗಳು ಮತ್ತು ಗೊಂಚಲುಗಳು ಕೈಗೆಟಗುತ್ತಿರುವುದು.
ﮞﮟﮠﮡﮢﮣﮤﮥﮦ
76:15 ಅವರ ಮೇಲೆ ಬೆಳ್ಳಿಯ ಪಾತ್ರೆಗಳನ್ನು ಮತ್ತು ಗಾಜಿನ ಲೋಟಗಳನ್ನು ಸುತ್ತಿತರಲಾಗುವುದು.
ﮧﮨﮩﮪﮫﮬ
76:16 ಗಾಜೂ ಸಹ ಬೆಳ್ಳಿಯದ್ದಾಗಿರುವುದು, ಅವುಗಳನ್ನು ಅವರು (ಸೇವಕರು) ಪ್ರಮಾಣಬದ್ಧವಾಗಿ ಅಳೆದಿಟ್ಟಿರುವರು.
ﮭﮮﮯﮰﮱﯓﯔ
76:17 ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.
ﯕﯖﯗﯘﯙ
76:18 ಅದು ಸಲ್ಸಬೀಲ್ ಎಂಬ ಹೆಸರಿನ ಸ್ರ‍್ಗದ ಒಂದು ಚಿಲುಮೆಯಾಗಿದೆ.
ﯚﯛﯜﯝﯞﯟﯠﯡﯢﯣﯤ
76:19 ಅವರ ನಡುವೆ ಚಿರಬಾಲಕರು ಸುತ್ತುತ್ತಿರುವರು, ನೀವು ಅವರನ್ನು ಕಂಡರೆ ಅವರು ಹರಡಲಾದ ಮುತ್ತುಗಳಾಗಿದ್ದಾರೆ ಎಂದು ಭಾವಿಸುವಿರಿ.
ﯥﯦﯧﯨﯩﯪﯫﯬ
76:20 ಅಲ್ಲಿ ನೀವು ಎತ್ತದೃಷ್ಟಿ ಹಾಯಿಸಿದರೂ ಸುಖಾನುಗ್ರಹ ಮತ್ತು ಬೃಹತ್ ವೈಭವದ ಸಾಮ್ರಾಜ್ಯವನ್ನೇ ಕಾಣುವಿರಿ.
ﯭﯮﯯﯰﯱﯲﯳﯴﯵﯶﯷﯸﯹﯺﯻ
76:21 ಅವರ ಮೈ ಮೇಲೆ ಹಸಿರು ಬಣ್ಣದ ತೆಳು ರೇಷ್ಮೆ ಮತ್ತು ಮಂದ ರೇಷ್ಮೆ ಬಟ್ಟೆಗಳಿರುವುವು ಮತ್ತು ಅವರಿಗೆ ಬೆಳ್ಳಿಯ ಕಂಕಣಗಳನ್ನು ತೊಡಿಸಲಾಗುವುದು. ಮತ್ತು ಅವರ ಪ್ರಭು ಅವರಿಗೆ ನರ‍್ಮಲವಾದ ಮಧಿರೆಯನ್ನು ಕುಡಿಸುವುದು.
ﯼﯽﯾﯿﰀﰁﰂﰃﰄ
76:22 (ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು ಆದರಿಸಲಾಗಿದೆ.
ﰅﰆﰇﰈﰉﰊﰋ
76:23 ನಿಸ್ಸಂಶಯವಾಗಿಯೂ ನಾವು ಈ ಕುರ್ಆನನ್ನು ನಿಮ್ಮ ಮೇಲೆ ಹಂತ ಹಂತವಾಗಿ ಅವತರ‍್ಣಗೊಳಿಸಿದ್ದೇವೆ.
ﰌﰍﰎﰏﰐﰑﰒﰓﰔﰕ
76:24 ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪಿಗಾಗಿ ಸಹನೆ ವಹಿಸಿರಿ ಮತ್ತು ಅವರ ಪೈಕಿ ಯಾವೊಬ್ಬ ಪಾಪಿಯನ್ನು ಕೃತಘ್ನನನ್ನು ಅನುಸರಿಸದಿರಿ.
ﰖﰗﰘﰙﰚﰛ
76:25 ಸಂಜೆ ಮತ್ತು ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.
ﭑﭒﭓﭔﭕﭖﭗﭘ
76:26 ರಾತ್ರಿ ವೇಳೆಯಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಮತ್ತು ದರ‍್ಘರಾತ್ರಿಯವರೆಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
ﭙﭚﭛﭜﭝﭞﭟﭠﭡ
76:27 ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ ದಿನವನ್ನು ಬಿಟ್ಟುಬಿಡುತ್ತಾರೆ.
ﭢﭣﭤﭥﭦﭧﭨﭩﭪﭫﭬ
76:28 ನಾವು ಅವರನ್ನು ಸೃಷ್ಟಿಸಿರುವೆವು ಮತ್ತು ನಾವೇ ಅವರ ಶರೀರ ಘಟ್ಟಗಳನ್ನು ಸದೃಢಗೊಳಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಅವರ ಬದಲಿಗೆ ಅವರಂತಿರುವ ಇತರರನ್ನು ತರಬಲ್ಲೆವು.
ﭭﭮﭯﭰﭱﭲﭳﭴﭵﭶﭷ
76:29 ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು ಪಡೆದುಕೊಳ್ಳಲಿ.
ﭸﭹﭺﭻﭼﭽﭾﭿﮀﮁﮂﮃﮄ
76:30 ಅಲ್ಲಾಹನು ಇಚ್ಛಿಸದೇ ನೀವು ಇಚ್ಛಿಸಲಾರಿರಿ. ನಿಸ್ಸಂಶಯವಾಗಿಯೂ ಅಲ್ಲಾಹನು ರ‍್ವಜ್ಞನೂ ಯುಕ್ತಿಪರ‍್ಣನು ಆಗಿದ್ದಾನೆ.
ﮅﮆﮇﮈﮉﮊﮋﮌﮍﮎﮏﮐ
76:31 ಅವನು ತಾನಿಚ್ಛಿಸುವವರನ್ನುತನ್ನಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ ಮತ್ತು ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯನ್ನು ಸಜ್ಜುಗೊಳಿಸಿದ್ದಾನೆ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers