ಅಲ್-ಬಕರಾ · 274/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
الَّذِينَ يُنفِقُونَ أَمْوَالَهُم بِاللَّيْلِ وَالنَّهَارِ سِرًّا وَعَلَانِيَةً فَلَهُمْ أَجْرُهُمْ عِندَ رَبِّهِمْ وَلَا خَوْفٌ عَلَيْهِمْ وَلَا هُمْ يَحْزَنُونَ ۝٢٧٤
Allazeena yunfiqoona amwaalahum billaili wan nahaari sirranw wa `alaaniyatan falahum ajruhum `inda Rabbihim wa laa khawfun `alaihim wa laa hum yahzanoon
📖 ಕನ್ನಡ ಅರ್ಥ
ಯಾರು ಹಗಲು, ರಾತ್ರಿ ರಹಸ್ಯವಾಗಿಯು, ಬಹಿರಂಗವಾಗಿಯು ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೋ ಅವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ. (ಪುನರುತ್ಥಾನದ ದಿನ) ಅವರು ಭಯಪಡಬೇಕಾಗಿಲ್ಲ ಮತ್ತು (ಇಹಲೋಕದ ಬಗ್ಗೆ) ದುಖ್ಖಿಃಸಬೇಕಾಗಿಯೂ ಇಲ್ಲ.

🎧 ಆಲಿಸಿ


📜 ಆಯತ್ 272-276 — ಸೂರಾ ಅಲ್-ಬಕರಾ

272۞ لَّيْسَ عَلَيْكَ هُدَاهُمْ وَلَٰكِنَّ اللَّهَ يَهْدِي مَن يَشَاءُ ۗ وَمَا تُنفِقُوا مِنْ خَيْرٍ فَلِأَنفُسِكُمْ ۚ وَمَا تُنفِقُونَ إِلَّا ابْتِغَاءَ وَجْهِ اللَّهِ ۚ وَمَا تُنفِقُوا مِنْ خَيْرٍ يُوَفَّ إِلَيْكُمْ وَأَنتُمْ لَا تُظْلَمُونَ
ಅವರನ್ನು ಸನ್ಮಾರ್ಗಕ್ಕೆ ತರುವ ಹೊಣೆಗಾರಿಕೆ ನಿಮ್ಮ ಮೇಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸುವವರಿಗೆ ಸನ್ಮಾರ್ಗವನ್ನು ನೀಡುತ್ತಾನೆ. ನೀವು ಉತ್ತಮವಾದುದ್ದನ್ನೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದರೆ ಅದರ ಪ್ರಯೋಜನ ನಿಮಗೆ ಸಿಗುವುದು. ನೀವು ಅಲ್ಲಾಹನ ಸಂಪ್ರೀತಿಯನ್ನು ಅರಸುತ್ತಲೇ ಖರ್ಚು ಮಾಡಿರಿ. ನೀವು ಯಾವ ಸಂಪತ್ತನ್ನು ಖರ್ಚು ಮಾಡಿದರೂ ಅದರ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ಮತ್ತು ನಿಮ್ಮ ಮೇಲೆ ಅನ್ಯಾಯವೆಸಗಲಾಗದು.
273لِلْفُقَرَاءِ الَّذِينَ أُحْصِرُوا فِي سَبِيلِ اللَّهِ لَا يَسْتَطِيعُونَ ضَرْبًا فِي الْأَرْضِ يَحْسَبُهُمُ الْجَاهِلُ أَغْنِيَاءَ مِنَ التَّعَفُّفِ تَعْرِفُهُم بِسِيمَاهُمْ لَا يَسْأَلُونَ النَّاسَ إِلْحَافًا ۗ وَمَا تُنفِقُوا مِنْ خَيْرٍ فَإِنَّ اللَّهَ بِهِ عَلِيمٌ
ದಾನ ಧರ್ಮಗಳು ಭೂಮಿಯಲ್ಲಿ ಸಂಚರಿಸಿ ಸಂಪಾದಿಸಲು ಸಾಧ್ಯವಾಗದಂತೆ ಅಲ್ಲಾಹನ ಮಾರ್ಗದಲ್ಲಿ ಕಾರ್ಯವೆಸಗುವ ಬಡವರಿಗೆ ಮಾತ್ರವಾಗಿದೆ. ಅವರ ಸ್ವಾಭಿಮಾನದ ನಿಮಿತ್ತ ಅರಿವಿಲ್ಲದವರು ಅವರನ್ನು ಧನಿಕರೆಂದು ಭಾವಿಸುತ್ತಾರೆ. ಆದರೆ ನೀವು ಅವರ ಮುಖ ಲಕ್ಷಣಗಳ ಮೂಲಕವೇ ಅವರನ್ನು ಗುರುತಿಸುವಿರಿ. ಅವರು ಜನರನ್ನು ಕಾಡಿ ಬೇಡುವುದಿಲ್ಲ. ನೀವು ಯಾವ ಉತ್ತಮ ಸಂಪತ್ತನ್ನು ಖರ್ಚು ಮಾಡಿದರೂ ಆ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು
274الَّذِينَ يُنفِقُونَ أَمْوَالَهُم بِاللَّيْلِ وَالنَّهَارِ سِرًّا وَعَلَانِيَةً فَلَهُمْ أَجْرُهُمْ عِندَ رَبِّهِمْ وَلَا خَوْفٌ عَلَيْهِمْ وَلَا هُمْ يَحْزَنُونَ
ಯಾರು ಹಗಲು, ರಾತ್ರಿ ರಹಸ್ಯವಾಗಿಯು, ಬಹಿರಂಗವಾಗಿಯು ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೋ ಅವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ. (ಪುನರುತ್ಥಾನದ ದಿನ) ಅವರು ಭಯಪಡಬೇಕಾಗಿಲ್ಲ ಮತ್ತು (ಇಹಲೋಕದ ಬಗ್ಗೆ) ದುಖ್ಖಿಃಸಬೇಕಾಗಿಯೂ ಇಲ್ಲ.
275الَّذِينَ يَأْكُلُونَ الرِّبَا لَا يَقُومُونَ إِلَّا كَمَا يَقُومُ الَّذِي يَتَخَبَّطُهُ الشَّيْطَانُ مِنَ الْمَسِّ ۚ ذَٰلِكَ بِأَنَّهُمْ قَالُوا إِنَّمَا الْبَيْعُ مِثْلُ الرِّبَا ۗ وَأَحَلَّ اللَّهُ الْبَيْعَ وَحَرَّمَ الرِّبَا ۚ فَمَن جَاءَهُ مَوْعِظَةٌ مِّن رَّبِّهِ فَانتَهَىٰ فَلَهُ مَا سَلَفَ وَأَمْرُهُ إِلَى اللَّهِ ۖ وَمَنْ عَادَ فَأُولَٰئِكَ أَصْحَابُ النَّارِ ۖ هُمْ فِيهَا خَالِدُونَ
ಬಡ್ಡಿ ತಿನ್ನುವವರು ಶೈತಾನನು ಬಾಧಿಸಿ ಗರಬಡಿದು ಎದ್ದೇಳುವವನ ಹಾಗೆಯೇ (ಪುನರುತ್ಥಾನದ ದಿನ) ಎದ್ದೇಳುವರು. ಇದು (ಇದರ ಕಾರಣ ಅವರು) ವ್ಯಾಪಾರವು ಸಹ ಬಡ್ಡಿಯಂತೆಯೇ ಎಂದು ಹೇಳಿದುದರಿಂದಾಗಿದೆ. ವಸ್ತುತಃ ಅಲ್ಲಾಹನು ವ್ಯಾಪಾರವನ್ನು ಧರ್ಮ ಸಮ್ಮತಗೊಳಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿದ್ದಾನೆ. ಆದ್ದರಿಂದ ಯಾರು ತನ್ನ ಬಳಿಗೆ ಬಂದಿರುವ ಅಲ್ಲಾಹನ ಉಪದೇಶವನ್ನು ಕೇಳಿ (ಬಡ್ಡಿಯನ್ನು) ಸ್ಥಗಿತಗೊಳಿಸಿದರೆ ಅವನು ಮುಂಚೆ ಪಡೆದುದು ಅವನಿಗಿದೆ. ಅವನ ವಿಷಯವು ಅಲ್ಲಾಹನ ಕಡೆಯಿರುತ್ತದೆ. ಮತ್ತು ಯಾರು (ಬಡ್ಡಿಯೆಡೆಗೆ) ಮರಳುತ್ತಾನೋ ಅವನು ನರಕವಾಸಿಯಾಗಿದ್ದಾನೆ. ಅಂತಹವರು ಅದರಲ್ಲಿ ಶಾಶ್ವತವಾಗಿರುವವರು.
276يَمْحَقُ اللَّهُ الرِّبَا وَيُرْبِي الصَّدَقَاتِ ۗ وَاللَّهُ لَا يُحِبُّ كُلَّ كَفَّارٍ أَثِيمٍ
ಅಲ್ಲಾಹನು ಬಡ್ಡಿಯನ್ನು ಅಳಿಸುತ್ತಾನೆ ಮತ್ತು ದಾನ ಧರ್ಮವನ್ನು ಬೆಳೆಸುತ್ತಾನೆ ಮತ್ತು ಅಲ್ಲಾಹನು ಯಾವೊಬ್ಬ ಕೃತಘ್ನನನ್ನೂ, ಪಾಪಿಯನ್ನೂ ಮೆಚ್ಚುವುದಿಲ್ಲ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
274ಆಯತ್

ಅನುವಾದ — ಅಲ್-ಬಕರಾ 274

ಸೂರಾ ಅಲ್-ಬಕರಾ ಆಯತ್ 274 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರು ಹಗಲು, ರಾತ್ರಿ ರಹಸ್ಯವಾಗಿಯು, ಬಹಿರಂಗವಾಗಿಯು ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೋ ಅವರಿಗೆ…

ಸೂರಾ ಆಯತ್ 274/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 272–276. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers