ಅಶ್-ಶೂರಾ · 14/53
ಅನುವಾದ ಉಚ್ಚಾರಣೆ — ಸೂರಾ ಅಶ್-ಶೂರಾ
وَمَا تَفَرَّقُوا إِلَّا مِن بَعْدِ مَا جَاءَهُمُ الْعِلْمُ بَغْيًا بَيْنَهُمْ ۚ وَلَوْلَا كَلِمَةٌ سَبَقَتْ مِن رَّبِّكَ إِلَىٰ أَجَلٍ مُّسَمًّى لَّقُضِيَ بَيْنَهُمْ ۚ وَإِنَّ الَّذِينَ أُورِثُوا الْكِتَابَ مِن بَعْدِهِمْ لَفِي شَكٍّ مِّنْهُ مُرِيبٍ ١٤
Transliteration
Wa maa tafarraqooo illaa mim ba`di maa jaaa`ahumul `ilmu baghyam bainahum; wa law laa Kalimatun sabaqat mir Rabbika ilaaa ajalim musammal laqudiya bainahum; wa innal lazeena oorisul Kitaaba mim ba`dihim lafee shakkim minhu mureeb
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವರು ತಮ್ಮ ಬಳಿ ಜ್ಞಾನ ಬಂದ ಬಳಿಕ ತಮ್ಮ ಪರಸ್ಪರ ವಿರೋಧದಿಂದಾಗಿ ಭಿನ್ನತೆ ತೋರಿದರು ನಿಮ್ಮ ಪ್ರಭುವಿನಿಂದ ಅವರ ಕುರಿತು ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡಲಾಗುವ ಮಾತು ಮೊದಲೇ ನಿರ್ಧರಿತವಾಗಿಲ್ಲದಿರುತ್ತಿದ್ದರೆ ಖಂಡಿತ ಅವರ ನಡುವೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಅವರ ಬಳಿಕ ಗ್ರಂಥದ ವಾರಿಸುದಾರರಾದವರು ಅವರ ಕುರಿತು ಗೊಂದಲಕಾರಿ ಸಂದೇಹದಲ್ಲಿದ್ದಾರೆ.
Additional reference in தமிழ்
🎧 ಆಲಿಸಿ
📜 ಆಯತ್ 12-16 — ಸೂರಾ ಅಶ್-ಶೂರಾ
12لَهُ مَقَالِيدُ السَّمَاوَاتِ وَالْأَرْضِ ۖ يَبْسُطُ الرِّزْقَ لِمَن يَشَاءُ وَيَقْدِرُ ۚ إِنَّهُ بِكُلِّ شَيْءٍ عَلِيمٌ
ಆಕಾಶಗಳ ಮತ್ತು ಭೂಮಿಯ ಕೀಲಿಕೈಗಳು ಅವನ ಬಳಿಯಿವೆ. ಅವನು ತಾನಿಚ್ಛಿಸುವವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ತಾನಿಚ್ಛಿಸುವವರಿಗೆ ಪರಿಮಿತಗೊಳಿಸುತ್ತಾನೆ. ಖಂಡಿತವಾಗಿಯು ಅವನು ಸಕಲ ವಿಷಯಗಳ ಜ್ಞಾನಿಯಾಗಿದ್ದಾನೆ.
13۞ شَرَعَ لَكُم مِّنَ الدِّينِ مَا وَصَّىٰ بِهِ نُوحًا وَالَّذِي أَوْحَيْنَا إِلَيْكَ وَمَا وَصَّيْنَا بِهِ إِبْرَاهِيمَ وَمُوسَىٰ وَعِيسَىٰ ۖ أَنْ أَقِيمُوا الدِّينَ وَلَا تَتَفَرَّقُوا فِيهِ ۚ كَبُرَ عَلَى الْمُشْرِكِينَ مَا تَدْعُوهُمْ إِلَيْهِ ۚ اللَّهُ يَجْتَبِي إِلَيْهِ مَن يَشَاءُ وَيَهْدِي إِلَيْهِ مَن يُنِيبُ
ಅಲ್ಲಾಹನು ನೂಹ್‌ರವರಿಗೆ ಅಜ್ಞಾಪಿಸಿದ ಧರ್ಮವನ್ನೇ ನಿಮಗೋಸ್ಕರ ನಿಶ್ಚಯಿಸಿದ್ದಾನೆ ಮತ್ತು ಅದನ್ನು ನಾವು ದಿವ್ಯ ಸಂದೇಶದ ಮುಖಾಂತರ ನಿಮ್ಮೆಡೆಗೆ ಕಳುಹಿಸಿರುತ್ತೇವೆ ಮತ್ತು ಇದೇ ಆದೇಶವನ್ನು ನಾವು ಇಬ್ರಾಹೀಮ್, ಮೂಸಾ ಮತ್ತು ಈಸಾರವರಿಗೆ ನೀಡಿದೆವು ಮತ್ತು ಈ ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ನೀವು ಭಿನ್ನತೆಯನ್ನುಂಟು ಮಾಡಬೇಡಿರಿ ಎಂದು. ಇನ್ನು ನೀವು ಯಾವ ವಿಷಯದೆಡೆಗೆ ಈ ಬಹುದೇವಾರಾಧಕರನ್ನು ಅಹ್ವಾನಿಸುತ್ತಿರುವಿರೋ ಅದು ಅವರಿಗೆ ದೊಡ್ಡ ಭಾರವಾಗಿ ತೋರುತ್ತಿದೆ. ಅಲ್ಲಾಹನು ತಾನಿಚ್ಛಿಸುವವರನ್ನು ಆಯ್ದುಕೊಳ್ಳುತ್ತಾನೆ. ಅವನೆಡೆಗೆ ಮರಳುವವರಿಗೆ ಅವನು ನೇರ ಮಾರ್ಗದಲ್ಲಿ ಮುನ್ನಡೆಸುತ್ತಾನೆ.
14وَمَا تَفَرَّقُوا إِلَّا مِن بَعْدِ مَا جَاءَهُمُ الْعِلْمُ بَغْيًا بَيْنَهُمْ ۚ وَلَوْلَا كَلِمَةٌ سَبَقَتْ مِن رَّبِّكَ إِلَىٰ أَجَلٍ مُّسَمًّى لَّقُضِيَ بَيْنَهُمْ ۚ وَإِنَّ الَّذِينَ أُورِثُوا الْكِتَابَ مِن بَعْدِهِمْ لَفِي شَكٍّ مِّنْهُ مُرِيبٍ
ಅವರು ತಮ್ಮ ಬಳಿ ಜ್ಞಾನ ಬಂದ ಬಳಿಕ ತಮ್ಮ ಪರಸ್ಪರ ವಿರೋಧದಿಂದಾಗಿ ಭಿನ್ನತೆ ತೋರಿದರು ನಿಮ್ಮ ಪ್ರಭುವಿನಿಂದ ಅವರ ಕುರಿತು ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡಲಾಗುವ ಮಾತು ಮೊದಲೇ ನಿರ್ಧರಿತವಾಗಿಲ್ಲದಿರುತ್ತಿದ್ದರೆ ಖಂಡಿತ ಅವರ ನಡುವೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಅವರ ಬಳಿಕ ಗ್ರಂಥದ ವಾರಿಸುದಾರರಾದವರು ಅವರ ಕುರಿತು ಗೊಂದಲಕಾರಿ ಸಂದೇಹದಲ್ಲಿದ್ದಾರೆ.
15فَلِذَٰلِكَ فَادْعُ ۖ وَاسْتَقِمْ كَمَا أُمِرْتَ ۖ وَلَا تَتَّبِعْ أَهْوَاءَهُمْ ۖ وَقُلْ آمَنتُ بِمَا أَنزَلَ اللَّهُ مِن كِتَابٍ ۖ وَأُمِرْتُ لِأَعْدِلَ بَيْنَكُمُ ۖ اللَّهُ رَبُّنَا وَرَبُّكُمْ ۖ لَنَا أَعْمَالُنَا وَلَكُمْ أَعْمَالُكُمْ ۖ لَا حُجَّةَ بَيْنَنَا وَبَيْنَكُمُ ۖ اللَّهُ يَجْمَعُ بَيْنَنَا ۖ وَإِلَيْهِ الْمَصِيرُ
ಆದ್ದರಿಂದ ನೀವು ಇದೇ ಧರ್ಮದೆಡೆಗೇ ಕರೆಯುತ್ತಿರಿ ಮತ್ತು ನಿಮಗೆ ಆಜ್ಞಾಪಿಸಲಾದಂತೆ ಅದರಲ್ಲೇ ಸ್ಥಿರವಾಗಿರಿ ಮತ್ತು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸದಿರಿ ಹಾಗೂ ಹೇಳಿರಿ: ಅಲ್ಲಾಹನು ಅವತೀರ್ಣಗೊಳಿಸಿದ ಪ್ರತಿಯೊಂದು ಗ್ರಂಥದ ಮೇಲೆ ನಾನು ವಿಶ್ವಾಸವಿಟ್ಟಿದ್ದೇನೆ ಮತ್ತು ನಿಮ್ಮ ನಡುವೆ ನ್ಯಾಯಪಾಲಿಸುತ್ತಿರಲು ನನ್ನೊಂದಿಗೆ ಅಜ್ಞಾಪಿಸಲಾಗಿದೆ. ನಮ್ಮ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ನಮ್ಮ ಕರ್ಮಗಳು ನಮಗಿರುವುವು ಮತ್ತು ನಿಮ್ಮ ಕರ್ಮಗಳು ನಿಮಗಿರುವುವು. ನಮ್ಮ ಮತ್ತು ನಿಮ್ಮ ನಡುವೆ ಜಗಳವೂ ಇಲ್ಲ. ಅಲ್ಲಾಹನು ನಮ್ಮನ್ನು ಒಟ್ಟುಗೂಡಿಸುವನು ಮತ್ತು ಅವನೆಡೆಗೇ ಮರಳಲಿಕ್ಕಿದೆ.
16وَالَّذِينَ يُحَاجُّونَ فِي اللَّهِ مِن بَعْدِ مَا اسْتُجِيبَ لَهُ حُجَّتُهُمْ دَاحِضَةٌ عِندَ رَبِّهِمْ وَعَلَيْهِمْ غَضَبٌ وَلَهُمْ عَذَابٌ شَدِيدٌ
ಮತ್ತು ಯಾರು ಅಲ್ಲಾಹನ ಧರ್ಮವು ಸ್ವೀಕೃತಗೊಂಡ ಬಳಿಕ ಅದರಲ್ಲಿ ತರ್ಕಿಸುತ್ತಾರೋ ಅವರ ತರ್ಕ ಅಲ್ಲಾಹನ ಬಳಿ ನಿರರ್ಥಕವಾಗಿದೆ. ಅವರ ಮೇಲೆ ಕ್ರೋಧವಿದೆ ಮತ್ತು ಅವರಿಗೆ ಕಠಿಣ ಶಿಕ್ಷೆಯಿರುವುದು.
ಅಶ್-ಶೂರಾಕುರಾನ್ ಸೂಚಿ
53ಆಯತ್
MeccanRevelation
14ಆಯತ್
ಅನುವಾದ — ಅಶ್-ಶೂರಾ 14
ಸೂರಾ ಅಶ್-ಶೂರಾ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ತಮ್ಮ ಬಳಿ ಜ್ಞಾನ ಬಂದ ಬಳಿಕ ತಮ್ಮ ಪರಸ್ಪರ ವಿರೋಧದಿಂದಾಗಿ ಭಿನ್ನತೆ…ಸೂರಾ ಆಯತ್ 14/53 — ಸೂರಾ ಅಶ್-ಶೂರಾ الشورى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶೂರಾ ಆಲಿಸಿ, ಸೂರಾ ಅಶ್-ಶೂರಾ ಅನುವಾದ, ಸೂರಾ ಅಶ್-ಶೂರಾ mp3, ಸೂರಾ ಅಶ್-ಶೂರಾ pdf. ಆಯತ್ 12–16. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers








