PDF —
182 ಆಯತ್ Meccan PDF
Built right in your browser — download starts automatically

ಸೂರಾ ಅಸ್-ಸಾಫ್ಫಾತ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಸ್-ಸಾಫ್ಫಾತ್ pdf ಕನ್ನಡ — ಡೌನ್‌ಲೋಡ್ ಸೂರಾ ಅಸ್-ಸಾಫ್ಫಾತ್ ಅನುವಾದ. ಸೂರಾ ಅಸ್-ಸಾಫ್ಫಾತ್ (Meccan) 182 ಆಯತ್.

← ಯಾಸೀನ್ಸೂರಾ ಅಸ್-ಸಾಫ್ಫಾತ್ ಸಾದ್ →


182 ಆಯತ್ · Meccan · ಕನ್ನಡ
bismillah
ﭑﭒﭓ
37:1 ಪಂಕ್ತಿಬದ್ಧವಾಗಿ ನಿಲ್ಲುವವರ
ﭔﭕﭖ
37:2 ಬಳಿಕ ಗದರಿಸಿ ಅಟ್ಟುವವರ
ﭗﭘﭙ
37:3 ಅನಂತರ ಕುರ್‌ಆನನ್ನು ಉಪದೇಶವನ್ನಾಗಿ ಪಠಿಸುತ್ತಿರುವ ದೇವಚರರ ಆಣೆ.
ﭚﭛﭜﭝ
37:4 ನಿಶ್ಚಯವಾಗಿಯೂ ನಿಮ್ಮ ಆರಾಧ್ಯನು ಏಕÉÊಕನು.
ﭞﭟﭠﭡﭢﭣﭤﭥ
37:5 ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ಮಧ್ಯದ ಸಕಲ ವಸ್ತುಗಳ ಪ್ರಭು ಮತ್ತು ಉದಯಸ್ಧಾನಗಳ ಪ್ರಭು.
ﭦﭧﭨﭩﭪﭫﭬ
37:6 ನಾವು ಜಗದ ಆಕಾಶವನ್ನು ನಕ್ಷತ್ರಗಳ ಶೃಂಗಾರದ ಮೂಲಕ ಅಲಂಕೃತಗೊಳಿಸಿದ್ದೇವೆ.
ﭭﭮﭯﭰﭱﭲ
37:7 ಮತ್ತು ಪ್ರತಿಯೊಬ್ಬ ಧಿಕ್ಕಾರಿ ಶÉÊತಾನನಿಂದ ಅದನ್ನು ಸುರಕ್ಷಿತಗೊಳಿಸಿದ್ದೇವೆ.
ﭳﭴﭵﭶﭷﭸﭹﭺﭻﭼ
37:8 ಶೈತಾನರು ಉನ್ನತ ಲೋಕದ ಮಲಕ್‌ಗಳ (ಮಾತನ್ನು) ಆಲಿಸಲಾರರು. ಮತ್ತು ಸರ್ವ ದಿಕ್ಕುಗಳಿಂದಲೂ ಅವರು ಒದ್ದೋಡಿಸಲ್ಪಡುವರು.
ﭽﭾﭿﮀﮁﮂ
37:9 ಮತ್ತು ಅವರಿಗೆ ನಿರಂತರ ಯಾತನೆಯಿರುವುದು.
ﮃﮄﮅﮆﮇﮈﮉﮊ
37:10 ಆದರೆ ಯಾರಾದರೂ ಮಾತೊಂದನ್ನು ಕದ್ದಾಲಿಸಿದರೆ ಅವನನ್ನು ಪ್ರಜ್ವಲಿಸುವ ಜ್ವಾಲೆಯೊಂದು ಬೆನ್ನಟ್ಟವುದು.
ﮋﮌﮍﮎﮏﮐﮑﮒﮓﮔﮕﮖﮗﮘ
37:11 ಆದುದರಿಂದ ಓ ಪ್ರವಾದಿಯವರೇ, ನೀವು ಸತ್ಯನಿಷೇಧಿಗಳೊಂದಿಗೆ ಕೇಳಿರಿ :ಅವರನ್ನು ಪುನಃ ಸೃಷ್ಟಿಸುವುದು ಅತಿಕಠಿಣವೋ ಅಥವಾ ನಾವು ಸೃಷ್ಟಿಸಿರುವ ಇತರ ವಸ್ತುಗಳೋ ನಿಶ್ಚಯವಾಗಿಯು ನಾವು ಅವರನ್ನು ಜಿಗುಟಾದ ಆವೆ ಮಣ್ಣಿನಿಂದ ಸೃಷ್ಟಿಸಿರುತ್ತೇವೆ.
ﮙﮚﮛﮜ
37:12 ನೀವಾದರೂ ಆಶ್ಚರ್ಯ ಪಡುತ್ತಿರುವಿರಿ ಹಾಗೂ ಅವರು ಪರಿಹಾಸ್ಯ ಮಾಡುತ್ತಾರೆ.
ﮝﮞﮟﮠﮡ
37:13 ಮತ್ತು ಅವರಿಗೆ ಉಪದೇಶ ಮಾಡಲಾದರೆ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ.
ﮢﮣﮤﮥﮦ
37:14 ಮತ್ತು ಅವರು ಯಾವುದಾದರೂ ದೃಷ್ಟಾಂತವನ್ನು ನೋಡಿದಾಗ ಪರಿಹಾಸ್ಯ ಮಾಡುತ್ತಾರೆ.
ﮧﮨﮩﮪﮫﮬﮭ
37:15 ಅವರು ಹೇಳುತ್ತಾರೆ: ಇದು ಸುಸ್ಟಷ್ಟ ಜಾದುವಲ್ಲದೆ ಇನ್ನೇನಲ್ಲ.
ﮮﮯﮰﮱﯓﯔﯕﯖ
37:16 16 &
ﯗﯘﯙ
37:17 ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಿಜವಾಗಿಯೂ ನಮ್ಮನ್ನು ಮತ್ತು ನಮ್ಮ ಪೂರ್ವಿಕರನ್ನು ಪುನಃ ಜೀವಂತಗೊಳಿಸಲಾಗುವುದೇ ?
ﯚﯛﯜﯝﯞ
37:18 ನೀವು ಉತ್ತರಿಸಿರಿ: ಹೌದು, ಮತ್ತು ನೀವು ನಿಂದ್ಯರಾಗುವಿರಿ.
ﯟﯠﯡﯢﯣﯤﯥﯦ
37:19 ಅದು ಕೇವಲ ಒಂದು ಘೋರ ಗರ್ಜನೆಯಾಗಿರುವುದು. ಆಗ ಅವರುಕೊಡಲೇ ನೋಡ ತೊಡಗುವರು.
ﯧﯨﯩﯪﯫﯬ
37:20 ಅವರು ಹೇಳುವರು: ಅಯ್ಯೋ ನಮ್ಮದುರ್ಗತಿಯೇ, ಪ್ರತಿಫಲದ ದಿನವು ಇದೇ ಆಗಿದೆ.
ﯭﯮﯯﯰﯱﯲﯳﯴ
37:21 (ಅವರಿಗೆ ಉತ್ತರಿಸಲಾಗುವುದು) ನೀವು ಸುಳ್ಳಾಗಿಸುತ್ತಿದ್ದ ನಿರ್ಣಾಯಕ ದಿನವಾಗಿದೆ.
ﯵﯶﯷﯸﯹﯺﯻﯼﯽ
37:22 ಹೇಳಲಾಗುವುದು ಅಕ್ರಮಿಗಳನ್ನು ಅವರ ಸಹಚರರನ್ನು, ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದವರನ್ನು ಒಟ್ಟು ಸೇರಿಸಿರಿ.
ﯾﯿﰀﰁﰂﰃﰄﰅ
37:23 ಅನಂತರ ಅವರಿಗೆ ನರಕದ ಮಾರ್ಗವನ್ನು ತೋರಿಸಿರಿ.
ﰆﰇﰈﰉﰊ
37:24 ಮತ್ತು ಅವರನ್ನು ತಡೆಯಿರಿ. ಅವರ ವಿಚಾರಣೆ ಮಾಡಲಾಗುವುದು.
ﭑﭒﭓﭔﭕ
37:25 ನಿಮಗೇನಾಗಿದೆ: ನೀವು (ಈಗ) ಪರಸ್ಪರ ಸಹಾಯ ಮಾಡುತ್ತಿಲ್ಲವಲ್ಲ ?
ﭖﭗﭘﭙﭚ
37:26 ಅಲ್ಲ! ಅವರು ಇಂದು ಸಂಪೂರ್ಣ ಶರಣಾಗತರಾಗಿದ್ದಾರೆ.
ﭛﭜﭝﭞﭟﭠ
37:27 ಆ ಬಳಿಕ ಅವರು ಪರಸ್ಪರ ಮುಂದಾಗಿ ಪ್ರಶ್ನಿಸತೊಡಗುವರು.
ﭡﭢﭣﭤﭥﭦﭧ
37:28 ನೀವು ನಮ್ಮ ಬಳಿಗೆ ಬಲಭಾಗದಿಂದ ಬರುತ್ತಿದ್ದಿರಲ್ಲವೇ ಎಂದು ಹೇಳುವರು.
ﭨﭩﭪﭫﭬﭭ
37:29 ಅವರು ಉತ್ತರಿಸುವರು ಅಲ್ಲ! ನೀವೇ ಸತ್ಯವಿಶ್ವಾಸಿಗಳಾಗಿರಲಿಲ್ಲ.
ﭮﭯﭰﭱﭲﭳﭴﭵﭶﭷﭸﭹ
37:30 ಮತ್ತು ನಿಮ್ಮ ಮೇಲೆ ನಮ್ಮ ಯಾವ ಬಲವಂತವೂ ಇರಲಿಲ್ಲ. ಬದಲಾಗಿ ನೀವು ಅತಿಕ್ರಮಿಸಿದ ಜನಾಂಗವಾಗಿದ್ದಿರಿ.
ﭺﭻﭼﭽﭾﭿﮀﮁ
37:31 ಆದುದರಿಂದ ನಮ್ಮ ಮೇಲೆ ನಮ್ಮ ಪ್ರಭುವಿನ ವಚನವು ನಿಜವಾಗಿ ಬಿಟ್ಟಿದೆ. ಖಂಡಿತವಾಗಿಯೂ ನಾವು ಯಾತನೆಯನ್ನು ಸವಿಯಲೇ ಬೇಕು.
ﮂﮃﮄﮅﮆ
37:32 ಹೀಗೆ ನಾವು ನಿಮ್ಮನ್ನು ದಾರಿಗೆಡಿಸಿದ್ದೇವೆ. ಸ್ವತಃ ನಾವೂ ದಾರಿಗೆಟ್ಟವರಾಗಿದ್ದೆವು.
ﮇﮈﮉﮊﮋﮌ
37:33 ಆದ್ದರಿಂದ ಇಂದು ಅವರೆಲ್ಲರೂ ಯಾತನೆಯಲ್ಲಿ ಪಾಲುದಾರರಾಗಿರುವರು.
ﮍﮎﮏﮐﮑ
37:34 ಖಂಡಿತವಾಗಿಯು ನಾವು ಅಪರಾಧಿಗಳೊಂದಿಗೆ ಹೀಗೆ ಮಾಡುವೆವು.
ﮒﮓﮔﮕﮖﮗﮘﮙﮚﮛﮜ
37:35 ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಎಂದು ಅವರೊಂದಿಗೆ ಹೇಳಲಾದರೆ ಅವರು ದರ್ಪತೋರುತ್ತಿದ್ದರು.
ﮝﮞﮟﮠﮡﮢﮣ
37:36 ನಾವು ಒಬ್ಬ ಹುಚ್ಚು ಕವಿಗಾಗಿ ನಮ್ಮ ಆರಾಧ್ಯರನ್ನು ಬಿಟ್ಟು ಬಿಡಬೇಕೇ ? ಎಂದು ಹೇಳುತ್ತಿದ್ದರು.
ﮤﮥﮦﮧﮨﮩ
37:37 ಹಾಗಲ್ಲ ಬದಲಾಗಿ ಪ್ರವಾದಿಯು ಸತ್ಯಧರ್ಮವನ್ನು ತಂದಿರುತ್ತಾರೆ ಮತ್ತು ಸಂದೇಶವಾಹಕರ ಸತ್ಯತೆಯನ್ನು ದೃಢೀಕರಿಸಿದ್ದಾರೆ.
ﮪﮫﮬﮭﮮ
37:38 ಖಂಡಿತವಾಗಿಯೂ ನೀವು ವೇದನಾಜನಕ ಶಿಕ್ಷೆಯನ್ನು ಸವಿಯಲಿರುವಿರಿ.
ﮯﮰﮱﯓﯔﯕﯖ
37:39 ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನೇ ನಿಮಗೆ ನೀಡಲಾಗುವುದು.
ﯗﯘﯙﯚﯛ
37:40 ಅಲ್ಲಾಹನ ನಿಷ್ಟವಂತರಾದ ಆಯ್ದ ದಾಸರ ಹೊರತು.
ﯜﯝﯞﯟﯠ
37:41 ಅವರಿಗೆ ನಿಶ್ಚಿತ ಜೀವನಾಧಾರವಿರುವುದು.
ﯡﯢﯣﯤ
37:42 ಹಣ್ಣು ಹಂಪಲುಗಳಿರುವುವು ಮತ್ತು ಅವರು ಆದರಣೀಯರೂ, ಮಾನ್ಯರೂ ಆಗಿರುವರು.
ﯥﯦﯧﯨ
37:43 ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಲ್ಲಿ…..
ﯩﯪﯫﯬ
37:44 ಅಲಂಕೃತ ಮಂಚಗಳ ಮೇಲೆ ಎದುರು ಬದುರಾಗಿ ಕುಳಿತಿರುವರು.
ﯭﯮﯯﯰﯱﯲ
37:45 ಹರಿಯುತ್ತಿರುವ ಚಿಲುಮೆಯಿಂದ ಮದ್ಯದ, ಪಾನಪಾತ್ರೆಗಳನ್ನು ಅವರ ಸುತ್ತ ತರಲಾಗುವುದು.
ﯳﯴﯵﯶ
37:46 ಅದು ಪರಿಶುದ್ಧವಾಗಿರುವುದು, ಕುಡಿಯುವವರಿಗೆ ರುಚಿಕರವಾಗಿರುವುದು.
ﯷﯸﯹﯺﯻﯼﯽﯾ
37:47 ಅದರಿಂದ ತಲೆ ಬೇನೆ ಉಂಟಾಗದು, ಮತ್ತು ಅದರಿಂದ ಅವರಿಗೆ ಅಮಲೇರಲಾರದು.
ﯿﰀﰁﰂﰃ
37:48 ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ, ದೊಡ್ಡ ಕಣ್ಣುಗಳುಳ್ಳ ಅಪ್ಸರೆಯರು ಇರುವರು.
ﰄﰅﰆﰇ
37:49 ಅವರು ಬಚ್ಚಿಡಲಾದ ಮೊಟ್ಟೆಗಳಂತಿರುವರು.
ﰈﰉﰊﰋﰌﰍ
37:50 ಸ್ವರ್ಗವಾಸಿಗಳು ಒಬ್ಬರನ್ನೊಬ್ಬರು ಉದ್ದೇಶಿಸುತ್ತಾ ಕೇಳುವರು:
ﰎﰏﰐﰑﰒﰓﰔﰕ
37:51 ಅವರಲ್ಲೊಬ್ಬನು ಹೇಳುವನು: (ಭೂ ಲೋಕದಲ್ಲಿ) ನನಗೊಬ್ಬ ಸಂಗಾತಿಯಿದ್ದನು.
ﭑﭒﭓﭔﭕ
37:52 ಅವನು ಹೇಳುತ್ತಿದ್ದನು: ನೀನು ಪುನರುತ್ಥಾನವನ್ನು ನಂಬುವವರಲ್ಲಿ ಆಗಿರುವೆಯಾ ?
ﭖﭗﭘﭙﭚﭛﭜﭝ
37:53 ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಮ್ಮ ಕರ್ಮಗಳ ಪ್ರತಿಫಲ ನೀಡಲಾಗುವುದೆ ?
ﭞﭟﭠﭡﭢ
37:54 ಅವನು ಹೇಳುವನು : ನೀನು ನರಕವನ್ನು ಇಣುಕಿ ನೋಡಬಯಸುವೆಯಾ ?
ﭣﭤﭥﭦﭧﭨ
37:55 ಅವನು ಇಣುಕಿ ನೋಡಿ ಅವನನ್ನು ನರಕದ ಮಧ್ಯದಲ್ಲಿಕಾಣುವನು
ﭩﭪﭫﭬﭭﭮ
37:56 ಅವನು ಹೇಳುವನು: ಅಲ್ಲಾಹನಾಣೆ! ನೀನು ನನ್ನನ್ನು ನಾಶ ಮಾಡಿ ಬಿಡುತ್ತಿದ್ದೆ.
ﭯﭰﭱﭲﭳﭴﭵ
37:57 ನನ್ನ ಪ್ರಭುವಿನ ಕೃಪೆ ಇಲ್ಲದಿರುತ್ತಿದ್ದರೆ ನಾನು ಸಹ ಯಾತನೆಗಾಗಿ ಹಾಜರು ಗೊಳಿಸಲ್ಪಡುವವರಲ್ಲಾಗುತ್ತಿದ್ದೆ.
ﭶﭷﭸﭹ
37:58 ನಮ್ಮ ಮೊದಲ ಮರಣದ ಹೊರತು ನಾವು ಇನ್ನು ಮರಣ ಹೊಂದಲಾರೆವು.
ﭺﭻﭼﭽﭾﭿﮀ
37:59 ಮತ್ತು ನಮಗೆ ಶಿಕ್ಷೆಯು ಇರಲಾರದು.
ﮁﮂﮃﮄﮅﮆ
37:60 ನಿಜವಾಗಿಯೂ ಇದುವೇ ಮಹಾ ಯಶಸ್ಸಾಗಿದೆ.
ﮇﮈﮉﮊﮋ
37:61 ಕಾರ್ಯವೆಸಗುವವರು ಇಂತಹ ಯಶಸ್ಸು ಪಡೆಯುವುದಕ್ಕಾಗಿ ಕಾರ್ಯವೆಸಗಲಿ.
ﮌﮍﮎﮏﮐﮑﮒ
37:62 ಈ ಸತ್ಕಾರವು ಅತ್ಯುತ್ತಮವೋ ಅಥವಾ ಝಕ್ಯೂಮ್ ವೃಕ್ಷವೋ ?
ﮓﮔﮕﮖﮗ
37:63 ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯನ್ನಾಗಿ ಮಾಡಿಟ್ಟಿದ್É್ದÃವೆ.
ﮘﮙﮚﮛﮜﮝﮞ
37:64 ನಿಸ್ಸಂದೇಹವಾಗಿಯು ಅದು ನರಕದ ತಳಭಾಗದಿಂದ ಹೊರಡುವ ವೃಕ್ಷವಾಗಿದೆ.
ﮟﮠﮡﮢﮣ
37:65 ಅದರ ಗೊನೆಗಳು ಶÉÊತಾನರ ತಲೆಗಳಂತಿರುವುವು.
ﮤﮥﮦﮧﮨﮩﮪ
37:66 ಖಂಡಿತವಾಗಿಯೂ ಅವರು ಅದನ್ನು ತಿನ್ನುವರು ಮತ್ತು ಅದರಿಂದಲೇ ಹೊಟ್ಟೆ ತುಂಬುವರು.
ﮫﮬﮭﮮﮯﮰﮱﯓ
37:67 ಅನಂತರ ಅವರಿಗೆ ಕುಡಿಯಲು ಕೀವು ಮಿಶ್ರಿತ ಕುದಿಯುವ ನೀರು ಇರುವುದು.
ﯔﯕﯖﯗﯘﯙ
37:68 ಆ ಬಳಿಕ ಅವರ ಮರಳುವಿಕೆಯು ನರಕದ ಕಡೆಗೇ ಆಗಿರುವುದು.
ﯚﯛﯜﯝﯞ
37:69 ನಿಸ್ಸಂದೇಹವಾಗಿಯು ಅವರು ತಮ್ಮ ಪೂರ್ವಿಕರನ್ನು ಪಥಭ್ರಷ್ಟರಾಗಿ ಕಂಡಿದ್ದರು.
ﯟﯠﯡﯢﯣ
37:70 ಆದರೂ ಅವರು ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಓಡಾಡುತ್ತಿದ್ದರು.
ﯤﯥﯦﯧﯨﯩ
37:71 ನಿಜವಾಗಿಯೂ ಅವರಿಗಿಂತ ಮೊದಲು ಪೂರ್ವಿಕರ ಪÉÊಕಿ ಅನೇಕರು ಪಥಭ್ರಷ್ಟರಾಗಿದ್ದರು.
ﯪﯫﯬﯭﯮ
37:72 ನಿಸ್ಸಂಶವಾಗಿ ನಾವು ಅವರ ಬಳಿ ಮುನ್ನೆಚ್ಚರಿಕೆಕೊಡುವ ಸಂದೇಶವಾಹಕರನ್ನು ಕಳುಹಿಸಿದ್ದೆವು.
ﯯﯰﯱﯲﯳﯴ
37:73 ಮುನ್ನೆಚ್ಚರಿಕೆ ನೀಡಲಾದವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ.
ﯵﯶﯷﯸﯹ
37:74 ಆದರೆ ಅಲ್ಲಾಹನ ನಿಷ್ಠಾವಂತದಾಸರ ಹೊರತು.
ﯺﯻﯼﯽﯾﯿ
37:75 ಮತ್ತು ನೂಹ್‌ರವರು ನಮ್ಮನ್ನು ಕೂಗಿ ಕರೆದರು. ನಾವು ಅದೆಷ್ಟು ಉತ್ತಮ ಓಗೊಡುವವರಾಗಿದ್ದೇವೆ (ಎಂದು ನೋಡಿರಿ).
ﰀﰁﰂﰃﰄﰅ
37:76 ನಾವು ಅವರನ್ನು ಮತ್ತು ಅವರ ಮನೆಯವರನ್ನು ಆ ಮಹಾ ವಿಪತ್ತಿನಿಂದ ರಕ್ಷಿಸಿದೆವು.
ﭑﭒﭓﭔﭕ
37:77 ಮತ್ತು ನಾವು ಅವರ ಸಂತತಿಗಳನ್ನು ಉಳಿಸಿದೆವು.
ﭖﭗﭘﭙﭚ
37:78 ಮತ್ತು ನಾವು ಅವರ( ಸತ್ಕೀರ್ತಿಯನ್ನು) ನಂತರದ ತಲೆಮಾರುಗಳಲ್ಲಿ ಉಳಿಸಿದೆವು.
ﭛﭜﭝﭞﭟﭠ
37:79 ಸರ್ವಲೋಕದಲ್ಲಿ ನೂಹರಿಗೆ ಸಲಾಮ್ (ಶಾಂತಿ) ಇರಲಿ.
ﭡﭢﭣﭤﭥ
37:80 ನಿಶ್ಚಯವಾಗಿಯೂ ನಾವು ಪುಣ್ಯ ಕಾರ್ಯವೆಸಗುವವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
ﭦﭧﭨﭩﭪ
37:81 ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿಗಳಾದ ದಾಸರಲ್ಲಾಗಿದ್ದರು.
ﭫﭬﭭﭮ
37:82 ಅನಂತರ ನಾವು ಇತರ ಸತ್ಯನಿಷೆಧಿಗಳನ್ನು ಮುಳುಗಿಸಿಬಿಟ್ಟೆವು.
ﭯﭰﭱﭲﭳﭴ
37:83 ಮತ್ತು ಇಬ್ರಾಹೀಮ್‌ರವರು ನೂಹರ ಸಮುದಾಯದವರಾಗಿದ್ದರು.
ﭵﭶﭷﭸﭹﭺ
37:84 ಅವರು ತನ್ನ ಪ್ರಭುವಿನೆಡೆಗೆ ನಿರ್ಮಲ ಮನಸ್ಸಿನೊಂದಿಗೆ ಬಂದ ಸಂದರ್ಭ.
ﭻﭼﭽﭾﭿﮀﮁ
37:85 ಅವರು ತನ್ನ ತಂದೆಗೂ, ತನ್ನಜನತೆಗೂ ನೀವು ಏನನ್ನೂ ಆರಾಧಿಸುತ್ತಿರುವಿರಿ? ಎಂದು ಕೇಳಿದ ಸಂದರ್ಭ.
ﮂﮃﮄﮅﮆﮇ
37:86 ನೀವು ಅಲ್ಲಾಹನ ಹೊರತು ಮಿಥ್ಯ ದೇವರುಗಳನ್ನು ಬಯಸುತ್ತೀರಾ?
ﮈﮉﮊﮋﮌ
37:87 ಹಾಗೆಯೇ ಸರ್ವಲೋಕಗಳ ಪ್ರಭುವಿನ ಕುರಿತು ನಿಮ್ಮ ಅಭಿಪ್ರಾಯವೇನು?
ﮍﮎﮏﮐﮑ
37:88 ಅನಂತರ ಅವರು ಒಮ್ಮೆ ನಕ್ಷತ್ರಗಳೆಡೆಗೆ ದೃಷ್ಟಿ ಹಾಯಿಸಿದರು.
ﮒﮓﮔﮕ
37:89 ಮತ್ತು ಹೇಳಿದರು: ನಿಜವಾಗಿಯೂ ನಾನು ರೋಗಗ್ರಸ್ಥನಾಗಿದ್ದೇನೆ.
ﮖﮗﮘﮙ
37:90 ಆದುದರಿಂದ ಅವರು ಅವರನ್ನು ಬಿಟ್ಟು ಹೋದರು.
ﮚﮛﮜﮝﮞﮟﮠ
37:91 ಅವರು (ಮೆಲ್ಲನೆ) ಅವರ ಆರಾಧ್ಯ ದೇವರುಗಳೆಡೆಗೆ ಹೋದರು ಮತ್ತು ಹೇಳತೊಡಗಿದರು: ನೀವು ತಿನ್ನುವುದಿಲ್ಲವೇಕೆ?
ﮡﮢﮣﮤﮥ
37:92 ನಿಮಗೇನಾಗಿದೆ: ನೀವು ಮಾತನಾಡುವುದಿಲ್ಲವಲ್ಲ?
ﮦﮧﮨﮩﮪ
37:93 ನಂತರ ಅವರು ಹಠಾತ್ತಾಗಿ ತಮ್ಮ ಬಲಗÉÊಯಿಂದ ಅವುಗಳನ್ನು ಹೊಡೆಯತೊಡಗಿದರು.
ﮫﮬﮭﮮ
37:94 ಆಗ ಜನರು ಅವರೆಡೆಗೆ ಧಾವಿಸಿ ಬಂದರು.
ﮯﮰﮱﯓﯔ
37:95 ಇಬ್ರಾಹೀಮರು ಹೇಳಿದರು: (ಸ್ವತಃ) ನೀವೇ ಕೆತ್ತಿ ನಿರ್ಮಿಸುತ್ತಿರುವ ವಸ್ತುಗಳನ್ನು ನೀವು ಆರಾಧಿಸುತ್ತಿರುವಿರಾ?
ﯕﯖﯗﯘﯙ
37:96 ವಸ್ತುತಃ ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವ ವಸ್ತುಗಳನ್ನು ಅಲ್ಲಾಹನು ಸೃಷ್ಟಿಸಿದ್ದಾನೆ.
ﯚﯛﯜﯝﯞﯟﯠﯡ
37:97 ಅವರು ಹೇಳತೊಡಗಿದರು: ನೀವು ಇವನಿಗಾಗಿ ಅಗ್ನಿಕುಂಡವನ್ನು ನಿರ್ಮಿಸಿರಿ. ಅನಂತರ ಇವನನ್ನು ಧಗಧಗಿಸುವ ಬೆಂಕಿಯಲ್ಲಿ ಎಸೆದುಬಿಡಿರಿ.
ﯢﯣﯤﯥﯦﯧ
37:98 ಅವರು ಇಬ್ರಾಹೀಮರೊಂದಿಗೆ ತಂತ್ರವೆಸಗಲು ಬಯಸಿದ್ದರು. ಆದರೆ ನಾವು ಅವರನ್ನೇ ಕೀಳಾಗಿ ಮಾಡಿಬಿಟ್ಟೆವು.
ﯨﯩﯪﯫﯬﯭﯮ
37:99 ಮತ್ತÄ ಇಬ್ರಾಹೀಮ್ ಹೇಳಿದರು: ನಾನಂತು ನನ್ನ ಪ್ರಭುವಿನೆಡೆಗೆ ಹೋಗುವೆನು. ಖಂಡಿತ ಅವನು ನನಗೆ ಮಾರ್ಗದರ್ಶನ ಮಾಡಲಿರುವನು.
ﯯﯰﯱﯲﯳﯴ
37:100 ಓ ನನ್ನ ಪ್ರಭುವೇ, ನನಗೆ ನೀನು ಸಜ್ಜನರಲ್ಲಾದ ಸಂತತಿಗಳನ್ನು ಕರುಣಿಸು.
ﯵﯶﯷﯸ
37:101 ಆಗ ನಾವು ಅವರಿಗೆ ಒಬ್ಬ ಸಹನಾಶೀಲ ಪುತ್ರನ ಶುಭ ವಾರ್ತೆಯನ್ನು ನೀಡಿದೆವು.
ﯹﯺﯻﯼﯽﯾﯿﰀﰁﰂﰃﰄﰅﰆﰇﰈﰉﰊﰋﰌﰍﰎﰏﰐﰑﰒﰓﰔﰕ
37:102 ಅನಂತರ ಅವರ ಪುತ್ರನು ಅವರ ಜೊತೆಯಲ್ಲಿ ನಡೆದಾಡುವ ಪ್ರಾಯಕ್ಕೆ ತಲುಪಿದಾಗ ಇಬ್ರಾಹೀಮರು ಹೇಳಿದರು: ಓ ನನ್ನ ಪ್ರಿಯ ಮಗನೇ, ನಾನು ಕನಸಿನಲ್ಲಿ ನಿನ್ನನ್ನು ಕೊಯ್ಯುತ್ತಿರುವುದಾಗಿ ಕಂಡಿರುವೆನು. ನಿನ್ನ ಅಭಿಪ್ರಾಯವೇನೆಂದು ಹೇಳು ಮಗನು ಉತ್ತರಿಸಿದನು. ಓ ನನ್ನ ಪ್ರಿಯತಂದೆಯೇ, ನಿಮಗೆ ಆಜ್ಞೆ ನೀಡಲಾಗಿರುವುದನ್ನು ಕಾರ್ಯರೂಪಕ್ಕೆ ತನ್ನಿರಿ. ಅಲ್ಲಾಹನ ಇಚ್ಛೆಯಿದ್ದರೆ ನೀವು ನನ್ನನ್ನು ಸಹನಾಶೀಲರಲ್ಲಿ ಕಾಣಲಿರುವಿರಿ.
ﭑﭒﭓﭔﭕ
37:103 ಕೊನೆಗೆ ಅವರಿಬ್ಬರೂ ವಿಧೇಯರಾದಾಗ (ತಂದೆಯು) ( ಮಗನನ್ನು) ಅಧೋಮುಖಿಯಾಗಿ ಮಲಗಿಸಿದರು..
ﭖﭗﭘﭙ
37:104 ಆಗ ನಾವು ಕೂಗಿ ಕರೆದೆವು: ಓ ಇಬ್ರಾಹೀಮ್
ﭚﭛﭜﭝﭞﭟﭠﭡﭢ
37:105 ನಿಶ್ಚಯವಾಗಿಯೂ ನೀವು ನಿನ್ನ ಕನಸನ್ನು ನಿಜ ಮಾಡಿ ತೋರಿಸಿರುವಿರಿ. ನಿಸ್ಸಂಶಯವಾಗಿಯು ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
ﭣﭤﭥﭦﭧﭨ
37:106 ವಾಸ್ತವದಲ್ಲಿ ಇದೊಂದು ಸುಸ್ಪಷ್ಟ ಪರೀಕ್ಷೆಯಾಗಿತ್ತು.
ﭩﭪﭫﭬ
37:107 ಮತ್ತು ನಾವು ಅವರ ಪ್ರಾಯಶ್ಚಿತ್ತವಾಗಿ ಮೃಗವೊಂದನ್ನು ಬಲಿ ನೀಡಿದೆವು.
ﭭﭮﭯﭰﭱ
37:108 ಮತ್ತು ನಾವು ಅವರ ಸತ್ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.
ﭲﭳﭴﭵ
37:109 ಇಬ್ರಾಹೀಮರ ಮೇಲೆ ಶಾಂತಿ ಇರಲಿ.
ﭶﭷﭸﭹ
37:110 ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
ﭺﭻﭼﭽﭾ
37:111 ನಿಸ್ಸಂಶಯವಾಗಿಯು ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
ﭿﮀﮁﮂﮃﮄ
37:112 ಮತ್ತು ನಾವು ಅವರಿಗೆ ಸಜ್ಜನರ ಪÉÊಕಿ ಪ್ರವಾದಿಯಾಗಿ ಬರಲಿರುವ ಇಸ್‌ಹಾಕರ ಸುವಾರ್ತೆಯನ್ನು ನೀಡಿದೆವು.
ﮅﮆﮇﮈﮉﮊﮋﮌﮍﮎﮏﮐ
37:113 ಮತ್ತು ನಾವು ಇಬ್ರಾಹೀಮ್ ಮತ್ತು ಇಸ್‌ಹಾಕರ ಮೇಲೆ ಸಮೃದ್ಧಿಯನ್ನು ದಯಪಾಲಿಸಿದೆವು ಮತ್ತು ಅವರಿಬ್ಬರ ಸಂತಾನಗಳಲ್ಲಿ ಕೆಲವರು ಒಳಿತಿನ ಪಾಲಕರಾಗಿದ್ದಾರೆ ಮತ್ತು ಕೆಲವರು ತಮ್ಮ ಮೇಲೆಯೇ ಸ್ಪಷ್ಟ ಅಕ್ರಮವೆಸಗುವವರಿದ್ದಾರೆ.
ﮑﮒﮓﮔﮕﮖ
37:114 ಮತ್ತು ನಿಜವಾಗಿಯೂ ನಾವು ಮೂಸಾ ಮತ್ತು ಹಾರೂನ್‌ರವರ ಮೇಲೆ ಮಹಾ ಉಪಕಾರವನ್ನು ಮಾಡಿದೆವು.
ﮗﮘﮙﮚﮛﮜ
37:115 ಮತ್ತು ನಾವು ಅವರನ್ನು ಮತ್ತು ಅವರ ಜನತೆಯನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
ﮝﮞﮟﮠﮡ
37:116 ಮತ್ತು ನಾವು ಅವರಿಗೆ ಸಹಾಯ ಮಾಡಿದಾಗ ಅವರೇ ಮೇಲುಗÉÊ ಸಾಧಿಸಿದರು.
ﮢﮣﮤﮥ
37:117 ಮತ್ತÄ ನಾವು ಅವರಿಬ್ಬರಿಗೆ ಸುವ್ಯಕ್ತಗ್ರಂಥವನ್ನು ದಯಪಾಲಿಸಿದೆವು.
ﮦﮧﮨﮩ
37:118 ಮತ್ತು ಅವರಿಬ್ಬರನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಿದೆವು.
ﮪﮫﮬﮭﮮ
37:119 ಮತ್ತು ನಾವು ನಂತರದ ತಲೆಮಾರುಗಳಲ್ಲಿ ಅವರ ಕೀರ್ತಿಯನ್ನು ಉಳಿಸಿದೆವು.
ﮯﮰﮱﯓﯔ
37:120 ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ
ﯕﯖﯗﯘﯙ
37:121 ನಿಸ್ಸಂದೇಹವಾಗಿಯೂ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
ﯚﯛﯜﯝﯞ
37:122 ನಿಜವಾಗಿಯು ಅವರಿಬ್ಬರೂ ನಮ್ಮ ಸಜ್ಜನದಾಸರಲ್ಲಾಗಿದ್ದರು.
ﯟﯠﯡﯢﯣ
37:123 ನಿಸ್ಸಂಶಯವಾಗಿಯೂ ಇಲ್ಯಾಸ್‌ರವರು ಸಂದೇಶವಾಹಕ ರಲ್ಲಾಗಿದ್ದರು.
ﯤﯥﯦﯧﯨﯩ
37:124 ಅವರು ತನ್ನ ಜನಾಂಗಕ್ಕೆ ಹೇಳಿದ ಸಂದರ್ಭ : ನೀವು ಅಲ್ಲಾಹನ್ನು ಭಯಪಡುವುದಿಲ್ಲವೇ ?
ﯪﯫﯬﯭﯮﯯ
37:125 125&126
ﯰﯱﯲﯳﯴﯵ
37:126 ನೀವು ಬಾಲ್(ವಿಗ್ರಹ)ನನ್ನು ಪೂಜಿಸುತ್ತಾ ತಮ್ಮ ಅತ್ಯುತ್ತಮ ಸೃಷ್ಟಿಕರ್ತನನ್ನು, ನಿಮ್ಮ ಪ್ರಭುವಾದ ಮತ್ತು ನಿಮ್ಮ ಪೂರ್ವಿಕರ ಪ್ರಭುವಾದ ಅಲ್ಲಾಹನ್ನು ಬಿಟ್ಟಿಬಿಡುತ್ತೀರಾ?
ﭑﭒﭓﭔ
37:127 ಆದರೆ ಅವರು ಇಲ್ಯಾಸ್‌ರವರನ್ನು ಸುಳ್ಳಾಗಿಸಿಬಿಟ್ಟರು. ಆದ್ದರಿಂದ ಅವರು ಖಂಡಿತ ಯಾತನೆಗಾಗಿ ಹಾಜರುಗೊಳಿಸಲಾಗುವರು.
ﭕﭖﭗﭘﭙ
37:128 ಅಲ್ಲಾಹನ ನಿಷ್ಠಾವಂತದಾಸರ ಹೊರತು.
ﭚﭛﭜﭝﭞ
37:129 ನಂತರದ ತಲೆಮಾರುಗಳಲ್ಲಿ ನಾವು ಅವರ ಸತ್ಕೀರ್ತಿಯನ್ನು ಉಳಿಸಿದೆವು.
ﭟﭠﭡﭢﭣ
37:130 ಇಲ್ಯಾಸರ ಮೇಲೆ ಶಾಂತಿ ಇರಲಿ.
ﭤﭥﭦﭧﭨ
37:131 ವಾಸ್ತವದಲ್ಲಿ ನಾವು ಒಳಿತಿನ ಪಾಲಕರಿಗೆ ಹೀಗೆಯೇ ಪ್ರತಿಫಲ ನೀಡುತ್ತೇವೆ.
ﭩﭪﭫﭬﭭ
37:132 ನಿಸ್ಸಂಶಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.
ﭮﭯﭰﭱﭲ
37:133 ಖಂಡಿತವಾಗಿಯೂ ಲೂತರವರೂ ಸಂದೇಶವಾಹಕರಲ್ಲಾಗಿದ್ದರು.
ﭳﭴﭵﭶﭷ
37:134 ನಾವು ಅವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ.
ﭸﭹﭺﭻﭼ
37:135 ಆದರೆ ಹಿಂದುಳಿಯುವವರಲ್ಲಾಗಿದ್ದ ಆ ವೃದ್ಧೆಯ ಹೊರತು.
ﭽﭾﭿﮀ
37:136 ಅನಂತರ ನಾವು ಇತರರನ್ನು ನಾಶಮಾಡಿಬಿಟ್ಟೆವು.
ﮁﮂﮃﮄﮅ
37:137 136&137
ﮆﮇﮈﮉﮊ
37:138 ವಸ್ತುತಃ ನೀವು ಅವರ ನಾಡುಗಳ ಬಳಿಯಿಂದ ಹಗಲು ಮತ್ತು ರಾತ್ರಿಯಲ್ಲಿ ಹಾದು ಹೋಗುತ್ತೀರಿ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?
ﮋﮌﮍﮎﮏ
37:139 ಖಂಡಿತವಾಗಿಯು ಯೂನುಸ್ ಪ್ರವಾದಿಗಳಲ್ಲಾಗಿದ್ದರು.
ﮐﮑﮒﮓﮔﮕ
37:140 ತುಂಬಿದ ಹಡಗಿನ ಕಡೆಗೆ ಅವರು ಓಡಿಹೋದ ಸಂದರ್ಭ.
ﮖﮗﮘﮙﮚ
37:141 ಚೀಟಿ ಎತ್ತಲಾದಾಗ ಅವರು ಸೋಲಿಸುವವರಲ್ಲಾದರು.
ﮛﮜﮝﮞﮟ
37:142 ಆಗ ಅವರನ್ನು ಮೀನು ನುಂಗಿ ಹಾಕಿತು ಮತ್ತು ಅವರು ತನ್ನನ್ನೇ ಆಕ್ಷೇಪಿಸತೊಡಗಿದರು.
ﮠﮡﮢﮣﮤﮥ
37:143 ಇನ್ನು ಅವರು ಅಲ್ಲಾಹನ ಪಾವಿತ್ರö್ಯ ಸ್ತುತಿಸುವವರಲ್ಲಿ ಸೇರಿಲ್ಲದಿರುತ್ತಿದ್ದರೆ.
ﮦﮧﮨﮩﮪﮫﮬ
37:144 ಪುನರುತ್ಥಾನ ದಿನದವರೆಗೂ ಅದರ ಹೊಟ್ಟೆಯೊಳಗೆ ಇರುತ್ತಿದ್ದರು.
ﮭﮮﮯﮰﮱﯓ
37:145 ಕೊನೆಗೆ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದಾಗ ನಾವು ಅವರನ್ನು ಸಮತಟ್ಟಾದ ವÉÄÊದಾನದಲ್ಲಿ ಎಸೆದು ಬಿಟ್ಟೆವು.
ﯔﯕﯖﯗﯘﯙ
37:146 ಮತ್ತÄ ನಾವು ಅವರ ಮೇಲೆ ನೆರಳನ್ನು ನೀಡುವಂತಹ ಸೋರೆಕಾಯಿಯ ಬಳ್ಳಿಯನ್ನು ಬೆಳೆಸಿದೆವು.
ﯚﯛﯜﯝﯞﯟﯠ
37:147 ಮತ್ತÄ ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಂಖ್ಯೆಯಿರುವ ಜನರೆಡೆಗೆ ಕಳುಹಿಸಿದೆವು.
ﯡﯢﯣﯤﯥ
37:148 ಆಗ ಅವರು ಸತ್ಯವಿಶ್ವಾಸವಿರಿಸಿದರು. ಆದ್ದರಿಂದ ನಾವು ಅವರಿಗೆ ಒಂದು ನಿರ್ದಿಷ್ಟಕಾಲದವರೆಗೆ ಸುಖಬೋಗಗಳನ್ನು ನೀಡಿದೆವು.
ﯦﯧﯨﯩﯪﯫ
37:149 ಓ ಪೈಗಂಬರÀರೇ ಇವರೊಂದಿಗೆ ಕೇಳಿರಿ: ನಿಮ್ಮ ಪ್ರಭುವಿಗೆ ಹೆಣ್ಣುಮಕ್ಕಳು ಮತ್ತು ಇವರಿಗೆ ಗಂಡುಮಕ್ಕಳೇ ?
ﯬﯭﯮﯯﯰﯱﯲ
37:150 ಅಥವಾ ನಾವು ಮಲಕ್‌ಗಳನ್ನು ಹೆಣ್ಣಾಗಿ ಸೃಷ್ಟಿಸಿದಾಗ ಇವರು ಹಾಜರಿದ್ದರೇ ?
ﯳﯴﯵﯶﯷﯸ
37:151 ಜಾಗ್ರತೆ !ಇವರು ಕೇವಲ ತಮ್ಮ ಮಿಥ್ಯಕಲ್ಪನೆಯಿಂದ ಅಲ್ಲಾಹನಿಗೆ ಸಂತಾನವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
ﯹﯺﯻﯼﯽ
37:152 ಖಂಡಿತ ಅಲ್ಲಾಹನು ಮಕ್ಕಳನ್ನು ಹಡಿದಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ.
ﯾﯿﰀﰁﰂ
37:153 ಅಲ್ಲಾಹನು ತನಗೋಸ್ಕರ ಪುತ್ರರ ಬದಲು ಪುತ್ರಿಯರನ್ನು ಆಯ್ಕೆ ಮಾಡಿರುವೆನೇ?
ﭑﭒﭓﭔﭕ
37:154 ನಿಮಗೇನಾಗಿದೇ ನೀವು ಎಂತಹ ತಿರ್ಮಾನವನ್ನು ಮಾಡುತ್ತಿರುವಿರಿ?
ﭖﭗﭘ
37:155 ಇನ್ನು ನೀವು ಯೋಚಿಸಿ ಪಾಠಕಲಿಯುವುದಿಲ್ಲವೇ ?
ﭙﭚﭛﭜﭝ
37:156 ಅಥವಾ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಆಧಾರವಿದೆಯೇ ?
ﭞﭟﭠﭡﭢﭣ
37:157 ನೀವು ಸತ್ಯವಂತರಾಗಿದ್ದರೆ ನಿಮ್ಮ ಗ್ರಂಥವನ್ನು ತನ್ನಿರಿ.
ﭤﭥﭦﭧﭨﭩﭪﭫﭬﭭﭮﭯ
37:158 ಮತ್ತು ಇವರು ಅಲ್ಲಾಹನ ಮತ್ತÄ ಜಿನ್ನ್ಗಳ (ಯಕ್ಷ) ನಡುವೆ ಕುಟುಂಬ ಸಂಬAಧವನ್ನು ನಿಶ್ಚಿಯಿಸಿದ್ದಾರೆ! ಮತ್ತು ವಸ್ತುತಃ ಜಿನ್ನ್ಗಳಿಗೆ (ಯಕ್ಷ) ಇಂತಹ ವಿಶ್ವಾಸವನ್ನಿಡುವ ಸತ್ಯನಿಷೇಧಿಗಳನ್ನು ಯಾತನೆಗೆ ಹಾಜರುಗೊಳಿಸಲಾಗುವರೆಂದು ಗೊತ್ತಿದೆ.
ﭰﭱﭲﭳﭴ
37:159 ಅವರು ಆರೋಪಿಸುತ್ತಿರುವ ವಿಷಯಗಳಿಂದ ಅಲ್ಲಾಹನು ಪವಿತ್ರನಾಗಿರುವನು.
ﭵﭶﭷﭸﭹ
37:160 ಅಲ್ಲಾಹನ ನಿಷ್ಠಾವಂತದಾಸರ ಹೊರತು.
ﭺﭻﭼﭽ
37:161 ನಿಜವಾಗಿಯು ನೀವೂ, ನಿಮ್ಮ (ಮಿಥ್ಯ) ಆರಾಧ್ಯರೂ….
ﭾﭿﮀﮁﮂ
37:162 ಅಲ್ಲಾಹನ ವಿರುದ್ಧ ಯಾವೊಬ್ಬನನ್ನೂ ದಾರಿ ತಪ್ಪಿಸಲಾರಿರಿ.
ﮃﮄﮅﮆﮇﮈ
37:163 ಆದರೆ ನರಕಕ್ಕೆ ಅರ್ಹನಾಗಿರುವವನ ಹೊರತು.
ﮉﮊﮋﮌﮍﮎﮏ
37:164 (ದೇವಚರರು ಹೇಳುತ್ತಾರೆ) ನಮ್ಮ ಪÉÊಕಿ ಪ್ರತಿಯೊಬ್ಬರ ಸ್ಥಾನವು ನಿಶ್ಚಿತವಿದೆ.
ﮐﮑﮒﮓ
37:165 ಮತ್ತು ನಾವು (ಅಲ್ಲಾಹನ ಆರಾಧನೆಯಲ್ಲಿ) ಪಂಕ್ತಿ ಬದ್ಧರಾಗಿ ನಿಂತಿರುವೆವು.
ﮔﮕﮖﮗ
37:166 ಮತ್ತು ಅವನ ಪಾವಿತ್ರö್ಯವನ್ನು ಸ್ತÄತಿಸುತ್ತಿರುವೆವು.
ﮘﮙﮚﮛ
37:167 ಮತ್ತು ಸತ್ಯನಿಷೇಧಿಗಳು ಹೇಳುತ್ತಿದ್ದರು.
ﮜﮝﮞﮟﮠﮡﮢ
37:168 ನಮ್ಮ ಬಳಿ ಪೂರ್ವಿಕರ ಉದ್ಭೋಧನೆಯೇನಾದರೂ ಇರುತ್ತಿದ್ದರೆ.
ﮣﮤﮥﮦﮧ
37:169 ನಾವು ಸಹ ಅಲ್ಲಾಹನ ನಿಷ್ಠಾವಂತದಾಸರಾಗುತ್ತಿದ್ದೆವು.
ﮨﮩﮪﮫﮬﮭ
37:170 ಆದರೆ ಅವರು ಈ ಕುರ್‌ಆನನ್ನು ನಿಷೇಧಿಸಿ ಬಿಟ್ಟರು. ಇನ್ನು ಸದ್ಯದಲ್ಲೇ ಅದರ ಪರಿಣಾಮವನ್ನು ಮನಗಾಣಲಿರುವರು.
ﮮﮯﮰﮱﯓﯔ
37:171 ಮತ್ತು ನಿಸ್ಸಂದೇಹವಾಗಿಯು ನಮ್ಮ ದಾಸರಾದ ಸಂದೇಶವಾಹಕರಿಗೆ ಈ ಮೊದಲೇ ವಾಗ್ದಾನವಿತ್ತಿದ್ದೇವೆ.
ﯕﯖﯗﯘ
37:172 ನಿಶ್ಚಯವಾಗಿಯೂ ಅವರಿಗೆ ಸಹಾಯ ನೀಡಲಾಗುವುದು.
ﯙﯚﯛﯜﯝ
37:173 ಖಂಡಿತವಾಗಿಯೂ ನಮ್ಮ ಸÉÊನ್ಯವೇ ವಿಜಯಿಯಾಗುವು ದೆಂದು.
ﯞﯟﯠﯡﯢ
37:174 ಓ (ಪೈಗಂಬರರೇ) ಆದುದರಿಂದ ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಕಡೆಗಣಿಸಿರಿ.
ﯣﯤﯥﯦ
37:175 ಮತ್ತು ಅವರನ್ನು ನೋಡುತ್ತಿರಿ ಸಧ್ಯವೇ ಅವರು ತಮ್ಮ ಪರಿಣಾಮವನ್ನು ನೋಡಲಿರುವರು.
ﯧﯨﯩ
37:176 ಅವರು ನಮ್ಮ ಯಾತನೆಗಾಗಿ ಆತುರ ಪಡುತ್ತಿದ್ದಾರೆಯೇ ?
ﯪﯫﯬﯭﯮﯯﯰ
37:177 ನಮ್ಮ ಶಿಕ್ಷೆಯು ಅವರ ಅಂಗಳಕ್ಕೆ ತಲುಪಿದಾಗ ಎಚ್ಚರಿಕೆ ನೀಡಲಾದವರ ಪ್ರಭಾತವು ಅತ್ಯಂತ ಕೆಟ್ಟದಾಗಲಿರುವುದು.
ﯱﯲﯳﯴﯵ
37:178 ಆದುದರಿಂದ ನೀವು ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಬಿಟ್ಟುಬಿಡಿರಿ.
ﯶﯷﯸﯹ
37:179 ಮತ್ತು ನೋಡುತ್ತಿರಿ. ಅವರು ಸಹ ಸದ್ಯದಲ್ಲೇ ನೋಡಲಿರುವರು.
ﯺﯻﯼﯽﯾﯿﰀ
37:180 ಮಹಾ ಪ್ರತಾಪಶಾಲಿಯಾದ ನಿಮ್ಮ ಪ್ರಭುವು ಇವರು ಆರೋಪಿಸುತ್ತಿರುವವುಗಳಿಂದ ಪರಮಪಾವನನು.
ﰁﰂﰃﰄ
37:181 ಸಂದೇಶವಾಹಕರ ಮೇಲೆ ಅಲ್ಲಾಹನ ಶಾಂತಿ ಇರುವುದು.
ﰅﰆﰇﰈﰉ
37:182 ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವ ಸ್ತುತಿಯು ಮೀಸಲು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers