PDF —
40 ಆಯತ್ Meccan PDF
Built right in your browser — download starts automatically

ಸೂರಾ ಅನ್-ನಬಾ pdf — ಡೌನ್‌ಲೋಡ್ (ಕನ್ನಡ)

ಸೂರಾ ಅನ್-ನಬಾ pdf ಕನ್ನಡ — ಡೌನ್‌ಲೋಡ್ ಸೂರಾ ಅನ್-ನಬಾ ಅನುವಾದ. ಸೂರಾ ಅನ್-ನಬಾ (Meccan) 40 ಆಯತ್.



40 ಆಯತ್ · Meccan · ಕನ್ನಡ
bismillah
ﭑﭒﭓ
78:1 ಸತ್ಯನಿಷೇಧಿಗಳು ಯಾವುದರ ಬಗ್ಗೆ ಪರಸ್ಪರ ವಿಚಾರಿಸುತ್ತಿದ್ದಾರೆ ?
ﭔﭕﭖﭗ
78:2 (ಪ್ರಳಯದ) ಆ ಮಹಾ ವರ‍್ತೆಯ ಬಗ್ಗೆ,
ﭘﭙﭚﭛﭜ
78:3 ಅವರು ಅದರ ಕುರಿತು ಭಿನ್ನಾಭಿಪ್ರಾಯ ತೋರುತ್ತಿದ್ದಾರೆ,
ﭝﭞﭟ
78:4 ಸಂದೇಹವಿಲ್ಲ ಅವರು ಸದ್ಯದಲ್ಲೇ (ಅದರ ವಾಸ್ತವಿಕತೆಯನ್ನು) ಅರಿತುಕೊಳ್ಳುವರು.
ﭠﭡﭢﭣ
78:5 ಪುನಃ ಖಂಡಿತವಾಗಿಯೂ ಅವರು ಸದ್ಯದಲ್ಲೇ ಅರಿತುಕೊಳ್ಳುವರು.
ﭤﭥﭦﭧﭨ
78:6 ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ ?
ﭩﭪﭫ
78:7 ನಾವು ರ‍್ವತಗಳನ್ನು (ಭೂಮಿಯ ಸ್ಥಿರತೆಗೆ) ಮೊಳೆಗಳನ್ನಾಗಿಯು (ಮಾಡಲಿಲ್ಲವೇ)?
ﭬﭭﭮ
78:8 ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿದ್ದೇವೆ.
ﭯﭰﭱﭲ
78:9 ನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಯ ಸಾಧನವನ್ನಾಗಿ ಮಾಡಿದ್ದೇವೆ.
ﭳﭴﭵﭶ
78:10 ರಾತ್ರಿಯನ್ನು ನಾವು ತೆರೆಯನ್ನಾಗಿ ಮಾಡಿದ್ದೇವೆ.
ﭷﭸﭹﭺ
78:11 ಹಗಲನ್ನು ನಾವು ಜೀವನೋಪಾಯ ವೇಳೆಯನ್ನಾಗಿ ಮಾಡಿದ್ದೇವೆ.
ﭻﭼﭽﭾﭿ
78:12 ನಿಮ್ಮ ಮೇಲ್ಭಾಗದಲ್ಲಿ ನಾವು ಬಲಿಷ್ಠವಾದ ಏಳು ಆಕಾಶಗಳನ್ನು ನರ‍್ಮಿಸಿದ್ದೇವೆ.
ﮀﮁﮂﮃ
78:13 ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.
ﮄﮅﮆﮇﮈﮉ
78:14 ನಾವು ಕರ‍್ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸುತ್ತೇವೆ.
ﮊﮋﮌﮍﮎ
78:15 ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.
ﮏﮐﮑ
78:16 ಮತ್ತು ದಟ್ಟವಾಗಿ ಬೆಳೆದ ತೋಟಗಳನ್ನೂ ಸಹ.
ﮒﮓﮔﮕﮖﮗ
78:17 ನಿಸ್ಸಂದೇಹವಾಗಿಯೂ ತರ‍್ಪಿನ ದಿನವು ನಿಶ್ಚಿತವಾಗಿದೆ.
ﮘﮙﮚﮛﮜﮝﮞ
78:18 ಕಹಳೆ ಮೊಳಗುವಂದು ನೀವು ಗುಂಪು ಗುಂಪುಗಳಾಗಿ ಬರುವಿರಿ.
ﮟﮠﮡﮢﮣ
78:19 ಆಕಾಶವು ತೆರೆಯಲ್ಪಟ್ಟು ಅದು ದ್ವಾರಗಳೇ ದ್ವಾರಗಳಾಗಿ ಬಿಡುವುದು.
ﮤﮥﮦﮧﮨ
78:20 ರ‍್ವತಗಳು ಚಲಿಸಲ್ಪಡುವುವು. ಆಗ ಅವು ಮರೀಚಿಕೆಯಂತೆ ಆಗಿಬಿಡುವುವು.
ﮩﮪﮫﮬﮭ
78:21 ನಿಸ್ಸಂದೇಹವಾಗಿಯೂ ನರಕಾಗ್ನಿಯು ಹೊಂಚಿನಲ್ಲಿದೆ.
ﮮﮯﮰ
78:22 ಅದು ವಿದ್ರೋಹಿಗಳ ವಾಸಸ್ಥಾನವಾಗಿದೆ.
ﮱﯓﯔﯕ
78:23 ಅವರು ಅದರಲ್ಲಿ ಯುಗಾನುಯುಗ ಬಿದ್ದಿರುವರು.
ﯖﯗﯘﯙﯚﯛﯜ
78:24 ಅಲ್ಲಿ ಅವರು ತಂಪನ್ನಾಗಲಿ, ಪಾನೀಯವನ್ನಾಗಲಿ, ಸವಿಯಲಾರರು.
ﯝﯞﯟﯠ
78:25 ಕುದಿಯುವ ನೀರು ಮತ್ತು ಕೀವಿನ ಹೊರತು.
ﯡﯢﯣ
78:26 ಅವರ ದುಷ್ರ‍್ಮಗಳಿಗೆ ತಕ್ಕದಾದ ಪ್ರತಿಫಲ ಲಭಿಸುವುದು.
ﯤﯥﯦﯧﯨﯩ
78:27 ಖಂಡಿತವಾಗಿಯೂ ಅವರು ಲೆಕ್ಕ ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.
ﯪﯫﯬﯭ
78:28 ಅವರು ನಮ್ಮ ಸೂಕ್ತಿಗಳನ್ನು ಸಂಪರ‍್ಣವಾಗಿ ಸುಳ್ಳಾಗಿಸಿದರು.
ﯮﯯﯰﯱﯲ
78:29 ನಾವು ಸಕಲ ವಿಷಯಗಳನ್ನೂ ಎಣಿಸಿ ಒಂದು ಗ್ರಂಥದಲ್ಲಿ ದಾಖಲಿಸಿಟ್ಟಿರುವೆವು.
ﯳﯴﯵﯶﯷﯸ
78:30 ಇನ್ನು ನೀವು ರುಚಿಯನ್ನು ಸವಿಯಿರಿ, ನಾವು ನಿಮ್ಮ ಶಿಕ್ಷೆಯ ಹೊರತು ಇನ್ನೇನನ್ನೂ ಹೆಚ್ಚಿಸಲಾರೆವು.
ﭑﭒﭓﭔ
78:31 ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಯಶಸ್ಸು ಇದೆ.
ﭕﭖﭗ
78:32 ತೋಟಗಳು ಮತ್ತು ದ್ರಾಕ್ಷಿಗಳಿವೆ.
ﭘﭙﭚ
78:33 ಸಮವಯಸ್ಕರಾದ ತರುಣಿಯರಿರುವರು.
ﭛﭜﭝ
78:34 ತುಂಬಿತುಳುಕುವ ಪಾನಪಾತ್ರೆಗಳಿರುವುವು.
ﭞﭟﭠﭡﭢﭣﭤ
78:35 ಅವರು (ಸ್ರ‍್ಗವಾಸಿಗಳು) ಅಲ್ಲಿ ಅನಗತ್ಯವಾದ ಮಾತನ್ನಾಗಲಿ ಅಥವಾ ಸುಳ್ಳು ಮಾತನ್ನಾಗಲಿ ಆಲಿಸಲಾರರು.
ﭥﭦﭧﭨﭩﭪ
78:36 (ಇದು) ನಿಮ್ಮ ಪ್ರಭುವಿನ ವತಿಯಿಂದ (ನಿಮ್ಮ ಪುಣ್ಯರ‍್ಮಗಳ) ಪ್ರತಿಫಲ ಮತ್ತು ಸಾಕಷ್ಟು ಪುರಸ್ಕಾರವಿರುವುದು.
ﭫﭬﭭﭮﭯﭰﭱﭲﭳﭴﭵﭶ
78:37 ಭೂಮಿ ಆಕಾಶಗಳ ಮತ್ತು ಅವುಗಳೆರಡರ ನಡುವೆ ಇರುವ ಸಕಲ ವಸ್ತುಗಳ ಪ್ರಭುವಾಗಿರುವ ಪರಮದಯಾಮಯನವತಿಯಿಂದ ಅವನೊಡನೆ ಮಾತನಾಡುವ ಸಾರ‍್ಥ್ಯ ಯಾರಿಗೂ ಇರದು.
ﭷﭸﭹﭺﭻﭼﭽﭾﭿﮀﮁﮂﮃﮄﮅﮆ
78:38 ಅಂದು ರೂಹ್(ಜಿಬ್ರೀಲ್) ಮತ್ತು ದೂತರು ಸಾಲುಗಟ್ಟಿ ನಿಲ್ಲುವರು, ಪರಮ ದಯಾಮಯನಾದ ಅಲ್ಲಾಹನ ಅನುಮತಿ ಪಡೆದ ಮತ್ತು ಸರಿಯಾದ ಮಾತನ್ನೇ ಆಡುವ ವ್ಯಕ್ತಿಯ ಹೊರತು ಇನ್ನಾರೂ ಅವನೊಡನೆ ಮಾತನಾಡಲಾರರು.
ﮇﮈﮉﮊﮋﮌﮍﮎﮏﮐﮑ
78:39 ಆ ದಿನವು ಸತ್ಯವಾಗಿದೆ, ಇನ್ನು ಇಚ್ಛಿಸುವವನು ತನ್ನ ಪ್ರಭುವಿನ ಕಡೆಯ ಮರ‍್ಗವನ್ನು ಹಿಡಿಯಲಿ.
ﮒﮓﮔﮕﮖﮗﮘﮙﮚﮛﮜﮝﮞﮟﮠﮡ
78:40 ಖಂಡಿತವಾಗಿಯೂ ನಾವು ನಿಮಗೆ ಸದ್ಯದಲ್ಲೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿಬಿಟ್ಟಿದ್ದೇವೆ, ಅಂದು ಮನುಷ್ಯನು ತನ್ನ ಕೈಗಳು ಹಿಂದೆ ಮಾಡಿಟ್ಟಿರುವುದನ್ನು ಕಾಣುವನು ಮತ್ತು ಸತ್ಯನಿಷೇಧಿಯು ಹೇಳುವನು; 'ಅಯ್ಯೋ ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು'.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers