PDF —
36 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಮುತಫ್ಫಿಫಿನ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಮುತಫ್ಫಿಫಿನ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮುತಫ್ಫಿಫಿನ್ ಅನುವಾದ. ಸೂರಾ ಅಲ್-ಮುತಫ್ಫಿಫಿನ್ (Meccan) 36 ಆಯತ್.

← ಅಲ್-ಇನ್ಫಿತಾರ್ಸೂರಾ ಅಲ್-ಮುತಫ್ಫಿಫಿನ್ ಅಲ್-ಇನ್ಶಿಕಾಕ್ →


36 ಆಯತ್ · Meccan · ಕನ್ನಡ
bismillah
ﯖﯗﯘ
83:1 ಅಳತೆ ಮತ್ತುತೂಕದಲ್ಲಿ ಕಡಿತಗೊಳಿಸುವವರಿಗೆ ಮಹಾ ನಾಶವಿದೆ.
ﯙﯚﯛﯜﯝﯞﯟ
83:2 ಅವರು ಜನರಿಂದ ಅಳೆದು ಪಡೆಯುವಾಗ ಸಂಪರ‍್ಣವಾಗಿ ಪಡೆಯುವರು.
ﯠﯡﯢﯣﯤﯥ
83:3 ಮತ್ತು ಜನರಿಗೆ ಅಳೆದು ಅಥವಾ ತೂಕಮಾಡಿ ಕೊಡುವಾಗ ಕಡಿಮೆ ಕೊಡುವರು.
ﯦﯧﯨﯩﯪﯫ
83:4 ಅವರು ಮರಣದ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವವರೆಂದು ಗ್ರಹಿಸಲಿಲ್ಲವೇ ?
ﭑﭒﭓ
83:5 ಆ ಮಹಾ ದಿನಕ್ಕಾಗಿ.
ﭔﭕﭖﭗﭘﭙ
83:6 ಅಂದು ಸಕಲ ಜನರು ರ‍್ವಲೋಕಗಳ ಪ್ರಭುವಿನ ಮುಂದೆ ನಿಲ್ಲುವರು.
ﭚﭛﭜﭝﭞﭟﭠ
83:7 ಖಂಡಿತವಾಗಿಯೂ ದುಷ್ರ‍್ಮಿಗಳ ರ‍್ಮಪತ್ರವು ಸಿಜ್ಜೀನ್ನಲ್ಲಿದೆ.
ﭡﭢﭣﭤﭥ
83:8 ಸಿಜ್ಜೀನ್ ಏನೆಂದು ನಿಮಗೇನು ಗೊತ್ತು ?
ﭦﭧﭨ
83:9 ಅದು ಒಂದು ಲಿಖಿತ ಗ್ರಂಥವಾಗಿದೆ.
ﭩﭪﭫﭬ
83:10 ಅಂದು ಸುಳ್ಳಾಗಿಸುವವರಿಗೆ ಮಹಾ ನಾಶವಿದೆ.
ﭭﭮﭯﭰﭱ
83:11 ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸುತ್ತಾರೆ.
ﭲﭳﭴﭵﭶﭷﭸﭹ
83:12 ಅದನ್ನು ಕೇವಲ ಹದ್ದುಮೀರುವ (ಮತ್ತು) ಪ್ರತಿಯೊಬ್ಬ ಮಹಾಪಾಪಿಯಾಗಿರುವವನು ಮಾತ್ರವೇ ಸುಳ್ಳಾಗಿಸುತ್ತಾನೆ.
ﭺﭻﭼﭽﭾﭿﮀﮁ
83:13 ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಕೊಡಲಾದರೆ ಇವು ಕೇವಲ ಪರ‍್ವಿಕರ ಕಟ್ಟುಕಥೆಗಳಾಗಿವೆ ಎನ್ನುತ್ತಾನೆ.
ﮂﮃﮄﮅﮆﮇﮈﮉﮊﮋﮌ
83:14 ಅಲ್ಲ, ಅವನ ಸಂಶಯ ಸರಿಯಿಲ್ಲ ಅವರ ರ‍್ಮಗಳ ನಿಮಿತ್ತ ಅವರ ಹೃದಯಗಳಿಗೆ ತುಕ್ಕು ಹಿಡಿದಿದೆ.
ﮍﮎﮏﮐﮑﮒﮓ
83:15 ಖಂಡಿತ ಇಲ್ಲ, ಅಂದು ಅವರು ತಮ್ಮ ಪ್ರಭುವಿನ ರ‍್ಶನದಿಂದ ವಂಚಿಸಲಾಗುವರು.
ﮔﮕﮖﮗﮘ
83:16 ತರುವಾಯ ಅವರು ಖಂಡಿತವಾಗಿಯೂ ನರಕಾಗ್ನಿಗೆ ನೂಕಲ್ಪಡುವರು.
ﮙﮚﮛﮜﮝﮞﮟﮠ
83:17 ಅನಂತರ ನೀವು ಸುಳ್ಳಾಗಿಸುತ್ತಿದ್ದುದು ಇದುವೇ ಆಗಿದೆ ಎಂದು ಅವರೊಡನೆ ಹೇಳಲಾಗುವುದು.
ﮡﮢﮣﮤﮥﮦﮧ
83:18 ಅವರ ಸಂಶಯ ಸರಿಯಿಲ್ಲ, ಖಂಡಿತವಾಗಿಯೂ ಸಜ್ಜನರ ರ‍್ಮಪತ್ರವು ಇಲ್ಲಿಯ್ಯೀನ್ನಲ್ಲಿರುವುದು.
ﮨﮩﮪﮫﮬ
83:19 ಇಲ್ಲಿಯ್ಯೀನ್ ಏನೆಂದು ನಿಮಗೇನು ಗೊತ್ತು ?
ﮭﮮﮯ
83:20 (ಅದು) ಲಿಖಿತ ಗ್ರಂಥವಾಗಿದೆ.
ﮰﮱﯓ
83:21 ನಿಕಟ ಮಲಕ್ಗಳು ಅದನ್ನು ವೀಕ್ಷಿಸುತ್ತಿರುವರು.
ﯔﯕﯖﯗﯘ
83:22 ಖಂಡಿತವಾಗಿಯೂ ಸಜ್ಜನರು ಸುಖಾನುಗ್ರಹಗಳಲ್ಲಿರುವರು.
ﯙﯚﯛﯜ
83:23 ಮಂಚಗಳಲ್ಲಿ ಕುಳಿತು ಅವರು ನೋಡುತ್ತಿರುವರು.
ﯝﯞﯟﯠﯡﯢ
83:24 ಅವರ ಮುಖಗಳಲ್ಲೇ ಸುಸ್ಥಿತಿಯ ಕಾಂತಿಯನ್ನು ನೀವು ಕಾಣುತ್ತಿರುವಿರಿ.
ﯣﯤﯥﯦﯧ
83:25 ಮುದ್ರೆಯೊತ್ತಲಾದ ಶುದ್ಧ ಮದ್ಯವನ್ನು ಅವರಿಗೆ ಕುಡಿಸಲಾಗುವುದು.
ﯨﯩﯪﯫﯬﯭﯮﯯ
83:26 ಅದರ ಮೇಲೆ ಕಸ್ತೂರಿಯ ಮುದ್ರೆಯಿರುವುದು. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.
ﯰﯱﯲﯳ
83:27 ಅದರ ಮಿಶ್ರಣವು 'ತಸ್ನೀಮ್'ನದ್ದಾಗಿರುವುದು.
ﯴﯵﯶﯷﯸ
83:28 . (ಅಂದರೆ) ಅದೊಂದು ಒರತೆ, ಅದರ ನೀರನ್ನು ಸಾಮಿಪ್ಯ ಪಡೆದವರು ಕುಡಿಯುವರು.
ﯹﯺﯻﯼﯽﯾﯿﰀﰁ
83:29 ಖಂಡಿತವಾಗಿಯೂ ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡಿ ನಗುತ್ತಿದ್ದರು.
ﰂﰃﰄﰅﰆ
83:30 (ಸತ್ಯವಿಶ್ವಾಸಿಗಳು) ಅವರ ಮುಂದಿನಿಂದ ಹಾದು ಹೋಗುವಾಗ ಅವರು ಪರಸ್ಪರ ಕಣ್ಣುಸನ್ನೆ ಮಾಡುತ್ತಿದ್ದರು.
ﰇﰈﰉﰊﰋﰌﰍ
83:31 ಅವರು ತಮ್ಮ ಮನೆಯವರ ಕಡೆಗೆ ಮರಳುವಾಗ ಹಿಗ್ಗುತ್ತಾ ಮರಳುತ್ತಿದ್ದರು.
ﰎﰏﰐﰑﰒﰓﰔ
83:32 ವಿಶ್ವಾಸಿಗಳನ್ನು ಕಂಡಾಗ ಖಂಡಿತ ಇವರು ದಾರಿಗೆಟ್ಟವರು ಎನ್ನುತ್ತಿದ್ದರು.
ﰕﰖﰗﰘﰙ
83:33 ವಾಸ್ತವದಲ್ಲಿ ಅವರೇನೂ (ಮಕ್ಕಾದ ಸತ್ಯನಿಷೇಧಿಗಳು) ಅವರ ಮೇಲೆ ಮೇಲ್ವಿಚಾರಕರಾಗಿ ನಿಯೋಗಿಸಲ್ಪಟ್ಟಿರಲಿಲ್ಲ.
ﭑﭒﭓﭔﭕﭖﭗ
83:34 ಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಅಣಕಿಸಿ ನಗುವರು.
ﭘﭙﭚﭛ
83:35 ಅವರು ಮಂಚಗಳಲ್ಲಿ ಕುಳಿತು ನೋಡುತ್ತಿರುವರು.
ﭜﭝﭞﭟﭠﭡﭢ
83:36 ಸತ್ಯನಿಷೇಧಿಗಳು ತಾವು ಮಾಡಿರುವುದಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ ಎನ್ನುವರು ?

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers