ಅಲ್-ಇಸ್ರಾ · 58/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَإِن مِّن قَرْيَةٍ إِلَّا نَحْنُ مُهْلِكُوهَا قَبْلَ يَوْمِ الْقِيَامَةِ أَوْ مُعَذِّبُوهَا عَذَابًا شَدِيدًا ۚ كَانَ ذَٰلِكَ فِي الْكِتَابِ مَسْطُورًا ۝٥٨
Wa im min qaryatin illaa Nahnu muhlikoohaa qabla Yawmil Qiyaamati aw mu`az ziboohaa `azaaban shadeedaa; kaana zaalika fil Kitaabi mastooraa
📖 ಕನ್ನಡ ಅರ್ಥ
ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ನಾಡಿರುವುದಿಲ್ಲ. ಇದು ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ.

🎧 ಆಲಿಸಿ


📜 ಆಯತ್ 56-60 — ಸೂರಾ ಅಲ್-ಇಸ್ರಾ

56قُلِ ادْعُوا الَّذِينَ زَعَمْتُم مِّن دُونِهِ فَلَا يَمْلِكُونَ كَشْفَ الضُّرِّ عَنكُمْ وَلَا تَحْوِيلًا
ಹೇಳಿರಿ: ನೀವು ಅಲ್ಲಾಹನ ಹೊರತು ಯಾರನ್ನು ಆರಾಧ್ಯರೆಂದು ಭಾವಿಸುತ್ತಿರುವಿರೋ ಅವರನ್ನು ಕರೆದುಬೇಡಿಕೊಳ್ಳಿರಿ. ಆದರೆ ಅವರು ನಿಮ್ಮಿಂದ ಯಾವುದೇ ಸಂಕಷ್ಟವನ್ನು ನೀಗಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ.
57أُولَٰئِكَ الَّذِينَ يَدْعُونَ يَبْتَغُونَ إِلَىٰ رَبِّهِمُ الْوَسِيلَةَ أَيُّهُمْ أَقْرَبُ وَيَرْجُونَ رَحْمَتَهُ وَيَخَافُونَ عَذَابَهُ ۚ إِنَّ عَذَابَ رَبِّكَ كَانَ مَحْذُورًا
ಇವರು ಯಾರನ್ನು ಕರೆದು ಬೇಡುತ್ತಿದ್ದಾರೋ ಸ್ವತಃ ಅವರೇ ತಮ್ಮ ಪ್ರಭುವಿನ ಸಾಮಿಪ್ಯ ಪಡೆಯುವ ಸಾಧನವನ್ನು ಅರಸುತ್ತಾರೆ ತಮ್ಮಲ್ಲಿ ಯಾರು ಅತ್ಯಂತ ನಿಕಟನಾಗುವನೆಂದು. ಸ್ವತಃ ಅವರೇ ಅವನ ಕಾರುಣ್ಯವನ್ನು ಆಶಿಸುತ್ತಿದ್ದಾರೆ ಹಾಗೂ ಅವರು ಯಾತನೆಯನ್ನು ಭಯಪಡುತ್ತಿದ್ದಾರೆ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಯಾತನೆಯು ಭಯಪಡಬೇಕಾದುದ್ದೆ ಆಗಿದೆ.
58وَإِن مِّن قَرْيَةٍ إِلَّا نَحْنُ مُهْلِكُوهَا قَبْلَ يَوْمِ الْقِيَامَةِ أَوْ مُعَذِّبُوهَا عَذَابًا شَدِيدًا ۚ كَانَ ذَٰلِكَ فِي الْكِتَابِ مَسْطُورًا
ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ನಾಡಿರುವುದಿಲ್ಲ. ಇದು ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ.
59وَمَا مَنَعَنَا أَن نُّرْسِلَ بِالْآيَاتِ إِلَّا أَن كَذَّبَ بِهَا الْأَوَّلُونَ ۚ وَآتَيْنَا ثَمُودَ النَّاقَةَ مُبْصِرَةً فَظَلَمُوا بِهَا ۚ وَمَا نُرْسِلُ بِالْآيَاتِ إِلَّا تَخْوِيفًا
ದೃಷ್ಟಾಂತಗಳನ್ನು ಕಳುಹಿಸುವುದರಿಂದ ನಮ್ಮನ್ನು ತಡೆದಿರುವುದು ಕೇವಲ ಅವುಗಳನ್ನು ಪೂರ್ವಜರು ಸುಳ್ಳಾಗಿಸಿಬಿಟ್ಟಿದ್ದರೆಂಬ ಸಂಗತಿಯಾಗಿದೆ ನಾವು ಸಮೂದ್ ಜನಾಂಗಕ್ಕೆ ಸ್ಪಷ್ಟ ದೃಷ್ಟಾಂತವಾಗಿ ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರೊಂದಿಗೆ ಅಕ್ರಮವೆಸಗಿದರು ಮತ್ತು ನಾವು ಭಯ ಹುಟ್ಟಿಸಲೆಂದೇ ದೃಷ್ಟಾಂತಗಳನ್ನು ಕಳುಹಿಸುತ್ತೇವೆ.
60وَإِذْ قُلْنَا لَكَ إِنَّ رَبَّكَ أَحَاطَ بِالنَّاسِ ۚ وَمَا جَعَلْنَا الرُّؤْيَا الَّتِي أَرَيْنَاكَ إِلَّا فِتْنَةً لِّلنَّاسِ وَالشَّجَرَةَ الْمَلْعُونَةَ فِي الْقُرْآنِ ۚ وَنُخَوِّفُهُمْ فَمَا يَزِيدُهُمْ إِلَّا طُغْيَانًا كَبِيرًا
(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮ ಪ್ರಭು ಜನರನ್ನು ಸುತ್ತುವರೆದಿದ್ದಾನೆ ಎಂದು ನಾವು ನಿಮಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿದಂತಹ ಆ ದೃಶ್ಯವು (ಮೇರಾಜ್‌ನ್ ರಾತ್ರಿ) ಜನರಿಗೆ ಸ್ಪಷ್ಟ ಪರೀಕ್ಷೆಯೇ ಆಗಿತ್ತು ಮತ್ತು ಕುರ್‌ಆನಿನಲ್ಲಿ ಶಪಿಸಲ್ಪಟ್ಟ ಆ ವೃಕ್ಷವು ಸಹ. ನಾವು ಅವರನ್ನು ಹೆದರಿಸುತ್ತಲೇ ಇದ್ದೇವೆ. ಆದರೆ ಅದು ಅವರಿಗೆ ಮಹಾ ಅತಿಕ್ರಮವನ್ನೇ ಹೆಚ್ಚಿಸುತ್ತಿದೆ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
58ಆಯತ್

ಅನುವಾದ — ಅಲ್-ಇಸ್ರಾ 58

ಸೂರಾ ಅಲ್-ಇಸ್ರಾ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ…

ಸೂರಾ ಆಯತ್ 58/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 56–60. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers