ಅಲ್-ಅಹ್ಜಾಬ್ · 23/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
مِّنَ الْمُؤْمِنِينَ رِجَالٌ صَدَقُوا مَا عَاهَدُوا اللَّهَ عَلَيْهِ ۖ فَمِنْهُم مَّن قَضَىٰ نَحْبَهُ وَمِنْهُم مَّن يَنتَظِرُ ۖ وَمَا بَدَّلُوا تَبْدِيلًا ۝٢٣
Minal mu`mineena rijaalun sadaqoo maa `aahadul laaha `alaihi faminhum man qadaa nahbahoo wa minhum mai yantaziru wa maa baddaloo tabdeelaa
📖 ಕನ್ನಡ ಅರ್ಥ
ಸತ್ಯವಿಶ್ವಾಸಿಗಳ ಪೈಕಿ ಕೆಲವರು ತಾವು ಅಲ್ಲಾಹನೊಂದಿಗೆ ಮಾಡಿರುವ ಒಪ್ಪಂದವನ್ನು ನಿಜ ಮಾಡಿ ತೋರಿಸಿರುತ್ತಾರೆ. ಕೆಲವರು ಹುತಾತ್ಮರಾಗುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರ್ತಿಕರಿಸಿರುತ್ತಾರೆ ಮತ್ತು ಕೆಲವರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ ಮತ್ತು ಅವರು ಕರಾರಿನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.

🎧 ಆಲಿಸಿ


📜 ಆಯತ್ 21-25 — ಸೂರಾ ಅಲ್-ಅಹ್ಜಾಬ್

21لَّقَدْ كَانَ لَكُمْ فِي رَسُولِ اللَّهِ أُسْوَةٌ حَسَنَةٌ لِّمَن كَانَ يَرْجُو اللَّهَ وَالْيَوْمَ الْآخِرَ وَذَكَرَ اللَّهَ كَثِيرًا
ನಿಶ್ಚಯವಾಗಿಯು ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಇದು ಅಲ್ಲಾಹ ಹಾಗೂ ಅಂತ್ಯ ದಿನವನ್ನು ನಿರೀಕ್ಷಿಸುವವನಿಗೆ ಮತ್ತು ಅಲ್ಲಾಹನನ್ನು ಅತಿ ಹೆಚ್ಚು ಸ್ಮರಿಸುವವನಿಗೆ.
22وَلَمَّا رَأَى الْمُؤْمِنُونَ الْأَحْزَابَ قَالُوا هَٰذَا مَا وَعَدَنَا اللَّهُ وَرَسُولُهُ وَصَدَقَ اللَّهُ وَرَسُولُهُ ۚ وَمَا زَادَهُمْ إِلَّا إِيمَانًا وَتَسْلِيمًا
ಮತ್ತು ಸತ್ಯವಿಶ್ವಾಸಿಗಳು ಶತ್ರು ಪಡೆಗಳನ್ನು ಕಂಡಾಗ ಹೇಳುತ್ತಾರೆ: ಇದು ನಮಗೆ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮಾಡಿದ ವಾಗ್ದಾನವಾಗಿದೆ. ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಸತ್ಯವನ್ನೇ ನುಡಿದಿರುತ್ತಾರೆ ಮತ್ತು ಇದು ಅವರಿಗೆ ಸತ್ಯವಿಶ್ವಾಸ ಹಾಗೂ ಸಮರ್ಪಣೆಯನ್ನು ಇನ್ನಷ್ಟು ಹೆಚ್ಚಿಸಿತು.
23مِّنَ الْمُؤْمِنِينَ رِجَالٌ صَدَقُوا مَا عَاهَدُوا اللَّهَ عَلَيْهِ ۖ فَمِنْهُم مَّن قَضَىٰ نَحْبَهُ وَمِنْهُم مَّن يَنتَظِرُ ۖ وَمَا بَدَّلُوا تَبْدِيلًا
ಸತ್ಯವಿಶ್ವಾಸಿಗಳ ಪೈಕಿ ಕೆಲವರು ತಾವು ಅಲ್ಲಾಹನೊಂದಿಗೆ ಮಾಡಿರುವ ಒಪ್ಪಂದವನ್ನು ನಿಜ ಮಾಡಿ ತೋರಿಸಿರುತ್ತಾರೆ. ಕೆಲವರು ಹುತಾತ್ಮರಾಗುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರ್ತಿಕರಿಸಿರುತ್ತಾರೆ ಮತ್ತು ಕೆಲವರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ ಮತ್ತು ಅವರು ಕರಾರಿನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.
24لِّيَجْزِيَ اللَّهُ الصَّادِقِينَ بِصِدْقِهِمْ وَيُعَذِّبَ الْمُنَافِقِينَ إِن شَاءَ أَوْ يَتُوبَ عَلَيْهِمْ ۚ إِنَّ اللَّهَ كَانَ غَفُورًا رَّحِيمًا
ಇದು ಅಲ್ಲಾಹನು ಸತ್ಯವಂತರಿಗೆ ಅವರ ಸತ್ಯತೆಯ ಪ್ರತಿಫಲವನ್ನು ನೀಡಲೆಂದೂ, ಕಪಟ ವಿಶ್ವಾಸಿಗಳಿಗೆ ತಾನಿಚ್ಛಿಸಿದರೆ ಶಿಕ್ಷೆ ನೀಡಲೆಂದೂ ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೆಂದಾಗಿದೆ. ಅಲ್ಲಾಹನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
25وَرَدَّ اللَّهُ الَّذِينَ كَفَرُوا بِغَيْظِهِمْ لَمْ يَنَالُوا خَيْرًا ۚ وَكَفَى اللَّهُ الْمُؤْمِنِينَ الْقِتَالَ ۚ وَكَانَ اللَّهُ قَوِيًّا عَزِيزًا
ಮತ್ತು ಅಲ್ಲಾಹನು ಸತ್ಯನಿಷೇಧಿಗಳನ್ನು ಅವರ ಕೋಪದೊಂದಿಗೆ (ವಿಫಲರಾಗಿ) ಮರಳಿಸಿದನು. ಅವರು ಯಾವುದೇ ಒಳಿತನ್ನು ಪಡೆಯಲಿಲ್ಲ ಹಾಗೂ ಯುದ್ದದಲ್ಲಿ ಸತ್ಯವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು. ಅಲ್ಲಾಹನು ಮಹಾಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
23ಆಯತ್

ಅನುವಾದ — ಅಲ್-ಅಹ್ಜಾಬ್ 23

ಸೂರಾ ಅಲ್-ಅಹ್ಜಾಬ್ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಸತ್ಯವಿಶ್ವಾಸಿಗಳ ಪೈಕಿ ಕೆಲವರು ತಾವು ಅಲ್ಲಾಹನೊಂದಿಗೆ ಮಾಡಿರುವ ಒಪ್ಪಂದವನ್ನು ನಿಜ ಮಾಡಿ ತೋರಿಸಿರುತ್ತಾರೆ.…

ಸೂರಾ ಆಯತ್ 23/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 21–25. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers