ಅಲ್-ಅಹ್ಜಾಬ್ · 49/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
يَا أَيُّهَا الَّذِينَ آمَنُوا إِذَا نَكَحْتُمُ الْمُؤْمِنَاتِ ثُمَّ طَلَّقْتُمُوهُنَّ مِن قَبْلِ أَن تَمَسُّوهُنَّ فَمَا لَكُمْ عَلَيْهِنَّ مِنْ عِدَّةٍ تَعْتَدُّونَهَا ۖ فَمَتِّعُوهُنَّ وَسَرِّحُوهُنَّ سَرَاحًا جَمِيلًا ٤٩
Transliteration
Yaaa aiyuhal lazeena aamanooo izaa nakahtumul mu`minaati summa tallaqtu moohunna min qabli an tamas soohunna famaa lakum `alaihinna min `iddatin ta`taddoonahaa famatti`oohunna wa sarri hoohunna saraahan jameelaa
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿನಿಯನ್ನು ವಿವಾಹವಾದ ಬಳಿಕ ಅವರನ್ನು ಸ್ಪರ್ಶಿಸುವುದಕ್ಕೂ ಮೊದಲು ಅವರನ್ನು ವಿಚ್ಛೇಧಿಸಿದರೆ ಆಗ ನಿಮ್ಮ ಕಡೆಯಿಂದ ಅವರ ಮೇಲೆ ನೀವು ಎಣಿಸುವಂತಹ ಯಾವುದೇ ಇದ್ದತ್ (ನಿಗದಿತ ಅವಧಿ) ಇರುವುದಿಲ್ಲ. ಹಾಗೆಯೇ ನೀವು ಅವರಿಗೆ ಏನಾದರೂ ಸಂಭಾವನೆ ಕೊಡಿರಿ ಹಾಗೂ ಉತ್ತಮವಾದ ರೀತಿಯಲ್ಲಿ ವಿದಾಯವನ್ನು ಹೇಳಿರಿ.
Additional reference in தமிழ்
🎧 ಆಲಿಸಿ
📜 ಆಯತ್ 47-51 — ಸೂರಾ ಅಲ್-ಅಹ್ಜಾಬ್
47وَبَشِّرِ الْمُؤْمِنِينَ بِأَنَّ لَهُم مِّنَ اللَّهِ فَضْلًا كَبِيرًا
ಸತ್ಯವಿಶ್ವಾಸಿಗಳಿಗೆ ಅಲ್ಲಾಹನ ವತಿಯಿಂದ ಮಹಾ ಅನುಗ್ರಹವಿದೆಯೆಂಬ ಸುವಾರ್ತೆಯನ್ನು ಅವರಿಗೆ ನೀಡಿರಿ.
48وَلَا تُطِعِ الْكَافِرِينَ وَالْمُنَافِقِينَ وَدَعْ أَذَاهُمْ وَتَوَكَّلْ عَلَى اللَّهِ ۚ وَكَفَىٰ بِاللَّهِ وَكِيلًا
ಸತ್ಯನಿಷೇಧಿಗಳನ್ನು, ಕಪಟ ವಿಶ್ವಾಸಿಗಳನ್ನು ಅನುಸರಿಸಬೇಡಿರಿ ಮತ್ತು ಅವರ ಕಿರುಕುಳವನ್ನು ಕಡೆಗಣಿಸಿರಿ. ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ ಕಾರ್ಯಸಾಧಕನಾಗಿ ಅಲ್ಲಾಹನೇ ಸಾಕು.
49يَا أَيُّهَا الَّذِينَ آمَنُوا إِذَا نَكَحْتُمُ الْمُؤْمِنَاتِ ثُمَّ طَلَّقْتُمُوهُنَّ مِن قَبْلِ أَن تَمَسُّوهُنَّ فَمَا لَكُمْ عَلَيْهِنَّ مِنْ عِدَّةٍ تَعْتَدُّونَهَا ۖ فَمَتِّعُوهُنَّ وَسَرِّحُوهُنَّ سَرَاحًا جَمِيلًا
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿನಿಯನ್ನು ವಿವಾಹವಾದ ಬಳಿಕ ಅವರನ್ನು ಸ್ಪರ್ಶಿಸುವುದಕ್ಕೂ ಮೊದಲು ಅವರನ್ನು ವಿಚ್ಛೇಧಿಸಿದರೆ ಆಗ ನಿಮ್ಮ ಕಡೆಯಿಂದ ಅವರ ಮೇಲೆ ನೀವು ಎಣಿಸುವಂತಹ ಯಾವುದೇ ಇದ್ದತ್ (ನಿಗದಿತ ಅವಧಿ) ಇರುವುದಿಲ್ಲ. ಹಾಗೆಯೇ ನೀವು ಅವರಿಗೆ ಏನಾದರೂ ಸಂಭಾವನೆ ಕೊಡಿರಿ ಹಾಗೂ ಉತ್ತಮವಾದ ರೀತಿಯಲ್ಲಿ ವಿದಾಯವನ್ನು ಹೇಳಿರಿ.
50يَا أَيُّهَا النَّبِيُّ إِنَّا أَحْلَلْنَا لَكَ أَزْوَاجَكَ اللَّاتِي آتَيْتَ أُجُورَهُنَّ وَمَا مَلَكَتْ يَمِينُكَ مِمَّا أَفَاءَ اللَّهُ عَلَيْكَ وَبَنَاتِ عَمِّكَ وَبَنَاتِ عَمَّاتِكَ وَبَنَاتِ خَالِكَ وَبَنَاتِ خَالَاتِكَ اللَّاتِي هَاجَرْنَ مَعَكَ وَامْرَأَةً مُّؤْمِنَةً إِن وَهَبَتْ نَفْسَهَا لِلنَّبِيِّ إِنْ أَرَادَ النَّبِيُّ أَن يَسْتَنكِحَهَا خَالِصَةً لَّكَ مِن دُونِ الْمُؤْمِنِينَ ۗ قَدْ عَلِمْنَا مَا فَرَضْنَا عَلَيْهِمْ فِي أَزْوَاجِهِمْ وَمَا مَلَكَتْ أَيْمَانُهُمْ لِكَيْلَا يَكُونَ عَلَيْكَ حَرَجٌ ۗ وَكَانَ اللَّهُ غَفُورًا رَّحِيمًا
ಓ ಪೈಗಂಬರರೇ, ನೀವು ವಧುದಕ್ಷಿಣೆಯನ್ನು ನೀಡಿ ವರಿಸಿರುವಂತಹ ನಿಮ್ಮ ಪತ್ನಿಯರನ್ನು ಹಾಗೂ ಅಲ್ಲಾಹನು ನಿಮಗೆ ಯುದ್ಧಾರ್ಜಿತ ಸೊತ್ತಾಗಿ ನಿಮ್ಮ ಸ್ವಾಧೀನಕ್ಕೆ ನೀಡಿದ ದಾಸಿಯರನ್ನು ನಿಮಗೆ ಧರ್ಮಸಮ್ಮತಗೊಳಿಸಿದ್ದಾನೆ. ಮತ್ತು ನಿಮ್ಮೊಂದಿಗೆ ವಲಸೆ ಬಂದಿರುವAತಹ ನಿಮ್ಮ ಚಿಕ್ಕಪ್ಪನ ಪುತ್ರಿಯರನ್ನೂ, ನಿಮ್ಮ ಸೋದರತ್ತೆಯರ ಪುತ್ರಿಯರನ್ನೂ, ನಿಮ್ಮ ಸಹೋದರಮಾವಂದಿರ ಪುತ್ರಿಯರನ್ನೂ, ನಿಮ್ಮ ಮಾತೃ ಸೋದರಿಯರ ಪುತ್ರಿಯರನ್ನೂ, (ವಿವಾಹ ಧರ್ಮಸಮ್ಮತವಾಗಿದೆ) ಮತ್ತು ಸತ್ಯವಿಶ್ವಾಸಿನಿಯಾದ ಇನ್ನಾವುದೇ ಸ್ತಿçÃಯು ಸ್ವತಃ ತನ್ನನ್ನು ಪೈಗಂಬರರಿಗೆ ಅರ್ಪಿಸಿದರೆ; ಪೈಗಂಬರು ಆಕೆಯನ್ನು ವಿವಾಹ ಮಾಡಿಕೊಳ್ಳಲು ಬಯಸಿದರೆ. ಇದು ನಿಮಗೆ ಮಾತ್ರ ವಿಶೇಷ ಧರ್ಮ ಸಮ್ಮತವಾಗಿದೆ. ಇತರ ಸತ್ಯವಿಶ್ವಾಸಿಗಳಿಗಿರುವಂತಹದ್ದಲ್ಲ. ನಾವು ಅವರ ಮೇಲೆ ಅವರ ಪತ್ನಿಯರಲ್ಲೂ, ಅವರ ದಾಸಿಯರಲ್ಲೂ ನಿಶ್ಚಯಿಸಿರುವುದನ್ನು ಚೆನ್ನಾಗಿ ಬಲ್ಲೆವು. ಇದು ನಿಮ್ಮ ಮೇಲೆ ಯಾವುದೇ ದೋಷವಿರಬಾರದೆಂದಾಗಿರುತ್ತದೆ. ಅಲ್ಲಾಹನು ಮಹಾ ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
51۞ تُرْجِي مَن تَشَاءُ مِنْهُنَّ وَتُؤْوِي إِلَيْكَ مَن تَشَاءُ ۖ وَمَنِ ابْتَغَيْتَ مِمَّنْ عَزَلْتَ فَلَا جُنَاحَ عَلَيْكَ ۚ ذَٰلِكَ أَدْنَىٰ أَن تَقَرَّ أَعْيُنُهُنَّ وَلَا يَحْزَنَّ وَيَرْضَيْنَ بِمَا آتَيْتَهُنَّ كُلُّهُنَّ ۚ وَاللَّهُ يَعْلَمُ مَا فِي قُلُوبِكُمْ ۚ وَكَانَ اللَّهُ عَلِيمًا حَلِيمًا
ನಿಮ್ಮ ಪತ್ನಿಯರ ಪೈಕಿ ನೀವು ಇಚ್ಛಿಸಿದವರನ್ನು ದೂರವಿರಿಸಿರಿ. ಹಾಗೂ ನೀವಿಚ್ಛಿಸಿದವರನ್ನು ನಿಮ್ಮ ಬಳಿಯಿರಿಸಿಕೊಳ್ಳಿ ಮತ್ತು ನೀವು ದೂರವಿರಿಸಿದವರಲ್ಲಿ ಯಾರನ್ನಾದರೂ ನಿಮ್ಮ ಬಳಿಯಿರಿಸಿಕೊಳ್ಳಲು ಇಚ್ಛಿಸಿದರೆ ಆಗ ನಿಮ್ಮ ಮೇಲೆ ತಪ್ಪೇನೂ ಇರುವುದಿಲ್ಲ. ಇದು ಆ ಸ್ತಿçÃಯರ ಕಣ್ಮನ ತಂಪಾಗಲೂ, ಅವರು ವ್ಯಥೆಪಡದಿರಲೂ ಮತ್ತು ನೀವು ಅವರಿಗೆ ನೀಡಿರುವುದರಲ್ಲಿ ಅವರೆಲ್ಲರೂ ಸಂತೃಪ್ತಿ ಹೊಂದಲೂ ಇದರಲ್ಲಿ ಹೆಚ್ಚಿನ ಸಾಧ್ಯತೆಯಿದೆ. ನಿಮ್ಮ ಹೃದಯಗಳಲ್ಲಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುತ್ತಾನೆ. ಮತ್ತು ಅಲ್ಲಾಹನು ಸರ್ವಜ್ಞನೂ, ಸಹನಶೀಲನೂ ಆಗಿರುತ್ತಾನೆ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
49ಆಯತ್
ಅನುವಾದ — ಅಲ್-ಅಹ್ಜಾಬ್ 49
ಸೂರಾ ಅಲ್-ಅಹ್ಜಾಬ್ ಆಯತ್ 49 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿನಿಯನ್ನು ವಿವಾಹವಾದ ಬಳಿಕ ಅವರನ್ನು ಸ್ಪರ್ಶಿಸುವುದಕ್ಕೂ ಮೊದಲು ಅವರನ್ನು…ಸೂರಾ ಆಯತ್ 49/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 47–51. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








