ಅಲ್-ಫತ್ಹ್ · 26/29
ಅನುವಾದ ಉಚ್ಚಾರಣೆ — ಅಲ್-ಫತ್ಹ್
إِذْ جَعَلَ الَّذِينَ كَفَرُوا فِي قُلُوبِهِمُ الْحَمِيَّةَ حَمِيَّةَ الْجَاهِلِيَّةِ فَأَنزَلَ اللَّهُ سَكِينَتَهُ عَلَىٰ رَسُولِهِ وَعَلَى الْمُؤْمِنِينَ وَأَلْزَمَهُمْ كَلِمَةَ التَّقْوَىٰ وَكَانُوا أَحَقَّ بِهَا وَأَهْلَهَا ۚ وَكَانَ اللَّهُ بِكُلِّ شَيْءٍ عَلِيمًا ۝٢٦
Iz ja`alal lazeena kafaroo fee quloobihimul hamiyyata hamiyyatal jaahiliyyati fa anzalal laahu sakeenatahoo `alaa Rasoolihee wa `alal mu mineena wa alzamahum kalimatat taqwaa wa kaanooo ahaqqa bihaa wa ahlahaa; wa kaanal laahu bikulli shai`in Aleema
📖 ಕನ್ನಡ ಅರ್ಥ
ಧಿಕ್ಕಾರಿಗಳು ತಮ್ಮ ಮನಗಳಲ್ಲಿ ಉದ್ಧಟತನವನ್ನು (ಮಾತ್ರವಲ್ಲ,) ಅಜ್ಞಾನದ ಉದ್ಧಟತನವನ್ನು ಬೆಳೆಸಿಕೊಂಡಾಗ, ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ಮನಃ ಶಾಂತಿಯನ್ನು ಇಳಿಸಿಕೊಟ್ಟನು ಮತ್ತು ಅವರನ್ನು ಧರ್ಮನಿಷ್ಠೆಯ ಮಾತಿನಲ್ಲಿ ಸ್ಥಿರಗೊಳಿಸಿದನು. ಅವರು ಅದಕ್ಕೆ ಹೆಚ್ಚು ಅರ್ಹರು ಹಾಗೂ ಯೋಗ್ಯರಾಗಿದ್ದರು. ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ
🎧 ಆಲಿಸಿ

📜 ಆಯತ್ 24-28 — ಅಲ್-ಫತ್ಹ್

24وَهُوَ الَّذِي كَفَّ أَيْدِيَهُمْ عَنكُمْ وَأَيْدِيَكُمْ عَنْهُم بِبَطْنِ مَكَّةَ مِن بَعْدِ أَنْ أَظْفَرَكُمْ عَلَيْهِمْ ۚ وَكَانَ اللَّهُ بِمَا تَعْمَلُونَ بَصِيرًا
ನಿಮಗೆ ಅವರ (ಧಿಕ್ಕಾರಿಗಳ) ವಿರುದ್ಧ ಪ್ರಾಬಲ್ಯ ಒದಗಿಸಿದ ಬಳಿಕ, ಮಕ್ಕಃದಲ್ಲಿ ಅವರು ನಿಮ್ಮ ಮೇಲೆ ಕೈ ಎತ್ತದಂತೆ ಹಾಗೂ ನೀವು ಅವರ ಮೇಲೆ ಕೈ ಎತ್ತದಂತೆ ತಡೆದವನು ಅವನೇ (ಅಲ್ಲಾಹನೇ). ನೀವು ಮಾಡುತ್ತಿದ್ದ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದನು
25هُمُ الَّذِينَ كَفَرُوا وَصَدُّوكُمْ عَنِ الْمَسْجِدِ الْحَرَامِ وَالْهَدْيَ مَعْكُوفًا أَن يَبْلُغَ مَحِلَّهُ ۚ وَلَوْلَا رِجَالٌ مُّؤْمِنُونَ وَنِسَاءٌ مُّؤْمِنَاتٌ لَّمْ تَعْلَمُوهُمْ أَن تَطَئُوهُمْ فَتُصِيبَكُم مِّنْهُم مَّعَرَّةٌ بِغَيْرِ عِلْمٍ ۖ لِّيُدْخِلَ اللَّهُ فِي رَحْمَتِهِ مَن يَشَاءُ ۚ لَوْ تَزَيَّلُوا لَعَذَّبْنَا الَّذِينَ كَفَرُوا مِنْهُمْ عَذَابًا أَلِيمًا
ಅವರೇ ಧಿಕ್ಕರಿಸಿದವರು ಹಾಗೂ ನಿಮ್ಮನ್ನು ಮಸ್ಜಿದುಲ್ ಹರಾಮ್‌ಗೆ ಹೋಗದಂತೆ ತಡೆದವರು ಹಾಗೂ ಬಲಿಗಾಗಿ ನಿಲ್ಲಿಸಲಾಗಿದ್ದ ಪ್ರಾಣಿಗಳು ಅವುಗಳ ನೆಲೆಯನ್ನು ತಲುಪದಂತೆ ತಡೆದವರು. ಒಂದು ವೇಳೆ (ಮಕ್ಕಃದಲ್ಲಿ) ನೀವು ನಿಮಗೆ ಪರಿಚಯವಿಲ್ಲದ ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ನಾಶ ಮಾಡಿ, ಆ ಮೂಲಕ, ನಿಮಗೆ ಅರಿವಿಲ್ಲದೆ ಒಂದು ದೊಡ್ಡ ಪ್ರಮಾದ ಎಸಗಿ ಬಿಡುವ ಸಾಧ್ಯತೆ ಇಲ್ಲದಿರುತ್ತಿದ್ದರೆ (ಯುದ್ಧವನ್ನು ಸಮ್ಮತಿಸಲಾಗುತ್ತಿತ್ತು). ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯೊಳಗೆ ಸೇರಿಸುವಂತಾಗಲು (ಅದನ್ನು ವಿಳಂಬಿಸಲಾಯಿತು). ಒಂದು ವೇಳೆ (ವಿಶ್ವಾಸಿಗಳು ಹಾಗೂ ಧಿಕ್ಕಾರಿಗಳು) ಸಂಪೂರ್ಣ ಬೇರ್ಪಟ್ಟಿದ್ದರೆ ನಾವು ಅವರ ಪೈಕಿ ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದೆವು
26إِذْ جَعَلَ الَّذِينَ كَفَرُوا فِي قُلُوبِهِمُ الْحَمِيَّةَ حَمِيَّةَ الْجَاهِلِيَّةِ فَأَنزَلَ اللَّهُ سَكِينَتَهُ عَلَىٰ رَسُولِهِ وَعَلَى الْمُؤْمِنِينَ وَأَلْزَمَهُمْ كَلِمَةَ التَّقْوَىٰ وَكَانُوا أَحَقَّ بِهَا وَأَهْلَهَا ۚ وَكَانَ اللَّهُ بِكُلِّ شَيْءٍ عَلِيمًا
ಧಿಕ್ಕಾರಿಗಳು ತಮ್ಮ ಮನಗಳಲ್ಲಿ ಉದ್ಧಟತನವನ್ನು (ಮಾತ್ರವಲ್ಲ,) ಅಜ್ಞಾನದ ಉದ್ಧಟತನವನ್ನು ಬೆಳೆಸಿಕೊಂಡಾಗ, ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ಮನಃ ಶಾಂತಿಯನ್ನು ಇಳಿಸಿಕೊಟ್ಟನು ಮತ್ತು ಅವರನ್ನು ಧರ್ಮನಿಷ್ಠೆಯ ಮಾತಿನಲ್ಲಿ ಸ್ಥಿರಗೊಳಿಸಿದನು. ಅವರು ಅದಕ್ಕೆ ಹೆಚ್ಚು ಅರ್ಹರು ಹಾಗೂ ಯೋಗ್ಯರಾಗಿದ್ದರು. ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ
27لَّقَدْ صَدَقَ اللَّهُ رَسُولَهُ الرُّؤْيَا بِالْحَقِّ ۖ لَتَدْخُلُنَّ الْمَسْجِدَ الْحَرَامَ إِن شَاءَ اللَّهُ آمِنِينَ مُحَلِّقِينَ رُءُوسَكُمْ وَمُقَصِّرِينَ لَا تَخَافُونَ ۖ فَعَلِمَ مَا لَمْ تَعْلَمُوا فَجَعَلَ مِن دُونِ ذَٰلِكَ فَتْحًا قَرِيبًا
ಅಲ್ಲಾಹನು ನಿಜಕ್ಕೂ ತನ್ನ ದೂತರಿಗೆ ಸತ್ಯಕ್ಕನುಸಾರವಾದ ಕನಸನ್ನೇ ತೋರಿಸಿದ್ದನು; ಅಲ್ಲಾಹನಿಚ್ಛಿಸಿದರೆ ನೀವು ಖಂಡಿತ ಶಾಂತಿಯೊಂದಿಗೆ, ಮಸ್ಜಿದುಲ್ ಹರಾಮನ್ನು ಪ್ರವೇಶಿಸುವಿರಿ. (ಕೆಲವರು) ತಲೆಬೋಳಿಸಿಕೊಂಡು ಹಾಗೂ (ಕೆಲವರು) ಕೂದಲು ಕತ್ತರಿಸಿಕೊಂಡು (ಪ್ರವೇಶಿಸುವರು). ನಿಮಗೆ ಯಾವ ಭಯವೂ ಇರದು. ನಿಮಗೆ ತಿಳಿದಿಲ್ಲದ ಸಂಗತಿಗಳನ್ನು ಅವನು ತಿಳಿದಿರುವನು. ಇದು (ಮಕ್ಕಃ ವಿಜಯ) ಮಾತ್ರವಲ್ಲದೆ, ಬೇರೊಂದು ವಿಜಯವನ್ನೂ ಅವನು ಈಗಾಗಲೇ ನಿಮಗೆ ನೀಡಿರುವನು
28هُوَ الَّذِي أَرْسَلَ رَسُولَهُ بِالْهُدَىٰ وَدِينِ الْحَقِّ لِيُظْهِرَهُ عَلَى الدِّينِ كُلِّهِ ۚ وَكَفَىٰ بِاللَّهِ شَهِيدًا
ಅವನೇ, ತನ್ನ ದೂತರನ್ನು ಮಾರ್ಗದರ್ಶನ ಹಾಗೂ ಸತ್ಯಧರ್ಮದೊಂದಿಗೆ ಕಳಿಸಿರುವವನು – ಅದನ್ನು ಇತರೆಲ್ಲ ಧರ್ಮಗಳೆದುರು ವಿಜಯಿಯಾಗಿಸಲಿಕ್ಕಾಗಿ. ಇದಕ್ಕೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು
ಅಲ್-ಫತ್ಹ್ಕುರಾನ್ ಸೂಚಿ
29ಆಯತ್
MedinanRevelation
26ಆಯತ್

ಅನುವಾದ — ಅಲ್-ಫತ್ಹ್ 26

ಸೂರಾ ಅಲ್-ಫತ್ಹ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಧಿಕ್ಕಾರಿಗಳು ತಮ್ಮ ಮನಗಳಲ್ಲಿ ಉದ್ಧಟತನವನ್ನು (ಮಾತ್ರವಲ್ಲ,) ಅಜ್ಞಾನದ ಉದ್ಧಟತನವನ್ನು ಬೆಳೆಸಿಕೊಂಡಾಗ, ಅಲ್ಲಾಹನು ತನ್ನ…

ಸೂರಾ ಆಯತ್ 26/29 — ಅಲ್-ಫತ್ಹ್ الفتح (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಅಲ್-ಫತ್ಹ್ ಆಲಿಸಿ, ಅಲ್-ಫತ್ಹ್ ಅನುವಾದ, ಅಲ್-ಫತ್ಹ್ mp3, ಅಲ್-ಫತ್ಹ್ pdf. ಆಯತ್ 24–28. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers