ಅಲ್-ಮುಜಾದಿಲಾ · 13/22
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜಾದಿಲಾ
أَأَشْفَقْتُمْ أَن تُقَدِّمُوا بَيْنَ يَدَيْ نَجْوَاكُمْ صَدَقَاتٍ ۚ فَإِذْ لَمْ تَفْعَلُوا وَتَابَ اللَّهُ عَلَيْكُمْ فَأَقِيمُوا الصَّلَاةَ وَآتُوا الزَّكَاةَ وَأَطِيعُوا اللَّهَ وَرَسُولَهُ ۚ وَاللَّهُ خَبِيرٌ بِمَا تَعْمَلُونَ ۝١٣
A-ashfaqtum an tuqaddimoo baina yadai najwaakum sadaqaat; fa-iz lam taf`aloo wa taabal laahu `alaikum fa aqeemus Salaata wa aatuz Zakaata wa atee`ul laaha wa rasoolah; wallaahu khabeerum bimaa ta`maloon
📖 ಕನ್ನಡ ಅರ್ಥ
ಗೂಢಾಲೋಚನೆಯ ಮೊದಲು ದಾನವನ್ನು ನೀಡುವುದರಿಂದ ನೀವು ಭಯಪಟ್ಟಿರಾ ? ಇನ್ನು ನೀವು ಅದನ್ನು ಮಾಡದಿದ್ದಾಗ ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿಕೊಂಡನು. ಇನ್ನು ನೀವು ನಮಾಜ್ ಸಂಸ್ಥಾಪಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಅನುಸರಿಸಿರಿ, ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು.

🎧 ಆಲಿಸಿ


📜 ಆಯತ್ 11-15 — ಸೂರಾ ಅಲ್-ಮುಜಾದಿಲಾ

11يَا أَيُّهَا الَّذِينَ آمَنُوا إِذَا قِيلَ لَكُمْ تَفَسَّحُوا فِي الْمَجَالِسِ فَافْسَحُوا يَفْسَحِ اللَّهُ لَكُمْ ۖ وَإِذَا قِيلَ انشُزُوا فَانشُزُوا يَرْفَعِ اللَّهُ الَّذِينَ آمَنُوا مِنكُمْ وَالَّذِينَ أُوتُوا الْعِلْمَ دَرَجَاتٍ ۚ وَاللَّهُ بِمَا تَعْمَلُونَ خَبِيرٌ
ಸತ್ಯ ವಿಶ್ವಾಸಿಗಳೇ ನೀವು ಸಭೆಗಳಲ್ಲಿ ಸ್ಥಳಾವಕಾಶ ಮಾಡಿಕೊಡಿರಿ ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಸ್ಥಳಾವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ಇಹಪರದಲ್ಲಿ) ವಿಶಾಲತೆಯನ್ನು ದಯಪಾಲಿಸುವನು ಮತ್ತು ನಿಮಗೆ ಎದ್ದು ಬಿಡಿರಿ ಎಂದು ಹೇಳಲಾದರೆ ನೀವು ಎದ್ದು ಬಿಡಿರಿ. ಅಲ್ಲಾಹನು ನಿಮ್ಮಲ್ಲಿ ಸತ್ಯ ವಿಶ್ವಾಸವಿರಿಸಿದವರ ಹಾಗೂ ಜ್ಞಾನ ನೀಡಲ್ಪಟ್ಟವರ ಪದವಿಗಳನ್ನು ಉನ್ನತಗೊಳಿಸುವನು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ.
12يَا أَيُّهَا الَّذِينَ آمَنُوا إِذَا نَاجَيْتُمُ الرَّسُولَ فَقَدِّمُوا بَيْنَ يَدَيْ نَجْوَاكُمْ صَدَقَةً ۚ ذَٰلِكَ خَيْرٌ لَّكُمْ وَأَطْهَرُ ۚ فَإِن لَّمْ تَجِدُوا فَإِنَّ اللَّهَ غَفُورٌ رَّحِيمٌ
ಓ ಸತ್ಯ ವಿಶ್ವಾಸಿಗಳೇ ನೀವು ಸಂದೇಶವಾಹಕರೊAದಿಗೆ ಗೂಢಾಲೋಚನೆ ನಡೆಸಲು ಇಚ್ಚಿಸಿದಾಗ ನೀವು ನಿಮ್ಮ ಗೂಢಾಲೋಚನೆಯ ಮೊದಲು ಏನಾದರೂ ದಾನವನ್ನು ನೀಡಿರಿ. ಇದು ನಿಮ್ಮ ಪಾಲಿಗೆ ಅತ್ಯುತ್ತಮವೂ ಅತಿ ಪರಿಶುದ್ಧವೂ ಆಗಿದೆ, ಇನ್ನು ನಿಮ್ಮ ಬಳಿಗೆ ಏನೂ ಇಲ್ಲದಿದ್ದರೆ ನಿಸ್ಸಂಶಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
13أَأَشْفَقْتُمْ أَن تُقَدِّمُوا بَيْنَ يَدَيْ نَجْوَاكُمْ صَدَقَاتٍ ۚ فَإِذْ لَمْ تَفْعَلُوا وَتَابَ اللَّهُ عَلَيْكُمْ فَأَقِيمُوا الصَّلَاةَ وَآتُوا الزَّكَاةَ وَأَطِيعُوا اللَّهَ وَرَسُولَهُ ۚ وَاللَّهُ خَبِيرٌ بِمَا تَعْمَلُونَ
ಗೂಢಾಲೋಚನೆಯ ಮೊದಲು ದಾನವನ್ನು ನೀಡುವುದರಿಂದ ನೀವು ಭಯಪಟ್ಟಿರಾ ? ಇನ್ನು ನೀವು ಅದನ್ನು ಮಾಡದಿದ್ದಾಗ ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿಕೊಂಡನು. ಇನ್ನು ನೀವು ನಮಾಜ್ ಸಂಸ್ಥಾಪಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಅನುಸರಿಸಿರಿ, ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು.
14۞ أَلَمْ تَرَ إِلَى الَّذِينَ تَوَلَّوْا قَوْمًا غَضِبَ اللَّهُ عَلَيْهِم مَّا هُم مِّنكُمْ وَلَا مِنْهُمْ وَيَحْلِفُونَ عَلَى الْكَذِبِ وَهُمْ يَعْلَمُونَ
ಅಲ್ಲಾಹನ ಕ್ರೋಧಕ್ಕೊಳಗಾಗಿರುವ ಒಂದು(ಯಹೂದಿ) ಸಮೂಹದೊಂದಿಗೆ ಮೈತ್ರಿ ಮಾಡಿಕೊಂಡ ಕಪಟ ವಿಶ್ವಾಸಿಗಳೆಡೆಗೆ ನೀವು ನೋಡಲಿಲ್ಲವೇ? ಅವರು ನಿಮ್ಮವರೂ ಅಲ್ಲ ಅಥವ ಅವರಕಡೆಯವರೂ ಅಲ್ಲ, ಅವರು ತಿಳಿದೂ ತಿಳಿದೂ ಸುಳ್ಳು ಆಣೆ ಹಾಕುತ್ತಾರೆ.
15أَعَدَّ اللَّهُ لَهُمْ عَذَابًا شَدِيدًا ۖ إِنَّهُمْ سَاءَ مَا كَانُوا يَعْمَلُونَ
ಅಲ್ಲಾಹನು ಅವರಿಗಾಗಿ ಕಠಿಣಯಾತನೆಯನ್ನು ಸಿದ್ಧಪಡಿಸಿಟ್ಟಿರುವನು. ನಿಜವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ಅತಿ ನಿಕೃಷ್ಟವಾದುದು.
ಅಲ್-ಮುಜಾದಿಲಾಕುರಾನ್ ಸೂಚಿ
22ಆಯತ್
MedinanRevelation
13ಆಯತ್

ಅನುವಾದ — ಅಲ್-ಮುಜಾದಿಲಾ 13

ಸೂರಾ ಅಲ್-ಮುಜಾದಿಲಾ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಗೂಢಾಲೋಚನೆಯ ಮೊದಲು ದಾನವನ್ನು ನೀಡುವುದರಿಂದ ನೀವು ಭಯಪಟ್ಟಿರಾ ? ಇನ್ನು ನೀವು ಅದನ್ನು…

ಸೂರಾ ಆಯತ್ 13/22 — ಸೂರಾ ಅಲ್-ಮುಜಾದಿಲಾ المجادلة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜಾದಿಲಾ ಆಲಿಸಿ, ಸೂರಾ ಅಲ್-ಮುಜಾದಿಲಾ ಅನುವಾದ, ಸೂರಾ ಅಲ್-ಮುಜಾದಿಲಾ mp3, ಸೂರಾ ಅಲ್-ಮುಜಾದಿಲಾ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers