ಅತ್-ತೌಬಾ · 66/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
لَا تَعْتَذِرُوا قَدْ كَفَرْتُم بَعْدَ إِيمَانِكُمْ ۚ إِن نَّعْفُ عَن طَائِفَةٍ مِّنكُمْ نُعَذِّبْ طَائِفَةً بِأَنَّهُمْ كَانُوا مُجْرِمِينَ ۝٦٦
Laa ta`taziroo qad kafartum ba`da eemaanikum; in na`fu `an taaa`ifatim minkum nu`az zib taaa`ifatam bi annahum kaanoo mujrimeen
📖 ಕನ್ನಡ ಅರ್ಥ
ನೀವು ನೆಪಗಳನ್ನೊಡ್ಡಬೇಡಿರಿ. ಖಂಡಿತವಾಗಿಯು ನೀವು ನಿಮ್ಮ ವಿಶ್ವಾಸದ ಬಳಿಕ ಅವಿಶ್ವಾಸಿಗಳಾಗಿಬಿಟ್ಟಿರುವಿರಿ. ನಾವು ನಿಮ್ಮಲ್ಲಿ ಒಂದು ಪಂಗಡಕ್ಕೆ ಕ್ಷಮೆ ನೀಡಿದರೂ ಇನ್ನೊಂದು ಪಂಗಡಕ್ಕೆ ಅವರ ಅಪರಾಧಗಳ ನಿಮಿತ್ತ ಶಿಕ್ಷಿಸುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 64-68 — ಸೂರಾ ಅತ್-ತೌಬಾ

64يَحْذَرُ الْمُنَافِقُونَ أَن تُنَزَّلَ عَلَيْهِمْ سُورَةٌ تُنَبِّئُهُم بِمَا فِي قُلُوبِهِمْ ۚ قُلِ اسْتَهْزِئُوا إِنَّ اللَّهَ مُخْرِجٌ مَّا تَحْذَرُونَ
ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿಸಿಕೊಡುವಂತಹ ಯಾವುದಾದರೂ ಅಧ್ಯಾಯ ಅವರ(ಪೈಗಂಬರರ) ಮೇಲೆ ಅವತೀರ್ಣಗೊಳ್ಳಬಹುದೆಂದು ಕಪಟವಿಶ್ವಾಸಿಗಳು ಭಯಪಡುತ್ತಿರುತ್ತಾರೆ. ಹೇಳಿರಿ: ‘ನೀವು ಅಪಹಾಸ್ಯ ಮಾಡುತ್ತಿರಿ. ನೀವು ಭಯಪಡುತ್ತಿರುವುದನ್ನು ಖಂಡಿತವಾಗಿಯು ಅಲ್ಲಾಹನು ಬಹಿರಂಗಗೊಳಿಸುವವನಿದ್ದಾನೆ'.
65وَلَئِن سَأَلْتَهُمْ لَيَقُولُنَّ إِنَّمَا كُنَّا نَخُوضُ وَنَلْعَبُ ۚ قُلْ أَبِاللَّهِ وَآيَاتِهِ وَرَسُولِهِ كُنتُمْ تَسْتَهْزِئُونَ
ನೀವು ಅವರೊಂದಿಗೆ ವಿಚಾರಿಸಿದರೆ ಅವರು: ‘ನಾವು ಹೀಗೆಯೇ ಪರಸ್ಪರ ವಿನೋದ ಮಾತುಗಳನ್ನು ಆಡುತ್ತಿದ್ದೆವು'. ಎಂದು ಹೇಳುತ್ತಾರೆ. ಹೇಳಿರಿ: ಅಲ್ಲಾಹನು ಅವನ ದೃಷ್ಟಾಂತಗಳು ಮತ್ತು ಅವನ ಸಂದೇಶವಾಹಕರು ನಿಮ್ಮ ವಿನೋದದ ವಸ್ತುಗಳಾಗಿಬಿಟ್ಟವೇ?
66لَا تَعْتَذِرُوا قَدْ كَفَرْتُم بَعْدَ إِيمَانِكُمْ ۚ إِن نَّعْفُ عَن طَائِفَةٍ مِّنكُمْ نُعَذِّبْ طَائِفَةً بِأَنَّهُمْ كَانُوا مُجْرِمِينَ
ನೀವು ನೆಪಗಳನ್ನೊಡ್ಡಬೇಡಿರಿ. ಖಂಡಿತವಾಗಿಯು ನೀವು ನಿಮ್ಮ ವಿಶ್ವಾಸದ ಬಳಿಕ ಅವಿಶ್ವಾಸಿಗಳಾಗಿಬಿಟ್ಟಿರುವಿರಿ. ನಾವು ನಿಮ್ಮಲ್ಲಿ ಒಂದು ಪಂಗಡಕ್ಕೆ ಕ್ಷಮೆ ನೀಡಿದರೂ ಇನ್ನೊಂದು ಪಂಗಡಕ್ಕೆ ಅವರ ಅಪರಾಧಗಳ ನಿಮಿತ್ತ ಶಿಕ್ಷಿಸುವೆವು.
67الْمُنَافِقُونَ وَالْمُنَافِقَاتُ بَعْضُهُم مِّن بَعْضٍ ۚ يَأْمُرُونَ بِالْمُنكَرِ وَيَنْهَوْنَ عَنِ الْمَعْرُوفِ وَيَقْبِضُونَ أَيْدِيَهُمْ ۚ نَسُوا اللَّهَ فَنَسِيَهُمْ ۗ إِنَّ الْمُنَافِقِينَ هُمُ الْفَاسِقُونَ
ಕಪಟವಿಶ್ವಾಸಿಗಳು ಮತ್ತು ಕಪಟ ವಿಶ್ವಾಸಿನಿಯರು ಪರಸ್ಪರ ಒಂದೇ ಆಗಿದ್ದಾರೆ. ಅವರು ಕೆಡುಕುಗಳನ್ನು ಆದೇಶಿಸುತ್ತಾರೆ ಮತ್ತು ಒಳಿತಿನ ವಿಚಾರಗಳಿಂದ ತಡೆಯುತ್ತಾರೆ ಹಾಗೂ ತಮ್ಮ ಮುಷ್ಠಿಗಳನ್ನು ಬಿಗಿದಿಡುತ್ತಾರೆ. ಅವರು ಅಲ್ಲಾಹನನ್ನು ಮರೆತು ಬಿಟ್ಟರು. ಅಲ್ಲಾಹನು ಅವರನ್ನು ಮರೆತು ಬಿಟ್ಟನು. ನಿಸ್ಸಂಶಯವಾಗಿಯು ಕಪಟವಿಶ್ವಾಸಿಗಳೇ ಧಿಕ್ಕಾರಿಗಳಾಗಿದ್ದಾರೆ.
68وَعَدَ اللَّهُ الْمُنَافِقِينَ وَالْمُنَافِقَاتِ وَالْكُفَّارَ نَارَ جَهَنَّمَ خَالِدِينَ فِيهَا ۚ هِيَ حَسْبُهُمْ ۚ وَلَعَنَهُمُ اللَّهُ ۖ وَلَهُمْ عَذَابٌ مُّقِيمٌ
ಅಲ್ಲಾಹನು ಕಪಟವಿಶ್ವಾಸಿಗಳಿಗೂ, ಕಪಟ ವಿಶ್ವಾಸಿನಿಯರಿಗೂ ಹಾಗೂ ಸತ್ಯನಿಷೇಧಿಗಳಿಗೂ ನರಕಾಗ್ನಿಯ ವಾಗ್ದಾನವನ್ನು ಮಾಡಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಅದುವೇ ಸಾಕು. ಅವರ ಮೇಲೆ ಅಲ್ಲಾಹನ ಶಾಪವಿದೆ ಮತ್ತು ಅವರಿಗೇ ಶಾಶ್ವತ ಶಿಕ್ಷೆಯಿರುವುದು.
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
66ಆಯತ್

ಅನುವಾದ — ಅತ್-ತೌಬಾ 66

ಸೂರಾ ಅತ್-ತೌಬಾ ಆಯತ್ 66 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನೆಪಗಳನ್ನೊಡ್ಡಬೇಡಿರಿ. ಖಂಡಿತವಾಗಿಯು ನೀವು ನಿಮ್ಮ ವಿಶ್ವಾಸದ ಬಳಿಕ ಅವಿಶ್ವಾಸಿಗಳಾಗಿಬಿಟ್ಟಿರುವಿರಿ. ನಾವು ನಿಮ್ಮಲ್ಲಿ…

ಸೂರಾ ಆಯತ್ 66/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 64–68. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers